16 ಅಕ್ಟೋಬರ್ 2020

ಸ್ವರ್ಗಕ್ಕೆ ಪಯಣ( S P ಬಾಲಸುಬ್ರಹ್ಮಣ್ಯಂ ರವರಿಗೆ ನುಡಿ ನಮನ)

*ಸ್ವರ್ಗಕ್ಕೆ ಪಯಣ*



ಗಾಯನ ಲೋಕದ ಧೀಮಂತ

ನಟನಾ ಲೋಕದ ಶ್ರೀಮಂತ

ನೀನಗೆ ನೀನೆ ಸಾಟಿ ಬಾಲಣ್ಣ

ಮತ್ತೊಮ್ಮೆ ಹುಟ್ಟಿ ಬಾರಣ್ಣ.


ಕಂಠದಲ್ಲೆ ನವರಸ ತೋರಿದೆ

ಸರಿಗಮಗಳ ಕುಣಿದಾಡಿಸಿದೆ

ದಾಖಲೆಗಳನು ದೂಳೆಬ್ಬಿಸಿದೆ

ಭಾಷಾ ಸಾಮರಸ್ಯ ಬೆಳೆಸಿದೆ.


ನಾಯಕರಿಗೆ ನೀ ಶಾರೀರವಾದೆ 

ಸತತವಾಗಿ ಹರಿಸಿದೆ ಗಾನಸುಧೆ 

ಸಂಗೀತ ಲೋಕದ ದಿಗ್ಗಜ ನೀವು

ಎಂದಿಗೂ ಮರೆಯೊಲ್ಲ ನಾವು.


ತರ ತರ ಹಾಡನು ಹಾಡುತಲಿ

ಮೈಲಿಗಲ್ಲುಗಳ  ದಾಟುತಲಿ 

ಅಭಿಮಾನಿಗಳನು ಅಗಲಿದಿರಿ 

ಸ್ವರ್ಗಕೆ ಪಯಣವ ಮಾಡಿದಿರಿ.



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


ಸಿಹಿಜೀವಿಯ ಹಾಯ್ಕಗಳು


 *ಸಿಹಿಜೀವಿಯ ಹಾಯ್ಕುಗಳು*


೧೦೧

       ಅನ್ನದಾತನು

      ದೇಶದ ಬೆನ್ನೆಲುಬು

     ನೇಗಿಲ ಯೋಗಿ


೧೦೨

        ಸ್ನೇಹಕ್ಕೆ ಅರ್ಥ

       ನನ್ನ ಗೆಳೆಯ ಮುತ್ತು 

     ಪುರಾವೆಯೇಕೆ?

      

   ‌    ೧೦೩

        ಅನ್ನದ ಬೆಲೆ 

    ಹಸಿದವಗೆ ಗೊತ್ತು

     ಹಸಿದು ನೋಡು

             

೧೦೪

        

       ಶ್ರೀದೇವಿ ಮಾತೆ

   ಮಾತೆಯ ಮಾತುಗಳು

  ಮನಕೆ ಇಂಪು 


೧೦೫

ಇಳೆಗೆ ಮಳೆ

ಮಳೆಯ ಅವಾಂತರ

ರೈತ ಕಂಗಾಲು


೧೦೬


ಆರೋಗ್ಯಬೇಕೆ?

ಕೈತೊಳೆವುದ ಕಲಿ

ಸೋಂಕಿಂದ ಮುಕ್ತಿ.



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು.

15 ಅಕ್ಟೋಬರ್ 2020

ಮಳೆ ಹನಿಯ ಬಗ್ಗೆ ಸಿಹಿಜೀವಿಯ ಹನಿಗಳು


 *ಹನಿಗಳ ಮೇಲೆ ಸಿಹಿಜೀವಿಯ ಹನಿಗಳು*



ಹನಿ೧


*ನಿಲ್ಲಿಸು*


ವರುಣ ತೋರು ಕರುಣ  

ಬರಲಿ ಬಿಡು ಅರುಣ

ನಿಲ್ಲಿಸು ನಿನ್ನಾರ್ಭಟವ

ಕೊಡದಿರು ಕಾಟವ 



ಹನಿ೨


*ನೆಲೆ ಎಲ್ಲಿ?*


ವರುಣನ ಆಗಮನ

ಜೀವಸಂಕುಲದ ನಮನ

ವರಣಾರ್ಭಟವಾಗಲು 

ಬದುಕು ಚೆಲ್ಲಾಪಿಲ್ಲಿ.

ಜೀವಿಗಳಿಗೆ ನೆಲೆ ಎಲ್ಲಿ?


ಹನಿ೩


*ನಿಶ್ಶೇಷ*


ತೂತು ಬಿದ್ದಿರಬಹುದು 

ಆಕಾಶ 

ರೈತರ ಮನದಿ ಕ್ಲೇಶ |

ಬೆಳೆ ಮತ್ತು ಬಾಳಾಗಬಹುದು

ನಿಶ್ಶೇಷ||



ಹನಿ೪


*ಮಳೆ*


ನಮಗೂ ಬೇಕೇ ಬೇಕು

ಮಳೆ |

ಅತಿಯಾದರೆ ?

ಹೊಡೆದುಬಿಡುವುದೇನೋ 

ರೈತರ ಶವಪೆಟ್ಟಿಗೆಗೆ ಕೊನೆಯ

ಮಳೆ|| 



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು.

14 ಅಕ್ಟೋಬರ್ 2020

ಜೀವನದಿ (ಚುಟುಕು)


  ಚುಟುಕು


*ಜೀವನದಿ*


ಚಿಂತಿಪೆಯೇಕೆ  ನಾಲ್ಕು ದಿನದ  ಈ ಜೀವನದಿ

ಗಾಳಿ ಗೋಪುರ ಕಟ್ಟದಿರು ನೀನು  ಗಗನದಿ

ನಿಲ್ಲದಿರು ಸಾಗುತಿರು ನೋಡಿ ಹರಿವ  ನದಿ

ಅನಿವಾರ್ಯವಲ್ಲ ಯಾರೂ ನೀನೇ "ಜೀವನದಿ"


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


13 ಅಕ್ಟೋಬರ್ 2020

ಮಗಳೆಂದರೆ (ಹನಿ)


 *ಭಾಗ್ಯಶಾಲಿ*


ಮನೆ ಮಗಳೆಂದರೆ

ಲಕ್ಷ್ಮಿ , ಸರಸ್ವತಿ, ಪಾರ್ವತಿ

ಈ ಮೂವರ ಪಡೆದ 

ನಾನೇ ಭಾಗ್ಯಶಾಲಿ|

ಅವಳು ಕಣ್ಮರೆಯಾದರೆ

ನನ್ನ ಜೀವನವೇ ಖಾಲಿ||


*ಸಿಹಿಜೀವಿ*


ಸಿ ಜಿ ವೆಂಕಟೇಶ್ವರ

ತುಮಕೂರು