ಕಿರು ಕಥೆ
*ಕರ್ತವ್ಯ*
ರವಿಗೆ ಮೈ ಸುಟ್ಟು ಹೋಗುವ ಜ್ವರ ಬಂದು ಜ್ವರದ ಬಾದೆಗೆ ಏನೇನೋ ಮಾತನಾಡಿ ಅವನ ತಾಯಿಯನ್ನು ಮತ್ತು ಕುಟುಂಬ ಸದಸ್ಯರು ಗೊಂದಲಕ್ಕೀಡುಮಾಡಿ ಎಲ್ಲರಿಗೂ ಚಿಂತೆಯಾಯಿತು.ತನ್ನ ತಂದೆಯೇ ದೊಡ್ಡ ಖಾಸಗಿ ನರ್ಸಿಂಗ್ ಹೊಂ ಒಡೆಯನಾದರೂ ಇಂದು ಆಸ್ಪತ್ರೆಗೆ ಬೀಗ ಜಡಿದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ದೂರದ ನಗರದಲ್ಲಿ ಮುಷ್ಕರದಲ್ಲಿ ನಿರತರಾಗಿದ್ದಾರೆ. ಸಾಲದೆಂಬಂತೆ ಬೇರೆ ರೋಗಿಗಳು ತೊಂದರೆ ಕೊಡುವರೆಂದು ಮೊಬೈಲ್ ಸ್ವಿಚ್ ಆಪ್ ಮಾಡಿದ್ದಾರೆ. ಮನೆ ಮಂದಿ ಪ್ರಯತ್ನ ಪಟ್ಟು ಸರ್ಕಾರಿ ಆಸ್ಪತ್ರೆಗೆ ಹೋದರೆ ಕಾಲಿಡಲು ಜಾಗವಿಲ್ಲ .ಕೊನೆಗೆ ರವಿಯ ತಾಯಿ ೫ ರೂಪಾಯಿ ಪಡೆದು ಚಿಕಿತ್ಸೆ ನೀಡುವ ಸುರೇಶ್ ಡಾಕ್ಟರ್ ಹತ್ತಿರ ಮಗನನ್ನು ಕರೆದುಕೊಂಡು ಹೋಗಲು ನಿರ್ಧರಿಸಿದಳು ಅದರೆ ಮನಸು ಹಿಂಜರಿಕೆ ಮಾಡಿತು ಕಾರಣ ೩ ತಿಂಗಳ ಹಿಂದೆ ತನ್ನ ಪತಿ ಈ ಡಾಕ್ಟರ್ ಮೇಲೆ ರೌಡಿಗಳಿಂದ ಹಲ್ಲೆ ಮಾಡಿಸಿ ಪಟ್ಟಣದಿಂದ ಓಡಿಸಲು ಪ್ರಯತ್ನಿಸಿದರೂ ಜಗ್ಗದೇ ಅವರ ೫ ರೂ ವೈದ್ಯ ಸೇವೆ ಮುಂದುವರೆಸಿದ್ದರು .ಕೊನೆಗೆ ಧೈರ್ಯ ಮಾಡಿ ಸುರೇಶ್ ಡಾಕ್ಟರ್ ಹತ್ತಿರ ಮಗನನ್ನು ಕರೆದುಕೊಂಡು ಹೋದಾಗ ಡಾಕ್ಟರ್ ಹಿಂದಿನದನ್ನು ಮರೆತು ರವಿಗೆ ಚಿಕಿತ್ಸೆ ನೀಡಿದರು.
ರವಿಯ ತಾಯಿಯ ಕಣ್ಣಲ್ಲಿ ನೀರು ಬಂದು ಡಾಕ್ಟರ್ ಗೆ ಧನ್ಯವಾದಗಳನ್ನು ಅರ್ಪಿಸಿ ನೀವು ನನ್ನ ಮಗನ ಪಾಲಿನ ದೇವರೆಂದರು .ಸುರೇಶ್ ಡಾಕ್ಟರ್ ಶಾಂತವಾಗಿ ನನ್ನ *ಕರ್ತವ್ಯ*ನಾನು ಮಾಡಿದ್ದೇನೆ ಎಂದರು.
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments:
Post a Comment