ಕಪ್ ನಮ್ದೆ .
೧
ಗೆಲುವಿನ ಬಳಿ ಸಾರಿ
ಮುಗ್ಗುರಿಸುತ್ತಿತ್ತು ಸತತ|
ಈ ಬಾರಿ ವಿಶ್ವಕಪ್ ಕಿರೀಟ
ಧರಿಸಿ ಬೀಗಿದೆ ಭಾರತ||
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಕಪ್ ನಮ್ದೆ .
೧
ಗೆಲುವಿನ ಬಳಿ ಸಾರಿ
ಮುಗ್ಗುರಿಸುತ್ತಿತ್ತು ಸತತ|
ಈ ಬಾರಿ ವಿಶ್ವಕಪ್ ಕಿರೀಟ
ಧರಿಸಿ ಬೀಗಿದೆ ಭಾರತ||
ಮಾನವೀಯ ಮೌಲ್ಯಗಳು
ಇಂದಿನ ಆಧುನಿಕ ಪ್ರಪಂಚದಲ್ಲಿ ಚಾರ್ವಾಕ ಸಂಸ್ಕೃತಿಯ ಪರಿಣಾಮವಾಗಿ ಭೌತಿಕ ಸುಖ ಸಂತೋಷಕ್ಕೆ ಹೆಚ್ಚು ಮಾನ್ಯತೆ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ.ಮಾನವೀಯ ಮೌಲ್ಯಗಳು ಮತ್ತು ನೈತಿಕತೆ ಕುಸಿತವಾಗುತ್ತಿವೆ. ಹೀಗೆಯೇ ಮುಂದುವರೆದರೆ ಮುಂದಿನ ಸಮಾಜವನ್ನು ಊಹಿಸಲು ಸಾಧ್ಯವಿಲ್ಲ.
ಮಾನವನು ಬದುಕಬೇಕೆಂದಾದರೆ ಪ್ರತಿ ನಿತ್ಯವೂ ಉತ್ತಮ ಆಹಾರ ಸೇವನೆ ಮಾಡಬೇಕು. ಬದುಕು ಸಾಗಿಸಬೇಕೆಂದರೆ ಕೇವಲ ಆಹಾರ ಮಾತ್ರ ಸಾಕಾಗುವುದಿಲ್ಲ. ಶರೀರದ ಮೇಲೆ ಉನ್ನತ ಸ್ತರದ ಉಡುಗೆ ತೊಡುಗೆಗಳೂ, ಆಕರ್ಷಕವಾದ ಮುತ್ತು, ರತ್ನ, ಬೆಳ್ಳಿ, ಬಂಗಾರ, ವಜ್ರ, ವೈಢೂರ್ಯದ ಆಭರಣಗಳೂ ಇರಬೇಕೆಂದು ಬಯಸುತ್ತಾರೆ. ಆದರೆ ವಾಸ್ತವದಲ್ಲಿ ಮುತ್ತು, ರತ್ನ, ವಜ್ರ, ವೈಢೂರ್ಯಗಳಿಂದಲೂ ಶ್ರೇಷ್ಠವಾದುದು ಮಾನವೀಯತೆ ಮತ್ತು ಮಾನವೀಯ ಮೌಲ್ಯಗಳು ಹಾಗೂ ನೈತಿಕತೆ ಎಂಬುದನ್ನು ನಿರೂಪಿಸುವ ಒಂದು ಪ್ರಸಂಗ ಹೀಗಿದೆ.
