This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
01 ಫೆಬ್ರವರಿ 2020
29 ಜನವರಿ 2020
ನಾರಾಯಣನಾಗುವ ಬಯಕೆ(ಚಿತ್ರ ಕವನ)
*ನಾರಾಯಣನಾಗುವ ಬಯಕೆ*
ನಾನೂ ಒಬ್ಬ ನರ.
ಮೊದಲು ನಾನೂ
ಸಹ ಮರದಂತೆ
ಹಸಿರಾಗಿದ್ದೆ ಉಸಿರಾಗಿದ್ದೆ
ನೆರಳಾಗಿದ್ದೆ,ಪರೋಪಕಾರಿಯಾಗಿದ್ದೆ.
ನಿಸ್ವಾರ್ಥಿಯಾಗಿದ್ದೆ ,ಲವಲವಿಕೆಯಿಂದಿದ್ದೆ.
ನನ್ನಲ್ಲಿ ಆಸೆ ಚಿಗುರೊಡೆದು,
ಅತಿಯಾಸೆ ಕವಲೊಡೆದು
ಅಮಾನವೀಯ ಗುಣಗಳುದಿಸಿ,
ಮೃಗೀಯಗುಣಗಳು ಬೆಳೆದು,
ರಾಕ್ಷಸ ಗುಣಗಳ ನರ್ತನವಾಡಿ
ದುರ್ಗುಣಗಳ ಗಣಿಯಾಗಿ
ಸದ್ಗುಣಿಗಳ ಕಂಡರೂ ಕಾಣದೆ,
ನಾನು ನನ್ನಿಂದ ಎಂಬ ಅಹಂ
ಬೆಳೆದು, ಒಳಿತು ರುಚಿಸದೆ,ಕೆಡುಕುಗಳ
ಅಧಿಪತಿಯಾದೆ.
ನಾನೀಗ ಕೃಷಕಾಯದ ನರ
ನರಮೂಳೆಗಳು ಮಾತ್ರವಿರುವ
ಸತ್ವವಿರದ ನಿಸ್ಸತ್ವ ಜೀವಿ
ಜೀವಿಸಲು ಕೊರಗುತಿರುವ
ಹೆಣವಾಗಲು ಹೆಣಗುತಿರುವ
ಮಣಭಾರದ ಪಾಪದ ಮೂಟೆಹೊತ್ತ,
ನತದೃಷ್ಟ ನರ ನಾನು.
ಈ ಜನ್ನಮದಲಿ ಉತ್ತಮ ನರನಾಗಲಿಲ್ಲ
ನಾರಾಯಣನ ದಯವಿದ್ದರೆ
ಮುಂದಿನ ಜನ್ಮದಿ? ನರ ರೂಪದ ನಾರಾಯಣನಾಗುವ ಬಯಕೆ.
*ಸಿ ಜಿ ವೆಂಕಟೇಶ್ವರ*

ದಂಡಂ ದಶಗುಣಂ (ಲೇಖನ)
*ದಂಡಂ ದಶಗುಣಂ*
ನೂರಾರು ವರ್ಷಗಳಿಂದ ಅಪಘಾತಗಳ ತಡೆಯಲು ಸರ್ಕಾರ ,ಸರ್ಕಾರೇತರ ಸಂಘ ಸಂಸ್ಥೆಗಳು ವಿವಿಧ ಪ್ರಯತ್ನಗಳನ್ನು ಮಾಡಿದಾಗಲೂ ಅಪಘಾತಗಳ ಸಂಖ್ಯೆ ಇಳಿಮುಖದ ಹಾದಿ ಹಿಡಿಯಲೇ ಇಲ್ಲ. ಬದಲಾಗಿ ಅಪಘಾತಗಳ ಸಂಖ್ಯೆ ದುಪ್ಪಟ್ಟು ಆದವು.ಅಮೂಲ್ಯ ಜೀವಗಳು ಅಪಘಾತದಲ್ಲಿ ಮರೆಯಾದವು.ಸಾವಿರಾರು ಕುಟುಂಬಗಳು ಅನಾಥರಾದವು ಲೆಕ್ಕವಿಲ್ಲದಷ್ಟು ಜನ ಶಾಶ್ವತವಾಗಿ ಅಂಗವಿಕಲರಾದರು. ಇದನ್ನು ಮನಗಂಡ ಸರ್ಕಾರವು ನಮ್ಮ ಜನರಿಗೆ ಬಾಯಿ ಮಾತಿನಲ್ಲಿ ಜಾಗೃತಿ ಮೂಡಿಸಿದರೆ ಸಾಲದು ದಂಡಂ ದಶಗುಣಂ ಎಂಬ ಅಸ್ತ್ರ ಪ್ರಯೋಗ ಮಾಡೊಯೇ ಬಿಟ್ಟಿತು. ಇದಕ್ಕೆ ಕಾನೂನಿನ ಬೆಂಬಲ ನೀಡಿ ಮೋಟಾರು ವಾಹನ ಕಾಯ್ದೆ ಜಾರಿಗೆ ತಂದಿತು .
