23 ಜನವರಿ 2019

ನೇತಾಜಿ ಮತ್ತು ವರ್ಷಿತಾ ಗೆ ಹುಟ್ಟು ಹಬ್ಬದ ಶುಭಾಶಯಗಳು


                 *ನೇತಾಜಿ*

ಕ್ರಾಂತಿ ಕಾರರ ನಾಯಕ ಸ್ವಾತಂತ್ರ್ಯ ಪರಿಕಲ್ಪನೆಯು ಇಂದ್ರ
ಅವರೇ ನಮ್ಮ ಸುಭಾಷ್ ಚಂದ್ರ


ಬ್ರಿಟೀಷರ ಪಾಲಿಗೆ ಸಿಂಹಸ್ವಪ್ನ
ಕ್ರಾಂತಿಕಾರಿ ನಾಯಕ
ಪೂರ್ಣ ಚಂದ್ರನ ತಂಪಾದ ಬೆಳಕು ನೀಡಿ
ಸ್ವತಂತ್ರದ ಬೆಳಕಿನೆಡೆಗೆ ಕೊಂಡೊಯ್ದ ನಾವಿಕ

ಮತ್ತೊಮ್ಮೆ ಅವತರಿಸಿ ಬಾ ಧರೆಗೆ
ಸಹಿಸಲಾಗುತ್ತಿಲ್ಲ ಭ್ರಷ್ಟಾಚಾರಿಗಳ ದುರಾಡಳಿಗಾರರ
ನಿನ್ನ ದಾರಿಯಲ್ಲೇ ಅವರಿಗೆ
ಪಾಠವ ಕಲಿಸಿ
ಸ್ವತಂತ್ರ ನೀಡು ಇಂತವರಿಂದ
ಇವರ ಅನಾಚಾರಗಳಿಂದ ಮುಕ್ತಿ ನೀಡು
ಭಾರತಾಂಬೆಯ ನವಸಂಕೋಲೆಗಳಿಂದ
ಮುಕ್ತಿಗೊಳಿಸು

ಭಾರತೀಯ ರಾಷ್ಟ್ರೀಯ ಸೇನೆಯ ಬದಲಿಗೆ
ಭಾರತೀಯ ಸುಮನಸುಗಳ ಸೇನೆ
ಕಟ್ಟಿ ಭಾರತ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ನೀವೇ ಬರಬೇಕು ನೇತಾಜಿ

*ವರ್ಷಿತ ಹುಟ್ಟು ಹಬ್ಬದ ಶುಭಾಶಯಗಳು*

*ವ*ರ್ಷದ ಆಗಮನದಿಂದ ಸಕಲರು
ಹ*ರ್ಷಿ* ಸುವಂತೆ
*ತ*ಮವನು ಕಳೆಯುವ ಬೆಳಕಿನಂತೆ
ನಿನ್ನ ಜೀವನವು ಸುಖಕರವಾಗಿರಲಿ
ಮಗಳೆ
ನಿನಗೆ ಹುಟ್ಟು ಹಬ್ಬದ ಶುಭಾಶಯಗಳು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


22 ಜನವರಿ 2019

ಸಿಹಿಜೀವಿಯ ಕಣ್ಣೀರ ಹನಿಗಳು(ಹನಿ ಹನಿ‌ಬಳಗದಿಂದ ಅತ್ಯುತ್ತಮ ಹನಿಗಳು ಎಂದು ಪುರಸ್ಕೃತ) ಶಿವಕುಮಾರ ಸ್ವಾಮೀಜಿಗಳಿಗೆ ನುಡಿನಮನ

                  ಸಿಹಿಜೀವಿಯ ಕಣ್ಣೀರ ಹನಿಗಳು

ಶಿವಕುಮಾರ ಸ್ವಾಮೀಜಿಗಳಿಗೆ  ನುಡಿನಮನ

*೧*

*ಎಂದು?*

ಜನತಾಜನಾರ್ಧನನ
ಸೇವೆ ಮಾಡಲು‌ನೋಡಲಿಲ್ಲ
ಹಿಂದು ಮುಂದು
ಪ್ರತಿ ಪಾದಿಸಿದಿರಿ
ನಾವೆಲ್ಲರೂ ಒಂದು
ಸೇವಾ ವರ್ಷಗಳು
ನೂರ ಹನ್ನೊಂದು
ನಿಮಗಾಗಿ ಕಾತುರದಿ
ಕಾಯುವೆವು
ಭುವಿಗೆ ಮತ್ತೆ
ಆಗಮಿಸುವಿರಿ ಎಂದು?

*೨*

*ಶ್ರೀಸಿದ್ದಗಂಗಾ*

ಮಿಂದರೆ
ಪಾಪ ಕಳೆವಳು
ಉತ್ತರದ ಗಂಗಾ
ನಿಂದರೆ ನೆನೆದರೆ
ಪಾಪ ನಾಶ
ದಕ್ಷಿಣದ ಗಂಗಾ
ಶ್ರೀಸಿದ್ದಗಂಗಾ

*೩*

*ಅನಾಥರಾದೆವು*

ವಿದ್ಯೆ ಬುದ್ದಿ ನೀಡಿದ
ಭಕ್ತರ ಪಾಲಿನ
ಬುದ್ದಿ ಇನ್ನಿಲ್ಲ
ಅನಾಥರಾದೆವು
ಸ್ವಾಮಿಗಳಿಲ್ಲದೆ
ನಾವೆಲ್ಲ

