This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
08 ನವೆಂಬರ್ 2018
ಮಹಾಬಲಿ (ಕವನ)
*ಮಹಾಬಲಿ*
ಪರಿಸರ ಮಾಲಿನ್ಯ
ದುರಾಸೆಗಿಡಿದ ಕನ್ನಡಿ
ಸುಸ್ಥಿರ ಅಭಿವೃದ್ಧಿಯ ಕಡೆಗಣಿಸಿ
ಅಸ್ಥಿರ ಗೊಳಿಸಿರುವೆವು ಭುವಿಯ
ವ್ಯಗ್ರಗೊಂಡಳು ಭೂಮಾತೆ
ಅತಿವೃಷ್ಟಿ ಅನಾವೃಷ್ಡಿ ಬರ
ಉಬ್ಬರ ಜಾಗತಿಕ ತಾಪಮಾನ
ಎಲ್ ನೀನೋ ಲಾ ನೀನೋ
ಏನೇನೋ
ಚಂಡಿಯಂತಹ ಚಂಡಮಾರುತ
ಜ್ಬಾಲೆಯುಗುಳುವ ಜ್ವಾಲಾಮುಖಿ
ಬಾಯಿತೆಗೆವ ಭೂಕಂಪ
ಪ್ರಕೃತಿ ಕ್ರಮೇಣ ಸಣ್ಣ ಪುಟ್ಟ
ಬಲಿ ಪಡೆದು ಎಚ್ಚರಿಕೆ ನೀಡಿಯಾಯಿತು
ಬುದ್ದಿ ಕಲಿತಿಲ್ಲ ನಾವು
ಮುಂದುವರೆಸಿದ್ದೇವೆ ಅದೇ ದುರ್ವರ್ತನೆ
ಮಹಾಬಲಿ ಗಾಗಿ ಕಾದಿದ್ದಾಳೆ
ಪ್ರಕೃತಿ ಮಾತೆ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
ಪರಿಸರ ಮಾಲಿನ್ಯ
ದುರಾಸೆಗಿಡಿದ ಕನ್ನಡಿ
ಸುಸ್ಥಿರ ಅಭಿವೃದ್ಧಿಯ ಕಡೆಗಣಿಸಿ
ಅಸ್ಥಿರ ಗೊಳಿಸಿರುವೆವು ಭುವಿಯ
ವ್ಯಗ್ರಗೊಂಡಳು ಭೂಮಾತೆ
ಅತಿವೃಷ್ಟಿ ಅನಾವೃಷ್ಡಿ ಬರ
ಉಬ್ಬರ ಜಾಗತಿಕ ತಾಪಮಾನ
ಎಲ್ ನೀನೋ ಲಾ ನೀನೋ
ಏನೇನೋ
ಚಂಡಿಯಂತಹ ಚಂಡಮಾರುತ
ಜ್ಬಾಲೆಯುಗುಳುವ ಜ್ವಾಲಾಮುಖಿ
ಬಾಯಿತೆಗೆವ ಭೂಕಂಪ
ಪ್ರಕೃತಿ ಕ್ರಮೇಣ ಸಣ್ಣ ಪುಟ್ಟ
ಬಲಿ ಪಡೆದು ಎಚ್ಚರಿಕೆ ನೀಡಿಯಾಯಿತು
ಬುದ್ದಿ ಕಲಿತಿಲ್ಲ ನಾವು
ಮುಂದುವರೆಸಿದ್ದೇವೆ ಅದೇ ದುರ್ವರ್ತನೆ
ಮಹಾಬಲಿ ಗಾಗಿ ಕಾದಿದ್ದಾಳೆ
ಪ್ರಕೃತಿ ಮಾತೆ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
06 ನವೆಂಬರ್ 2018
01 ನವೆಂಬರ್ 2018
ಕನ್ನಡ ಓರಾಟಗಾರ (ನ್ಯಾನೋ ಕಥೆ)
*ನ್ಯಾನೋ ಕಥೆ*
*ಕನ್ನಡ ಓರಾಟಗಾರ*
"ನಮ್ಮ ನಾಡು ನಮ್ಮ ನುಡಿಯ ಬಗ್ಗೆ ನಾವು ಅಭಿಮಾನ ಪಡದಿದ್ದರೆ ಮತ್ಯಾರು ಬರುವರು? ನಮ್ಮ ಭಾಷೆ ಉಳಿಸಲು ಕನ್ನಡ ಪತ್ರಿಕೆಗಳನ್ನು, ಪುಸ್ತಕಗಳನ್ನು ಕೊಂಡು ಓದಬೇಕು.ಕನ್ನಡ ಶಾಲೆಗಳ ಬಲಪಡಿಸಬೇಕು" ಎಂದು ಸಮಾರಂಭದಲ್ಲಿ ಭಾಷಣ ಮಾಡಿದ ರಮೇಶನು ಸನ್ಮಾನ ಸ್ವೀಕರಿಸಿ ಮನೆಗೆ ಬಂದ
"ಅಪ್ಪ ಇಲ್ಲಿದ್ದ ಟೈಮ್ಸ್ ಆಪ್ ಇಂಡಿಯಾ ಪೇಪರ್ ನೋಡಿದೆಯಾ? " ಎಂದು ಮಗಳು ಕೇಳುವ ಹೊತ್ತಿಗೆ ಮಗ "ನಾಳೆ ನಮ್ಮ ಕಾನ್ವೆಂಟ್ ನಲ್ಲಿ ಪೇರೆಂಟ್ಸ್ ಮೀಟಿಂಗ್ ಇದೆ ನೀನು ಮಮ್ಮಿ ಬರಬೇಕಂತೆ " ಅಂದ .
*ಸಿ.ಜಿ ವೆಂಕಟೇಶ್ವರ*

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)