This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
31 ಮಾರ್ಚ್ 2020
ಶಾಂತಿ (ಹನಿ ಹನಿ ಇಬ್ಬನಿ ಬಳಗದಿಂದ ಉತ್ತಮ ನ್ಯಾನೋ ಕಥೆ ಎಂಬ ಪುರಸ್ಕಾರ ಪಡೆದ ಕಥೆ
*ಶಾಂತಿ*
(ನ್ಯಾನೋ ಕಥೆ)
"ಮಗ ಎಂ. ಬಿ .ಬಿ.ಎಸ್. ಮುಗಿಸಿ ಒಳ್ಳೆಯ ಅಂಕದೊಂದಿಗೆ ಪಾಸಾಗಿದ್ದಾನೆ ನನ್ನ ಇಚ್ಚೆಯಂತೆ ಎಂ ಡಿ ಸೀಟ್ ಸಿಗುವುದೋ ಇಲ್ಲವೋ ಎಂಬ ಚಿಂತೆ, ಬೇಸರ, ಮಗಳು ಇಂಜಿನಿಯರ್ ಮುಗಿಸಿ ಕೆಲಸಕ್ಕೆ ಹೋಗುತಿಹಳು,ಅವಳಿಗೆ ನನ್ನಿಚ್ಚೆಯ ವರ ಸಿಗುವನೆ? ಎಂಬ ಚಿಂತೆ.ಹದಿನೈದು ಕೋಟಿ ಆಸ್ತಿಯಿದ್ದರೂ ಮನಸ್ಸಿಗೆ ಶಾಂತಿಯಿಲ್ಲ ನೆಮ್ಮದಿಯಿಲ್ಲ ಮನಃಶಾಂತಿ ಪಡೆಯುವುದು ಹೇಗೆ? ಪರಿಹಾರ ಸೂಚಿಸಿ ಸ್ವಾಮಿ."
ಮುಗುಳ್ನಕ್ಕು ಸ್ವಾಮೀಜಿಯವರು ಹೇಳಿದರು.
"ಭಕ್ತ, ನಿನಗೆ ಶಾಂತಿಯಿಂದ ಇರಬೇಕೆಂದು
ಇಚ್ಛೆ ಇದೆಯೇ? ಹಾಗಾದರೆ ನಿನ್ನ ಇಚ್ಛೆಗಳನ್ನು
ಶಾಂತಗೊಳಿಸು".
*ಸಿ ಜಿ ವೆಂಕಟೇಶ್ವರ*
*ತುಮಕೂರು*
30 ಮಾರ್ಚ್ 2020
ವಿಮರ್ಶೆ
ಲಾಕ್ ಡೌನ್ ನ ಸದುಪಯೋಗ
ಕರೋನ ಪ್ರಯುಕ್ತ ಲಾಕ್ ಡೌನ್ ಇರುವ ಈ ಸಂಧರ್ಭದಲ್ಲಿ ನಾನು ನನ್ನ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಲಾಕ್ ಡೌನ್ ನನಗೆ ವರವಾಗಿದೆ ಎಂದು ಭಾವಿಸಿರುವೆ.
