This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
14 ನವೆಂಬರ್ 2021
13 ನವೆಂಬರ್ 2021
ಶಿಶುಗೀತೆ ೩೦ ನಾವು ಎಳೆಯರು .
ಶಿಶುಗೀತೆ ೩೦
*ನಾವು ಎಳೆಯರು*
ನಾವು ಗೆಳೆಯರು ನಾವು ಎಳೆಯರು
ಜೊತೆ ಜೊತೆಯಲೇ ಬೆಳೆವೆವು
ಸ್ನೇಹದಿಂದಲಿ ಕೂಡಿ ಬಾಳುತ
ಹೊಸ ನಾಡನೊಂದ ಕಟ್ಟುವೆವು.
ಎಲ್ಲ ಸೇರಿ ಅಟಗಳನಾಡುತ
ಬೇಧ ಭಾವ ಮರೆವೆವು
ಜಾತಿ ಮತದ ಹೊಟ್ಟ ತೂರಿ
ಒಂದಾಗಿ ಬಾಳುವೆವು.
ಬಣ್ಣ ಬಣ್ಣದ ಬಟ್ಟೆಗಳ ತೊಟ್ಟು
ಕುಣಿದು ನಲಿಯುವೆವು
ಎಲ್ಲಾ ಬಣ್ಣ ಸೇರಿ ಬಿಳಿಯ
ಬಣ್ಣವೆಂದು ಕಲಿತಿಹೆವು .
ಮೇಲು ಕೀಳು ನಮ್ಮಲಿಲ್ಲ ನಾವು
ಸಮಾನತೆಯ ರಾಯಬಾರಿಗಳು
ಭವಿಷ್ಯದ ಸುಂದರ ತೋಟದ
ಈಗ ಬೆಳೆಯುತಿರುವ ಸಸ್ಯಗಳು.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
9900925529
11 ನವೆಂಬರ್ 2021
ಓಬವ್ಚ. ಹನಿಗವನ
ಶತೃಸೈನಿಕರ ಸದೆ ಬಡಿದು
ಕೋಟೆಯ ರಕ್ಷಿಸಿದ
ನಮ್ಮಲ್ಲೆರ ಪ್ರೀತಿ ಅವ್ವ|
ಅವಳೇ ದುರ್ಗವ ರಕ್ಷಿಸಿದ
ನಮ್ಮ ಹೆಮ್ಮೆಯ ಓಬವ್ವ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಮತದಾರರ ನೊಂದಣಿ ಸುಧಾರಿಸುವಲ್ಲಿ ಚುನಾವಣಾ ಸಾಕ್ಷರಾತಾ ಕ್ಲಬ್ ಗಳ ಪಾತ್ರ. ಪ್ರಬಂಧ. Role of electoral literacy clubs in register of new voters
ಮತದಾರರ ನೊಂದಣಿ ಸುಧಾರಿಸುವಲ್ಲಿ ಚುನಾವಣಾ ಸಾಕ್ಷರಾತಾ ಕ್ಲಬ್ ಗಳ ಪಾತ್ರ. ಪ್ರಬಂಧ.
Role of electoral literacy clubs in register of new voters
ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಆಡಳಿತದ ಚುಕ್ಕಾಣಿ ಹಿಡಿಯುವವರನ್ನು ಆಯ್ಕೆ ಮಾಡುವುದು ಪ್ರಜ್ಞಾವಂತ ಮತದಾರರ ಆದ್ಯ ಕರ್ತವ್ಯವಾಗಿದೆ. ಆದರೆ ಚುನಾವಣಾ ಸಮಯದಲ್ಲಿ ಮತದಾರರು ಮತದಾನ ಮಾಡುವಾಗ ನೀರಸ ಪ್ರತಿಕ್ರಿಯೆ ತೋರುತ್ತಿರುವುದು ಬಹಳ ಬೇಸರದ ಸಂಗತಿ.ಅದರಲ್ಲೂ ಕೆಲವರು ಹದಿನೆಂಟು ವರ್ಷಗಳು ದಾಟಿದ್ದರೂ ತಮ್ಮ ಹೆಸರನ್ನು ನೊಂದಾಯಿಸದಿರುವುದು ದುರದೃಷ್ಟಕರ.
ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಆರಂಭವಾದ "ಮತದಾರರ ಸಾಕ್ಷರತಾ ಕ್ಲಬ್ " ಗಳು ಮತದಾರರ ನೊಂದಣಿ ಮಾಡುವಲ್ಲಿ ಮತ್ತು ಮತದಾನ ಹೆಚ್ಚು ಮಾಡುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಿವೆ.
