This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
21 ಜನವರಿ 2020
ಜಗವು ಜಗಮಗಿಸಲಿ (ಕವನ)
*ಜಗವು ಜಗಮಗಿಸಲಿ*
ಜಗವನುದ್ದರಿಸಿದವಳು ಜಗಜ್ಜನನಿ
ತನ್ನ ಮಕ್ಕಳಿಗೆ ಸೃಷ್ಟಿ ಸ್ಥಿತಿ ಲಯದ
ಅಧಿಕಾರವ ನೀಡಿ ಜಗವ ನಡೆಸಲು
ಬ್ರಹ್ಮ ,ವಿಷ್ಣು,,ಮಹೇಶ್ವರರ ನೇಮಿಸಿಹಳು.
ಜಗ ಸಮತೋಲನದಿಂದಿರುವುದು ದೇವಿಯ ಕೃಪೆ ಎಂದರು ಮುನಿಗಳು.
ಮುನಿದ ವಿಜ್ಞಾನಿ
ಜಗದ ಮೂಲ ಅಣು, ಪರಮಾಣು,
ಬಿಗ್ ಬ್ಯಾಂಗ್ ನಿಂದ ಉಗಮ
ಸೃಷ್ಟಿ ವೈಜ್ಞಾನಿಕ ಸ್ಥಿತಿ ಸಂಶೋಧನಾ ಫಲ.
ನಾಶವಾದರೆ ಪರಮಾಣುಬಾಂಬು ಅಸ್ತ್ರಗಳಿಂದ, ಇದರಲ್ಲಿ ದೇವಿಯ ಪಾತ್ರವೆಲ್ಲಿ ದೈವದ ನಿಯಮವೆಲ್ಲಿ? ಎಂದರು.
ಇವರೀರ್ವರಲಿ ಯಾರು ಸರಿ?
ಯಾರು ತಪ್ಪು ?
ಗೊಂದಲದ ಗೂಡಾದ ಮನ
ಕೊಂಚ ಯೋಚಿಸಿ ಇಂತೆಂದಿತು.
ಆದ್ಯಾತ್ಮ ಇಲ್ಲದ ವಿಜ್ಞಾನ ಕುರುಡು
ವಿಜ್ಞಾನವಿಲ್ಲದ ಆದ್ಯಾತ್ಮ ಬರಡು
ವಿಜ್ಞಾನಿಗಳ ಹೃದಯದಿ ಆದ್ಯಾತ್ಮ ಉದಿಸಲಿ.
ಸಂತರು ವೈಜ್ಞಾನಿಕ ದೃಷ್ಟಿಕೋನ ಬೆಳಸಲಿ.
ಆದ್ಯಾತ್ಮ ಮತ್ತು ವಿಜ್ಞಾನ ಸಂಗಮವಾಗಲಿ
ಜಗವು ಜಗಮಗಿಸಲಿ.
ಸಿಹಿಜೀವಿ
*ಸಿ.ಜಿ ವೆಂಕಟೇಶ್ವರ*
ತುಮಕೂರು
9900925529
15 ಜನವರಿ 2020
ಒಳ್ಳೆಯ ಮಾತಾಡು (ನ್ಯಾನೋ ಕಥೆ)
*ಒಳ್ಳೆಯ ಮಾತಾಡು*
"ಏ ಕಂಡಿದೀನಿ ಕುತ್ಕೊಳ್ಳೋ ---------- ಮಗನೆ, ನಿಂದು ಜಾಸ್ತಿ ಆಯ್ತು," ಎಂದು ಏರುಧ್ವನಿಯಲ್ಲಿ ರಮೇಶ ಕಿರುಚುತ್ತಿದ್ದರೆ "ನಾನು ನಿನ್ನ ಬಾಳ ನೊಡಿದ್ದೀನಿ ನಿಮ್ಮ ವಂಶದ ಜಾತಕ ಬಿಚ್ಚಲಾ? ಈಗ ಮುಚ್ಕೊಂಡಿರೋ ------ ಮಗನೆ" ಎಂಬ ಸುರೇಶನ ಮಾತು ಇಡೀ ಬೀದಿಗೆ ಕೇಳುತ್ತಿತ್ತು.ಸಂಜೆಯಾಗುತ್ತ ಕತ್ತಲು ಆವರಿಸುತ್ತಿತ್ತು.ರಮೇಶನ ಮಗ ಅಪ್ಪ ಬಳಸಿದ ಬೈಗುಳಗಳಿಗೆ ಶಬ್ದಕೋಶದಲ್ಲಿ ಅರ್ಥ ಹುಡುಕುತ್ತಿದ್ದ.ಸುರೇಶನ ಮಗಳಿಗೆ ಬೆಳಿಗ್ಗೆ ಅಪ್ಪ ಹೇಳಿದ " ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು" ಎಂಬ ನುಡಿ ಕಿವಿಯಲ್ಲಿ ಮಾರ್ಧನಿಸುತ್ತಿತ್ತು.
