ಎದೆಗಾರಿಕೆ
ಕಷ್ಟಗಳನ್ನು ಧೈರ್ಯವಾಗಿ
ಎದುರಿಸುವ ಗಂಡಿನ ಗುಣವೇ
ಎದೆಗಾರಿಕೆ|
ಬರೀ ಬೊಗಳೆ ಬಿಡುತ್ತಾ
ಪೋಸ್ ಕೊಟ್ಟು ಎದೆ
ಮೇಲೆ ಕೂದಲು ಮಾತ್ರ
ಬೆಳಿಸಿಕೊಂಡರೆ ಅದು
ಎದೆಗರಿಕೆ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಎದೆಗಾರಿಕೆ
ಕಷ್ಟಗಳನ್ನು ಧೈರ್ಯವಾಗಿ
ಎದುರಿಸುವ ಗಂಡಿನ ಗುಣವೇ
ಎದೆಗಾರಿಕೆ|
ಬರೀ ಬೊಗಳೆ ಬಿಡುತ್ತಾ
ಪೋಸ್ ಕೊಟ್ಟು ಎದೆ
ಮೇಲೆ ಕೂದಲು ಮಾತ್ರ
ಬೆಳಿಸಿಕೊಂಡರೆ ಅದು
ಎದೆಗರಿಕೆ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ನಾನು ದುರ್ಗದ ರಾಜನಾದರೆ. ಲೇಖನ
ಮಹಾರಾಜನಾಗಿ ಆಳಲು ಅವಕಾಶ ಲಭಿಸಿದರೆ
ಗಂಡು ಮೆಟ್ಟಿದ ನಾಡು ,ಏಳು ಸುತ್ತಿನ ಕೋಟೆಯ ನಾಡು ದುರ್ಗ ವನ್ನೇ ಆಳುವೆ .
ಅವಕಾಶ ಲಭಿಸಿದರೆ
ರಾಜನಾಗಲು
ಆರಿಸಿಕೊಳ್ಳುವೆ
ಚಿತ್ರದುರ್ಗ .||
ದಕ್ಷತೆಯಿಂದ
ಆಡಳಿತ ಮಾಡುತ್ತಾ
ಮಾಡುವೆ ಭುವಿಯ
ಮೇಲಿನ ಸ್ವರ್ಗ||
ನಾನು ಹೇಗೆ ಆಳ್ವಿಕೆ ಮಾಡುವೆ?
ಕುಮಾರವ್ಯಾಸ ಭಾರತದ ಆದಿಪರ್ವದ ನಾಲ್ಕನೆಯ ಸಂಧಿಯ ನಾಲ್ಕನೇ ಪದ್ಯ ಹೀಗಿದೆ.
"ಸೋಮಕುಲದವರಲಿ ಭವತ್ ಪ್ರಪಿತಾಮಹನವೊಲ್ ಧರ್ಮದಲಿ ಸಂಗ್ರಾಮದಲಿ ಸತ್ಯದಲಿ ಸಾಹಿತ್ಯದಲಿ ವಿನಯದಲಿಸಾಮದಲಿ ಶೌರ್ಯದಲಿ ಸುಜನಾಪ್ರೇಮದಲಿ ನೀತಿಯಲಿ ದೃಢದಲಿಭೂಮಿಯಲಿ ನಾ ಕಾಣೆನವನೀಪಾಲ ಕೇಳೆಂದ "
ವೈಶಂಪಾಯನರು ಪಾಂಡುವಿನ ಗುಣಗಳ ವರ್ಣನೆ ಜನಮೇಜಯ ರಾಜನಿಗೆ ಈ ರೀತಿ ಮಾಡುತ್ತ. ಪ್ರಪಿತಾಮಹ ರಾದ ಪಾಂಡು ಮಹಾರಾಜರು ಧರ್ಮದಲಿ, ಯುದ್ಧದಲಿ, ಸತ್ಯದಲಿ, ಸಾಹಿತ್ಯದಲಿ, ವಿನಯದಲಿ, ಸಾಮದಲಿ, ಶೌರ್ಯದಲಿ, ಸತ್ಸಂಗದಲಿ, ನೀತಿಯಲಿ, ದೃಢತೆಯಲಿ ಸೋಮಕುಲದಲ್ಲಿ ಮೆರೆದರು. ಇವರ ಸರಿಸಾಟಿಯಾದ ರಾಜರು ಇಡೀ ಭೂಮಿಯಲ್ಲಿ ನಾನು ಕಾಣೆನು ಎಂದರು .
