09 ಮಾರ್ಚ್ 2022

ಶಾಂತಿ ನೆಲೆಸಲಿ .


 



*ಶಾಂತಿ ನೆಲೆಸಲಿ*


ಗೂಡಲಿರುವ ಮರಿಗಳೆಲ್ಲ 

ಬಾಡಿ ಹೋಗಿವೆ

ಹಸಿದ ಹೊಟ್ಟೆ ತುಂಬದೇ

ಅಮ್ಮನ ಕೂಗುತಿವೆ.



ಮನುಜನ  ಯುದ್ದದಾಹದಿಂದ 

ಪಕ್ಷಿ ಸತ್ತು ಬಿದ್ದಿದೆ

ಕಾಳು ತರಲು ಹೋದ ಅಮ್ಮ

ಶಿವನ ಪಾದ ಸೇರಿದೆ .


ಅನಾಥ ಮರಿಗಳಿಗೆ ಗುಟಕು

ನೀಡುವವರು ಯಾರು?

ಯಾರದೋ ಕಿರೀಟಕ್ಕೆ ಲಕ್ಷಾಂತರ

ಜೀವಿಗಳಿಗಿಲ್ಲ ಸೂರು.


ಇನ್ನಷ್ಟು ದಿನ ಈ ಮೇಲಾಟ 

ಮದ್ದು ಗುಂಡುಗಳ ಜಗದಲಿ 

ನಿಂತು ಬಿಡಲಿ ಯುದ್ಧಗಳು

ಭುವಿಯಲಿ  ಶಾಂತಿ ನೆಲಸಲಿ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

07 ಮಾರ್ಚ್ 2022

ಅರವಳಿಕೆ


 


ಅರವಳಿಕೆ .


ಚೌಕಾಸಿ ಮಾಡದೇ

ನೀನೇನೋ ಕೊಟ್ಟುಬಿಡುವೆ

ಸಿಹಿಮುತ್ತನು ಅರಿತು

ನನ್ನ ಮನದ ಬಯಕೆ |

ನನ್ನ ಪಾಡು ಏನೆಂದು

ಹೇಳಲಿ ಎಲ್ಲೆಲ್ಲೋ ತೇಲಿಬಿಡುವೆನು 

ಪಡೆದಂತೆ ಅರವಳಿಕೆ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.