This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
16 ಏಪ್ರಿಲ್ 2019
07 ಏಪ್ರಿಲ್ 2019
ಗಜಲ್ ೫೬(ಸಾವು)
*ಗಜ್ಹಲ್ ೫೬*
ಸಾಸಿರ ಕೋಟಿಗಳ ಒಡೆಯನಿಗೆ ತಪ್ಪದು ಸಾವು
ಸಾಧು ಸಂತರಿಗು ಬಿಡದೆ ಬಪ್ಪುದು ಸಾವು .
ಸಾಧು ಸಂತರಿಗು ಬಿಡದೆ ಬಪ್ಪುದು ಸಾವು .
ಬಡವ ಬಲ್ಲಿದ ಮೇಲುಕೀಳು ನೋಡುವುದಿಲ್ಲ
ಸಮಾನತೆಯ ಸಂದೇಶ ಸಾರಲು ಬರುವುದು ಸಾವು.
ಸಮಾನತೆಯ ಸಂದೇಶ ಸಾರಲು ಬರುವುದು ಸಾವು.
ಬೆಳಗಾದ ಮೇಲೆ ಮಧ್ಯಾಹ್ನ ಸಂಜೆಯಾಗಲೇಬೇಕು
ಕರುಣಾಮಯಿಗಳಿಗೂ ಕರುಣೆ ತೋರದೆ ಆಗಮಿಸುವುದು ಸಾವು.
ಕರುಣಾಮಯಿಗಳಿಗೂ ಕರುಣೆ ತೋರದೆ ಆಗಮಿಸುವುದು ಸಾವು.
ಬರಿಗೈಲಿ ಬಂದರೂ ಕೈ ತುಂಬಾ ಸಂಪತ್ತು ಸಂಪಾದನೆಯ ಜಪ
ಆರಡಿ ಮೂರಡಿ ತಾಣವ ಸೇರಿಸಲು ಬರದೇ ಇರದು ಸಾವು.
ಆರಡಿ ಮೂರಡಿ ತಾಣವ ಸೇರಿಸಲು ಬರದೇ ಇರದು ಸಾವು.
ದೇವತೆಗಳಂತೆ ಅಮರನಾಗಲು ಸಿಹಿಜೀವಿಗೂ ಹಂಬಲ
ಕಾಲನು ಕರೆ ಮಾಡಲು ಮನೆ ಬಾಗಿಲಲಿ ನಿಲ್ಲುವುದು ಸಾವು.
ಕಾಲನು ಕರೆ ಮಾಡಲು ಮನೆ ಬಾಗಿಲಲಿ ನಿಲ್ಲುವುದು ಸಾವು.
*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*
*ಗೌರಿಬಿದನೂರು*
26 ಮಾರ್ಚ್ 2019
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)