ಎಂಬ ಆಶಯದಂತೆ ನನ್ನ ಆಳ್ವಿಕೆ ಇರಲಿದೆ.
ಅದರಂತೆ ನಾನೂ ಸಹ
ನಿಯಮ, ಆಚಾರಗಳಂತೆ ಅಧಿಕಾರ ಮಾಡುವೆನು. ಅವಶ್ಯಕತೆ ಬಿದ್ದರೆ ಪ್ರಜೆಗಳು ಮತ್ತು ನಾಡಿನ ರಕ್ಷಣೆ ವಿಷಯ ಬಂದರೆ ಯುದ್ದಮಾಡಲೂ ಹಿಂಜರಿಯಲಾರೆ. ರಾಜನು ಸತ್ಯಸಂಧನಾದರೆ ಪ್ರಜೆಗಳು ಸಹ ಸತ್ಯದ ಹಾದಿ ತುಳಿವರು ಆದ್ದರಿಂದ ಮೊದಲು ನಾನು ಸತ್ಯವಂತನಾಗಿ ಬಾಳಿ ತೋರಿಸುವೆ. ನಮ್ಮ ಸಂಸ್ಕೃತಿಯ ಪ್ರತೀಕವಾದ ಕಾವ್ಯ, ನಾಟಕ ಮುಂತಾದ ಸೃಜನಾತ್ಮಕ ಬರವಣಿಗೆಯನ್ನು ಸ್ವತಃ ನಾನು ಕೈಗೊಳ್ಳುವ ಮೂಲಕ ರಾಜ್ಯದ ಲಲಿತ ಕಲೆಗಳ ಬೆಳವಣಿಗೆಗೆ ಕ್ರಮ ಕೈಗೊಳ್ಳುವೆ.ರಾಜ್ಯದ ಪ್ರಜೆಗಳಲ್ಲಿ ಒಳ್ಳೆತನ, ಸೌಜನ್ಯ, ಸಭ್ಯತೆ ಗುಣಗಳನ್ನು ಪ್ರೋತ್ಸಾಹ ಮಾಡುವೆನು. ಅಶೋಕ ಚಕ್ರವರ್ತಿ ಹೇಳಿದಂತೆ ಪ್ರಜೆಗಳ ಮೇಲೆ ಸದಾ ವಾತ್ಸಲ್ಯ ತೋರುತಲಿ ಮಾರ್ಗದರ್ಶನ ಮಾಡುತ್ತಾ ಹಗಲಿರುಳು ಅವರ ಕಲ್ಯಾಣ ಕ್ಕೆ ಶ್ರಮಿಸುವೆ.
ನೀರಾವರಿಯ ಭಾಗವಾಗಿ ಎಲ್ಲಾ ಆರು ತಾಲ್ಲೂಕುಗಳಾದ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ,ಹಿರಿಯೂರು, ಮೊಳಕಾಲ್ಮೂರು ಚಳ್ಳಕೆರೆ ಇವುಗಳಲ್ಲಿ ಕೆರೆ ಕಟ್ಟೆಗಳ ಮೂಲಕ ಶಾಶ್ವತವಾದ ನೀರಾವರಿ ಯೋಜನೆಗಳನ್ನು ಜಾರಿಗೆ ತರುವೆನು , ಗುಡಿಕೈಗಾರಿಗಳು ಮತ್ತು ಬೃಹತ್ ಕೈಗಾರಿಕೆಗಳ ನಡುವೆ ಸಮತೋಲನ ತರುವೆನು , ಗ್ರಾಮರಾಜ್ಯದ ಪರಿಕಲ್ಪನೆಯನ್ನು ಬಲಪಡಿಸುವೆನು . ವ್ಯಾಪಾರ ವಾಣಿಜ್ಯ ಬಲಪಡಿಸುವೆನು. ಸರ್ವ ಜನಾಂಗದ ಶಾಂತಿಯುತ ಸಹಬಾಳ್ವೆ ಗೆ ಮುನ್ನುಡಿ ಬರೆವೆ.
ಶರಣರ ನುಡಿಯಂತೆ ಕಾಯಕ ತತ್ವ,ಸರ್ವೇ ಜನಾಃ ಸುಖಿನೋಭವಂತು , ನನ್ನ ನಾಡಿನ ಧ್ಯೇಯ ವಾಕ್ಯ ಆಗಲಿದೆ.
"ಆರಂಕುಷವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ" ಎಂಬ ಕವಿವಾಣಿಯಂತೆ
ನನ್ನ ರಾಜ್ಯದ ಎಲ್ಲಾ ಸಿಹಿಜೀವಿಗಳು ದುರ್ಗದಲ್ಲೇ ಹುಟ್ಟಬೇಕೆಂದು ಬಯಸುವ ರೀತಿಯಲ್ಲಿ ಆಡಳಿತ ಮಾಡಿ ತೋರಿಸುವೆ.
ಜೈ ಚಾಮುಂಡೇಶ್ವರಿ
ಜೈ ಏಕನಾಥೇಶ್ವರಿ
ಜೈ ಉಚ್ಚಂಗಿ ತಾಯಿ
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ವಾಡಿವಾಸಲ್ .ಕಾದಂಬರಿ ವಿಮರ್ಶೆ
ಓದಿ ಓದಿ ಮರುಳಾಗಿ ಎಂಬ ಟ್ಯಾಗ್ ಲೈನ್ ಹೊಂದಿರುವ ಛಂದ ಪುಸ್ತಕ ಹೊರ ತಂದ ಹೊಸ ಪುಸ್ತಕ ವಾಡಿವಾಸಲ್ ಎಂಬ ಕಾದಂಬರಿ. ಒಂದೇ ಗುಕ್ಕಿಗೆ ಓದಿ ಮುಗಿಸಿದೆ . ಈ ಕಾದಂಬರಿ ಓದಿದಾಗ ನಮ್ಮ ಮುಂದೆ ಜಲ್ಲಿಕಟ್ಟು ನಡೆಯುತ್ತಿದೆ ಎಂಬಂತೆ ಚಿತ್ರಣ ಮೂಡುತ್ತದೆ.
ವಾಡಿವಾಸಲ್ ಮೂಲ ಕಾದಂಬರಿಯ ಲೇಖಕರಾದ
ಚಿ.ಸು. ಚೆಲ್ಲಪ್ಪ ರವರು
ಹುಟ್ಟಿದ್ದು ಮದುರೈ ಜಿಲ್ಲೆಯ ವತ್ತಲಗುಂಡು ತಾಲೂಕಿನ ಚಿನ್ನಮಣೂರ್ ಗ್ರಾಮದಲ್ಲಿ. ಸಣ್ಣಕತೆ, ಕಾದಂಬರಿ, ವಿಮರ್ಶೆ, ಕವಿತೆ, ಅನುವಾದ ಮೊದಲಾದ ಕ್ಷೇತ್ರಗಳಿಗೆ ಚೆಲ್ಲಪ್ಪನವರ ಕೊಡುಗೆ ಅಪಾರ. ಚಂದ್ರೋದಯ, ದಿನಮಣಿ ಪತ್ರಿಕೆಗಳಲ್ಲಿ ಸಹಸಂಪಾದಕರಾಗಿ ಕೆಲಸ ಮಾಡಿದ್ದ ಚೆಲ್ಲಪ್ಪನವರು ರಚಿಸಿದ ವಾಡಿವಾಸಲ್ ಕಾದಂಬರಿಯು ಜಲ್ಲಿಕಟ್ಟು ಕುರಿತ ಮೊದಲ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದನ್ನು ಕನ್ನಡಕ್ಕೆ ತಂದವರು
ಸತ್ಯಕಿ. ಇತ್ತೀಚಿಗೆ ಕನ್ನಡ ಕಿರುತೆರೆಯಲ್ಲಿ ಸಂಚಲನವನ್ನು ಮೂಡಿಸಿದ "ಜೊತೆ ಜೊತೆಯಲಿ" ಧಾರವಾಹಿಯ ಸಂಭಾಷಣೆಯಿಂದ ಮನೆ ಮಾತಾದವರು.