ಮಧ್ಯಪ್ರಾಚ್ಯದ ಸುಪ್ರಸಿದ್ಧ ನಗರವಾದ ಬಗ್ದಾದ್ನ ಆಡಳಿತಗಾರನನ್ನು ಖಲೀಫರೆಂದು ಕರೆಯುತ್ತಾರೆ. ಈ ಖಲೀಫರ ಬಳಿ ಒಬ್ಬ ಗುಲಾಮನಿದ್ದ. ನೋಡಲು ಅತ್ಯಂತ ಕುರೂಪಿಯಾಗಿದ್ದ. ಈ ಗುಲಾಮನ ಹೆಸರು ಹಾಶಮ್. ಏನೇನೂ ಆಕರ್ಷಣೆಯಿಲ್ಲದ ಈತನ ಬಗ್ಗೆ ಇತರ ಗುಲಾಮರು ನಕ್ಕು ತಮಾಷೆ ಮಾಡುತ್ತಿದ್ದರು. ಆದರೆ ಅತ್ಯಂತ ಬಡವನಾಗಿದ್ದ ಹಾಶಮ್, ಅವರ ತಮಾಷೆಯನ್ನು ಲೆಕ್ಕಿಸದೆ, ತನ್ನಷ್ಟಕ್ಕೆ ತಾನೇ ಇರುತ್ತಿದ್ದ ಹಾಗೂ ಖಲೀಫರ ಬಗ್ಗೆ ಸ್ವಾಮಿ ಭಕ್ತಿಯುಳ್ಳವನಾಗಿದ್ದ.
ಅವರ ಎಲ್ಲ ಆಜ್ಞೆಗಳನ್ನು ನಿಷ್ಠೆಯಿಂದ ಪಾಲಿಸುತ್ತಿದ್ದ. ಒಂದು ಸಲ ಈ ಖಲೀಫರು ಒಂದು ಕುದುರೆ ಗಾಡಿಯನ್ನೇರಿ, ನಗರ ಸಂಚಾರಕ್ಕೆ ಹೊರಟಿದ್ದರು. ಹಿಂದಿನಿಂದ ಹಿಂಬಾಲಿಸುತ್ತಿದ್ದ ಗುಲಾಮರ ಜತೆಗೆ ಹಾಶಮನೂ ಇದ್ದನು. ಅಕಸ್ಮಾತ್ತಾಗಿ ದಾರಿಯಲ್ಲಿ ಖಲೀಫರ ಕುದುರೆಯ ಕಾಲು ಕೆಸರಲ್ಲಿ ಜಾರಿಬಿಟ್ಟಿತು.
ಆ ಖಲೀಫರ ಕೈಯಲ್ಲಿ ಮುತ್ತು, ವಜ್ರಗಳುಳ್ಳ ಒಂದು ಪೆಟ್ಟಿಗೆಯಿತ್ತು. ಕುದುರೆಯ ಕಾಲು ಜಾರಿದಾಗ, ಖಲೀಫರ ಕೈ ನಡುಗಿ ವಜ್ರದ ಪೆಟ್ಟಿಗೆಯೂ ಜಾರಿ ಉರುಳಿತು. ಮುತ್ತು, ವಜ್ರಗಳು ಚೆಲ್ಲಾಪಿಲ್ಲಿಯಾಗಿ ರಸ್ತೆಯ ಮೇಲೆ ಬಿದ್ದವು. ಇದನ್ನು ಕಂಡು ಖಲೀಫರು ತಮ್ಮ ಗುಲಾಮರೊಡನೆ 'ರಸ್ತೆಯಲ್ಲಿ ಬಿದ್ದ ಮುತ್ತು, ವಜ್ರಗಳನ್ನು ಆರಿಸಿಕೊಳ್ಳಿ. ಅವು ನಿಮ್ಮದೆಂದೇ ಭಾವಿಸಿ ಆರಿಸಿಕೊಳ್ಳಿರಿ' ಎಂದಾಗ, ಎಲ್ಲರೂ ರಸ್ತೆಯಿಂದ ಆರಿಸಿ, ಸಂತೋಷಪಟ್ಟರು.
