13 ಜನವರಿ 2019

ಮಾದರಿ? (ನ್ಯಾನೋ ಕಥೆ)

              ನ್ಯಾನೋ ಕಥೆ

*ಮಾದರಿ?*

 "ಎಷ್ಟು ಹೇಳಿದರೂ ಅಷ್ಟೇ ಉಗುರು ಕತ್ತರಿಸಿ ಶಾಲೆಗೆ ಬರುವುದಿಲ್ಲ " ಎಂದು ಶಿಕ್ಷಕರು ಕೋಲಿನಿಂದ ವಿದ್ಯಾರ್ಥಿಗಳಿಗೆ ಮೊಟ್ಟ ಏಟುಗಳನ್ನು ವಿಧೇಯತೆಯಿಂದ ಸ್ವೀಕರಿಸಿದ ಓರ್ವ ವಿದ್ಯಾರ್ಥಿಯ ಕಣ್ಣು ಶಿಕ್ಷಕರ ಕಿರುಬೆರಳಿನ ಎರಡು ಇಂಚು ಉಗುರಿನ ಮೇಲೆ ಬಿತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

12 ಜನವರಿ 2019

ನಿರೀಕ್ಷೆ (ಹನಿಗವನ)

               *ನಿರೀಕ್ಷೆ*

ನನಗೆ ಬುದ್ದಿ ಬಂದಾಗಿನಿಂದ
ನಿರೀಕ್ಷೆ ಮಾಡುತ್ತಲೇ ಇದ್ದೆ
ಮಹಾನ್ ಚೇತನ ಗುರು
ಬಂದರು ಹೋದರು ಹಲವರು
ಸೋಜಿಗವೆಂದರೆ
ಹಲವಾರು ವಿವೇಕರು ಬಂದರು
ಕೆಲವಾರು ಆನಂದರು ಬಂದರು
ಅವತರಿಸಲೇ ಇಲ್ಲ ಮತ್ತೊಬ್ಬ
ಸ್ವಾಮಿ ವಿವೇಕಾನಂದರು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ವಿಳಂಬವಾಯಿತೇ(ಹನಿಗವನ)

                   ಸಿಹಿಜೀವಿಯ ಹನಿ

*ವಿಳಂಬವಾಯಿತೇ?*

ಅವಳ ವ್ಯಾಮೋಹಕೆ
ಬಿದ್ದು ಗೋವಿಂದನ
ಮರೆತೆ.
ಅವಳು ನನ್ನ ಮರೆತಳು
ಭಗವಂತನ ಕರೆದೆ
ಕೇಳುತ ಬಂದ ಕಂದ
ವಿಳಂಬವಾಯಿತೆ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

11 ಜನವರಿ 2019

ಅವತರಿಸು ಬಾ(ಚಿತ್ರ ಹನಿಗವನ)

                    *ಅವತರಿಸು ಬಾ*

ಕಲ್ಲಾಗದಿರು ಬುದ್ದ
ಅವತರಿಸು‌  ಎದ್ದು
ತಿಳಿಹೇಳು ನಮಗೆ
ಬೀರಲು ಹೂನಗೆ
ತೊರೆಯಲು ಹಗೆ
ಕಲಿಸಿಕೊಡು ಆಸೆ
ತೊರೆದು ದುಃಖವ
ಅಳಿಸುವ  ಬಗೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



10 ಜನವರಿ 2019

ಪ್ರಶ್ನೆ (ಹನಿ)

                 ಸಿಹಿಜೀವಿಯ ಹನಿ

*೧*

*ಪ್ರಶ್ನೆ*

ಸ್ವೆಟರ್  ಟೋಪಿ
ಹಾಕಿಕೊಂಡರೂ
ಎರಡೆರಡು ಬೆಡ್ ಶೀಟ್
ಹೊದ್ದುಕೊಂಡರೂ
ಬೆಂಕಿಕಾಯಿಸಿಕೊಂಡರೂ
ಮಾನವರಾದಿಯಾಗಿ ಜೀವಿಗಳು
ಗಢ ಗಢ  ನಡುಗುತಲಿವೆ
ಹತಾಶಗೊಂಡ ಜೀವಿಗಳು
ಕೇಳುತಲಿವೆ ಥಂಡಾಸುರ
ನೀನೆಂದು ಹೋಗುವೆ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*