25 ಸೆಪ್ಟೆಂಬರ್ 2021

ವೈಬ್ರಂಟ್ ಮೈಸೂರು ೨೫/೯/೨೧


 

ಗಜಲ್


 


ಗಜಲ್ 


ನಿನ್ನೊಡನೆ ಕಳೆದ ನೆನಪುಗಳ ಬುತ್ತಿ ಬಿಚ್ಚಿ ಮೆಲುಕು ಹಾಕುತಿರುವೆ 

ನೀನಿತ್ತ ಉಡುಗೊರೆಗಳ ನೋಡುತಾ

ಮೈ ಮರೆಯುತಿರುವೆ.


ನೀನಿಲ್ಲದೆ ಸಾಯಲೂ ಮನಸಿಲ್ಲದೆ ಬದುಕುತಿರುವೆ 

ಭರವಸೆಯ ಜೋಕಾಲಿಯ ಕಟ್ಟಿ ಜೀಕುತಿರುವೆ 


ಒಲವ ಪಡೆಯಲು ಅವಸರ ಬೇಕಿಲ್ಲ

ಎಂದು ಕಲಿಯುತಿರುವೆ

ಚೆಲುವಾಗಿರುವುದೆಲ್ಲಾ ನಂಬಿಕೆಗೆ ಅರ್ಹವಲ್ಲ ಎಂದು ಅರಿಯುತಿರುವೆ


ಸವಿನೆನೆಪುಗಳ ಮೆಲುಕು ಹಾಕಲು

ಶುಲ್ಕ ಬೇಡವೆಂದು ತಿಳಿಯುತಿರುವೆ

ಮನದಲೊಂದು ಮಹಲು ಕಟ್ಟಿ

ನಿನ್ನನ್ನು ಕರೆಯುತಿರುವೆ 


ಬಾಳಲಿ ಸಿಹಿಜೀವಿ ಬರುವಳೆಂಬ ಆಸೆಯಲಿ ಬದುಕುತಿರುವೆ  

ಭರವಸೆಯ ಕಣ್ಗಳಲಿ ನಿನ್ನ  ಹಾದಿಯನೆ ನೋಡುತಿರುವೆ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ




ದೋತಿ


 ದೋತಿ!


ಸೀಡಿ, ಡೀವಿಡಿ ಪುರಾಣ

ನೋಡಿದ ಮೇಲೆಇ ಬೇಸರವಾಗಿ

ಜನರು  ತೀರ್ಮಾನಿಸಿದ್ದರು  ನೋಡಬಾರದೆಂದು

ರಾಜಕಾರಣಿಗಳ ಮೂತಿ|

ಸದನದಲ್ಲಾದರೂ ಗಂಭೀರವಾಗಿ

ಇರುವರೆಂದು ನಿರೀಕ್ಷೆ ಇತ್ತು

ಅಲ್ಲೂ ಉದುರಿಸಿಬಿಟ್ಟರು

ತಮ್ಮ ದೋತಿ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಜನಮಿಡಿತ ೨೫/೯.೨೧