ಅವರ ಜನ್ಮಭೂಮಿ, ಕರ್ಮಭೂಮಿ ಎರಡೂ ಬೆಂಗಳೂರೇ. ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್. ಸಿನಿಮಾ ಕ್ಷೇತ್ರದಲ್ಲಿ ಸಹಾಯಕ ನಿರ್ದೇಶಕನಾಗಿ, ಸಂಭಾಷಣೆಕಾರನಾಗಿ ವೃತ್ತಿಜೀವನ ಪ್ರಾರಂಭಿಸಿರುವ ಸತ್ಯಕಿ ರವರು ಬಹಳ ಸೊಗಸಾಗಿ ವಾಡಿವಾಸಲ್ ಕಾದಂಬರಿಯನ್ನು ಅದೇ ಹೆಸರಲ್ಲಿ ಕನ್ನಡಿಗರಿಗೆ ತಂದಿದ್ದಾರೆ .
ಸುಪ್ರೀಂ ಕೋರ್ಟ್ ತೀರ್ಮಾನ ಮತ್ತು ವಿವಾದದ ಹಿನ್ನೆಲೆಯಲ್ಲಿ ಈ ಕಾದಂಬರಿ ಗಮನ ಸೆಳೆಯುತ್ತದೆ. 1959 ರಲ್ಲಿ ಬರೆದ ಈ ಕಾದಂಬರಿ ಇಂದಿಗೂ ಪ್ರಸ್ತುತ ವಾಗಿದೆ.
ವಾಡಿವಾಸಲ್ ಎಂಬ ತಮಿಳು ಪದ ಜಲ್ಲಿಕಟ್ಟು ನಡೆವ ಸ್ಥಳದಲ್ಲಿ ಗೂಳಿಗಳನ್ನು ಕೂಡಿಹಾಕಿರುವ ಪ್ರದೇಶದಿಂದ ಮೊದಲ ಬಾರಿಗೆ ಹೊರ ಬರುವ ಸ್ಥಳ .
ಮನುಷ್ಯನಿಗೂ ಮೃಗಕ್ಕೂ ನಡೆಯುವ ಕಾಳಗಕ್ಕೆ ಜಲ್ಲಿಕಟ್ಟು ಎಂದು ಹೆಸರು. ಅದು ನಡೆಯುವ ಜಾಗ ವಾಡಿವಾಸಲ್
ಪಿಚ್ಚಿ ಮತ್ತು ಅವನ ಬಾಮೈದ ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸಲು ಬರುವ ಹಿನ್ನೆಲೆಯಲ್ಲಿ ಆರಂಭವಾಗುವ ಈ ಕಾದಂಬರಿಯು ಜಲ್ಲಿಕಟ್ಟು ಕ್ರೀಡೆಯ ಸಣ್ಣ ಅಂಶಗಳನ್ನು ಸಹ ಕಣ್ಣಿಗೆ ಕಟ್ಟುವಂತೆ ಓದುಗರಿಗೆ ತೋರಿಸುತ್ತಾ ಹೋಗುತ್ತಾರೆ ಕಾದಂಬರಿಕಾರರು.
ತಂದೆಯ ಸಾವಿಗೆ ಕಾರಣವಾದ ಕಾರಿ ಎಂಬ ಗೂಳಿಯ ಸೋಲಿಸಿ ತಂದೆಯ ಆಸೆ ಈಡೇರಿಸಲು ಪಿಚ್ಚಿ ತನ್ನ ಬಾಮೈದನೊಂದಿಗೆ ಬಂದು ಗುರಿ ಮುಟ್ಟಿದನೇ ಅಪ್ಪನ ಆಸೆ ಈಡೇರಿಸಿದನೇ ಎಂಬುದನ್ನು ನೀವು ಕಾದಂಬರಿ ಓದಿಯೇ ಎಂಜಾಯ್ ಮಾಡಬೇಕು.
ಕಾದಂಬರಿಯಲ್ಲಿ ಬರುವ ಕೆಲ ದೃಶ್ಯಗಳನ್ನು ಲೇಖಕರು ಕುತೂಹಲಕಾರಿ ಚಿತ್ರ ನೋಡುವಾಗ ಸೀಟಿನ ಮುಂಬಾಗದಲ್ಲಿ ಕುಳಿತು ನೋಡುವಂತೆ ಉಸಿರು ಬಿಗಿ ಹಿಡಿದು ಓದುವಂತೆ ಮಾಡಿದ್ದಾರೆ
ಅದಕ್ಕೆ ಕೆಲ ಉದಾಹರಣೆ ಎಂದರೆ
"ಒಂದು ಜಿಗಿತ, ಎರಡು ಜಿಗಿತ; ಮೂರನೇ ಜಿಗಿತಕ್ಕೆ ಆತ ನಿಂತು ಬಿಟ್ಟ, ಮೂರು ಬಾರಿಯೂ ಗೂಳಿಯು ಅವನನ್ನು ಎತ್ತಿ ಎಸೆಯಲು ಯತ್ನಿಸಿತ್ತು".
"ಅಪ್ಪನ ಬಯಕೆಗೆ ಮಾತ್ರವಲ್ಲ, ಬದುಕಿಗೆ ಯಮನಾಗಿ ನಿಂತ
ಕಾರಿಯ ಕೊಂಬಿನಲ್ಲಿ ಈಗಲೂ ತಂದೆಯ ರಕ್ತ ಅಂಟಿದಂತೆ ಭ್ರಮೆ ಉಂಟಾಯಿತು. ಆ ಭ್ರಮೆಯಿಂದ ಹೊರ ಬಂದು ತನ್ನ ಎದುರಿಗೆ ನೋಡಿದನು ಪಿಚ್ಚಿ, ಆತನ ಎದುರಿಗೆ ಕಾರಿ ನಿಂತಿತ್ತು".
ಕಾದಂಬರಿಯ ಕೊನೆಯ ವಾಕ್ಯಗಳನ್ನು ಓದುವಾಗ ಓದುಗರು ಬಾವುಕರಾಗುವುದು ಸುಳ್ಳಲ್ಲ
“ಮೈಗಕ್ಕೆ ರೋಸ ಬಂದ್ರೂ ಅಸ್ಟೇ ಮನುಸಂಗೆ ರೋಸ ಬಂದ್ರೂ ಅಸ್ಟೇ ,
ಏನೇಂದ್ರೂ ಅದು ಮೃಗಾನೇ ಅಲ್ವಾ" ಎಂಬ ಹಳ್ಳಿಯ ಬನರು ಮಾತು ನಮ್ಮ ನ್ನು ಚಿಂತನೆಗೆ ಹಚ್ಚುತ್ತವೆ.
ಈ ಕಾದಂಬರಿಯಲ್ಲಿ ರಾಷ್ಟ್ರೀಯ ಚಿತ್ರಕಾರರಾದ ಕೆ ಎಂ ಆದಿ ಮೂಲನ್ ರವರ ರೇಖಾಚಿತ್ರಗಳು ಕಥೆಗೆ ಪೂರಕವಾಗಿ ಓದುಗರ ಮನ ಸೆಳೆಯುತ್ತವೆ .
ಒಟ್ಟಾರೆಯಾಗಿ ಒಂದು ಕ್ಲಾಸಿಕ್ ಕಾದಂಬರಿ ಓದಿದ ಅನುಭವ ಆಗಬೇಕಂದರೆ ನೀವೂ ಒಮ್ಮೆ ವಾಡಿವಾಸಲ್ ಓದಿ .
ಕಾದಂಬರಿಯ ಹೆಸರು: ವಾಡಿವಾಸಲ್
ಲೇಖಕರು: ಚಿ.ಸು. ಚೆಲ್ಲಪ್ಪ
ಅನವಾದ: ಸತ್ಯಕಿ.
ಪ್ರಕಾಶನ: ಛಂದ ಪ್ರಕಾಶನ
ಬೆಲೆ : 70 ರೂಗಳು
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
೧
ಗಜಾನನನು
ಮೂಷಿಕ ಏರಿದವ
ವಿಘ್ನ ಕಳೆವ
೨
ಲಂಬೊದರನು
ಡೊಳ್ಳೊಟ್ಟೆಗೆ ಕಾರಣ
ಮೋದಕಪ್ರಿಯ
೩
ಅಗೋ ಬೆನಕ
ಮೆರವಣಿಗೆ ಬಂತು
ಮನದಿ ನೆನೆ
ಸಿಹಿಜೀವಿ
ಸಿ ಜಿ ವೆಂಕಟೇಶ್ವರ