24 ಅಕ್ಟೋಬರ್ 2020

ದಸರಾ ಜಂಬೂಸವಾರಿ


 *ದಸರಾ ಜಂಬೂ ಸವಾರಿ*

ಚಂಡ ಮುಂಡರ ಕೊಂದ ಅಮ್ಮನ

ಉತ್ಸವಕೆ ಬನ್ನಿ ನೀವೆಲ್ಲ

ಚಾಮುಂಡೇಶ್ವರಿಯ ಭಜಿಸುತ

ದಸರೆಯ ಮಾಡೊಣ ನಾವೆಲ್ಲ.


ಮಹಿಷನ ಕೊಂದು ಮಹಿಯನು

ಕಾಪಾಡಿದ ಅಮ್ಮನ ನೆನೆಯೋಣ

ಮೈಸೂರಿನ ವಿಶ್ವ ಪ್ರಸಿದ್ಧ ದಸರಾ

ಮಹೋತ್ಸವದಲ್ಲಿ ಪಾಲ್ಗೊಳ್ಳೋಣ.


ಅರಮನೆ ದೀಪಾಲಂಕಾರ 

ಜಗಮಗಿಸತಿದೆ ನೋಡಿಲ್ಲಿ

ಕಣ್ಮನ ಸೆಳೆದಿದೆ ಸಂತಸ 

ಉಕ್ಕಿದೆ ನಮ್ಮಯ ಮನದಲ್ಲಿ.


ವಿಜಯ ದಶಮಿಯ ದಿನ 

ಅಮ್ಮ ಬಂದರು ಆನೆಯೇರಿ

ಸ್ತಬ್ದ ಚಿತ್ರಗಳೊಂದಿಗೆ ಸಾಗಿದೆ

ಅದುವೆ ಜಂಬೂ ಸವಾರಿ.


*ಸಿಹಿಜೀವಿ*

ಸಿ .ಜಿ .ವೆಂಕಟೇಶ್ವರ

ತುಮಕೂರು 


23 ಅಕ್ಟೋಬರ್ 2020

ಹಣ _ಗುಣ ( ಹನಿ)


*ಹಣ_ ಗುಣ*

ಸ್ನೇಹ ,ಪ್ರೀತಿ ಮಾಡಬೇಡ
ನೋಡುತಲಿ ನಾವು 
ಹಾಕುವ ಬಟ್ಟೆ ಮತ್ತು ಹಣ|
ಗಮನಿಸಲೇ ಬೇಕು
ಅವರಲಿರುವ ಆಂತರಿಕ
ಸೌಂದರ್ಯ ಮತ್ತು ಗುಣ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

21 ಅಕ್ಟೋಬರ್ 2020

ಸ್ಕಂದಮಾತೆ ( ಭಕ್ತಿ ಗೀತೆ)


 *ಸ್ಕಂದ ಮಾತೆ*


ಸ್ಕಂದ ಮಾತೆಯೆ ನಮಿಪೆವು

ನಾವು ತಲೆಬಾಗಿ

ಅಭಯ ಹಸ್ತವ ನೀಡಮ್ಮ

ನಮಗೆ ತಾಯಾಗಿ


ಸಿಂಹದ ಮೇಲೆ ಕುಳಿತು

ಅಭಯವ ನೀಡುತಿರುವೆ

ಸ್ಕಂದನ ತೊಡೆಯ  ಮೇಲೆ

ಕೂರಿಸಿಕೊಂಡು ಆಡಿಸುತಿರುವೆ.


ಕಮಲ ಗುಲಾಬಿ ಪುಷ್ಪಗಳ

ಪ್ರಿಯೆ ನೀನು ನನ್ನಮ್ಮ

ದುರಿತಗಳ ತರಿಯುತ 

ಸರಿದಾರಿಯ ನಮಗೆ ತೋರಮ್ಮ.


ಹಣೆಯಲಿರುವ ಮುಕ್ಕಣ್ಣನ 

ಕಣ್ಣಲಿ ನೀ ನೋಡು

ಪದ್ಮಾಸನ ಪ್ರಿಯೆ ಚತುರ್ಭುಜೆ

ನಮ್ಮನು ಹರಸಿ ಕಾಪಾಡು


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು