13 ಸೆಪ್ಟೆಂಬರ್ 2021

ಚಿತ್ರ ವಿಚಿತ್ರ ಹನಿ


 



ಚಿತ್ರ _ವಿಚಿತ್ರ ? ಹನಿ 


ಕಾಲ ಕಾಲಕ್ಕೆ ವ್ಯಕ್ತಿಗಳು ಹೇಗೆ ಬದಲಾಗುತ್ತಾರೆ?

ಹಾಗೂ ನಮ್ಮ ಮನಸ್ಥಿತಿ, ಮನೆ ಸ್ಥಿತಿ, ಮನಿ ಸ್ಥಿತಿ ಹೇಗೆ ಬದಲಾಗುತ್ತದೆ ಎಂದು ಹೋಲಿಕೆ ಮಾಡುವ ಕೆಟ್ಟ ಹವ್ಯಾಸ? ನನಗೆ.😀


ನಿಮಗೂ ಇರಬಹುದು😀😜


ಅದಕ್ಕೆ ಉದಾಹರಣೆ ಈ ಹನಿ 


ಮದುವೆಯಾದ ಹೊಸದರಲ್ಲಿ

ನನ್ನವಳ ನೋಡುತ್ತಿದ್ದರೆ

ಅವಳ ಮೊಗದಲಿ

ಕಾಣುತ್ತಿತ್ತು

ಒಮ್ಮೆ ನೋಡಿದರೆ

ಬಾಲಿವುಡ್, ಮತ್ತೊಮ್ಮೆ

ಸ್ಯಾಂಡಲ್ ವುಡ್ ನಟಿಯರ

ಸುಂದರ ಚಿತ್ರ|👸

ಕಾಲ ಕಳೆದಂತೆ

ವಿವಿಧ ಕೋನದಲಿ

ನೋಡಿದರೆ ಅವಳ

ಮುಖವೇಕೋ

ಚಿತ್ರ ವಿಚಿತ್ರ||👻



ಸಿಹಿಜೀವಿ

ಸಿ ಜಿ ವೆಂಕಟೇಶ್ವರ


ನಮ್ಮ ನೆರಳು ನಮ್ಮನ್ನು ಹಿಂಬಾಲಿಸುವುದಿಲ್ಲ.ಕಥೆ


 

ನಮ್ಮ ನೆರಳು ನಮ್ಮನ್ನು ಹಿಂಬಾಲಿಸುವುದಿಲ್ಲ. ಕಥೆ

ರವಿ ಪ್ರಾಮಾಣಿಕ , ಸತ್ಯಸಂಧ, ಉತ್ತಮ ನಡತೆಯ ವ್ಯಕ್ತಿ. ಯಾವುದೇ ಕೆಲಸವನ್ನು ಶ್ರದ್ದೆಯಿಂದ ಮಾಡುತ್ತಿದ್ದ .ಶಾಲೆ ಕಲಿಯದ ಅವನು ತಾನು ಕೂಲಿ ಮಾಡಿದ ಹಣವನ್ನು ಮಾಲೀಕರಿಂದ ಪಡೆಯುವಾಗ, ಅಂಗಡಿಯಲ್ಲಿ ಸಾಮಾನು ಖರೀದಿ ಮಾಡಿ ಚಿಲ್ಲರೆ ಪಡೆಯುವಾಗ ಲೆಕ್ಕ ಗೊತ್ತಾಗದೇ ಅವರು ಕೊಟ್ಟಷ್ಟೇ ಪಡೆದು ತನ್ನ ಅನಕ್ಷರತೆಗೆ ತಾನೇ ಕಾರಣವೆಂದು ತನ್ನನ್ನೆ ಅಳಿದುಕೊಂಡು, ಅಳಿದ ಅಮ್ಮನ ನೆನೆದು " ನಿನ್ನ ಮಾತು ಅಂದು ಕೇಳಿ ಶಾಲೆಗೆ ಹೋಗಿ ಕಲಿಯಬೇಕಿತ್ತವ್ವ " ಎಂದು ಮೇಲೆ ನೋಡುತ್ತಾ ಕ್ಷಮಿಸವ್ವ ಎಂದು ಆಗಾಗ್ಗೆ ಒಬ್ಬನೇ ಮಾತಾಡುತ್ತಿದ್ದ.

ಊರ ಸಾಹುಕಾರನ ಹೊಲದಲ್ಲಿ ಅಂದು ಕೂಲಿ ಕೆಲಸ ಮಾಡಿದ ರವಿ ಸಂಜೆ ಧಣಿಗಳ ಬಳಿ ತೆರಳಿದ ಐದು ನೂರು ರೂಗಳ ಎರಡು ನೋಟು ಕೊಟ್ಟ ಧಣಿಗಳು"  ರವಿ ಇಂದು ನೀನು ಮಾಡಿದ ಕೆಲಸ ಮೆಚ್ಚಿ ಜಾಸ್ತಿ ಕೂಲಿ ನೀಡಿರುವೆ, ಅದಕ್ಕೆ ಇಲ್ಲಿ ಒಂದು ಹೆಬ್ಬೆಟ್ಟು ಹಾಕು"  ಎಂದರು  ಧಣಿಗಳ ಮಾತು ಕೇಳಿ ಹಣ ಎಷ್ಟು ಜಾಸ್ತಿ ಇದೆ? ಯಾಕೆ ಹೆಬ್ಬಟ್ಟು?  ಎಂದು ತೋಚದೇ ಧಣಿಗಳ ಮೇಲಿನ ನಂಬಿಕೆಯಿಂದ ಹೆಬ್ಬಟ್ಟು ಒತ್ತಿದ.

ಮಾರನೇ ದಿನ ಪೋಲಿಸರು ಬಂದು ರವಿಯ ಅರೆಸ್ಟ್ ಮಾಡಿದರು . ರವಿಗೆ ಏನೂ ತೋಚದೆ ಅಳಲಾರಂಬಿಸಿದ. ನಾನೇನೂ ತಪ್ಪು ಮಾಡಿಲ್ಲ ಬಿಡಿ. ಧಣಿಗಳ ಕೇಳಿ ನಾನು ಧಣಿಗಳ ತೋಟ ಬಿಟ್ಟು ಎಲ್ಲೂ ಹೋಗಿಲ್ಲ ಎಂದು ಗೋಳಾಡಿದ"
.ಊರಲ್ಲಿ ಓದಿ ಬುದ್ದಿವಂತನಾದ ಸುರೇಶ್ " ನಿಮ್ಮ ಧಣಿಗಳ ಮಗ  ಎರಡು ದಿನದ ಹಿಂದೆ ಅಪ್ರಾಪ್ತ ಹುಡುಗಿ ಕೆಡಿಸಿ ಸಾಯಿಸಿದ್ದಾನೆ, ಅದನ್ನು ನಿನ್ನ ತಲೆಗೆ ಕಟ್ಟಲು ನಿನ್ನ ಧಣಿ ನಿನ್ನಿಂದ ಹೆಬ್ಬೆಟ್ಟು ಹಾಕಿಸಿಕೊಂಡು ನೀನೇ ಆ ಹುಡುಗಿ ಕೊಂದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ, ಈಗ ನೋಡು ಮಾಡದ ತಪ್ಪಿಗೆ ಜೈಲಲ್ಲಿ ಕೊಳೆಯಬೇಕು, ನಾಲ್ಕಕ್ಷರ ಕಲೀರಿ ಅಂದ್ರೆ ನಿಮ್ ತಲೇಗೇ ಹೋಗಲ್ಲ" ಎಂದು ಬೇಸರದಿಂದ ಟವಲ್ ಕೊಡವಿಕೊಂಡು ಮನೆ ಕಡೆ ಹೊರಟ.

ರವಿಗೆ ಕೈಕೊಳ ತೊಡಿಸಿ ಜೀಪ್ ನಲ್ಲಿ ಕೂರಿಸಿಕೊಂಡ ಪೋಲೀಸರು ಸ್ಟೆಷನ್ ಕಡೆ ಹೊರಟರು. ಪೋಲೀಸ್ ಜೀಪ್ ನಲ್ಲಿ ಕುಳಿತ ರವಿಗೆ ಬಾಲ್ಯದಲ್ಲಿ  ಅಪ್ಪ ಹೇಳಿದ ಮಾತುಗಳು ಕಿವಿಯಲ್ಲಿ ಪ್ರತಿಧ್ವನಿಸಿದವು" ಕತ್ತಲಿದ್ದಾಗ ನಮ್ಮ ನೆರಳೂ ನಮ್ಮನ್ನು  ಹಿಂಬಾಲಿಸುವುದಿಲ್ಲ...."

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ


12 ಸೆಪ್ಟೆಂಬರ್ 2021

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ನಾನು ವಿಮರ್ಶೆ ಮಾಡಿರುವ ಕಾದಂಬರಿ "ವಾಡಿವಾಸಲ್ " ಪ್ರಕಟವಾಗಿದೆ*೧೨/೮/೨೧


 

*ಇಂದಿನ ಬೆವರ ಹನಿ ಪತ್ರಿಕೆಯಲ್ಲಿ ಪ್ರಕಟವಾದ ಕೋಟೆ ಕುಮಾರ್ ಸರ್ ರೇಖಾಚಿತ್ರ ಸಹಿತ ನನ್ನ ಗಜಲ್* ೧೨/೯/೨೧


 

ಎದೆಗಾರಿಕೆ


 


ಎದೆಗಾರಿಕೆ 


ಕಷ್ಟಗಳನ್ನು ಧೈರ್ಯವಾಗಿ

ಎದುರಿಸುವ ಗಂಡಿನ ಗುಣವೇ

ಎದೆಗಾರಿಕೆ|

ಬರೀ ಬೊಗಳೆ ಬಿಡುತ್ತಾ

ಪೋಸ್ ಕೊಟ್ಟು ಎದೆ

ಮೇಲೆ ಕೂದಲು ಮಾತ್ರ

ಬೆಳಿಸಿಕೊಂಡರೆ ಅದು

ಎದೆಗರಿಕೆ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