ಮತದಾರರ ನೊಂದಣಿ ಮಾಡುವಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ಗಳ ಪಾತ್ರವನ್ನು ಈ ಕೆಳಕಂಡಂತೆ ವಿವರಿಸಬಹುದು.
೧ ಮತದಾರರ ನೊಂದಣಿಗೆ ಜಾತಾ ಆಯೋಜನೆ ಮಾಡುವುದು.
ಚುನಾವಣಾ ಸಾಕ್ಷರತಾ ಸಂಘದ ವತಿಯಿಂದ ಶಾಲಾ ಕಾಲೇಜುಗಳ ವ್ಯಾಪ್ತಿಯಲ್ಲಿ ಮತದಾರರ ನೋಂದಣಿಗೆ ಜಾತಾಗಳನ್ನು ಏರ್ಪಡಿಸುವ ಮೂಲಕ ಅರ್ಹ ಮತದಾರರ ನೊಂದಣಿ ಮಾಡಿಸಲು ಪ್ರಯತ್ನ ಮಾಡಬಹುದು.
೨ ರಾಷ್ಟ್ರೀಯ ಮತದಾರರ ದಿನ ಆಚರಣೆ ಮಾಡುವುದು.
ಶಾಲಾ ಕಾಲೇಜುಗಳಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲು ವ್ಯವಸ್ಥೆ ಮಾಡಿ ಆ ಕಾರ್ಯಕ್ರಮದಲ್ಲಿ ಹದಿನೆಂಟು ವರ್ಷಗಳ ಮೇಲ್ಪಟ್ಟ ನೊಂದಣಿಯಾಗದ ಮತದಾನದ ಕರೆಸಿ ,ತಜ್ಞರಿಂದ ಉಪನ್ಯಾಸ ಏರ್ಪಡಿಸಿ ಮತದಾರರ ಪಟ್ಟಿಗೆ ಅವರ ಹೆಸರು ನೊಂದಣಿ ಮಾಡಿಸಲು ಮನವೊಲಿಸುವಲ್ಲಿ ಪ್ರಯತ್ನ ಮಾಡುತ್ತವೆ.
೩ ವಿಶೇಷ ನೊಂದಣಿ ಅಭಿಯಾನ ಆರಂಭಿಸುವುದು.
ಭಾರತ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗ ಆಗಾಗ್ಗೆ ನಡೆಸುವ ವಿಶೇಷ ಮತದಾರರ ನೋಂದಣಿ ಅಭಿಯಾನದಲ್ಲಿ ಶಾಲಾ ಕಾಲೇಜುಗಳ ಚುನಾವಣಾ ಸಾಕ್ಷರತಾ ಕ್ಲಬ್ ಗಳು ಸಕ್ರಿಯವಾಗಿ ಪಾಲ್ಗೊಂಡು ಮತದಾರರನ್ನು ನೊಂದಣಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ.
ಉಪಸಂಹಾರ
ಕಳೆದೆರಡು ದಶಕಗಳಿಗೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಚುನಾವಣೆಯಲ್ಲಿ ಮತದಾರರ ನೊಂದಣಿ ಮತ್ತು ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಚುನಾವಣಾ ಆಯೋಗದ ಪ್ರಯತ್ನ ದ ಜೊತೆಗೆ ಶಾಲಾ ಕಾಲೇಜುಗಳಲ್ಲಿ ಸಕ್ರೀಯವಾಗಿರುವ ಚುನಾವಣಾ ಸಾಕ್ಷರತಾ ಕ್ಲಬ್ಗಳ ಕಾರ್ಯ ಶ್ಲಾಘನೀಯ. ಇದೇ ರೀತಿಯ ಪ್ರಯತ್ನಗಳು ಇನ್ನೂ ಹೆಚ್ಚು ನಡೆಯಬೇಕಿದೆ ಆಗ ಶೇಕಡಾ ನೂರರಷ್ಟು ನೊಂದಣಿ ಮತ್ತು ಮತದಾನ ನಡೆದು ನಮ್ಮ ಪ್ರಜಾಪ್ರಭುತ್ವ ಇನ್ನೂ ಗಟ್ಟಿಯಾಗುವುದರಲ್ಲಿ ಸಂದೇಹವಿಲ್ಲ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು




