02 ಸೆಪ್ಟೆಂಬರ್ 2019

ನಾರಿಕೇಳ (ವಿಶ್ವ ತೆಂಗಿನ ಮರ ದಿನ ಪ್ರಯುಕ್ತ ಹನಿ)

*ನಾರಿಕೇಳ*

ಮನೆಗೆ ಸೂರು
ದೇವರ ನೈವೇದ್ಯ
ತಂಪು ಪಾನೀಯ
ಸಾರಿಗೆ ತುರಿ
ಸ್ವಚ್ಛತೆಗೆ ಪೊರಕೆ
ಕೂದಲಿಗೆ ತೈಲ
ಬೇಕಾದಾಗ ಹಗ್ಗ
ಜನರ ಉರುವಲು
ಕಲಿಯುಗ ಕಲ್ಪವೃಕ್ಷ
ಉಪಯೋಗ ಒಂದಲ್ಲ,
ಎರಡಲ್ಲ, ಹೇರಳ
ಅದುವೆ ನಾರಿಕೇಳ .

*ಸಿ.ಜಿ ವೆಂಕಟೇಶ್ವರ*

(ಇಂದು ವಿಶ್ವ ತೆಂಗಿನ ಮರದ ದಿನ

01 ಸೆಪ್ಟೆಂಬರ್ 2019

ಸುಭಿಕ್ಷವ ನೀಡು

*ಗೌರಿ ಗಣೇಶ ಹಬ್ಬದ ಶುಭಾಶಯಗಳು*

*ಸುಭಿಕ್ಷವ ನೀಡು*

ಗಣನಾಯಕ ಬೆನಕನೆ
ನೀಡುವೆ ನಿನಗೆ ಕಡುಬನ್ನ
ಮೂಷಿಕವಾಹನ ಮೋದಕಹಸ್ತನೆ
ಕರಿಮುಖ ಕಾಯೋ ನಮ್ಮನ್ನ.

ಗೌರಿಯ ಪುತ್ರ ,ಮೊದಲವಂದಿಪ
ಸಂಕಷ್ಟಗಳ ನೀ ನೀಗು
ಸುಬ್ರಹ್ಮಣ್ಯ ಸೋದರ ಗಣಪನೆ
ನಮ್ಮಯ ಬಾಳಿಗೆ ಬೆಳಕಾಗು.

ಗೌರಿತನಯ ವಿಶ್ವ ವಂದ್ಯನೆ
ನಮ್ಮನೆಲ್ಲರ ಒಂದುಗೂಡಿಸು
ಎಕದಂತ ವಕ್ರತುಂಡನೆ
ವಿದ್ಯೆ ಬುದ್ದಿಯ ನೀಡಿ ಹರಸು

ಚಾಮರ ಕರ್ಣ ಶಿವಸುತನೆ
ಭಕ್ತಿಯಲಿ ಹಾಡುವೆ ಈ ಹಾಡು
ವಿಘ್ನವಿನಾಯಕ ಗಜಾನನ
ಧರೆಯಲೆಲ್ಲಾ ಸುಭಿಕ್ಷವ ನೀಡು

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*





31 ಆಗಸ್ಟ್ 2019

ಬೊಂಬೆಗಳು (ಹನಿ)



*ಬೊಂಬೆಗಳು*

ಎಲ್ಲರ ಜೀವನದಿ
ಇದ್ದದ್ದೇ ನಗು ಅಳು
ನಾವೆಲ್ಲರೂ ಅವನಾಡಿಸಿದಂತೆ
ಆಡುವ ಬೊಂಬೆಗಳು

*ಸಿ ಜಿ ವೆಂಕಟೇಶ್ವರ*
   

        

ವ್ಯತ್ಯಾಸವಿಲ್ಲ ,(ಹನಿ)


*ವ್ಯತ್ಯಾಸವಿಲ್ಲ*

ದೂರದಿಂದ ನೋಡಲು
ಸುಂದರ ,ನಯನೋಹರ
ಒಳಹೊಕ್ಕರೆ ಕಲ್ಲು, ಮುಳ್ಳು
ವಿಷಜಂತುಗಳು,ಕ್ರಿಮಿಕೀಟಗಳು
ಅದೇ ವನದಿ
ವ್ಯತ್ಯಾಸವೇನಿಲ್ಲ
ಇದೇ  ಜೀವನದಿ .

*ಸಿ.ಜಿ.ವೆಂಕಟೇಶ್ವರ*

ನನ್ನ ದುರ್ಗ (ತೃತೀಯ ಬಹುಮಾನ ಕವಿ ಸಾಹಿತಿಗಳ‌ ಜೀವಾಳ)




*ನನ್ನ ದುರ್ಗ*
ಮದಿಸಿದ ಕರಿಯ ಮದವಡಗಿಸಿದ
ಹೈದರಾಲಿಯ ಸೊಕ್ಕು ಮುರಿದ
ರಿಪುಗಳಿಗೆ ಸಿಂಹಸ್ವಪ್ನವಾಗಿದ್ದ
ನಾಯಕರಾಳಿದ ಕೋಟೆಯೇ ನನ್ನ ದುರ್ಗ

ಏಕನಾಥೇಶ್ವರಿಯ ಪುಣ್ಯಭೂಮಿ
ಒಬವ್ವಳ ಶೌರ್ಯಕೆ ಹೆಸರಾದ ತಾಣವಿರುವ
ಕಲ್ಲು ಕಥೆ ಹೇಳುವ ಕಲ್ಲಿನ ಕೋಟೆಯೇ ನನ್ನ ದುರ್ಗ

ಅಕ್ಕ ತಂಗಿಯರ ಹೊಂಡವಿರುವ
ಉಯ್ಯಾಲೆ ಕಂಬವಿರುವ
ಆನೆಯ ಕುದುರೆಯ ಹೆಜ್ಜೆಗಳ ಹೊಂದಿದ
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆಯೇ ನನ್ನ ದುರ್ಗ

ಹದ್ದುಮೀರಿದ ಅರಿಗಳ ತರಿದ
ಮದ್ದಿನ ಮನೆಯಿರುವ
ಸದ್ದು ಮಾಡಿದ ಪುಂಡರ
ಸದ್ದಡಗಿಸಿ ಜನರ ಕಾಪಾಡಿದ ಕೋಟೆಯೇ ನನ್ನ ದುರ್ಗ


ರಂಗಯ್ಯನ ಬಾಗಿಲು ಆನೆಬಾಗಿಲು
ಬುರುಜು ಬತೇರಿ ಗುಪ್ತದ್ವಾರಗಳು
ಆಹಾರದ ಕಣಜ,ನೀರಿನ ಹೊಂಡವ
ಹೊಂದಿದ ಏಳು ಸುತ್ತಿನ ಕೋಟೆಯೇ ನನ್ನ ದುರ್ಗ

*ಸಿ.ಜಿ ವೆಂಕಟೇಶ್ವರ*