17 ಮೇ 2020

ಕಲಿಯುತಿರುವೆ (ಕವನ)

*ಕಲಿಯುತಿರುವೆ*

ನಾನೂ ಒಳ್ಳೆಯವನಾಗಬೇಕು
ಎಂಬ ಆಸೆಯೇನೋ ಇದೆ
ಏನು ಮಾಡಲಿ ?
ನನ್ನ ಹೃದಯದ ತುಂಬಾ
ಕಾಮ, ಕ್ರೋಧ, ಮೋಹ
ಲೋಭ, ಮದ ,ಮತ್ಸರ
ಇತ್ಯಾದಿ ಕಲ್ಮಶಗಳೇ
ತುಂಬಿ‌ ತುಳುಕುತ್ತಿವೆ.

ಈಗೀಗ ವೈರಾಣುವೊಂದು
ಬುದ್ದಿ ಕಲಿಸಿದೆ ಬಂದು
ತೊಳೆಯುತಿದೆ ನನ್ನ
ದುರ್ಗುಣಗಳ ಇಂದು

ಇನ್ನೂ ಕಲ್ಮಶ ಪೂರ್ಣ
ತೊಳೆಯಲಾಗಿಲ್ಲ
ಕ್ರಮೇಣ ಕಲಿಯುತಿರುವೆ
ನಾನೂ ಬದುಕಲು,
ಮತ್ತು ಇತರರರ
ಬದುಕಲು ಬಿಡಲು

ಇನ್ನೊಂದು ವೈರಾಣು ನನ್ನ
ಪೂರ್ಣ ಕಲ್ಮಶ ತೊಳೆದೀತೆ?




16 ಮೇ 2020

ಸಿಹಿಜೀವಿಯ ಆರು ಹನಿಗಳು

ಸಿಹಿಜೀವಿಯ ಆರು  ಹನಿಗಳು

*೧*

*ಪಿತೃಪ್ರಧಾನ*


ಮನೆಯವರು
ಕೇಳಿದಾಲೆಲ್ಲ
ನಮ್ಮಪ್ಪ
ಮಾಡುತ್ತಲೇ
ಇರಬೇಕು
ಹಣದ ದಾನ|
ಯಾಕೆಂದರೆ
ನಮ್ಮ ಕುಟುಂಬ
ಪಿತೃಪ್ರಧಾನ||


*೨*

*ಸಮಾಧಾನ*

ಲಟ್ಟಣಿಗೆಯಲಿ
ಹೊಡೆಯಲಿ
ವಾಚಾಮಗೋಚರ
ಬೈಯಲಿ
ಗಂಡ ಪಾಲಿಸುವನು
ಸಮಾಧಾನ|
ಕಾರಣ
ಅವನ ಕುಟುಂಬ
ಮಾತೃಪ್ರದಾನ||

*೩*

*ಶಾಂತ*

ಅವರದು ಶಾಂತ
ಕುಟುಂಬ |
ಈಗಾಗುವ ಮೊದಲು
ಅವನಿಗೆ ಬಿದ್ದಿವೆ
ಲಟ್ಟಣಿಗೆ ಏಟುಗಳು
ತುಂಬಾ||


*೪*

*ನಾರಿ*

ಮದುವೆಯಾದಾಗ
ಅವಳೂ
ಬಳ್ಳಿಯಂತೆ
ಬಳುಕುವ ನಾರಿ
ಈಗೀಗ
ತೂಗುತ್ತಿದ್ದಾಳೆ ಬಾರಿ

*೫*

*ಸಮರಸ*

ಆ ಕುಟುಂಬದಲ್ಲಿ
ಇದೆ ಸಮರಸ|
ಏಕೆಂದರೆ
ಗಂಡ ಎದುರಾಡಲ್ಲ
ಅವಳು ದಿನವೂ
ಮಾಡಿ ಬಡಿಸಿದರೆ
ಅನ್ನ ರಸ||

*೬*

*ಕೈಯಲ್ಲಿದೆ*

ಮನೆಯ ದೊಡ್ಡಣ್ಣ
ಮುಂಜಾನೆ ಹೇಳಿದ
ನಮ್ಮ ಮನೆಯ ಘನತೆ
ಕಾಪಾಡುವುದು
ನಮ್ಮ ಕೈಯಲ್ಲಿದೆ|
ಸಂಜೆ ಮದ್ಯದ
ಬಾಟಲ್ ಅವನ
ಕೈಯಲ್ಲಿದೆ||


*ಸಿ ಜಿ ವೆಂಕಟೇಶ್ವರ*







ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಚುಟುಕು

ಇಂದಿನ  ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಚುಟುಕು 

15 ಮೇ 2020

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಗಜ಼ಲ್

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಗಜ಼ಲ್

ಉಳಿಸೋಣ ಸಂಬಂಧ ( ಇಂದು ವಿಶ್ವ ಕುಟುಂಬ ದಿನ)

*ಉಳಿಸೋಣ ಸಂಬಂಧ*

(ಇಂದು ವಿಶ್ವ ಕುಟುಂಬ ದಿನ)

ಬೆಸೆಯೋಣ ಬಂಧ
ಉಳಿಸೋಣ ಸಂಬಂಧ|ಪ|

ತೊಲಗಲಿ‌ ಬೇಸರ
ಎಲ್ಲರ ಮನದಲಿ
ತುಂಬಲಿ ಸಂತಸ
ಎಲ್ಲರ ಮನೆಯಲಿ|೧|

ರಸವಿರಲಿ ಮಾತಲಿ
ದ್ವೇಷವ ಮರೆಯೋಣ
ಸಮರಸವಿರಲಿ ನಮ್ಮಲಿ
ಸಹಬಾಳ್ವೆ ಮಾಡೋಣ|೨|

ಬೆಳೆಯಲಿ ಎಲ್ಲೆಡೆ
ಮಾನವೀಯ  ಮೌಲ್ಯಗಳು
ಉಳಿಯಲಿ ಕೌಟುಂಬಿಕ
ಸಿಹಿ ಸಂಬಂಧಗಳು|೩

ನಿಸ್ವಾರ್ಥ ,ಒಗ್ಗಟ್ಟು
ಎಲ್ಲರೂ ಪಾಲಿಸೋಣ
ಸುಂದರ ಕುಟುಂಬಕ್ಕೆ
ಬುನಾದಿ ಹಾಕೋಣ|೪|

*ಸಿ‌ ಜಿ‌ ವೆಂಕಟೇಶ್ವರ*