*ಸಿ ಜಿ ವೆಂಕಟೇಶ್ವರ*

ಹಬ್ಬವ ಮಾಡೋಣ( ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು)
*ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು*
*ಹಬ್ಬವ ಮಾಡೋಣ*
ಹಬ್ಬವ ಮಾಡೋಣ
ಬನ್ನಿ ಹಬ್ಬವ ಮಾಡೋಣ||
ಸಂಕ್ರಮಣ ದಿನದಿ
ರವಿಯನು ಪೂಜಿಸಿ
ಕಹಿಯನು ತೊಲಗಿಸಿ
ಸಿಹಿಯನು ಪಡೆಯಲು
ಎಳ್ಳು ಬೆಲ್ಲವ ಹಂಚಿ
ಒಳ್ಳೆಯ ಮಾತನಾಡುತ
ಸಂಕ್ರಾಂತಿ ಹಬ್ಬವ ಮಾಡೋಣ||೧||
ವ್ರತವನು ಮಾಡುತ
ಹದಿನೆಂಟು ಮೆಟ್ಟಿಲ
ಒಡೆಯನ ನೆನೆಯುತ
ಇರುಮುಡಿ ಗಂಟನು ಹೊತ್ತು
ಮಕರ ಜ್ಯೋತಿಯ
ದರುಶನ ಮಾಡುತ
ಸಂಕ್ರಾಂತಿ ಹಬ್ಬವ ಮಾಡೋಣ||೨||
ಬೇಯಿಸಿ ಅವರೆ
ಕಡಲೆಯ ತಿಂದು
ಸುಗ್ಗಿಯ ಹಾಡನು
ಹಾಡುತ ನಾವು
ರಾಸುಗಳನ್ನು ಪೂಜಿಸಿ
ಕಿಚ್ಚು ಹಾಯಿಸಿ
ಸಂಕ್ರಾಂತಿ ಹಬ್ಬವ ಮಾಡೋಣ||೩||
*ಸಿ ಜಿ ವೆಂಕಟೇಶ್ವರ*
*ಹಬ್ಬವ ಮಾಡೋಣ*
ಹಬ್ಬವ ಮಾಡೋಣ
ಬನ್ನಿ ಹಬ್ಬವ ಮಾಡೋಣ||
ಸಂಕ್ರಮಣ ದಿನದಿ
ರವಿಯನು ಪೂಜಿಸಿ
ಕಹಿಯನು ತೊಲಗಿಸಿ
ಸಿಹಿಯನು ಪಡೆಯಲು
ಎಳ್ಳು ಬೆಲ್ಲವ ಹಂಚಿ
ಒಳ್ಳೆಯ ಮಾತನಾಡುತ
ಸಂಕ್ರಾಂತಿ ಹಬ್ಬವ ಮಾಡೋಣ||೧||
ವ್ರತವನು ಮಾಡುತ
ಹದಿನೆಂಟು ಮೆಟ್ಟಿಲ
ಒಡೆಯನ ನೆನೆಯುತ
ಇರುಮುಡಿ ಗಂಟನು ಹೊತ್ತು
ಮಕರ ಜ್ಯೋತಿಯ
ದರುಶನ ಮಾಡುತ
ಸಂಕ್ರಾಂತಿ ಹಬ್ಬವ ಮಾಡೋಣ||೨||
ಬೇಯಿಸಿ ಅವರೆ
ಕಡಲೆಯ ತಿಂದು
ಸುಗ್ಗಿಯ ಹಾಡನು
ಹಾಡುತ ನಾವು
ರಾಸುಗಳನ್ನು ಪೂಜಿಸಿ
ಕಿಚ್ಚು ಹಾಯಿಸಿ
ಸಂಕ್ರಾಂತಿ ಹಬ್ಬವ ಮಾಡೋಣ||೩||
*ಸಿ ಜಿ ವೆಂಕಟೇಶ್ವರ*
13 ಜನವರಿ 2020
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)