ಇದರ ಪರಿಣಾಮವಾಗಿ ಅಪಘಾತಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿರುವುದು ಅಂಕಿ ಅಂಶಗಳಿಂದ ಸಾಬೀತಾಗಿದೆ.
ಸಂಚಾರಿ ನಿಯಮಗಳ ಉಲ್ಲಂಘನೆ ಮತ್ತು ಅಪಘಾತ ತಡೆಯಲು ದಂಡವೊಂದೆ ಮಾನದಂಡವೆ?
ಹೌದು ಎಂದು ಸಾರುತ್ತಿವೆ ಇತ್ತೀಚೆಗೆ ಬಿಡುಗಡೆಯಾದ ಅಂಕಿ ಅಂಶಗಳು.
ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ.
ನಿಯಮ ಮೀರಿ ಸರಕು ಸಾಗಣೆ ಮಾಡಿ ಅಪಘಾತ ಮಾಡುವ ವಾಹನಗಳ ಸಂಖ್ಯೆ ಇಳಿಮುಖವಾಗುತ್ತದೆ.
ದಂಡಕ್ಕೆ ಹೆದರಿ ಜನರು ಸೀಟ್ ಬೆಲ್ಟ್ ಮತ್ತು ಹೆಲ್ಮೆಟ್ ಧರಿಸುವುದರಿಂದ ಅಮೂಲ್ಯವಾದ ಜೀವಗಳು ಉಳಿಯುತ್ತಿವೆ.
ಅಪ್ರಾಪ್ತ ವಯಸ್ಕ ಮಕ್ಕಳು ವಾಹನ ಚಲಾಯಿಸುವುದು ಕಡಿಮೆಯಾಗುತ್ತದೆ. ಇದರಿಂದ ಅಪಘಾತದ ಪ್ರಮಾಣದಲ್ಲಿ ಇಳಿಮುಖವಾಗುತ್ತಿವೆ.
ದಂಡಕ್ಕೆ ಹೆದರಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವುದರಿಂದ ೫೦% ಅಪಘಾತಗಳು ಕಡಿಮೆಯಾಗುತ್ತಿವೆ.
ಒಟ್ಟಿನಲ್ಲಿ ಸ್ವಇಚ್ಛೆಯಿಂದ ಮಾಡಲಾಗದ ಜಾಗೃತಿ ಆಂದೋಲನದಡಿ ಮಾಡಲಾಗಾದ ಕಾರ್ಯವನ್ನು ಸರ್ಕಾರದ ಕಾನೂನು ಮತ್ತು ದಂಡದ ಭಯವು ಮಾಡಿದೆ. ಇದರ ಪರಿಣಾಮ ಸಕಾರಾತ್ಮಕವಾಗಿ ಕಂಡು ಬಂದಿರುವುದು ಆಶಾದಾಯಕ ಬೆಳವಣಿಗೆ.

24 ಜನವರಿ 2020
ರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು
*ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಶುಭಾಶಯಗಳು*
ರಂಗನಾಥ ಸ್ವಾಮಿಯವರಂತೆ
ಹರಸಿದ "ರಂಗಜ್ಜಿ".
ಹೆತ್ತು ಹೊತ್ತುಸಾಕಿ ಸಲಹಿ
ಸಿರಿದೇವಿಯಂತೆ ಕಾಯುವ "ಶ್ರೀದೇವಮ್ಮ".
ನನ್ನ ಬಾಳಲಿ ಕವಿತೆಯಾಗಿ ಬಂದ "ಕವಿತ*.
ಶೋಭಾಯಮಾನವಾಗಿ ನನ್ನ ಜೀವನ
ಬೆಳಗಲು ಬಂದ ನನ್ನ ಮೊದಲ ಲಕ್ಷ್ಮಿ "ಶೋಭಿತ".
ಮಳೆಯಿಂದ ಮನ ಉಲ್ಲಸಿತವಾಗುವಂತೆ
ಬಂದ ನನ್ನ ಎರಡನೇ ಲಕ್ಷ್ಮಿ" ವರ್ಷಿತ".
ಇವರೆಲ್ಲರಿಗೂ ಮತ್ತು ಜಗದ ಎಲ್ಲಾ ಹೆಣ್ಣು ಮಕ್ಕಳಿಗೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳು.
*ಸಿ.ಜಿ ವೆಂಕಟೇಶ್ವರ*

23 ಜನವರಿ 2020
ನನ್ನಮ್ಮ(ಲೇಖನ)
ತಾಯಿ
ನನಗೆ ನೆನಪಿದೆ ನಾನಿನ್ನು ನಾಲ್ಕು ವರ್ಷದ ಹುಡುಗನಾಗಿದ್ದಾಗ ನನ್ನ ತಂದೆ ಹಾವು ಕಚ್ಚಿ ತೀರಿಕೊಂಡರು. ಆಗ ಮನೆಯಲ್ಲಿ ಶೂನ್ಯ ಆವರಿಸಿದ್ದ ಸ್ಥಿತಿ . ಹಳ್ಳಿಯಲ್ಲಿ ಸ್ವಂತ ಮನೆಯೇನೋ ಇತ್ತು ದೂರದಲ್ಲಿ ನಾಲ್ಕು ಎಕರೆ ಒಣಬೇಸಾಯದ ಭೂಮಿಯು ಇತ್ತು, . ನಮ್ಮ ಅಮ್ಮನಿಗೆ ಒಂದೇ ಚಿಂತೆ ಈ ಇಬ್ಬರು ಮಕ್ಕಳನ್ನು ಹೇಗೆ ಸಾಕಲಿ ,? ಹೇಗೆ ದೊಡ್ಡವರ ಮಾಡಲಿ ? ನಾನು ಹೇಗೆ ದುಡಿಯಲಿ? . ಹೊಲದಲ್ಲಿ ವ್ಯವಸಾಯ ಮಾಡಿ ದುಡಿಯೋಣ ,ಎಂದರೆ ದಾಯಾದಿಗಳ ಉಪಟಳ, ಒಬ್ಬಂಟಿ ಹೆಂಗಸೆಂದು ಹೆದರಿಸಿ ,ಬೆದರಿಸಿ, ಹೊಲದಲ್ಲಿ ಹೆಜ್ಜೆ ಇಡದಂತೆ ಮಾಡಿದರು. ಆಗ ನಮ್ಮ ಅಮ್ನ ಆಯ್ದುಕೊಂಡ ಆಯ್ಕೆ ಕೂಲಿ ಮಾಡಿ ನಮ್ಮ ಸಾಕುವುದು.ಮತ್ತು ಓದಿಸಿ ವಿದ್ಯಾವಂತರ ಮಾಡುವುದು. ಈ ಹಂತದಲ್ಲಿ ನನಗೆ P ಲಂಕೇಶ್ ರವರ ಅಮ್ಮ ಎಂಬ ಕವನ ನೆನಪಾಗುತ್ತದೆ ಅದರಲ್ಲಿ ಬರುವ ಅಮ್ಮನಂತೆ ನನ್ನಮ್ಮ ಸರೀಕರೊಡನೆ ತನ್ನ ಮಕ್ಕಳನ್ನು ತಲೆ ಎತ್ತುವಂತೆ ಬೆಳೆಸಲು ಪಣ ತೊಟ್ಟಿದ್ದರು. ತಾನು ಹರಿದ ಸೀರೆ ಉಟ್ಟರೂ ನಮಗೆ ಯುಗಾದಿ ಹಬ್ಬಕ್ಕೆ ಎರಡು ಜೊತೆ ಬಟ್ಟೆಗಳನ್ನು ಕೊಡಿಸಲು ಮರೆಯುತ್ತಿರಲಿಲ್ಲ .