30 ಜೂನ್ 2020

ಜನಮಿಡಿತ ಪ್ರಕಟವಾದ ಹನಿಗವನಗಳು

ಜನಮಿಡಿತ  ಪ್ರಕಟವಾದ ಹನಿಗವನಗಳು

ಪ್ರಜಾಪ್ರಗತಿ ಪ್ರಕಟವಾದ ಹನಿಗವನಗಳು

 ಪ್ರಜಾಪ್ರಗತಿ  ಪ್ರಕಟವಾದ ಹನಿಗವನಗಳು

ಹಾಸನ ವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಹನಿಗವನಗಳು

ಹಾಸನ ವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಹನಿಗವನಗಳು

27 ಜೂನ್ 2020

ಪೇರ್ ಅಂಡ್ ಲವ್ಲಿ

ಪೇರ್ ಅಂಡ್ ಲೈವ್ಲಿ

ಈಗ ಜ್ಞಾನೋದಯವಾಗಿ
ಹೆಸರು ಬದಲಾಯಿಸುವುದಂತೆ
ಪೇರ್ ಅಂಡ್ ಲವ್ಲಿ|
ಮುಖದ ಬಣ್ಣದಲಿಲ್ಲ ಸೌಂದರ್ಯ
ಆಂತರಿಕ ಸೌಂದರ್ಯವಿರುವವರು
ಸದಾ ಕಾಲ ಜೀವಿಸುವರು  ಲೈವ್ಲಿ ||

ಸಿ ಜಿ ವೆಂಕಟೇಶ್ವರ



26 ಜೂನ್ 2020

ಸಿಹಿಜೀವಿಯ ಹನಿಗಳು ( ವಿಶ್ವ ಮಾದಕವಸ್ತುಗಳ ವಿರೋಧಿ ದಿನ)

*ಸಿಹಿಜೀವಿಯ ಹನಿಗಳು*

(ಇಂದು ವಿಶ್ವ ಮಾದಕ ವಸ್ತುಗಳ ವಿರೋಧಿ ದಿನ)



*ನಗೆ*

ಏಕೆ ಬೇಕು ಪ್ರಿಯೆ ?
ಆರೋಗ್ಯಕ್ಕೆ ಮಾರಕ
ಬೀಡಿ ಸಿಗರೇಟು  ಹೊಗೆ |
ನನ್ನ ಆರೋಗ್ಯಕ್ಕೆ ಪೂರಕ
ಸಾಕು ನಿನ್ನ ಹೂ ನಗೆ||



*ತಿಂಗಳು*

ಒಮ್ಮೆ ನೋಡಿದರೆ ಸಾಕು
ನಿನ್ನ ಮಾದಕ ಕಂಗಳು|
ಅದೇ ನಶೆಯಲಿ ನಾನು
ತೇಲುವೆನು ತಿಂಗಳು ||




*ನತ್ತು*

ನಿನ್ನೆಲ್ಲಾ ಅಂಗಗಳ
ನೋಡಿದರೆ ಒಂದಲ್ಲ
ಒಂದು ಬಾರಿ
ಏರುವುದು ಮತ್ತು|
ಆ ಅವಯವಕ್ಕೆಲ್ಲಾ
ಪೈಪೋಟಿ ನೀಡಿದೆ
ನಿನ್ನ ಮೂಗು ನತ್ತು||



*ಮುತ್ತಿಗೆ*

ಯಾವ ಮಾದಕ
ವಸ್ತುಗಳು ಬೇಕಿಲ್ಲ
ಪ್ರಿಯೆ ನನ್ನ ಮತ್ತಿಗೆ|
ಗಗನದಲಿ ತೇಲಾಡಿಸುವ
ಶಕ್ತಿ ಇದೆ ನಿನ್ನ ಮುತ್ತಿಗೆ||



*ಧರ್ಮ_ಯಮಧರ್ಮ*

ಮಾದಕ ವಸ್ತುಗಳ
ಸೇವಿಸಿದರೆ ಒಳಿತಲ್ಲ
ಎಂದು ಹೇಳುವುದು
ನನ್ನ ಧರ್ಮ|
ಕೇಳದಿದ್ದರೆ ನಿಮ್ಮ ಕರ್ಮ
ಬೇಗ ಹುಡುಕಿ ಬರುವ
ಯಮ ಧರ್ಮ||

*ಸಿ ಜಿ ವೆಂಕಟೇಶ್ವರ*