13 ಮಾರ್ಚ್ 2018

ಕೋಮಲೆ (ಹನಿಗವನ)


*ಹನಿಗವನ*
ಕೋಮಲೆ

ಚಿಂತಿಸುತಿಹಳು ಕೋಮಲೆ
ಕಟ್ಡಲಾಗುತ್ತಿಲ್ಲ ಹೂಮಾಲೆ
ಮನದಲೇನೋ ತಲ್ಲಣ
ಬರುವನೇನೋ ಮದನ
ಮನಸು ಹಿಡಿತದಲಿಲ್ಲ
ಆಸೆಯ  ಬಿಡುವಂತಿಲ್ಲ
ಸಿದ್ದಳಾಗಿಹಳು ಕಾತರದಿ
ಕಾಯುತಿಹಳು ಮುದದಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



ಜನನಾಯಕರೆ? (ಕವನ)

*ಜನನಾಯಕರೆ?*

ಓಟಿಗಾಗಿ ನೋಟು ನೀಡಿ
ಕೋಟಿ ನುಂಗಿ ನೀರ ಕುಡಿದು
ತಮ್ಮನುದ್ದರಿಸಿಕೊಳುವ
ಇವರು ನಮ್ಮ ಜನ ನಾಯಕರೆ|೧|

ಜಾತಿ ಧರ್ಮ ಹೆಸರ ಹೇಳಿ
ನಮ್ಮನ್ನೆಲ್ಲ ಎತ್ತಿ ಕಟ್ಟಿ
ತಮ್ಮ ಬೇಳೆ ಬೇಯಿಸಿಕೊಳ್ಳುವ
ಇವರು ನಮ್ಮ  ಜನ ನಾಯಕರೆ|೨|

ಕಾಡಿ ಬೇಡಿ ಮತವ ಪಡೆದು
ಕೈಗೆ ಸಿಗದೆ ಓಡಿ ಹೋಗಿ
ಹೊರೆಯಾಗಿ ನಮ್ಮ ಕಾಡುವ
ಇವರು ನಮ್ಮ ಜನ ನಾಯಕರೆ|೩|

ಸುಳ್ಳು ಪೊಳ್ಳು ಆಸೆ ತೋರಿ
ಮಳ್ಳರಾಗಿ ಮೋಸ ಮಾಡಿ
ಮತಕ್ಕಾಗಿ ಕಾಲುಹಿಡಿವ
ಇವರು ನಮ್ಮ ಜನನಾಯರೆ|೪|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

12 ಮಾರ್ಚ್ 2018

ವರ (ಹನಿಗವನ)

ಹನಿಗವನ

*ವರ*

ಅವಳು  ಬೇಡಿದಳು
ದೇವರಲಿ ಒಂದು
ವರ
ಇಲ್ಲದೇ
ಸ್ವಯಂವರ
ಕರುಣಿಸಲು ಒಳ್ಳೆಯ
ವರ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೨೯ (ಬಲ್ಲೆಯಾ?) ಕವಿ ಬಳಗ ವಾಟ್ಸಪ್ ಗುಂಪಿನ ಸ್ಪರ್ಧೆಯ ಲ್ಲಿ ಗಮನಾರ್ಹ ಉಲ್ಲೇಖ ಪುರಸ್ಕೃತ ಗಜ಼ಲ್

ಗಜ಼ಲ್ ೨೮ (ಬಲ್ಲೆಯಾ?)

ಅವಳು ಎಂದರೆ ಪ್ರಕೃತಿಯ ಶಕ್ತಿಯೆಂದು ಬಲ್ಲೆಯಾ
ಆದಿ ಅಂತ್ಯದ  ನಿಯಾಮಕಳೆಂದು ಬಲ್ಲೆಯಾ

ಹೆತ್ತು ಹೊತ್ತು ತುತ್ತ ನೀಡಿ ಪೊರೆಯುವವಳು
ನಮ್ಮಲ್ಲಿರುವ ಸರ್ವ ಶಕ್ತಿಯ ಮೂಲವೆಂದು ಬಲ್ಲೆಯಾ

ಬ್ರಹ್ಮ ವಿಷ್ಣು ರುದ್ರರ ಮಾತೆಯಾಗಿಹಳು  ಅವಳು
ಸೃಷ್ಟಿ ಸ್ತಿತಿ ಲಯಗಳ ಕಾರಣಳಾದವಳೆಂದು ಬಲ್ಲೆಯಾ

ಗಾಳಿ ನೀರು ಮಣ್ಣಿನ ಕಣಗಳು ಅಂಶ ಅವಳು
ನಮ್ಮುಸಿರಿನ ಮೂಲ ಪ್ರಕೃತಿ ಮಾತೆಯೆಂದು ಬಲ್ಲೆಯಾ

ಜೋಡಿಯಿರದ ಬದುಕು ಇರುವುದುಂಟೆ ಜಗದಿ
ಸೀಜೀವಿಯ ಮನಗೆದ್ದ ನಲ್ಲೆ ಇವಳೆಂದು ಬಲ್ಲೆಯಾ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


11 ಮಾರ್ಚ್ 2018

ಪರಮಾತ್ಮನಲಿ ಮನಸಿಡು (ಆಧ್ಯಾತ್ಮಿಕ ಕವನ)

*ಪರಮಾತ್ಮನಲಿ ಮನಸಿಡು*

ಇನ್ನೆಷ್ಟು ಕಾಲ ಬಿದ್ದು ಒದ್ದಾಡುವೆ
ಎದ್ದು ಆತ್ಮವನುದ್ದರಿಸಿಕೋ
ಸ್ವಾರ್ಥ ಲೋಭಗಳ ಬಿಡು
ಜಗದ ಜಂಜಡವ ಬಿಡು
ಸಿಧ್ಧಿಯೆಡೆಗೆ ಮನಸಿಡು|೧|

ಕಾಮದ ಬಲೆಯಲಿ ಸಿಲುಕಿ
ಬಿಡಿಸಿಕೊಳ್ಳದೆ ನಲುಗಿ
ಇಂದ್ರಿಯ ಸುಖದಿ ಮುಳುಗಿ
ಅಂಧನಾಗುವುದ ಬಿಡು
ಭಗವಂತನಲಿ ಮನಸಿಡು|೨|

ಕ್ರೋಧದಿಂದಲಿ  ಎಗರಾಡಿ
ಮಾಡಿಕೊಂಡು ಜೀವನ ರಾಡಿ
ಮತ್ಸರದಿಂದಲಿ  ಬಡಿದಾಡಿ
ಕತ್ತಿ ಮಸೆಯುವುದ ಬಿಡು
ಸರ್ವಶಕ್ತನಲಿ  ಮನಸಿಡು|೩|

ಮೋಹದಿ ಮೈಮರೆತು
ನಾನು ನನದೆಂದು ಅಬ್ಬರಿಸಿ
ಲೌಕಿಕವೆ ದಿಟವೆಂದು ತಿಳಿದು
ಮರುಳಾಗುವುದ ಬಿಡು
ಪರಮಾತ್ಮನಲಿ  ಮನಸಿಡು|೪|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*