03 ಏಪ್ರಿಲ್ 2020

ಕದ್ದವರಾರು? (ನ್ಯಾನೋ ಕಥೆ)

*ಕದ್ದವರಾರು*

ಕಷ್ಟಪಟ್ಟು ವ್ಯವಸಾಯ ಮಾಡಿ ಬಂದ ಐವತ್ತು ಸಾವಿರ ಬ್ಯಾಂಕಿನಲ್ಲಿಟ್ಟಿದ್ದ‌‌ ಹಣವನ್ನು ಬಿಡಿಸಲು‌ ಹೋದ ಗೋವಿಂದಪ್ಪನಿಗೆ ಅಕೌಂಟ್ ನಲ್ಲಿ ಹತ್ತು ಸಾವಿರ ಮಾತ್ರ ಇದ್ದು‌ ಎ ಟಿ‌ ಎಂ ನಿಂದ ಹಣ ಡ್ರಾ ಅಗಿರುವುದು ತಿಳಿದು.ಇದ್ದ ಮೂವರಲ್ಲಿ ಕದ್ದವರಾರು ಎಂದು ಚಿಂತಿಸುತ್ತಾ ಜ್ವರ ಬಂದು‌ ಹಾಸಿಗೆ ಹಿಡಿದರು." ಅಪ್ಪಾ ನಿನಗೆ ಮಾತ್ರೆ ತರುವೆ " ಎಂದು ಮಗ ಹೋದ ಅರ್ಧ ಗಂಟೆಗೆ ಗೋವಿಂದಪ್ಪನ ಮೊಬೈಲ್ಗೆ ಮೇಸೇಜ್ ಬಂತು ಅವರ ಹೆಂಡತಿ ಓದಿದರು." Rs 5000 debited from Your account thank you for transaction "

*ಸಿ ಜಿ ವೆಂಕಟೇಶ್ವರ*
*ತುಮಕೂರು*

02 ಏಪ್ರಿಲ್ 2020

ನಟ(ಳ)ರಾಜ(ನ್ಯಾನೋ ಕಥೆ)

*ನಟ(ಳ)ರಾಜ*

(ನ್ಯಾನೋ ಕಥೆ)
"ರೀ ನೀವು ಅಡಿಗೆ ಮಾಡ್ತೀರಾ? ಸಾಕು ಸುಮ್ನಿರಿ ನಿಮಗೆ ತಿನ್ನೋಕು ನೆಟ್ಟಗೆ ಬರಲ್ಲ" ಎಂದು ಹಂಗಿಸಿದಳು ಸರಿತಾ " ಈ ಲಾಕ್ ಡೌನ್ ಮುಗಿಯೋದರೊಳಗೆ ನಿನಗೆ ಒಳ್ಳೆಯ ಅಡಿಗೆ ಮಾಡಿ ಬಡಿಸಲಿಲ್ಲ ಅಂದರೆ ನನ್ನ ಹೆಸರು ನಟ(ಳ)ರಾಜ ಅಲ್ಲ ."ಎಂದು ಈರುಳ್ಳಿ ತೆಗೆದುಕೊಂಡು
ಕತ್ತರಿಸಲು ಶುರುಮಾಡಿದನು ಕಣ್ಣಲ್ಲಿ ನೀರು ಗಳ ಗಳ ಶುರುವಾಗಿದ್ದನ್ನು ದೂರದಿಂದ ನೋಡಿದ ಸವಿತಾಳ ಕಣ್ಣಲ್ಲಿ ಅರಿವಿಲ್ಲದೇ ಎರಡು ಹನಿ ಉದುರಿದವು.

*ಸಿ ಜಿ ವೆಂಕಟೇಶ್ವರ*
*ತುಮಕೂರು*

ಗಜ಼ಲ್ ೬೨ (ರಘುರಾಮ)

*ಗಜ಼ಲ್೬೨*

ಜಯತು‌ ಜಯ‌ ರಾಮ ಹರಸು ರಘುರಾಮ
ಭಯವ ನೀಗಿ ಅಭಯ ಕರುಣಿಸು ರಘುರಾಮ.

ಸದ್ಗುಣ ವೈಭವಶಾಲಿ ತ್ರಿಭುವನ ಪಾಲಕನೆ
ನಮ್ಮ ದುರ್ಗುಣಗಳ  ತೊಲಗಿಸು ರಘುರಾಮ.

ದಶಕಂಠನ ಹರಿದ ದಶರಥ ಪುತ್ರನೆ ಶ್ರೀರಾಮ
ದಿಶೆ ತೋರಿ ಸರಿಪಥದಲಿ‌ ನಡೆಸು ರಘುರಾಮ.

