14 ಮಾರ್ಚ್ 2020

ಬಾ ಗೆಳೆಯ

*ಬಾ ಗೆಳೆಯ*

ರಜೆಯು ಬಂದಿದೆ
ಮಜವನು ಮಾಡುವ
ಈಗಲೆ ಬಾರೋ ಓ ಗೆಳೆಯ.

ಪರೀಕ್ಷೆ ಇಲ್ಲದೆ
ಪಾಸು ಆದೆವು
ಸಂಭ್ರಮ ಪಡುವ ಬಾ ಗೆಳೆಯ

ಪೆನ್ನು ಪುಸ್ತಕ
ಎತ್ತಿ ಇಟ್ಟು
ಆಟವ ಆಡೋಣ ಬಾ ಗೆಳೆಯ

ಚಿನ್ನಿ ದಾಂಡು
ಚೆಂಡು ದಾಂಡು
ಹಿಡಿದು ಆಡೋಣ ಬಾ ಗೆಳೆಯ.

ಹಗ್ಗದ ರೈಲು
ಕಟ್ಟಿಗೆ ಬಸ್ಸು
ಏರಿ ಸಾಗೋಣ ಬಾ ಗೆಳೆಯ.

ಆಟದ ನೆನಪಲಿ
ಶಾಲೆಗೆ ಪುನಃ
ನಲಿಯುತಾ ಹೋಗೋಣ ಬಾ ಗೆಳೆಯ.

*ಸಿ ಜಿ ವೆಂಕಟೇಶ್ವರ*
*ತುಮಕೂರು*



ಎಲ್ಲಿರುವೆ ಮಳೆರಾಯ

*ಎಲ್ಲಿರುವೆ ಮಳೆರಾಯ*
ಕವನ

ಎಲ್ಲಿರುವೆ ಮಳೆರಾಯ
ಬಂದು ಬಿಡು ಮನೆಕಾಯ

ಜನ ಜಾನುವಾರುಗಳು
ಬಳಲಿ ಬೆಂಡಾಗಿಹರು
ತೊಳಲಾಟದಲಿ ನೀನು
ಬರಲೆಂದು‌ ಕಾದಿಹರು.

ಭೂತಾಯಿ ಬಿರಿದಿಹಳು
ನಿನ್ನಾಗಮನಕೆ ಕಾದಿಹಳು
ಎಂದು ಬರುವೆ ಎಂದು
ಇಂದೇ ನಮಗೆ ಹೇಳು.

ನೀನು‌ ಇಲ್ಲದೆ ನಮಗೆ
ಬಾಳುವೆಯೆ ಇಲ್ಲ
ಬರದೆ ಸತಾಯಿಸುವುದು
ನಿನಗೆ ತರವಲ್ಲ.

ನೀನು ಬಾರದಿರೆ ಭುವಿಗೆ
ಬದುಕು ಭಾರವಾಗುವುದು.
ನೀ ಬಂದರೆ ಧರೆಗೆ
ಬರವೆ ಬಾರದು.

*ಸಿ ಜಿ‌ ವೆಂಕಟೇಶ್ವರ*
ತುಮಕೂರು


09 ಮಾರ್ಚ್ 2020

ಇಂದಿನ *ವಿಜಯವಾಣಿ ಪ್ರಜಾವಾಣಿ, ನನ್ನ ಲೇಖನ



ಇಂದಿನ *ವಿಜಯವಾಣಿ * ಪತ್ರಿಕೆಯಲ್ಲಿ ನನ್ನ ಲೇಖನ

ಇಂದಿನ ಪ್ರಜಾವಾಣಿ,* ಪತ್ರಿಕೆಯಲ್ಲಿ ನನ್ನ ಲೇಖನ



ಇಂದಿನ ಪ್ರಜಾವಾಣಿ,  ಪತ್ರಿಕೆಯಲ್ಲಿ ನನ್ನ ಲೇಖನ

ಇಂದಿನ ವಿಜಯ ಕರ್ನಾಟಕ* ಪತ್ರಿಕೆಯಲ್ಲಿ ನನ್ನ ಲೇಖನ


ಇಂದಿನ  ವಿಜಯ ಕರ್ನಾಟಕ* ಪತ್ರಿಕೆಯಲ್ಲಿ ನನ್ನ ಲೇಖನ