09 ಜನವರಿ 2020

ಆಹ್ವಾನ (ಹನಿ)

  *ಆಹ್ವಾನ* ಹನಿಗವನ

ವಾಹನಗಳ ಓಡಿಸುವಾಗ,
ಪಾಲಿಸಬೇಕು ಸಂಚಾರನಿಯಮ
ಇರಲೇಬೇಕು ಸಂಯಮ
ಇಲ್ಲವಾದರೆ ನಿಮಗೆ
ಆಹ್ವಾನ ಕೊಟ್ಟೆ ಕೊಡುವನು
ಯಮ

*ಸಿ ಜಿ‌ ವೆಂಕಟೇಶ್ವರ*

04 ಜನವರಿ 2020

ಸಾಹಿತ್ಯ ರಾಜ್ಯ ಪ್ರಶಸ್ತಿ

ರಾಜ್ಯ ಸಾಹಿತ್ಯ ಪ್ರಶಸ್ತಿ ಕೇಂದ್ರ ಸಾಹಿತ್ಯ ವೇದಿಕೆ ಹಾಸನ 

ಸನ್ಮಾನಗಳು

ನನ್ನ ವಿದ್ಯಾರ್ಥಿ ಮಂಜುನಾಥ್ ಮತ್ತು ಶಿವು ಸ್ವಾಮಿ ರವರಿಂದ ಸನ್ಮಾನ

ಪ್ರಶಸ್ತಿಗಳು


01 ಜನವರಿ 2020

ದಿನವೂ ಹೊಸ ವರ್ಷ


*ದಿನವೂ ಹೊಸ ವರ್ಷ*

ಹೊಸ ಕ್ಯಾಲೆಂಡರ್ ವರ್ಷ
ಬಂದಿದೆ
*ದಿನ* ಬಂದರೆ ಹೊಸತಾಗಲೇ ಬೇಕು
ದಿನ ಇದ್ದರೆ ಮಾಸವಾಗಲೇ ಬೇಕು
ಮಾಸದಂತೆ ಹಳೆಯ ನೆನಪುಗಳ
ಕಾಪಿಡಬೇಕು

ದಿನಗಳುರುಳಿ *ತಿಂಗಳು*
ಬರಲೇ ಬೇಕು
ನಮಗೆಲ್ಲಾ ತಂಪನೀಯಬೇಕು
ಮಾಸಗಳುರುಳಿದರೆ *ವರ್ಷ*
ಬಂದು ಇಳೆ  ಹರ್ಷಗೊಳ್ಳಬೇಕು
ಪ್ರಕೃತಿಯಲ್ಲಿ ದಿನವೂ ಹೊಸ ವರ್ಷ
ಆದರೂ ಇಂದು ನಾ ಹೇಳುವೆ

ನಿಮಗೆ ಹೊಸ ಕ್ಯಾಲೆಂಡರ್ ವರ್ಷದ
ಶುಭಾಾಶಯಗಳು

*ಸಿ.ಜಿ.ವೆಂಕಟೇಶ್ವರ*
*ತುಮಕೂರು*