06 ಏಪ್ರಿಲ್ 2024

ಓದು ವ್ಯಸನವಾಗಲಿ.*.


 



*ಓದು ವ್ಯಸನವಾಗಲಿ.*.


ಯಾವುದೇ ಕಂಪನಿಯ ಮತ್ತು ಸಂಸ್ಥೆಗಳ ಟ್ಯಾಗ್‌ ಲೈನ್ ನಾನು ಬಹಳ ಆಸಕ್ತಿಯಿಂದ ಗಮನಿಸುವೆ.ಆ ಲೈನ್ ಗಳು ಕಡಿಮೆ ಪದದಲ್ಲಿ ಹೆಚ್ಚು ಅರ್ಥಗಳನ್ನು ಧ್ವನಿಸುತ್ತವೆ ಕೆಲವೊಮ್ಮೆ ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.ಇತ್ತೀಚೆಗೆ ಅಂತಹ ಚಿಂತನೆಗೆ ಹಚ್ಚಿದ ಮತ್ತು ನನ್ನ ಸೆಳೆದ ಟ್ಯಾಗ್ ಲೈನ್ "ಚಂದ ಪುಸ್ತಕ " ಪ್ರಕಾಶನ ಸಂಸ್ಥೆಯ ಟ್ಯಾಗ್ ಲೈನ್ "ಓದಿ ಓದಿ  ಮರುಳಾಗಿ!"

ಓದಿನ ಮಹತ್ವ ಕುರಿತಾಗಿ ನೂರಾರು ಪುಸ್ತಕಗಳು ಬಂದಿವೆ ಸಾವಿರಾರು ಉಪನ್ಯಾಸ ‌ಕೇಳಿರುವೆವು. ಅವುಗಳೆಲ್ಲದರ ಸಾರಾಂಶ ಒಂದೇ ಓದು ನಮ್ಮ ಜೀವನಕ್ಕೆ ಮತ್ತು  ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಬಹಳ ಮುಖ್ಯ.

ಜೀವನದಲ್ಲಿ ಉನ್ನತವಾದ ಸಾಧನೆ ಮಾಡಿರುವವರು ಓದಿನ ಮಹತ್ವ ಅರಿತು ಇಂದಿಗೂ ಓದುತ್ತಿದ್ದಾರೆ ಅಂತಹ ಕೆಲ ಮಹನಿಯರ ಓದಿನ ಕ್ರಮ ತಿಳಿಯುವುದಾದರೆ 

 ಹನ್ನೆರಡನೇ ವಯಸ್ಸಿನಲ್ಲಿಯೇ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಶೇರ್ ಮಾರುಕಟ್ಟೆಯ ಶೇರ್ ಎಂದು ಹೆಸರಾದ ವಾರೆನ್ ಬಫೆಟ್  ರವರು ಸತತ ಇಪ್ಪತ್ತು ವರ್ಷಗಳಿಂದ ವಿಶ್ವದ ಟಾಪ್ ಟೆನ್ ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈಗಲೂ ಅವರು ಪ್ರತಿದಿನ ಓದಲು ಹೆಚ್ಚು ಸಮಯ ಕಳೆಯುತ್ತಾರೆ.  ವಾರ್ಷಿಕ ವರದಿಗಳು, ವ್ಯವಹಾರ ಪತ್ರಿಕೆಗಳು ಮತ್ತು ವ್ಯಾಪಕ ಶ್ರೇಣಿಯ ವಿಷಯಗಳ ಪುಸ್ತಕಗಳು, ವಿಶೇಷವಾಗಿ ಹೂಡಿಕೆ ಮತ್ತು ವ್ಯವಹಾರ ನಿರ್ವಹಣೆ ಸೇರಿದಂತೆ ವಿವಿಧ ಪುಸ್ತಕಗಳನ್ನು ಅವರು  ಓದುತ್ತಾರೆ.


 ಅಂತರರಾಷ್ಟ್ರೀಯ ಖ್ಯಾತ ನಿರೂಪಕಿಯಾದ  ಓಪ್ರಾ ವಿನ್ಫ್ರೇ ಅತ್ಯಾಸಕ್ತಿಯ ಓದುಗರಾಗಿರುವರು. ಇವರು ಓದಿದ ಪುಸ್ತಕಗಳ ಬಗ್ಗೆ   ತನ್ನ ಶೋಗಳಲ್ಲಿ  ಅವರು ತನ್ನ ಪ್ರೇಕ್ಷಕರೊಂದಿಗೆ ಪುಸ್ತಕಗಳನ್ನು ಶಿಫಾರಸು ಮಾಡುತ್ತಾರೆ ಮತ್ತು ಚರ್ಚಿಸುತ್ತಾರೆ.  


 ಜಾಗತಿಕ ಶ್ರೀಮಂತರಲ್ಲಿ ಒಬ್ಬರಾದ ಎಲೋನ್ ಮಸ್ಕ್ ಚಿಕ್ಕ ವಯಸ್ಸಿನಿಂದಲೂ ಅತ್ಯಾಸಕ್ತಿಯ ಓದುಗ.  ಅವರು ಬಾಲ್ಯದಲ್ಲಿ ದಿನಕ್ಕೆ 10 ಗಂಟೆಗಳ ಕಾಲ ಓದುತ್ತಿದ್ದೆ ಎಂದು ಸಂದರ್ಶನಗಳಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ  ತಮ್ಮ ವಿಶಾಲವಾದ ಜ್ಞಾನದ ಮೂಲವನ್ನು ಅವರ ವ್ಯಾಪಕವಾದ ಓದುವ ಅಭ್ಯಾಸವೇ  ಕಾರಣವೆಂದು ಹೇಳುತ್ತಾರೆ.


 ಬಿಲ್ ಗೇಟ್ಸ್  ಬಗ್ಗೆ ನಮಗೆಲ್ಲ ತಿಳಿದೇ ಇದೆ ಅವರೊಬ್ಬ ಅತ್ಯಾಸಕ್ತಿಯ ಓದುಗ ಎಂದು ಹೆಸರುವಾಸಿಯಾಗಿದ್ದಾರೆ ಮತ್ತು ಆಗಾಗ್ಗೆ ಅವರ ಓದಿದ ಪುಸ್ತಕಗಳ ಬಗ್ಗೆ   ತಮ್ಮ ಬ್ಲಾಗ್ ಆದ    ಗೇಟ್ಸ್ ನೋಟ್ಸ್   ನಲ್ಲಿ  ಹಂಚಿಕೊಳ್ಳುತ್ತಾರೆ.  ಅವರು ಎಲ್ಲಾ ರೀತಿಯ ಪುಸ್ತಕಗಳನ್ನು ಓದುತ್ತಾರೆ  ತಂತ್ರಜ್ಞಾನ ಮತ್ತು ವಿಜ್ಞಾನದ ಬಗ್ಗೆ ನಾನ್ ಫಿಕ್ಷನ್  ಪುಸ್ತಕಗಳಿಂದ ಕಾದಂಬರಿಗಳು ಮತ್ತು ಜೀವನಚರಿತ್ರೆಗಳವರೆಗೆ ವ್ಯಾಪಕ ಶ್ರೇಣಿಯ ಪುಸ್ತಕಗಳನ್ನು ಅವರು ಈಗಲೂ ಓದುತ್ತಾರೆ.


  ಫೇಸ್‌ಬುಕ್‌ನ ಸಿಒಒ ಶೆರಿಲ್ ಸ್ಯಾಂಡ್‌ಬರ್ಗ್ ಅವರು ತಮ್ಮ ಶಿಸ್ತುಬದ್ಧ ಓದುವ ಹವ್ಯಾಸಗಳಿಗೆ ಹೆಸರುವಾಸಿಯಾಗಿದ್ದಾರೆ.  ಅವರ ಪ್ರತಿದಿನ ಓದಲು ಸಮಯವನ್ನು ಮೀಸಲಿಡುತ್ತಾರೆ ಅವರು  ಓದಿದ ಪುಸ್ತಕಗಳ ಬಗ್ಗೆ ತಮ್ಮ  ಸಾಮಾಜಿಕ  ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತಾರೆ.ಫೇಸ್‌ಬುಕ್‌ನ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಪ್ರತಿ ಎರಡು ವಾರಗಳಿಗೊಮ್ಮೆ ಪುಸ್ತಕವನ್ನು ಓದುವುದನ್ನು ವೈಯಕ್ತಿಕ ಸವಾಲಾಗಿ ಸ್ವೀಕರಿಸಿ ಆ ಸವಾಲಿನಲ್ಲಿ ಗೆದ್ದಿದ್ದಾರೆ.  ಅವರು ವಾರ್ಷಿಕವಾಗಿ ತಮ್ಮ ಓದುವ ಪಟ್ಟಿಯನ್ನು ಹಂಚಿಕೊಳ್ಳುತ್ತಾರೆ ಮತ್ತು ಅವರ ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಯ ಮೇಲೆ ಪುಸ್ತಕಗಳು ಬೀರಿದ ಪ್ರಭಾವವನ್ನು ಜನರೊಂದಿಗೆ ಹಂಚಿಕೊಳ್ಳುತ್ತಾರೆ.


  ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಕಾವ್ಯ ಮತ್ತು ಸಾಹಿತ್ಯದ ಪ್ರೀತಿಗೆ ಹೆಸರುವಾಸಿಯಾಗಿದ್ದಾರೆ.  ಅವರು ತಮ್ಮ ನಾಯಕತ್ವದ ಶೈಲಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸಾಹಿತ್ಯದಿಂದ ಕಲಿತ ಪಾಠಗಳನ್ನು ಹೆಚ್ಚಾಗಿ ಅನುಕೂಲಕರವಾಗಿವೆ ಎಂದು ಹೇಳುತ್ತಾರೆ

ಪೆಪ್ಸಿಕೋದ ಮಾಜಿ ಸಿಇಒ ಇಂದ್ರಾ ನೂಯಿ ಅವರು ಉತ್ತಮ ಓದುಗರಾಗಿದ್ದಾರೆ.ಅವರು ತಮ್ಮ ನಾಯಕತ್ವದ ಶೈಲಿ ಮತ್ತು ವ್ಯವಹಾರದ ವಿಧಾನವನ್ನು ರೂಪಿಸುವಲ್ಲಿ ಪುಸ್ತಕಗಳು ಬಹು ಮುಖ್ಯ ಪಾತ್ರವಹಿಸಿವೆ  ಎಂದು ಹೇಳುತ್ತಾರೆ. ನಿರಂತರ ಕಲಿಕೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುವ ಮಾರ್ಗವಾಗಿ ಅವರು ತಮ್ಮ ಉದ್ಯೋಗಿಗಳಿಗೆ ಮತ್ತು ಗೆಳೆಯರಿಗೆ ಪುಸ್ತಕಗಳನ್ನು ಓದಲು ಶಿಫಾರಸು ಮಾಡುತ್ತಾರೆ.

ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.ಈ ಎಲ್ಲಾ ವ್ಯಕ್ತಿಗಳು ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಅಭ್ಯಾಸವಾಗಿ ಓದುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾರೆ. ಜೊತೆಗೆ ಒಬ್ಬರ ದೃಷ್ಟಿಕೋನಗಳು ಮತ್ತು ಜ್ಞಾನದ ನೆಲೆಯನ್ನು ವಿಸ್ತರಿಸಲು ಓದು ತನ್ನದೇ ಪಾತ್ರ ವಹಿಸುತ್ತದೆ.ಆದ್ದರಿಂದ

ಓದುವ ಅಭ್ಯಾಸವನ್ನು ರೂಢಿಸಿಕೊಂಡು  ನಿಮ್ಮ ಜೀವನ ಮತ್ತು ವೃತ್ತಿಯನ್ನು ಉತ್ತಮಪಡಿಸಿಕೊಳ್ಳಿ.ಈ ವರ್ಷದ ಬೇಸಿಗೆ ರಜಾ ದಿನಗಳಲ್ಲಿ ನಮ್ಮ ಮಕ್ಕಳಿಗೆ ಉತ್ತಮ ಪುಸ್ತಕಗಳನ್ನು ಪರಿಚಯಿಸಿ ಓದುವ ರುಚಿ ಹತ್ತಿಸೋಣ.

ಈ ಸಂದರ್ಭದಲ್ಲಿ

ಕನ್ನಡದ ಖ್ಯಾತ ಲೇಖಕರು ಮತ್ತು ಕಾದಂಬರಿಕಾರರಾದ ಸಂತೋಷ ಕುಮಾರ್ ಮೆಹಂದಳೆ ರವರು ಹೇಳುವ ಒಂದು ಮಾತು ನೆನಪಾಗುತ್ತದೆ ಓದು ವ್ಯಸನವಾಗಲಿ!


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

31 ಮಾರ್ಚ್ 2024

ಹತ್ತನೇ ತರಗತಿ ಜಸ್ಟ್ ಪಾಸ್, ಇಂದು ಡಿ ಸಿ.

 


ಹತ್ತನೇ ತರಗತಿ ಜಸ್ಟ್ ಪಾಸ್, ಇಂದು ಡಿ ಸಿ.



ಹತ್ತನೇ ತರಗತಿ ಮತ್ತು ಪಿ ಯು ಸಿ ಗಳಲ್ಲಿ ಮಕ್ಕಳಿಗೆ ಪಾಠ ಮಾಡುವಾಗ ಚೆನ್ನಾಗಿ ಓದುವ ಮಕ್ಕಳನ್ನು ಹುರಿದುಂಬಿಸುವ ಶಿಕ್ಷಕರು ಕಡಿಮೆ ಅಂಕಗಳನ್ನು ಗಳಿಸುವ ಮಕ್ಕಳನ್ನು ಕೆಲ ಶಿಕ್ಷಕರು ಅಷ್ಟೇ ಬಿಡು ನಿನ್ನ ಹಣೆಬರಹ ಎಂದು ಷರಾ ಬರೆದಬಿಡುವರು.ಆದರೆ ಇಲ್ಲೊಬ್ಬ ಸಾಧಕ ಹತ್ತನೆಯ ತಎರಗತಿಯಲ್ಲಿ ದಿದ್ದಾರಇಂಗ್ಲಿಷ್, ಗಣಿತ, ವಿಜ್ಞಾನ ವಿಷಯಗಳಲ್ಲಿ ಕೇವಲ 35 ಅಂಕಗಳಿಸಿ ಪಾಸಾದವರು ಈಗ ಭಾರತದ ಅತ್ಯುನ್ನತ ಪರೀಕ್ಷೆಯಾದ ನಾಗರೀಕ ಸೇವಾ ಪರೀಕ್ಷೆ ಪಾಸ ಮಾಡಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರೇ ಶ್ರೀ 

ತುಷಾರ್ ಸುಮೇರಾ 


ಅವರ ಜೀವನ ಕಥೆ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ. ಇವರು 2012ರ ಬ್ಯಾಚ್ನ ಐಎಎಸ್ ಅಧಿಕಾರಿ. ಪ್ರಸ್ತುತ ಗುಜರಾತ್ನ ಭರೂಚ್ನ ಕಲೆಕ್ಟರ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಅವರ 10 ನೇ ತರಗತಿಯ ಅಂಕಪಟ್ಟಿ ಬಹಳ ವೈರಲ್ ಆಗಿತ್ತು. ತುಷಾರ್ ಸುಮೇರಾ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನದಲ್ಲಿ ಕೇವಲ ಉತ್ತೀರ್ಣ ಅಂಕಗಳನ್ನಷ್ಟೇ ಗಳಿಸಿದ್ದರು. ಆದರೆ ವಿಶ್ವದ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿ ಯನ್ನು ಪಾಸ್ ಮಾಡಿ ಯಶಸ್ವಿಯಾಗಿದ್ದಾರೆ.

 ಕಳೆದ ವರ್ಷ ತುಷಾರ್ ಸುಮೇರಾ ಅವರ 10 ನೇ ತರಗತಿಯ ಅಂಕಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿತ್ತು.  ಅದರಲ್ಲಿ ಅವರು ಇಂಗ್ಲಿಷ್ನಲ್ಲಿ 35, ಗಣಿತದಲ್ಲಿ 36 ಮತ್ತು ವಿಜ್ಞಾನದಲ್ಲಿ ಕೇವಲ 38 ಅಂಕಗಳನ್ನು ಗಳಿಸಿದ್ದಾರೆ.  

ಆರಂಭದಲ್ಲಿ ಸರಾಸರಿಗಿಂತ ಕಡಿಮೆ ವಿದ್ಯಾರ್ಥಿಯಾಗಿದ್ದರೂ, ಅವರು UPSC ಉತ್ತೀರ್ಣರಾಗಿರುವುದು ದೊಡ್ಡ ಸಾಧನೆಯಾಗಿದೆ.   100ರಲ್ಲಿ ಇಂಗ್ಲಿಷ್ನಲ್ಲಿ 35 ಮತ್ತು ಗಣಿತದಲ್ಲಿ 36 ಅಂಕಗಳನ್ನು ಪಡೆದಾಗ ಇಡೀ ಊರ ಜನರು ಮತ್ತು  ಶಾಲೆಯಲ್ಲಿ ಶಿಕ್ಷಕರು ಎಂದಿನಂತೆ ಸಿದ್ದ ಮಾದರಿಯ ಬೈಗುಳ ಸುರಿಸಿ ನೀನು ಭವಿಷ್ಯದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ತೀರ್ಮಾನಕ್ಕೆ ಬಂದಿದ್ದರು.  

ತುಷಾರ್ ಸುಮೇರಾ ಅವರು ಕಲಾ ಪದವಿ ಪಡೆದ ನಂತರ ಶಿಕ್ಷಕರಾಗಿ ಕೆಲಸ ಮಾಡಿದರು. ಅವರು 2012 ರಲ್ಲಿ UPSC ಬರೆದು ಪಾಸ್ ಆದರು.

ಅದೇ ಊರ ಜನ ಇವರನ್ನು ಕರೆದು ಸನ್ಮಾನ ಮಾಡಿದರು. ಅವರ ಸ್ವಯಂ ಅಧ್ಯಯನ, ಸತತ ಪ್ರಯತ್ನದಿಂದಲೇ ಯಶಸ್ಸು ಪಡೆದು ಇತರರಿಗೆ ಸ್ಪೂರ್ತಿಯಾಗಿದ್ದಾರೆ. ಕಡಿಮೆ ಅಂಕ ಪಡೆದಾಗ ದುಡುಕಿನ ನಿರ್ಧಾರ ತೆಗೆದುಕೊಳ್ಳುವ ವಿದ್ಯಾರ್ಥಿಗಳು, ಯಾವುದೋ ಕಾರಣದಿಂದಾಗಿ ಮಕ್ಕಳು ಚೆನ್ನಾಗಿ ಓದದೇ ಇರುವಾಗ ಅನವಶ್ಯಕ ಟೀಕೆ ಮಾಡಿ ನಿಷ್ಪ್ರಯೋಜಕ ಎಂಬ ಬಿರುದು ನೀಡುವ ಪಾಲಕರು ತುಷಾರ್ ರವರ ಜೀವನದ ಯಶೋಗಾಥೆಯನ್ನು ಒಮ್ಮೆ ಓದಲೇಬೇಕು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529


ಕಲ್ಮುರುಡೇಶ್ವರನ ಬಿಲ್ವ ವನ




 


ಕಲ್ಮುರುಡೇಶ್ವರನ ಬಿಲ್ವ ವನ  


ಚಿಕ್ಕಮಗಳೂರಿನ ನಿಸರ್ಗದ ಒಡಲಲ್ಲಿ ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಹೊರಟ ನಮ್ಮ ಸಮಾನ ಮನಸ್ಕ ತಂಡ ಮೊದಲು ಭೇಟಿ ನೀಡಿದ್ದು ಕಡೂರು ತಾಲೂಕಿನ ಸಖರಾಯಪಟ್ಟಣದ " ಕಲ್ಮುರುಡೇಶ್ವರ ದೇವಾಲಯ " ಕ್ಕೆ  ದೇವಾಲಯದ ಶಿಲ್ಪಕಲೆ ವಿಶೇಷವಾಗಿ ನಮ್ಮ ಕಣ್ಮನ ಸೆಳೆಯುತ್ತದೆ. ದೇವರ ಆಶೀರ್ವಾದ ಪಡೆದು ಹೊರಬಂದ ನಮಗೆ ಮತ್ತೊಂದು ಅಚ್ಚರಿ ಕಾದಿತ್ತು! ದೇವಳದ ಸುತ್ತಲೂ ಎತ್ತ ನೋಡಿದಡತ್ತ ಬಿಲ್ವ ಪತ್ರೆ ಮರಗಳು.ಒಂದಲ್ಲ ಎರಡಲ್ಲ ನೂರಲ್ಲ  ಹತ್ತತ್ತರ ಸಾವಿರ ಬಿಲ್ವ ಮರಗಳು ಅಲ್ಲಿ ಕಾಣಸಿಗುತ್ತವೆ ಎಂದು ಸ್ಥಳೀಯರು ಮಾಹಿತಿಯನ್ನು ನೀಡಿದರು.

ಈ   ಬಿಲ್ವಪತ್ರೆ ಮರಗಳನ್ನ ಯಾರೊಬ್ಬರು ನೆಟ್ಟಿಲ್ಲ, ಬೆಳೆಸಿಲ್ಲ. ಈ ಬಿಲ್ವಪತ್ರೆಯ ಪಾರ್ಕ್ ಶಿವನ ತವರೆಂಬುದು ಭಕ್ತರ ನಂಬಿಕೆ. ಈ 

ಬಿಲ್ವಪತ್ರೆಯ ವನ ಹುಟ್ಟಿರೋದಕ್ಕೆ ಒಬ್ಬೊಬ್ಬರು ಒಂದೊಂದು ಕಥೆ ಹೇಳುತ್ತಾರೆ. ಸುಮಾರು 800 ವರ್ಷಗಳ ಹಿಂದೆ ಸನ್ಯಾಸಿಯೊಬ್ಬರು ಇಲ್ಲಿನ ಮಠದ ಬಳಿ ತಪಸ್ಸಿಗೆ ಕುಳಿತ್ತಿದ್ದರಂತೆ   ಆಗ ಪ್ರಶಾಂತತೆಗಾಗಿ ತನ್ನ ಕೊರಳಲ್ಲಿದ್ದ ರುದ್ರಾಕ್ಷಿ ಸರವನ್ನ ಋಷಿ ಮುನಿಗಳು ಚಿಮ್ಮಿದರಂತೆ, ಇದರಿಂದ ಬಿದ್ದ ರುದ್ರಾಕ್ಷಿಗಳಿಂದಲೇ ಸಾವಿರಾರು ಬಿಲ್ವಪತ್ರೆಯ ಮರಗಳು ಬೆಳೆದು ನಿಂತು, ಬಿಲ್ವವನ ನಿರ್ಮಾಣವಾಯಿತೆಂಬುದು ಸ್ಥಳಿಯ ನಂಬಿಕೆ. ಇನ್ನೂ ಹಲವರು ವೀರಶೈವ ಧರ್ಮದ ಗುರುಗಳಾದ ಮರುಳಸಿದ್ದರು ಇಲ್ಲಿ ಐಕ್ಯರಾಗಿರುವುದರಿಂದ ಕಲ್ಮರಡಿ ಮಠದ ಸುತ್ತಲೂ ಬಿಲ್ವಮರಗಳು ಬೆಳೆದು ನಿಂತಿವೆ ಎಂದು ನಂಬಿಕೊಂಡಿದ್ದಾರೆ. ಹತ್ತಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರೋ ಇಲ್ಲಿನ ಬಿಲ್ವಮರಗಳನ್ನ ಯಾರೂ ಎಣಿಸಬಾರದಂತೆ. ಹಿರಿಯರ ಪ್ರಕಾರದ ಇಲ್ಲಿನ ಮರಗಳನ್ನ ಯಾರೂ ನೆಟ್ಟು ಬೆಳೆಸಿದ್ದಲ್ಲವಂತೆ. ಜೊತೆಗೆ ಇಲ್ಲಿರೊ ಮರಗಳಿಗೆ ಯಾರೂ ಗೊಬ್ಬರ, ನೀರನ್ನ ಹಾಕಿ ಪೋಷಣೆ ಮಾಡುತ್ತಿಲ್ಲ. ಆದರೂ ಕೂಡ ಇಲ್ಲಿ ಬಿಲ್ವ ಮರಗಳು ಬೃಹದಾಕಾರವಾಗಿ ಬೆಳೆದು ನಿಂತಿವೆ. 

  ಕಲ್ಮರಡಿ ಮಠದಲ್ಲಿ ದೈವಿ ಶಕ್ತಿಯಿಂದ ಬಿಲ್ವಮರಗಳು ಹುಟ್ಟಿಕೊಂಡಿವೆ ಎಂಬುದು ಭಕ್ತರ ನಂಬಿಕೆ. ಆದ್ರೆ, ಮಣ್ಣಿನಲ್ಲಿ ಹೆಚ್ಚು ಗಂಧಕದ ಅಂಶವಿರುವಲ್ಲಿ ಈ ಅಪರೂಪದ ಮರಗಳು ಹುಟ್ಟಿ ಬೆಳೆಯುತ್ತವೆ ಅನ್ನೋದು ವೈಜ್ಞಾನಿಕ ಕಾರಣ. ಆದ್ರೆ, ಈ ಮರಗಳನ್ನ ಜನಸಾಮಾನ್ಯರು ನೆಟ್ಟಿ ಬೆಳೆಸೋದು ಅಸಾಧ್ಯ. ಈ ಮರದಡಿಯಲ್ಲಿ ವಿಹರಿಸಿದರೆ ಆರೋಗ್ಯ ವೃದ್ಧಿಯಾಗುತ್ತಂತೆ. ನಾವು ಸಹ ಕೆಲ ಕಾಲ ಆ ವನದಲ್ಲಿ ವಿಹರಿಸಿದೆವು.  ಸುತ್ತಮುತ್ತಲಿನ ಜನರು ಮತ್ತು ಭಕ್ತರು ತಮ್ಮ ವಿಶ್ರಾಂತಿ ಸಮಯದಲ್ಲೆಲ್ಲಾ ಇಲ್ಲಿಗೆ ಬಂದು ವಿಹರಿಸುತ್ತಾರೆ. ಕಲ್ಮುರುಡೇಶ್ವರ ಸ್ವಾಮಿ ಭಕ್ತರ ಇಷ್ಟಾರ್ಥಗಳನ್ನೆಲ್ಲಾ ಈಡೇರಿಸುತ್ತಾನೆ ಎಂಬ ನಂಬಿಕೆ. ಅದಕ್ಕಾಗಿಯೇ ದೂರದೂರಿಂದಲೂ ಭಕ್ತರ ದಂಡೇ ಹರಿದುಬರುತ್ತಿದೆ. ಶಿವಪೂಜೆಗೆ ಬಿಲ್ವಪತ್ರೆ ಶ್ರೇಷ್ಠವಾಗಿರೋದ್ರಿಂದ ಶಿವರಾತ್ರಿಯಂದು ಭಕ್ತರು ಬಿಲ್ವಪತ್ರೆಯ ಮರವೇರಿ ಪತ್ರೆಯನ್ನ ಕೊಯ್ದು ದೇವರಿಗೆ ಸಮರ್ಪಿಸಿ ಧನ್ಯತಾ ಭಾವ ವ್ಯಕ್ತಪಡಿಸುತ್ತಾರೆ.

ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿರೋ ಕಲ್ಮರಡಿ ಮಠಕ್ಕೆ ಕೇವಲ ಚಿಕ್ಕಮಗಳೂರಿನ ಭಕ್ತರಷ್ಟೆ ಇಲ್ಲ. ರಾಜ್ಯದ ಮೂಲೆ-ಮೂಲೆಗಳಿಂದಲೂ ಭಕ್ತರ ಮಾಹಾಪುರವೇ ಹರಿದು ಬರುತ್ತಿದೆ. ಸಖರಾಯಪಟ್ಟಣ ಸುತ್ತಮುತ್ತಲಿನ ಗ್ರಾಮಸ್ಥರು ಯಾವುದೇ ಕೆಲಸ ಮಾಡಬೇಕಾದರೂ ಕಲ್ಮುರುಡೇಶ್ವರ ಪ್ರಸಾದ ಪಡೆದು, ಅನುಮತಿ ಕೇಳಿಯೇ ಮುಂದಿನ ಹೆಜ್ಜೆ ಇಡುವುದು. ಇನ್ನು ಕ್ಷೇತ್ರದಲ್ಲಿ ಮರುಳಸಿದ್ದೇಶ್ವರನೂ ಐಕ್ಯವಾಗಿರೋದ್ರಿಂದ ಕ್ಷೇತ್ರದಲ್ಲಿ ತ್ರಿಕಾಲ ಪೂಜೆ, ಕಾರ್ತಿಕಾ ಮಾಸದಲ್ಲಿ ಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ನಡೆಯುತ್ತವೆ. ಇಲ್ಲಿನ ಕಲ್ಮುರುಡೇಶ್ವರನಿಗೆ ಭಕ್ತರು ಬಿಲ್ವಪತ್ರೆಯನ್ನ ಸಮರ್ಪಿಸಿ  ನಿತ್ಯವೂ  ಬಿಲ್ವಪತ್ರೆಯಿಂದಲೇ ಅಭಿಷೇಕ ಮಾಡುವರು.


ಅಲ್ಲದೇ ಬಿಲ್ವಪತ್ರೆಯನ್ನೇ ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡ್ತಿರೋದು ಇಲ್ಲಿನ ಮತ್ತೊಂದು ವಿಶೇಷ. ಬಿಲ್ವವನದಲ್ಲಿರೋ ಪತ್ರೆಯನ್ನ ಕೊಯ್ದು ಇತರರಿಗೆ ದಾನ ಮಾಡಿದ್ರೆ ಒಳಿತಾಗುತ್ತೆಂಬುದು ಭಕ್ತರ ನಂಬಿಕೆ. ಅದಕ್ಕಾಗಿಯೇ ಚಿಕ್ಕಮಗಳೂರು, ಕಡೂರು ಸೇರಿದಂತೆ ಸುತ್ತಮುತ್ತಲಿನ ಜನ ವಾರಕ್ಕೊಮ್ಮೆ ಬಂದು ಪತ್ರೆ ಕೊಯ್ದು ದೇವಾಲಯ ಹಾಗೂ ನೆರೆಹೊರೆಯವರಿಗೆ ದಾನ ಮಾಡುತ್ತಾರೆ. ಶಿವರಾತ್ರಿಯ ದಿನದಂದು ಇಲ್ಲಿಗೆ ಬರೋ ಭಕ್ತರು ಬಿಲ್ವವನದಲ್ಲಿಯೇ ರಾತ್ರಿಯೆಲ್ಲಾ ಜಾಗರಣೆ ಮಾಡುತ್ತಾರೆ. ನೈಸರ್ಗಿಕವಾಗಿ ಬೆಳೆದಿರೋ ಬಿಲ್ವಪತ್ರೆ ವನ ವರ್ಷ ಕಳೆದಂತೆ ಸಮೃದ್ಧಿಯಾಗ್ತಿದೆ. ಬೇರೆಡೆ ಪಾಲನೆ-ಪೋಷಣೆ ಮಾಡಿದ್ರು ಬೆಳೆಯದ ಬಿಲ್ವಪತ್ರೆ ಮರಗಳು ಈ ನೆಲದಲ್ಲಿ ಸಾವಿರಾರು ಬೆಳೆದು ನಿಂತಿರೋದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ.

ದೈವಿಕ ಮತ್ತು ಪ್ರಾಕೃತಿಕ ಶಿಲ್ಪಕಲಾ ಮಹತ್ವದ ಈ ತಾಣಕ್ಕೆ ನೀವು ಒಮ್ಮೆ ಭೇಟಿ ಕೊಡಿ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529





ಅತ್ತಿಗೆ, ನಾದಿನಿಯರು ಡಿಚ್ಚಿ ಹೊಡೆಯುವ ವಿಶಿಷ್ಟ ಆಚರಣೆ!


ಅತ್ತಿಗೆ, ನಾದಿನಿಯರು ಡಿಚ್ಚಿ ಹೊಡೆಯುವ ವಿಶಿಷ್ಟ ಆಚರಣೆ!



ಹಿರಿಯೂರು ತಾಲೂಕಿನ ಐಮಂಗಲ ಹೋಬಳಿ ಸಿ.ಎನ್. ಮಾಳಿಗೆ ಗ್ರಾಮದ ಅಹೋಬಲ ನರಸಿಂಹ ಸ್ವಾಮಿಯ ಕಾರ್ತೀಕ ಮಹೋತ್ಸವದ ಜಾತ್ರೆಯಲ್ಲಿ ಅತ್ತಿಗೆ, ನಾದಿನಿ ಯರು ಡಿಚ್ಚಿಹೊಡೆದುಕೊಳ್ಳುವ ವಿಶಿಷ್ಟ ಆಚರಣೆಯೊಂದು ಪ್ರತಿವರ್ಷವೂ ನಡೆಯುತ್ತದೆ.


ದೇವಸ್ಥಾನದ ಒಂದು ಬದಿ ಅತ್ತಿಗೆಯರು ಮತ್ತು ಇನ್ನೊಂದು ಬದಿ ನಾದಿನಿಯರು ನಿಂತು ಓಡಿ ಬಂದು ಡಿಚ್ಚಿ ಹೊಡೆದುಕೊಳ್ಳುವ ಸಂಪ್ರದಾಯ ಪ್ರತಿ ವರ್ಷದಂತೆ ಈ ವರ್ಷ ನಡೆಯಿತು. ಬುಡಕಟ್ಟು ಮೂಲ ನೆಲೆಯಿಂದಲೇ ಬಂದಿರುವ ದೈವಭಕ್ತಿ ನಂಬಿಕೆಯಲ್ಲಿ ಅತ್ತಿಗೆ ನಾದಿನಿಯ ಭಾಂದವ್ಯದ ಪ್ರತೀಕವಾಗಿ ಈ ಆಚರಣೆ. ರೂಢಿಗತವಾಗಿ ಬಂದಿದೆ.


ವಿವಾಹವಾಗಿ ಬೇರೆ ಊರಿಗೆ ಹೋಗಿರುವ ನಾದಿನಿ ಯರನ್ನು ಊರಿನ ಹೆಬ್ಬಾಗಿಲ ಬಳಿ ಮೆರವಣಿಗೆ ಮೂಲಕ ಕರೆ ತರುತ್ತಾರೆ. ಪರಸ್ಪರ ಎದುರುಗೊಂಡ ಅತ್ತಿಗೆ, ನಾದಿನಿ ಯರು ದೇವರಸಮ್ಮುಖದಲ್ಲಿ ಪ್ರೀತಿಯ ಅಪ್ಪುಗೆಯೊಂದಿಗೆ ಮೂರುಬಾರಿ ತಲೆಯಲ್ಲಿ ಪರಸ್ಪರ ಡಿಚ್ಚಿಹೊಡೆದುಕೊಳ್ಳುವ

ಮೂಲಕ ತವರು ಮನೆ ಪ್ರೀತಿ ಗಟ್ಟಿಗೊಳಿಸಿಕೊಳ್ಳುತ್ತಾರೆ.


ಮಹಿಳೆಯರಮಧ್ಯೆ ಬರುವ ಸಣ್ಣಪುಟ್ಟಭಿನ್ನಾಭಿಪ್ರಾಯ ಮರೆತು ಒಂದಾಗಿ ಬಾಳುವ ರೂಪಕವಾಗಿ ಈ ಆಚರಣೆ ನಡೆದು ಬಂದಿದೆ. ಸಾವಿರಾರು ಭಕ್ತರ ಸಮ್ಮುಖದಲ್ಲಿ ಈ ಸಂಪ್ರದಾಯ ನಡೆಯುತ್ತದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

ಹಾಯ್ಕುಗಳು

  ಅಪ್ರಕಟಿತ

*ಹಾಯ್ಕುಗಳು*



ದಾನವನಾಗಿ

ದರ್ಪವ ತೋರದಿರು

ದಾನವ ಮಾಡು 



 ಉನ್ನತ ದರ್ಜೆ 

ಹಣದಿಂದ ಬರಲ್ಲ 

ವ್ಯಕ್ತಿತ್ವದಿಂದ 


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು