30 ಜನವರಿ 2019

ವರಕವಿ ( ಕವನ)

                   *ವರಕವಿ*

ನೀಡಿದಿರಿ ನಮಗೆ ಸಾಹಿತ್ಯದ ಸವಿ
ಮರೆಯಲಿ ಹೇಗೆ ನಿನ್ನ ವರಕವಿ

ರಸವೆ ಜನನ
ವಿರಸವೇ ಮರಣ
ಸಮರಸವೆ ಜೀವನ
ಎಂದ ತತ್ವಜ್ಞಾನಿಯ
ಮರೆಯಲಿ ಹೇಗೆ ?


ಸಾದನಕೇರಿಯಲಿ ನಿಂತ
ಸಾಧಕರಿಗೆ ಸ್ಫೂರ್ತಿಯಾದ
ಜೀವನದಲಿ ಬೆಂದರೂ
ಸಾಹಿತ್ಯದ ನಳಪಾಕ ಬಡಿಸಿದ
ಬೇಂದ್ರೆ ಅಜ್ಜನ
ಮರೆಯಲಿ ಹೇಗೆ?


ಕುಣಿಯೋಣ ಬಾರಾ ಎಂದು
ಮಕ್ಕಳ ಕುಣಿಸಿದ
ಪಾತರಗಿತ್ತಿ ಅಂದವ ತೋರಿದ
ಇಳಿದುಬಾ ತಾಯಿ ಎಂದ
ಅಂಬಿಕಾತನಯದತ್ತನ
ಮರೆಯಲಿ ಹೇಗೆ?

ಕನ್ನಡಕೆ ಜ್ಞಾನ ಪೀಠ ಗರಿಯನಿತ್ತ
ಶ್ರಾವಣದ ಸೊಬಗ ಬಣ್ಣಿಸಿದ
ನಾಕುತಂತಿಯ ಮೀಟಿ
ನಾದಲೀಲೆಯ ತೋರಿದ
ವರಕವಿಯೇ ನಿನ್ನ
ಮರೆಯಲಿ ಹೇಗೆ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

25 ಜನವರಿ 2019

ದೇವರು(ಶಿವಕುಮಾರ ಸ್ವಾಮೀಜಿ ರವರಿಗೆ ನುಡಿ ನಮನ)

                 *ದೇವರು*

ದೇವರು ನೀನು ನಿಜವಪ್ಪ
ಮಾನವ ರೂಪದ ಶಿವಪ್ಪ
ನಿನ್ನೀ  ಸೇವೆಗೆ ಕೊನೆಯಿಲ್ಲ
ನೀನಿರದೇ ಬೆಳಕು ಮೂಡಲ್ಲ |ಪ|

ಅನ್ನದಾಸೋಹವ ನೀನಿತ್ತೆ
ಅಕ್ಷರ ಕಲಿಸಲು ಪಣತೊಟ್ಟೆ
ಜ್ಞಾನದ ಆಂದೋಲನ ನಿನ್ನಿಂದ
ನಿನ್ನ ನೆನೆದರೆ ನಮಗಾನಂದ.
 |ದೇವರು|

ಸರ್ವಜನಾಂಗದ ಸಂಗಮವು
ನೀನೆಲೆಸಿರುವ ಆ ಮಠವು
ಹೋಲಿಕೆ ನಿನಗೆ ಯಾರಿಲ್ಲ
ನಿನ್ನನು ಮರೆತು ಬಾಳಲ್ಲ .
|ದೇವರು|

ಬಡವರ ಪಾಲಿನ ಬಂಧುವುನೀ
ಅಶಕ್ತರಿಗೆ ಆಧಾರವು ನೀ
ಸೇವೆಯ ಅರ್ಥವು ನೀನಪ್ಪ
ನಿನ್ನ ದಾರಿಯಲಿ ನಡೆಸಪ್ಪ .
|ದೇವರು|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

23 ಜನವರಿ 2019

ನೇತಾಜಿ ಮತ್ತು ವರ್ಷಿತಾ ಗೆ ಹುಟ್ಟು ಹಬ್ಬದ ಶುಭಾಶಯಗಳು


                 *ನೇತಾಜಿ*

ಕ್ರಾಂತಿ ಕಾರರ ನಾಯಕ ಸ್ವಾತಂತ್ರ್ಯ ಪರಿಕಲ್ಪನೆಯು ಇಂದ್ರ
ಅವರೇ ನಮ್ಮ ಸುಭಾಷ್ ಚಂದ್ರ


ಬ್ರಿಟೀಷರ ಪಾಲಿಗೆ ಸಿಂಹಸ್ವಪ್ನ
ಕ್ರಾಂತಿಕಾರಿ ನಾಯಕ
ಪೂರ್ಣ ಚಂದ್ರನ ತಂಪಾದ ಬೆಳಕು ನೀಡಿ
ಸ್ವತಂತ್ರದ ಬೆಳಕಿನೆಡೆಗೆ ಕೊಂಡೊಯ್ದ ನಾವಿಕ

ಮತ್ತೊಮ್ಮೆ ಅವತರಿಸಿ ಬಾ ಧರೆಗೆ
ಸಹಿಸಲಾಗುತ್ತಿಲ್ಲ ಭ್ರಷ್ಟಾಚಾರಿಗಳ ದುರಾಡಳಿಗಾರರ
ನಿನ್ನ ದಾರಿಯಲ್ಲೇ ಅವರಿಗೆ
ಪಾಠವ ಕಲಿಸಿ
ಸ್ವತಂತ್ರ ನೀಡು ಇಂತವರಿಂದ
ಇವರ ಅನಾಚಾರಗಳಿಂದ ಮುಕ್ತಿ ನೀಡು
ಭಾರತಾಂಬೆಯ ನವಸಂಕೋಲೆಗಳಿಂದ
ಮುಕ್ತಿಗೊಳಿಸು

