11 ಮಾರ್ಚ್ 2022

ಕುಬ್ಜ .ನ್ಯಾನೋ ಕಥೆ.


 


ಕುಬ್ಜ. ನ್ಯಾನೋ ಕಥೆ 


ಅವನು ಇಂಜಿನಿಯರಿಂಗ್ ನಲ್ಲಿ ಬಂಗಾರದ ಪದಕ ಪಡೆದು ಎಂ. ಟೆಕ್ ವಿದೇಶದಲ್ಲಿ ಓದಿ ಕಡಲ ತಡಿಯಲ್ಲಿ ಸುಂದರ ಮನೆ ನಿರ್ಮಿಸಿದ .

ತನ್ನದೇ  ಮನೆಯಾದ್ದರಿಂದ ವಿಶೇಷವಾದ ಮುತುವರ್ಜಿಯಿಂದ ಮನೆಯನ್ನು ಸದೃಢವಾಗಿ ವಿಶೇಷವಾದ ವಿನ್ಯಾಸ ಬಳಸಿ ನಿರ್ಮಿಸಿದ್ದ.

ಕಾರ್ಯನಿಮಿತ್ತವಾಗಿ  ವಿದೇಶದಿಂದ ಹಿಂದಿರುಗಿದವನು ಹೆಂಡತಿ ಮಕ್ಕಳನ್ನು ಕಾಣಲು ಉಡುಗೊರೆಗಳೊಂದಿಗೆ ಮನೆಯ ಬಳಿ ಬಂದವನಿಗೆ ಶಾಕ್ ಕಾದಿತ್ತು! 

ಸುನಾಮಿಯ ಅಲೆಗಳು ಅವನ ಮನೆಯನ್ನು ನೆಲಸಮ ಮಾಡಿದ್ದವು. ಕೈಯಲ್ಲಿದ್ದ ಉಡುಗೊರೆಗಳನ್ನು ನೆಲಕ್ಕೆ ಚೆಲ್ಲಿದ ಅವನ ಕಣ್ಣುಗಳಲ್ಲಿ ನೀರು ಜಿನುಗಲಾರಂಭಿಸಿತು.ಅವನ ಮನದಲ್ಲೇ ಅಂದುಕೊಂಡ ಪ್ರಕೃತಿ ಮುಂದೆ ನನ್ನ ಇಂಜಿನಿಯರಿಂಗ್ ಪ್ರತಿಭೆ ಕುಬ್ಜ.....



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

09 ಮಾರ್ಚ್ 2022

ಶಾಂತಿ ನೆಲೆಸಲಿ .


 



*ಶಾಂತಿ ನೆಲೆಸಲಿ*


ಗೂಡಲಿರುವ ಮರಿಗಳೆಲ್ಲ 

ಬಾಡಿ ಹೋಗಿವೆ

ಹಸಿದ ಹೊಟ್ಟೆ ತುಂಬದೇ

ಅಮ್ಮನ ಕೂಗುತಿವೆ.



ಮನುಜನ  ಯುದ್ದದಾಹದಿಂದ 

ಪಕ್ಷಿ ಸತ್ತು ಬಿದ್ದಿದೆ

ಕಾಳು ತರಲು ಹೋದ ಅಮ್ಮ

ಶಿವನ ಪಾದ ಸೇರಿದೆ .


ಅನಾಥ ಮರಿಗಳಿಗೆ ಗುಟಕು

ನೀಡುವವರು ಯಾರು?

ಯಾರದೋ ಕಿರೀಟಕ್ಕೆ ಲಕ್ಷಾಂತರ

ಜೀವಿಗಳಿಗಿಲ್ಲ ಸೂರು.


ಇನ್ನಷ್ಟು ದಿನ ಈ ಮೇಲಾಟ 

ಮದ್ದು ಗುಂಡುಗಳ ಜಗದಲಿ 

ನಿಂತು ಬಿಡಲಿ ಯುದ್ಧಗಳು

ಭುವಿಯಲಿ  ಶಾಂತಿ ನೆಲಸಲಿ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

07 ಮಾರ್ಚ್ 2022

ಅರವಳಿಕೆ


 


ಅರವಳಿಕೆ .


ಚೌಕಾಸಿ ಮಾಡದೇ

ನೀನೇನೋ ಕೊಟ್ಟುಬಿಡುವೆ

ಸಿಹಿಮುತ್ತನು ಅರಿತು

ನನ್ನ ಮನದ ಬಯಕೆ |

ನನ್ನ ಪಾಡು ಏನೆಂದು

ಹೇಳಲಿ ಎಲ್ಲೆಲ್ಲೋ ತೇಲಿಬಿಡುವೆನು 

ಪಡೆದಂತೆ ಅರವಳಿಕೆ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.