This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
23 ನವೆಂಬರ್ 2018
21 ನವೆಂಬರ್ 2018
ಮರೆಯಲಾರೆ (ಕವನ)
*ಮರೆಯಲಾರೆ*
ಸವಿಯಾದ ನೆನಪು ಮರೆಯಲಾರೆ
ಕವಿಯಾಗಿ ಅವುಗಳ ವರ್ಣಿಸಲಾರೆ
ಅಕ್ಷರ ಕಾಗುಣಿತ ತಪ್ಪಿ ಬ್ಯಾ ಬ್ಯಾ
ಅಂದಾಗ ಬೆತ್ತದಿ ಬಾರಿಸಿ
ಬಾಸುಂಡೆ ಬರುವಂತೆ ಬಾರಿಸಿ
ಜೀವನ ಪಾಠ ಕಲಿಸಿದ
ಭಗವಂತನಂತಹ ಗುರುವ ಮರೆಯಲಾರೆ
ಬುಗುರಿ ಚಿನ್ನಿದಾಂಟು ಕುಂಟೊಬಿಲ್ಲೆ
ಆಟಗಳಲ್ಲಿ ನಲಿದಾಡಿ
ಬೇಲಿ ಸಾಲಲಿ ಸುತ್ತಿ
ಕಾರೆ ತೊಂಡೆ ಹಣ್ಣುಗಳ ಸವಿವಾಗ
ಜೊತೆಗಿದ್ದ ಬಾಲ್ಯದ ಗೆಳೆಯರ ಮರೆಯಲಾರೆ
ಅಪ್ಪನಿಲ್ಲದಿದ್ದರೂ ಒಪ್ಪವಾಗಿ ಬೆಳೆಸಿ
ಹೆತ್ತು ಹೊತ್ತು ಸಾಕಿ ಸಲಹಿ
ಹೊತ್ತಿಗೆ ತುತ್ತು ಅನ್ನ ನೀಡಿ
ಹೊತ್ತಗೆ ಹಿಡಿಯುವಂತೆ ಮಾಡಿ
ಅತಿಮುದ್ದಾಗಿ ಬೆಳೆಸಿದ ಅಮ್ಮನ ಮರೆಯಲಾರೆ
ಮರಳಿನಲಿ ಗೂಡನ್ನು ಕಟ್ಟಿ
ಕೈ ಕೈ ಹಿಡಿದು ನೆಡೆದಾಡಿ
ನಿನ್ನನೇ ಮದುವೆಯಾಗುವೆನೆಂದು
ಅಪ್ಪ ಅಮ್ಮನ ಆಟವನಾಡಿದ
ಮೊದಲ ಒಲವನು ಮರೆಯಲಾರೆ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
ಸವಿಯಾದ ನೆನಪು ಮರೆಯಲಾರೆ
ಕವಿಯಾಗಿ ಅವುಗಳ ವರ್ಣಿಸಲಾರೆ
ಅಕ್ಷರ ಕಾಗುಣಿತ ತಪ್ಪಿ ಬ್ಯಾ ಬ್ಯಾ
ಅಂದಾಗ ಬೆತ್ತದಿ ಬಾರಿಸಿ
ಬಾಸುಂಡೆ ಬರುವಂತೆ ಬಾರಿಸಿ
ಜೀವನ ಪಾಠ ಕಲಿಸಿದ
ಭಗವಂತನಂತಹ ಗುರುವ ಮರೆಯಲಾರೆ
ಬುಗುರಿ ಚಿನ್ನಿದಾಂಟು ಕುಂಟೊಬಿಲ್ಲೆ
ಆಟಗಳಲ್ಲಿ ನಲಿದಾಡಿ
ಬೇಲಿ ಸಾಲಲಿ ಸುತ್ತಿ
ಕಾರೆ ತೊಂಡೆ ಹಣ್ಣುಗಳ ಸವಿವಾಗ
ಜೊತೆಗಿದ್ದ ಬಾಲ್ಯದ ಗೆಳೆಯರ ಮರೆಯಲಾರೆ
ಅಪ್ಪನಿಲ್ಲದಿದ್ದರೂ ಒಪ್ಪವಾಗಿ ಬೆಳೆಸಿ
ಹೆತ್ತು ಹೊತ್ತು ಸಾಕಿ ಸಲಹಿ
ಹೊತ್ತಿಗೆ ತುತ್ತು ಅನ್ನ ನೀಡಿ
ಹೊತ್ತಗೆ ಹಿಡಿಯುವಂತೆ ಮಾಡಿ
ಅತಿಮುದ್ದಾಗಿ ಬೆಳೆಸಿದ ಅಮ್ಮನ ಮರೆಯಲಾರೆ
ಮರಳಿನಲಿ ಗೂಡನ್ನು ಕಟ್ಟಿ
ಕೈ ಕೈ ಹಿಡಿದು ನೆಡೆದಾಡಿ
ನಿನ್ನನೇ ಮದುವೆಯಾಗುವೆನೆಂದು
ಅಪ್ಪ ಅಮ್ಮನ ಆಟವನಾಡಿದ
ಮೊದಲ ಒಲವನು ಮರೆಯಲಾರೆ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
12 ನವೆಂಬರ್ 2018
ಹೊಸ ಜಗವ ಕಟ್ಟೋಣ ( ಕವನ)
*ಹೊಸ ಜಗ ಕಟ್ಟೋಣ*
ದೀಪದ ಹಬ್ಬದಿ ಮೆರೆಯುವುದಿಲ್ಲ
ಪರಿಸರ ಕಾಳಜಿ ಮರೆಯುವುದಿಲ್ಲ
ಪಟಾಕಿ ಚಟಾಕಿ ಹೊಡೆಯುವುದಿಲ್ಲ
ಸಿಹಿ ಹಂಚುವುದು ಮರೆಯುವುದಿಲ್ಲ
ಭೂಚಕ್ರಗಳನು ಹಚ್ಚವುದಿಲ್ಲ
ಚಕ್ರಪಾಣಿಯ ಸ್ಮರಣೆ ಮರೆಯುವುದಿಲ್ಲ
ಬಿರುಸು ಬಾಣಗಳ ಬಳಸುವುದಿಲ್ಲ
ದಿರಿಸು ಧರಿಸಿ ಮಿಂಚುವೆವವು ಎಲ್ಲ
ಆಕಾಶಬುಟ್ಡಿ ಕಟ್ಟಲು ಮರೆಯಲ್ಲ
ಮಾಲಿನ್ಯವನು ನಾವು ಮಾಡುವುದಿಲ್ಲ
ಬೊಗಸೆಯಲಿ ದೀಪದಳ ಬೆಳಗಿಸುವೆವು
ದೀಪದಿಂದಲಿ ದೀಪಗಳ ಹಚ್ಚುವೆವು
ಕತ್ತೋಲೋಡಿಸಿ ಬೆಳಕು ಮೂಡಿಸುವೆವು
ಹೊಸ ಜಗವ ಕಟ್ಡಲು ಪಣತೊಡುವೆವು
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
ದೀಪದ ಹಬ್ಬದಿ ಮೆರೆಯುವುದಿಲ್ಲ
ಪರಿಸರ ಕಾಳಜಿ ಮರೆಯುವುದಿಲ್ಲ
ಪಟಾಕಿ ಚಟಾಕಿ ಹೊಡೆಯುವುದಿಲ್ಲ
ಸಿಹಿ ಹಂಚುವುದು ಮರೆಯುವುದಿಲ್ಲ
ಭೂಚಕ್ರಗಳನು ಹಚ್ಚವುದಿಲ್ಲ
ಚಕ್ರಪಾಣಿಯ ಸ್ಮರಣೆ ಮರೆಯುವುದಿಲ್ಲ
ಬಿರುಸು ಬಾಣಗಳ ಬಳಸುವುದಿಲ್ಲ
ದಿರಿಸು ಧರಿಸಿ ಮಿಂಚುವೆವವು ಎಲ್ಲ
ಆಕಾಶಬುಟ್ಡಿ ಕಟ್ಟಲು ಮರೆಯಲ್ಲ
ಮಾಲಿನ್ಯವನು ನಾವು ಮಾಡುವುದಿಲ್ಲ
ಬೊಗಸೆಯಲಿ ದೀಪದಳ ಬೆಳಗಿಸುವೆವು
ದೀಪದಿಂದಲಿ ದೀಪಗಳ ಹಚ್ಚುವೆವು
ಕತ್ತೋಲೋಡಿಸಿ ಬೆಳಕು ಮೂಡಿಸುವೆವು
ಹೊಸ ಜಗವ ಕಟ್ಡಲು ಪಣತೊಡುವೆವು
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
09 ನವೆಂಬರ್ 2018
08 ನವೆಂಬರ್ 2018
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)