ಅಯೋಧ್ಯಾಪಾಲಕ ಜಯವ ನೀಡುವ ಜಯರಾಮ
ಜನಗಳ ಮನಗಳ  ದುಗುಡವ ಅಳಿಸು ರಘುರಾಮ

ತಾರಕ ಮಂತ್ರವ ಬಿಡದೆ ಜಪಿಸುವೆ  ರಘುನಾಥ
ಸಿಹಿಜೀವಿಗಳ ಕಾಪಾಡಿ ಉಳಿಸು  ರಘುರಾಮ

*ಸಿ ಜಿ ವೆಂಕಟೇಶ್ವರ*
*ತುಮಕೂರು*



01 ಏಪ್ರಿಲ್ 2020

ಪುಷ್ಪ ನಮನ ( ನ್ಯಾನೋ ಕಥೆ ಶ್ರೀ ಶ್ರೀ ಶ್ರೀ ‌ಶಿವಕುಮಾರ ಸ್ವಾಮೀಜಿಯವ ಹುಟ್ಟು ಹಬ್ಬದ ಪ್ರಯುಕ್ತ)


*ಪುಷ್ಪನಮನ*
(ನ್ಯಾನೋ ಕಥೆ)

"ಎಲ್ಲರೂ ನಿಧಾನವಾಗಿ ಊಟ ಮಾಡಿ ಏನು ಬೇಕೋ ಅದನ್ನು ಬಡಿಸಿಕೊಂಡು ಊಟಮಾಡಿ, ನಾಚಿಕೆ ಪಡಬೇಡಿ "ಎಂದು  ರಾಮಕೃಷ್ಣ ರವರು ಎಲ್ಲರನ್ನೂ ವಿಚಾರಿಸುತ್ತಿದ್ದರು." ಪುಣ್ಯಾತ್ಮ ನಮ್ಮಂತಹ ನಿರ್ಗತಿಕರಿಗೆ ಪ್ರತಿವರ್ಷ ಇದೇ ದಿನ ಹೊಟ್ಟೆ ತುಂಬಾ ಊಟ ಹಾಕ್ತಾರೆ ಅವರ ಹೆತ್ತವರ ಹೊಟ್ಟೆ ತಣ್ಣಗಿರಲಿ" ‌ಪಕ್ಕದಲ್ಲಿದವರು" ಅವರೂ ಸಹ ಅಪ್ಪ ಇಲ್ಲದ ಅನಾಥ ,ಒಬ್ಬ ಸಂತರು ಅವರಿಗೆ ಬಾಲ್ಯದಲ್ಲಿ  ಆಶ್ರಯ ನೀಡಿ ವಿದ್ಯಾಭ್ಯಾಸ ಮಾಡಿಸಿದರು ಈಗ ಇವರು ರಾಜ್ಯದ ದೊಡ್ಡ ಅಧಿಕಾರಿ" ಎಂದರು.ರಾಮಕೃಷ್ಣ ರವರು ಮನೆಯ ಒಳಗೆ ಹೋಗಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಪೋಟೋ ಗೆ ಪುಷ್ಪನಮನ ಸಲ್ಲಿಸಿದರು ..

(ಇಂದು ಶಿವಕುಮಾರ ಸ್ವಾಮೀಜಿಗಳ ೧೧೩ ನೇ ಹುಟ್ಟು ಹಬ್ಬ)
*ಸಿ ಜಿ ವೆಂಕಟೇಶ್ವರ*
*ತುಮಕೂರು*

31 ಮಾರ್ಚ್ 2020

ಸಿಹಿಜೀವಿಯ ಹನಿಗಳು


*ಸಿಹಿಜೀವಿಯ ಹನಿಗಳು*

*ಅಂತರ*
ಹಿಂದೆ ಮಾಹಾರಾಜರ ಆಸ್ಥಾನದಲ್ಲಿ
ಮಂತ್ರಿಗಳು ಆಸೀನರಾಗತ್ತಿದ್ದರು ದೂರ ದೂರ
ಇಂದು ಕರೋನ‌ ಪರಿಣಾಮವಾಗಿ ಎಲ್ಲರೂ ದೂರ ಪಾಲಿಸಲು  ಸಾಮಾಜಿಕ ಅಂತರ.
*ಐಸೋಲೇಷನ್* (I SOUL ATION)
ಕರೋನ ರೋಗ ಹರಡದಂತೆ
ಮಾಡಬೇಕು ಐಸೋಲೇಷನ್
ಆತ್ಮಸಾಕ್ಷಾತ್ಕಾರಕ್ಕೆ  ಮಾಡಬೇಕು
ಸಾಧನೆ ಮತ್ತು ಮೆಡಿಟೇಷನ್.
*

*ವರ*
ಅಂದು ಎಲ್ಲರಿಗೂ ಆಸೆಯಿತ್ತು
ಸಿಗಬೇಕು ವಿದೇಶದಲ್ಲಿ ನೆಲೆಸಿರುವ ವರ
ಇಂದು ವಿದೇಶದಲ್ಲಿ ನಲೆಸಿದವಗೆ
ವಧು ಬೇಕೆಂದರೆ ಹೆತ್ತವರು ಹೇಳುವರು ಇರಲಿ ಸಾಮಾಜಿಕ ಅಂತರ
*ಸಿ ಜಿ‌ ವೆಂಕಟೇಶ್ವರ*
*ತುಮಕೂರು*
9900925529
venkatesh.c.g9@gmail
Com