ಆದರೆ ಹಾಶಮ್ ಖಲೀಫರ ಬಳಿಯೇ ನಿಂತಿದ್ದ. ಖಲೀಫರು ಅವನೊಡನೆ ''ನೀನೇಕೆ ಅಮೂಲ್ಯ ಮುತ್ತು, ವಜ್ರಗಳನ್ನು ಆರಿಸಿಕೊಂಡಿಲ್ಲ?,'' ಎಂದು ಪ್ರಶ್ನಿಸಿದರು. ಆಗ ಹಾಶಮ್ ನುಡಿದ ''ನನ್ನ ಮಟ್ಟಿಗೆ ಅಮೂಲ್ಯ ವಜ್ರವೆಂದರೆ ತಾವೇ ಆಗಿದ್ದೀರಿ. ಹಾಗಿರುವಾಗ ತಮ್ಮನ್ನು ಬಿಟ್ಟು ನಾನೆಂತು ಹೋದೇನು?,''
ಹಾಶಮನ ಉತ್ತರ ಕೇಳಿ ಪ್ರಸನ್ನರಾದ ಖಲೀಫರು ಬಹು ಸಂತುಷ್ಟರಾಗಿ, ತಕ್ಷ ಣವೇ ಹಾಶಮ್ನನ್ನು ಗುಲಾಮಗಿರಿಯಿಂದ ಬಿಡುಗಡೆ ಮಾಡಿಬಿಟ್ಟರು. ಅನಿರೀಕ್ಷಿತವಾಗಿ ಹಾಶಮನಿಗೆ ಬಹುಶ್ರೇಷ್ಠ ಬಹುಮಾನ ದೊರಕಿತ್ತು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಕಾಡಿದ ಗಜಲ್
ಅರವಳಿಕೆ ತಜ್ಞರು,ಗಜಲ್ ಕಾರರಾದ ಡಾ ಗೋವಿಂದ ಹೆಗಡೆರವರು ನನ್ನ ಗಜಲ್ ಗುರುಗಳು.
ನನ್ನ ಗಜಲ್ ಗುರುಗಳ ಎಲ್ಲಾ ಗಜಲ್ ಗಳು ಇಂದಿಗೂ ನನ್ನ ಕಾಡಿವೆ ಕಾಡುತ್ತಲಿವೆ.
ಹೀಗೆ ಅತಿಯಾಗಿ ಕಾಡಿದ ಗಜಲ್ ಇದು.
*ಗಜಲ್*
ಇರುವೆಯ ಇರುವು ಗಮನಕ್ಕೇ ಬರುವುದಿಲ್ಲ
ಗೆದ್ದ ಎತ್ತನ್ನೇ ಹಿಂಬಾಲಿಸುವುದು ಜಗವೆಲ್ಲ
ಅಳಿಲನ್ನು ಗುರುತಿಸಲು ರಾಮನಿಗಷ್ಟೇ ಸಾಧ್ಯ
ಲೋಕಕ್ಕೆ ಅಷ್ಟೆಲ್ಲ ಪುರುಸೊತ್ತು ಇರುವುದಿಲ್ಲ
ತಮ್ಮ ಪುಂಗಿಯನ್ನು ಊದುತ್ತಲೇ ಇರುತ್ತಾರೆ
ನಿಶ್ಶಬ್ದ ಗೈಮೆಯನ್ನು ಯಾರೂ ಕೇಳುವುದಿಲ್ಲ
ಮೊಳಕೆ ತೆನೆಯಾಗಿ ಊಡುತ್ತಲೇ ಇರುತ್ತದೆ
ಹೊಟ್ಟೆ ತುಂಬಿದರಾಯ್ತು- ಬೇರೆ ಪರಿವೆಯಿಲ್ಲ
ಲೋಕದ ಡೊಂಕಿಗೆ ಕಣ್ಮುಚ್ಚು 'ಜಂಗಮ'
'ತನು, ಮನವ ಸಂತೈಸು' - ಹಿರಿಯರಿಗೆ ಎದುರಿಲ್ಲ
★ ಡಾ. ಗೋವಿಂದ ಹೆಗಡೆ
ಜಗತ್ತೇ ಹಾಗೆ ದೊಡ್ಡದು, ದೊಡ್ಡವರು, ಸಿರಿವಂತರು ,ಉಳ್ಳವರ ಕಂಡರೆ ಅತಿಯಾದ ಆದರ ಮತ್ತು ಅಭಿಮಾನ. ಚಿಕ್ಕದು, ಬಡವರ ಕಂಡರೆ ಎನೋ ತಾತ್ಸಾರ.ಅಲಕ್ಷ್ಯ.
ಗಜಲ್ ಕಾರರಾದ ಗೋವಿಂದ ಹೆಗಡೆರವರು ಇದೇ ಆಶಯದಲ್ಲಿ ಇರುವೆಯ ಇರವು ಯಾರ ಗಮನಕ್ಕೂ ಬರುವುದಿಲ್ಲ. ನಾವೆಲ್ಲರೂ ದೊಡ್ಡದಾದ ವಸ್ತು, ಪ್ರಾಣಿಗಳ ಕಡೆ ಗಮನಹರಿಸಿ ಗೆದ್ದೆತ್ತಿನ ಬಾಲ ಹಿಡಿಯುವವರು ಎಂದು ನಮ್ಮ ಗುಣಗಳ ಎತ್ತಿ ಹಿಡಿಯುತ್ತಾ ಮತ್ಲಾದಲ್ಲಿ ನವಿರಾದ ಚಾಟಿ ಬೀಸಿದ್ದಾರೆ.
ಎರಡನೇ ಶೇರ್ ನಲ್ಲಿ ರಾಮಾಯಣದ ಹಿನ್ನೆಲೆಯಲ್ಲಿ
ಸೀತಾ ಮಾತೆಯ ಬಂಧನದಿಂದ ಬಿಡಿಸಲು ಅಳಿಲೂ ಸಹ ತನ್ನದೇ ಚಿಕ್ಕ ಸಹಾಯ ಮಾಡಿದ್ದನ್ನು ಶ್ರೀರಾಮರು ಗುರ್ತಿಸಿದ್ದರು.ಚಿಕ್ಕವರ ಚಿಕ್ಕ ಸಹಾಯವನ್ನು ಗುರ್ತಿಸುವುದು ದೊಡ್ಡ ಮನಸ್ಸಿನ ರಾಮನಿಗೆ ಮಾತ್ರ ಸಾಧ್ಯ. ಅಂತಹ ವಿಶಾಲ ಮನಸ್ಸು ನಮ್ಮದಾಗಬೇಕಿದೆ ಎಂಬ ಭಾವ ನನಗೆ ಬಹಳ ಹಿಡಿಸಿತು.
ಮೂರನೇ ಶೇರ್ ನಲ್ಲಿನ ಆಶಯ ಎಂತವರನ್ನು ಚಿಂತನೆಗೆ ಹೆಚ್ಚುತ್ತದೆ.
ನಾವೆಲ್ಲರೂ ಮೂಲತಃ ಹೊಗಳಿಕೆ ಪ್ರಿಯರು.ಬಸವಣ್ಣನವರು ನನ್ನ ಹೊಗಳಿ ಹೊನ್ನ ಶೂಲಕ್ಕೇರಿಸಬೇಡಿ ಎಂದು ಕರೆ ಕೊಟ್ಟು ನಮಗೆ ಬುದ್ದಿ ಹೇಳಿದರೂ ನಾವು ಮಾತ್ರ ಹೊಗಳಿಕೆಗೆ ಹಾತೊರೆವ ಜನರು. ಯಾರೂ ಹೊಗಳದಿದ್ದರೂ ತಮ್ಮ ಬೆನ್ನ ತಾವೇ ತಟ್ಟಿಕೊಳ್ಳುವ ಮಹನೀಯರು ಮತ್ತೊಂದು ಕಡೆ.ಇಂತಹವರ ನಡುವೆ ಸುಮ್ಮನೇ ತಮ್ಮ ಪಾಡಿಗೆ ತಾವು ಕಾಯಕ ನಿರತರಾದ ಅಸಂಖ್ಯ ಜೀವಗಳಿವೆ.ಅವರನ್ನು ಗೌರವಿಸೋಣ ಅಂತವರು ನಮಗೆ ಆದರ್ಶವಾಗಲಿ ಎಂಬ ಸಾಲುಗಳು ಅರ್ಥಪೂರ್ಣವಾಗಿವೆ.
ನಾಲ್ಕನೇ ಶೇರ್ ನಲ್ಲಿ ಒಂದು ಕಾಳಾಗಲು ಅದು ಮೊಳಕೆಯಿಂದ ಹೇಗೆ ಹಂತ ವಾಗಿ ಬೆಳೆದು ಹಾರೈಕೆಹೊಂದಿ ಒಂದು ರುಪ ತಾಳಿ ನಮ್ಮ ಹೊಟ್ಟೆ ತಣಿಸಲು ಸಿದ್ದವಾಗುತ್ತದೆ. ಆದರೆ ತಿನ್ನುವವರಿಗೆ ಇದಾವುದರ ಪೂರ್ವಾಪರ ಪರಿಚಯ ಬೇಕಿರುವುದಿಲ್ಲ ಅವರಿಗೆ ಹೊಟ್ಟೆ ತುಂಬಿದರಾಯಿತು ಅಷ್ಟೇ.
ಮುಕ್ತಾದಲ್ಲಿ ಹೆಗಡೆರವರು ಅವರಿವರ ದುರ್ಗುಣಗಳ ಬದಲಾಯಿಸಲು ಪ್ರಯತ್ನ ಮಾಡುವುದು ಗೋರ್ಕಲ್ಲ ಮೇಲೆ ನೂರ್ಕಾಲ ಮಳೆ ಸುರಿದಂತೆ ಎಂಬ ಮಾತಿನಂತೆ ತಮ್ಮ ಶೇರ್ ನಲ್ಲಿ ಲೋಕದ ಡೊಂಕಿಗೆ ಕಣ್ಮುಚ್ಚು ಜಂಗಮ
ತನು, ಮನವ ಸಂತೈಸು ಹಿರಿಯರಿಗೆ ಎದುರಿಲ್ಲ ಎಂದು ಮಾರ್ಮಿಕವಾಗಿ ಅಭಿವ್ಯಕ್ತಿಸಿದ್ದಾರೆ.
ಒಟ್ಟಾರೆ ಗೋವಿಂದ ಹೆಗಡೆರವರ ಈ ಗಜಲ್ ನನ್ನ ಕಾಡಿದೆ.ಅವರ ಮುಂದಿನ ಗಜಲ್ ಓದಲು ಕಾತನಾಗಿರುವೆ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
[06/06, 8:59 am] ಸಿಹಿಜೀವಿ ವೆಂಕಟೇಶ್ವರ: ಕುಣಿಗಲ್ ನುಡಿತೋರಣ ಸಮ್ಮೇಳನದಲ್ಲಿ ಸಿ ಬಿ ಶೈಲಾ ಜಯಕುಮಾರ್ ಮೇಡಂ ರವರಿಗೆ ನನ್ನ "ನನ್ನಮ್ಮ ನಮ್ಮೂರಿನ ಫ್ಲಾರೆನ್ಸ್ ನೈಟಿಂಗೇಲ್" ಪುಸ್ತಕ ನೀಡಿದ್ದೆ. ಪುಸ್ತಕ ಓದಿ ಮೆಚ್ಚುಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಧನ್ಯವಾದಗಳು🙏🙏 ಮೇಡಂ...
ನೀವು ಕೂಡಾ ಅವರ ಈ ಲೇಖನ ಓದಿ..
[06/06, 8:59 am] ಸಿಹಿಜೀವಿ ವೆಂಕಟೇಶ್ವರ: ಕೃತಿ- ನನ್ನಮ್ಮ ನಮ್ಮೂರಿನ ಫ್ಲಾರೆನ್ಸ್ ನೈಟಿಂಗೇಲ್
ಕರ್ತೃ- ಸಿ ಜಿ ವೆಂಕಟೇಶ್ವರ
ಮೊದಲ ಮುದ್ರಣ-೨೦೨೧
ದ್ವಿತೀಯ ಮುದ್ರಣ- ೨೦೨೨
ಪುಟಗಳು- ೦೪+೧೦೪
ಬೆಲೆ- ₹೧೨೦/-
ಸಿಹಿಜೀವಿ ಪ್ರಕಾಶನ,ಗೋಕುಲ ಬಡಾವಣೆ, ತುಮಕೂರು.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚೌಡಗೊಂಡನಹಳ್ಳಿಯ ರೈತ ಕುಟುಂಬದ ಸಿ ಜಿ ವೆಂಕಟೇಶ್ವರ ಪ್ರೌಢಶಾಲೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಕವನ, ಕಥೆ, ಪ್ರಬಂಧ, ಲೇಖನ, ಅಂಕಣಗಳು ಪ್ರಕಟವಾಗಿವೆ. ರಂಗಭೂಮಿಯ ಕಲಾವಿದರೂ ಹೌದು.
ಸಾಲು ದೀಪಾವಳಿ ( ಕವನ ಸಂಕಲನ) ಸಿಹಿಜೀವಿಯ ಗಜಲ್( ಗಜಲ್ ಸಂಕಲನ) ಇವರ ಪ್ರಕಟಿತ ಕೃತಿಗಳು. ಕಾವ್ಯ ಚಿಂತಾಮಣಿ ರಾಜ್ಯ ಪ್ರಶಸ್ತಿ ಪುರಸ್ಕೃತರು ಕೂಡ.
ವೆಂಕಟೇಶ್ವರ ಅವರ ಮೂರನೇ ಕೃತಿ 'ನನ್ನಮ್ಮ ನಮ್ಮೂರಿನ ಫ್ಲಾರೆನ್ಸ್ ನೈಟಿಂಗೇಲ್'. ವಿವಿಧ ಪತ್ರಿಕೆಗಳಿಗಾಗಿ ಬರೆದಿರುವ ಮೂವತ್ತೈದು ಪ್ರಬಂಧ ಮಾದರಿಯ ಗದ್ಯ ಬರಹಗಳಿವೆ.
ಬರವಣಿಗೆ ನನ್ನ ಜೀವನದ ಅವಿಭಾಜ್ಯ ಅಂಗವೆನ್ನುವ ವೆಂಕಟೇಶ್ವರ ಅವರಿಗೆ ಬದುಕಿನ ಅನುಭವವೇ ಅಭಿವ್ಯಕ್ತಿ ಮೂಲ! ಸಮಾಜದಲ್ಲಿ ಕಾಣುವ ಧನಾತ್ಮಕ ಹಾಗೂ ಋಣಾತ್ಮಕ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದನ್ನು ಬರಹ ರೂಪದಲ್ಲಿ ಇಲ್ಲಿ ದಾಖಲಿಸಿದ್ದಾರೆ. ಆತ್ಮಸಂತೋಷಕ್ಕಾಗಿ ಬರೆದ ಬರಹಗಳೂ ಇಲ್ಲಿವೆ.
ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು, ತಾಯಿಯ ಆರೈಕೆಯಲ್ಲಿ , ಬಡತನದಲ್ಲೇ ಬೆಳೆದ ವೆಂಕಟೇಶ್ವರ ಅವರಿಗೆ ತಮ್ಮ ಅಮ್ಮನ ಬಗ್ಗೆ ಅಪಾರ ಗೌರವ, ಪ್ರೀತಿಯಿದೆ. ಅಲ್ಲದೆ ಆ ತಾಯಿಯೂ ಸಹನಾಮಯಿ! ಹೊಲದಲ್ಲಿ ಗೇದು ಬಂದರೂ ದಣಿವರಿಯದೆ ಇತರರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರೆಂದೂ, ತಡ ರಾತ್ರಿಯಲ್ಲೂ ಸೂಲಗಿತ್ತಿಯ ಕಾರ್ಯ ನಿರ್ವಹಿಸಲು ತೆರಳಿತ್ತಿದ್ದರೆಂದು ಲೇಖಕರು ಬರೆಯುತ್ತಾರೆ.
ಗೆಳೆಯರಿಬ್ಬರು ಮಾತನಾಡುವಾಗ , "ನನ್ನ ಬಳಿ ಮೂರು ಬೆಲೆ ಬಾಳುವ ಬಂಗ್ಲೆಗಳು, ನಾಲ್ಕು ದುಬಾರಿ ಕಾರುಗಳು, ಅಪಾರ ಬ್ಯಾಂಕ್ ಬ್ಯಾಲೆನ್ಸ್ ಇದೆ, ನಿನ್ನ ಬಳಿ ಏನಿದೆ? " ಒಬ್ಬ ಪ್ರಶ್ನಿಸಿದ. ಮತ್ತೊಬ್ಬನೆಂದ, "ನನ್ನ ಬಳಿ ತಾಯಿಯಿದ್ದಾಳೆ". ತಾಯಿಯೇ ಎಲ್ಲವುದಕ್ಕಿಂತ ಮಿಗಿಲು ಎನ್ನುವ ಭಾವವಿಲ್ಲಿದೆ.
