ಸೋತೆನೆಂದು ಯೋಚಿಸುತಾ
ಪಡದಿರು ಎಂದಿಗೂ ಭಯ|
ಸತತ ಪ್ರಯತ್ನ ಮಾಡುತಲಿರು
ಕೊನೆಗೆ ನಿನ್ನದಾಗಲಿದೆ ಜಯ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಮಹಲ್ಲು
ಎಸೆಯುವರು ವಿರೋಧಿಗಳು ನಿನ್ನೆಡೆಗೆ ಆಳಿಗೊಂದು ಕಲ್ಲು। ಅವುಗಳನೇ ಬಳಸಿಕೊಂಡು ನಿರ್ಮಾಣಮಾಡು ಮಹಲ್ಲು||
©ಸಿಹಿಜೀವಿ ವೆಂಕಟೇಶ್ವರ
ಚಪ್ಪಾಳೆ..
ಭಾರತಕ್ಕೆ ಮೂರನೇ
ಕಂಚು ತಂದಿದ್ದಾರೆ
ಸ್ವಪ್ನಿಲ್ ಕುಸಾಳೆ|
ಭಾರತೀಯರೆಲ್ಲರೂ
ಸಂತಸದಿಂದದಲಿ
ತಟ್ಟೋಣ ಚಪ್ಪಾಳೆ||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಕಂಚಿನಮಿಂಚು
ಒಲಿಂಪಿಕ್ ಶೂಟಿಂಗ್ ನಲ್ಲಿ
ಪದೇ ಪದೇ ಕಾಣುತ್ತಿದೆ ಮಿಂಚು|
ಮನು ಸರಬ್ಜೋತ್ ಜೋಡಿ
ಭಾರತಕ್ಕೆ ತಂದಿದೆ
ಮತ್ತೊಂದು ಕಂಚು||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529