ಈ ಮೊದಲು ತಂದಿಟ್ಟು ಓದಲಾಗದ ಪುಸ್ತಕಗಳನ್ನು ಓದಲು ಆರಂಬಿಸಿ "ಸ್ವಾಮಿಜಗದಾತ್ಮಾನಂದಜಿ" ಅವರ ಬರೆದ "ಬದುಕಲು ಕಲಿಯಿರಿ" ಪುಸ್ತಕ ಓದಿ ಮುಗಿಸಿ ಈಗ ರಿಚರ್ಡ್ ಕಾರ್ಲಸನ್ ಬರೆದಿರುವ "ಎಷ್ಟೊಂದು ಸೊಗಸು ಈ ಬದುಕು ಎಂಬ ಪುಸ್ತಕ ಓದುತ್ತಿದ್ದೇನೆ".ನಾನು ವೃತ್ತಿಯಲ್ಲಿ ಶಿಕ್ಷಕನಾಗಿದ್ದು , ಜೊತೆಗೆ ಕವಿಯೂ ಆಗಿದ್ದು ಹಾಗೂ ಹವ್ಯಾಸಿ ಬ್ಲಾಗರ್ ಆಗಿರುವುದರಿಂದ ನನ್ನ ಬ್ಲಾಗ್ ನಲ್ಲಿ ಕವನ, ನ್ಯಾನೋ ಕಥೆ,ಶೈಕ್ಷಣಿಕ ಲೇಖನ, ಗಜ಼ಲ್, ಶಿಶುಗೀತೆ,ಹನಿಗವನ,ಮುಂತಾದ ಸಾಹಿತ್ಯದ ರಚನೆ ಮಾಡಲು ನನಗೆ ಈ ಕಾಲ ಬಹಳ ಅನುಕೂಲವಾಯಿತು.ಲಾಕ್ ಡೌನ್ ನ ಈವರೆಗಿನ ಐದು ದಿನದಲ್ಲಿ ದಿನಕ್ಕೆ ಸರಾಸರಿ ಎರಡು ಸಾಹಿತ್ಯದ ರಚನೆ ಮಾಡಿರುವುದು, ಮತ್ತು ಇದಕ್ಕೆ ಪ್ರಪಂಚಾದ್ಯಂತ ಇರುವ ಓದುಗರು ಓದಿ ಆಸ್ವಾದಿಸಿ ಮೆಚ್ಚುಗೆ ಸೂಚಿಸಿರುವುದು ಬಹಳ ಸಂತಸ ನೀಡಿದೆ.ನೀವು ಲಾಕ್ ಡೌನ್ ಸಮಯದಲ್ಲಿ ನನ್ನ ಬ್ಲಾಗ್ ಗೆ ಭೇಟಿ ನೀಡಿ ನನ್ನ ಬರಹಗಳನ್ನು ಓದಬಹುದು.
ಬ್ಲಾಗ್ ವಿಳಾಸ sridevitanya.blogspot. com

ವಂದನೆಗಳೊಂದಿಗೆ
ಸಿ ಜಿ ವೆಂಕಟೇಶ್ವರ
ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ
ಕ್ಯಾತಸಂದ್ರ
ತುಮಕೂರು
9900925529
ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ
ಕ್ಯಾತಸಂದ್ರ
ತುಮಕೂರು
9900925529
29 ಮಾರ್ಚ್ 2020
ಇಳಿಜಾರು (ನ್ಯಾನೋ ಕಥೆ)
ಇಳಿಜಾರು
ನ್ಯಾನೋ ಕಥೆ
"ನಮ್ಮ ಮಗ ಬರುತ್ತಾನೆ ನಿನ್ನೆ ಪೋನ್ ಮಾಡಿದ್ದ ನೀನೇನೂ ಚಿಂತೆ ಮಾಡಬೇಡ ಈಗ ಏನಾದರೂ ತಿನ್ನಲಿಕ್ಕೆ ತರೋಣ ಎಂದು ಹೋಟೆಲ್ಗೆ ಹೋಗಿದ್ದೆ .ಅದೇನೋ ರೋಗ ಅಂತ ಹೋಟೆಲ್ ಬಂದ್ ಆಗಿದೆ.