ಲೌಕಿಕ ಆಡಂಬರಕ್ಕಿಂತ "ತಾಯಿಯೇ ಎಲ್ಲವೂ" ಎನ್ನುವ ವೆಂಕಟೇಶ್ವರ ಅವರು "ನನ್ನ ದೇವತೆ ನನ್ನೊಂದಿಗಿರುವುದು ನನ್ನ ಹೆಮ್ಮೆ" ಎನ್ನುತ್ತಲೇ ಈ ಪುಸ್ತಕವನ್ನು ತಾಯಿ ಶ್ರೀದೇವಮ್ಮನಿಗೆ ಅರ್ಪಿಸಿದ್ದಾರೆ. ತಾಳ್ಮೆಯ ಪ್ರತಿರೂಪದಂತಿರುವ ಮಗಳನ್ನೂ ತಾಯಿಯೆಂದೇ ಗೌರವಿಸುತ್ತಾರೆ.
ಇಂತಹದೊಂದು ಅಮೂಲ್ಯ ಮೌಲ್ಯ ನಮ್ಮ ವರ್ತಮಾನದ ಪೀಳಿಗೆಯಲ್ಲಿ ಬೆಳೆಯಬೇಕಿದೆ.
ಕೋಟ್ಯಾಧೀಶನೆಂದರೆ ಕೋಟಿಗಟ್ಟಲೆ ದುಡ್ಡಿರುವವ ಎಂದಲ್ಲ; ರಾತ್ರಿಯಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡುವವ ಎನ್ನುವ ಇವರ ವ್ಯಾಖ್ಯಾನ ಖುಷಿ ಕೊಡುತ್ತದೆ.
ಈ ಬರಹಗಳಲ್ಲಿ ಗಂಭೀರ ವಿಷಯಗಳಿಗಿಂತ ಹೆಚ್ಚಾಗಿ ಗಂಭೀರ ಮನಸ್ಥಿತಿಯಿದೆ, ಕರ್ತವ್ಯ ಪ್ರಜ್ಞೆಯಿದೆ, ಯುವಕರಿಗೆ ಕಿವಿ ಮಾತುಗಳಿವೆ, ನೆನಪುಗಳಿವೆ, ವಿದ್ಯಾರ್ಥಿ ಚಿಂತನೆಗಳಿವೆ, ಸದಾಶಯಗಳಿವೆ, ಮಾನವೀಯ ತುಡಿತಗಳಿವೆ.
ಸಾಮಾಜಿಕ ಜಾಲತಾಣಗಳ ಪ್ರಭಾವ, ಮತ ಚಲಾವಣೆ ಮತ್ತು ಕೊರೋನಾ ಕಾಲದ ಜವಾಬ್ದಾರಿಗಳನ್ನು ತಿಳಿಸುವ ಲೇಖನಗಳು ಗಮನ ಸೆಳೆಯುತ್ತವೆ.
ಸರಳವಾದ ಬರಹ ಗಹನ ಚಿಂತನೆಗೂ ಅನುವು ಮಾಡಿಕೊಡುತ್ತದೆ.
ನೀವೂ ಓದಿ.
ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.
ಚುಟುಕು
*ಜೀವನ ನಿತ್ಯ ನೂತನ*
ಶಾಶ್ವತವಲ್ಲ ಬಡತನ,ಸಿರಿತನ
ಬೆಳಗಲಿ ಸದಾ ಒಳ್ಳೆಯತನ
ನಮ್ಮ ಜೀವನ ನಿತ್ಯನೂತನ
ಇದನ್ನರಿತು ಬಾಳಲಿ ಸಕಲಜನ
*ಸಿಹಿಜೀವಿ ವೆಂಕಟೇಶ್ವರ*
ತುಮಕೂರು