*೪*

*ಶಿವಧ್ಯಾನ*

ಕುಮಾರನಾಗಿ
ಶಿವನ ಧ್ಯಾನವ
ಮಾಡಿದಿರಿ
ಅವನು ಕರೆದರೆ
ನಗುತಲಿ ಕೈಲಾಸಕ್ಕೆ
ತೆರಳಿದಿರಿ
ನಮಗಾರು ಗತಿ
ನೀವೇ ಹೇಳಿರಿ

*೫*

*ಬಹುವಿಧ ದಾಸೋಹಿ*

ಹರನೇನಾದರು ದೊರೆತರೆ
ಕೇಳುವೆನು
ಎಲ್ಲೆಡೆ ಎಲ್ಲರಿಗೂ
ಅನ್ನ,ವಿಧ್ಯೆ ಸಿಗುತಿಲ್ಲ
ಬಹುವಿಧ ದಾಸೋಹಿ
ಸ್ವಾಮೀಜಿಯನೇತಕೆ
ಧರೆಯಲಿ  ಬಿಡಲಿಲ್ಲ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*








18 ಜನವರಿ 2019

ಕಾಯಿಲೆ (ಹನಿಗವನ)

                  ಸಿಹಿಜೀವಿಯ ಹನಿ


*ಕಾಯಿಲೆ*

ರೀ ಕಳೆದ ವರ್ಷವೇ
ಭರವಸೆ ನೀಡಿದ್ದಿರಿ
ಕೊಡಿಸುವೆ ಬಂಗಾರದ
ಜುಮಿಕೆ ಒಲೆ
ಅಯ್ಯೋ ಕ್ಷಮಿಸಿ ಬಿಡೆ
ನನಗೆ ಮರೆವಿನ ಕಾಯಿಲೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

17 ಜನವರಿ 2019

ಸಿಹಿಜೀವಿಯ ಹನಿಗಳು

             *ಸಿಹಿಜೀವಿಯ ಹನಿಗಳು*

*೧*

*ಅಪಾರ*

ನಿನ್ನೆ ಶತ್ರು
ಇಂದು ಮಿತ್ರ
ನಿನ್ನೆ ಕಮಲ
ಹಿಡಿಯಲು ಕಾತರ
ಇಂದು ಕೈಯೇ ಸುಂದರ
ನಡೆಯುತಿದೆಯಂತೆ
ಕುದುರೆ ವ್ಯಾಪಾರ.
ಓ ಅಧಿಕಾರವೇ
ನಿನ್ನ ಮಹಿಮೆ ಅಪಾರ .

*ಆಧುನಿಕತೆ?*


ತೋರಣವಾಗಲಿ
ಒಬ್ಬಟ್ಟಗಾಲಿ
ಎಳ್ಳು ಬೆಲ್ಲವಾಗಲಿ
ಎಲ್ಲವೂ ರಡಿಮೇಡ್
ನಗರ ಪಟ್ಟಣದ
ಮನೆಯಲ್ಲಿ ಮಾಡುವುದು
ಬಹಳ ಕಡಿಮೆ.
ಇದೆಲ್ಲವೂ ಆಧುನಿಕತೆಯ
ಮಹಿಮೆ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

16 ಜನವರಿ 2019

ಸಿಹಿಜೀವಿಯ ಹನಿಗಳು( ಹನಿ ಹನಿ ಇಬ್ಬನಿ ಬಳಗದಿಂದ ಉತ್ತಮ ಹನಿ ಪುರಸ್ಕೃತ)


               *ಸಿಹಿಜೀವಿಯ ಹನಿಗಳು*

*೧*

*ಆಪರೇಷನ್*

ಪ್ರಿಯೆ ನೀ
ಸನಿಹದಲ್ಲಿ ಇದ್ದರೆ
ನಮ್ಮ ಪ್ರೀತಿಯೆಂಬ
ಸರ್ಕಾರ ಸುಭದ್ರ
ಅನಿಸುವುದು.
ನೀ ಚೂರು
ಮರೆಯಾದರೆ
ಆಪರೇಷನ್ ಕಮಲವೋ
ಕೈಯೋ ತೆನೆಯೋ
ಎಂಬ ಅನುಮಾನ
ಮೂಡುವುದು

*೨*

*ಪಾಪ*

ಪ್ರಿಯೆ ನಿನ್ನನ್ನು ದೂರದಿಂದ
ನೋಡಿದರೆ ನೀನೆ
ಅಪ್ಸರೆಯ ಪ್ರತಿರೂಪ
ಹತ್ತಿರದಿಂದ ನೋಡಿದ
ನೆರಮನೆಯ ಪಾಪ
ತಾಯತ ಕಟ್ಟಿಸಿಕೊಂಡಿದೆ
ಪಾಪ

*ಅಚ್ಚರಿಯಲ್ಲ*

ಚಂದ್ರನ ಮೇಲೆ
ಬೀಜ ಮೊಳಕೆಯೊಡಿದಿದೆ
ಅದೇನೂ ಅಚ್ಚರಿಯಲ್ಲ
ಗೆಳತಿ ನೀ ನನ್ನ ಸನಿಹವಿರೆ
ನೀರು ಗೊಬ್ಬರವಿಲ್ಲದಿದ್ದರೂ
ಆ ಮೊಳಕೆ ಗಿಡವಾಗಿ ಮರವಾಗಿ
ಹಣ್ಣು ಬಿಡುವುದಲ್ಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*