ಅಲ್ಲೇ ಮೂಲೆ ಅಂಗಡೀಲಿ ಒಂದು ಬ್ರೆಡ್ ತಂದಿದೀನಿ ತಗೋ ತಿನ್ನು " ಎಂದು ಪಾರ್ಕ್ ನಲ್ಲಿ ಮಲಗಿದ್ದ ಇಳಿವಯಸ್ಸಿನ ತನ್ನ ಹೆಂಡತಿಗೆ ಬ್ರೆಡ್ ಕೊಟ್ಟು ತಿನ್ನು ಎಂದು ಹೇಳಿದರು ಶಿವಪ್ಪ. ಏಯ್ ಪಾರ್ಕ್ನಲ್ಲಿ ಯಾರು ಅದು ಮನೆಗೆಹೋಗಿ ಡಿಸಿ ಆರ್ಡರ್ ಇಲ್ಲಿ ಯಾರೂ ಇರಬಾರದು ಎಂಬ ಪೋಲಿಸರ ದ್ವನಿ ಕೇಳಿ ಬಾಯಲ್ಲಿ ಇಡಬೇಕು ಎಂದು ಹಿಡಿದ ಬ್ರೆಡ್ ಹಾಗೆ ಕೈಯಲ್ಲಿ ಹಿಡಿದುಕೊಂಡು ಹೊರ ಬಂದ ದಂಪತಿಗಳು ಮನೆಯಿರದ ನಾವೀಗ ಎಲ್ಲಿ ಎಲ್ಲಿಗೆ ಹೋಗಬೇಕೆಂದು ದಿಕ್ಕು ಕಾಣದೇ ರಸ್ತೆಯಲ್ಲಿ ನಿಂತರು.ಅತ್ತ ಅಪ್ಪ ಅಮ್ಮನನ್ನು ನೋಡಲು ಅವರಿಗೊಂದು ಸೂರು ಕಟ್ಟಲು ಕೂಡಿಟ್ಟ ಹಣದೊಂದಿಗೆ ಊರು ಸೇರಲು ಬಸ್ ನಿಲ್ದಾಣಕ್ಕೆ ಬಂದರೆ ಬಸ್ಸಿಲ್ಲ .ಯಾವುದೋ ಟೆಂಪೋ ಏರಿ ಸ್ವಲ್ಪ ದೂರ ಬಂದಾಗ ಪೊಲೀಸ್ ತಡೆದು ಟೆಂಪೋದಿಂದ ಇಳಿಸಿ ,ಕರೋನ ಪ್ರಯುಕ್ತ ಯಾವುದೇ ವೆಹಿಕಲ್ ಮುಂದಕ್ಕೆ ಬಿಡಲ್ಲ ಮಾಸ್ಕ್ ಹಾಕು ಎಂದು ಲಾಟಿ ಎತ್ತಿದ್ದ ನೋಡಿ ಭಯದಿಂದ ಓಡಿದನು.ಕೊನೆಗೆ ಯಾವುದೇ ವಾಹನ ಇಲ್ಲ ಎಂದು ಖಚಿತವಾಗಿ ಅಪ್ಪ ಅಮ್ಮನ ನೋಡುವ ಕಾತರದಿಂದ ನಾಲ್ಕು ನೂರು ಕಿಲೋಮೀಟರ್ ದಾರಿಯನ್ನು ನಡೆದೆ ಸವೆಸಲು ತೀರ್ಮಾನಿಸಿ ಹೆಜ್ಜೆ ಹಾಕಿದ....ರಸ್ತೆಯ ಇಳಿಜಾರಿನಲ್ಲಿ ಮಾಯವಾದ

ತೊಲಗಿಸು ಕರೋನ ಬೇಗ(ಶಿಶುಗೀತೆ)
*ತೊಲಗಿಸು ಕರೋನ ಬೇಗ*
(ಶಿಶುಗೀತೆ)
ಹೊರಗೆ ಹೋಗದಿರು ಕಂದ
ಅಲ್ಲಿದೆ ಮಾರಿ ಕರೋನ
ಮನೆಯೇ ದೇಗುಲ ನಮಗೆ
ಹೊರಗೆ ಹೋಗದಿರೋಣ.
ಮನೆಯಲಿ ಆಡುತ ಪಾಡುತ
ಅಜ್ಜಿ ಕತೆಯನು ಕೇಳೋಣ
ಅಮ್ಮನು ಮಾಡಿದ ರುಚಿರುಚಿ
ತಿಂಡಿಯ ಚಪ್ಪರಿಸಿ ತಿನ್ನೋಣ.
ಚಿತ್ರವ ಬಿಡಿಸು ಹಾಡು
ಬೆಳೆಯಲಿ ನಿನ್ನ ಹವ್ಯಾಸ
ಸಹಾಯ ಮಾಡು ಅಮ್ಮನಿಗೆ
ಕಳೆಯಲಿ ಅವರ ಆಯಾಸ
ಸ್ವಚ್ಛತೆ ಇರಲಿ ಮನೆಯಲ್ಲಿ
ಸುಳಿಯದು ಯಾವುದೆ ರೋಗ
ದೇವರ ಬೇಡುವ ನಾವು
ತೊಲಗಿಸು ಕರೋನ ಬೇಗ
*ಸಿ ಜಿ ವೆಂಕಟೇಶ್ವರ*
*ತುಮಕೂರು*
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)