ನಮಗೆ ಮನೆಯಲ್ಲಿ ರಾತ್ರಿ ಊಟ ಹಾಕಿ .ರಾತ್ರಿಯ ಪಾಳಿಯಲ್ಲಿ ಸುಗ್ಗಿ ಕಣದಲ್ಲಿ ಕೆಲಸ ಮಾಡುತ್ತಿದ್ದರು. ಈಗಲೂ ನನಗೆ ಅನುಮಾನವಿದೆ ನಮ್ಮಮ್ಮನಿಗೆ ಭಗವಂತ ಎಷ್ಟು ಶಕ್ತಿ ಕೊಟ್ಟಿದ್ದ . ಈ ನಡುವೆ ನಮ್ಮ ಅಮ್ಮ ಹೆರಿಗೆ ಮಾಡಿಸುವ ಸೂಲಗಿತ್ತಿಯ ಕೆಲಸ ಮಾಡುತ್ತಿದ್ದರು. ಕೆಲವು ಸಲ ಹಗಲೆಲ್ಲಾ ಕೂಲಿ ಮಾಡಿ ಸುಸ್ತಾಗಿದ್ಧ ಅಮ್ಮ ನಿದ್ದೆಗೆ ಜಾರಿದಾಗ ಹೊತ್ತಲ್ಲದ ಹೊತ್ತಲ್ಲಿ " ಅಕ್ಕ ನಮ್ಮ ಮಗಳಿಗೆ ಹೆರಿಗೆ ನೋವು ಶುರುವಾಗಿದೆ ಬಾರಕ್ಕ" ಎಂದಾಗ ಅಮ್ಮ ಮರುಮಾತಾಡದೇ ಎದ್ದು ಹೋದದ್ದೇ ಗೊತ್ತು ಮನೆಗೆ ಯಾವಾಗ ಬಂದು ಮಲಗಿದರೋ ಆದರೆ ಬೆಳಗಿನ ಜಾವ ಬೇಗನೆ ಎದ್ದು ಮನೆ ಮುಂದೆ ಕಸ ತೆಗೆದು ನೀರುಹಾಕುವಾಗ ನಮಗೆ ಎಚ್ಚರವಾಗುತ್ತಿತ್ತು. ಒಮ್ಮೆ ನಾನು ಎಂಟನೇ ತರಗತಿ ಓದುವಾಗ ನನಗೆ ಜ್ವರ ಬಂದು ಅನಾರೋಗ್ಯ ಪೀಡಿತನಾದಾಗ ಎರಡು ಕಿಲೋಮೀಟರಗಿಂತ ಹೆಚ್ಚು ದೂರ ನನ್ನ ಕಂಕುಳಲ್ಲಿ ಎತ್ತಿ ಕೊಂಡು ಹೋಗಿ ನನಗೆ ಡಾಕ್ಟರ್ ಬಳಿ ಚಿಕಿತ್ಸೆ ಕೊಡಿಸಿದರು. ಅಮ್ಮ ನಿನ್ನ ಬಗ್ಗೆ ಬರೆಯಲು ಕುಳಿತರೆ ನಿಮಿಷ ದಿನ ,ವಾರ ,ತಿಂಗಳು ವರ್ಷ ಸಾಲಲ್ಲ ಆದರೂ ಕೆಲವೊಮ್ಮೆ ಹೀಗೆ ನಾಲ್ಕು ಸಾಲು ಬರೆದು ನಿನ್ನ ಜ್ಞಾಪಿಸಿಕೊಂಡರೆ ಎನೋ ಸಮಾಧಾನ.
ಸಿ ಜಿ ವೆಂಕಟೇಶ್ವರ

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)