ಭಾರತೀಯ ರಾಷ್ಟ್ರೀಯ ಸೇನೆಯ ಬದಲಿಗೆ
ಭಾರತೀಯ ಸುಮನಸುಗಳ ಸೇನೆ
ಕಟ್ಟಿ ಭಾರತ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ನೀವೇ ಬರಬೇಕು ನೇತಾಜಿ

*ವರ್ಷಿತ ಹುಟ್ಟು ಹಬ್ಬದ ಶುಭಾಶಯಗಳು*

*ವ*ರ್ಷದ ಆಗಮನದಿಂದ ಸಕಲರು
ಹ*ರ್ಷಿ* ಸುವಂತೆ
*ತ*ಮವನು ಕಳೆಯುವ ಬೆಳಕಿನಂತೆ
ನಿನ್ನ ಜೀವನವು ಸುಖಕರವಾಗಿರಲಿ
ಮಗಳೆ
ನಿನಗೆ ಹುಟ್ಟು ಹಬ್ಬದ ಶುಭಾಶಯಗಳು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


22 ಜನವರಿ 2019

ಸಿಹಿಜೀವಿಯ ಕಣ್ಣೀರ ಹನಿಗಳು(ಹನಿ ಹನಿ‌ಬಳಗದಿಂದ ಅತ್ಯುತ್ತಮ ಹನಿಗಳು ಎಂದು ಪುರಸ್ಕೃತ) ಶಿವಕುಮಾರ ಸ್ವಾಮೀಜಿಗಳಿಗೆ ನುಡಿನಮನ

                  ಸಿಹಿಜೀವಿಯ ಕಣ್ಣೀರ ಹನಿಗಳು

ಶಿವಕುಮಾರ ಸ್ವಾಮೀಜಿಗಳಿಗೆ  ನುಡಿನಮನ

*೧*

*ಎಂದು?*

ಜನತಾಜನಾರ್ಧನನ
ಸೇವೆ ಮಾಡಲು‌ನೋಡಲಿಲ್ಲ
ಹಿಂದು ಮುಂದು
ಪ್ರತಿ ಪಾದಿಸಿದಿರಿ
ನಾವೆಲ್ಲರೂ ಒಂದು
ಸೇವಾ ವರ್ಷಗಳು
ನೂರ ಹನ್ನೊಂದು
ನಿಮಗಾಗಿ ಕಾತುರದಿ
ಕಾಯುವೆವು
ಭುವಿಗೆ ಮತ್ತೆ
ಆಗಮಿಸುವಿರಿ ಎಂದು?

*೨*

*ಶ್ರೀಸಿದ್ದಗಂಗಾ*

ಮಿಂದರೆ
ಪಾಪ ಕಳೆವಳು
ಉತ್ತರದ ಗಂಗಾ
ನಿಂದರೆ ನೆನೆದರೆ
ಪಾಪ ನಾಶ
ದಕ್ಷಿಣದ ಗಂಗಾ
ಶ್ರೀಸಿದ್ದಗಂಗಾ

*೩*

*ಅನಾಥರಾದೆವು*

ವಿದ್ಯೆ ಬುದ್ದಿ ನೀಡಿದ
ಭಕ್ತರ ಪಾಲಿನ
ಬುದ್ದಿ ಇನ್ನಿಲ್ಲ
ಅನಾಥರಾದೆವು
ಸ್ವಾಮಿಗಳಿಲ್ಲದೆ
ನಾವೆಲ್ಲ

*೪*

*ಶಿವಧ್ಯಾನ*

ಕುಮಾರನಾಗಿ
ಶಿವನ ಧ್ಯಾನವ
ಮಾಡಿದಿರಿ
ಅವನು ಕರೆದರೆ
ನಗುತಲಿ ಕೈಲಾಸಕ್ಕೆ
ತೆರಳಿದಿರಿ
ನಮಗಾರು ಗತಿ
ನೀವೇ ಹೇಳಿರಿ

*೫*

*ಬಹುವಿಧ ದಾಸೋಹಿ*

ಹರನೇನಾದರು ದೊರೆತರೆ
ಕೇಳುವೆನು
ಎಲ್ಲೆಡೆ ಎಲ್ಲರಿಗೂ
ಅನ್ನ,ವಿಧ್ಯೆ ಸಿಗುತಿಲ್ಲ
ಬಹುವಿಧ ದಾಸೋಹಿ
ಸ್ವಾಮೀಜಿಯನೇತಕೆ
ಧರೆಯಲಿ  ಬಿಡಲಿಲ್ಲ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*








18 ಜನವರಿ 2019

ಕಾಯಿಲೆ (ಹನಿಗವನ)

                  ಸಿಹಿಜೀವಿಯ ಹನಿ


*ಕಾಯಿಲೆ*

ರೀ ಕಳೆದ ವರ್ಷವೇ
ಭರವಸೆ ನೀಡಿದ್ದಿರಿ
ಕೊಡಿಸುವೆ ಬಂಗಾರದ
ಜುಮಿಕೆ ಒಲೆ
ಅಯ್ಯೋ ಕ್ಷಮಿಸಿ ಬಿಡೆ
ನನಗೆ ಮರೆವಿನ ಕಾಯಿಲೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*