This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
02 ಡಿಸೆಂಬರ್ 2021
01 ಡಿಸೆಂಬರ್ 2021
ಸಂತೃಪ್ತ ದಿನ ಕವನ
*ಸಂತೃಪ್ತ ದಿನ*
ದಿನ ಮೇಲೇರಿ ಬರುವ
ಮುನ್ನ ಎದ್ದೇಳೋಣ
ಘನ ಮಹಾ ಶಕ್ತಿಗೆ
ಶಿರಭಾಗಿ ನಮಿಸೋಣ
ತನುಮನವನ ಸ್ಚಚ್ಚ
ಮಾಡಿಕೊಳ್ಳೋಣ
ಮನಕೊಪ್ಪುವ ಸಮತೋಲನ
ಆಹಾರ ಸೇವಿಸೋಣ
ಧನವೊಂದೆ ಜೀವನವಲ್ಲ
ಎಂಬುದನರಿತು ಕಾಯಕಮಾಡೊಣ
ದನಕರುಗಳ ಬಗ್ಗೆ ಕರುಣೆಯಿಂದ
ನಡೆದುಕೊಳ್ಳೋಣ
ಜನಗಳೊಂದಿಗೆ ಸಮನ್ವಯದಿ
ಬೆರೆತು ಬಾಳೋಣ
ಈ ಮೇಲಿನಂತಿದ್ದರೆ ನಮ್ಮಯ
ದಿನಚರಿ ನಮ್ಮದಾಗುವುದು
ಪರಿಪೂರ್ಣ ಸಂತೃಪ್ತ ದಿನ
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ಭಾರತವನ್ನು ಆರ್ಥಿಕ ಶಕ್ತಿಯಾಗಿ ಪರಿವರ್ತಿಸೋಣ.ಲೇಖನ
ಜಿ.ಡಿ .ಪಿ .ಯ ಬೆಳವಣಿಗೆ
ಆಶಾದಾಯಕ ಸಂಗತಿ .
ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಶೇ 8.4ರ ಬೆಳವಣಿಗೆ ಕಂಡಿದ್ದು, ಕೋವಿಡ್ಗೂ ಮುಂಚಿನ ಮಟ್ಟವನ್ನು ತಲುಪಿರುವುದು ಆಶಾದಾಯಕ ಸಂಗತಿಯಾಗಿದೆ.
ಭಾರತದ ಆರ್ಥಿಕತೆಯು ಕೋವಿಡ್ ನಂತಹ ಕಠಿಣ ಸನ್ನಿವೇಶ ಎದುರಿಸಿದರೂ ಮೇಲೆದ್ದು ಬರುವ ತಾಕತ್ತಿದೆ ಎಂಬುದನ್ನು ಈ ಅಂಕಿ ಅಂಶಗಳು ಸಾಬೀತುಪಡಿಸುತ್ತವೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆಯು ಎರಡಂಕಿ ಪ್ರಗತಿ ಸಾಧಿಸುವ ನಿರೀಕ್ಷೆ ಮಾಡಲಾಗಿದೆ ಎಂದು ಮುಖ್ಯ ಅರ್ಥಿಕ ಸಲಹೆಗಾರ (ಸಿಇಎ) ಕೆ.ವಿ. ಸುಬ್ರಮಣಿಯನ್ ರವರ ಹೇಳಿಕೆ ಈ ವಿಚಾರದಲ್ಲಿ ಮಹತ್ವ ಪಡೆಯಲಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಜಿಡಿಪಿ ಶೇ.13.7ರಷ್ಟು ಬೆಳವಣಿಗೆ ಕಂಡಿದೆ. ಮುಂಬರುವ ತ್ರೈಮಾಸಿಕಗಳಲ್ಲಿ ಶೇ 6ಕ್ಕಿಂತಲೂ ಹೆಚ್ಚಿನ ಮಟ್ಟದ ಬೆಳವಣಿಗೆ ಕಾಣಲಿದ್ದು, ಒಟ್ಟಾರೆಯಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡಂಕಿ ಪ್ರಗತಿಗೆ ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭ ಆಗಿರುವುದರಿಂದ ಜನರು ಸರಕು ಮತ್ತು ಸೇವೆಗಳ ಖರೀದಿಗೆ ಮಾಡುತ್ತಿರುವ ಖರ್ಚಿನಲ್ಲಿ ಏರಿಕೆ ಕಂಡುಬಂದಿದೆ. ಹೆಚ್ಚು ಜನರು ಲಸಿಕೆ ಪಡೆದಿದ್ದರಿಂದ ಈ ಅವಧಿಯಲ್ಲಿ ಕೋವಿಡ್ ತೀವ್ರತೆಯೂ ಕಡಿಮೆ ಆಗಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಎರಡನೇ ತ್ರೈಮಾ ಸಿಕದಲ್ಲಿ ಜೆಡಿಪಿಯು: ಈ ಪ್ರಮಾಣದ ಬೆಳವಣಿಗೆ ಕಂಡಿದೆ.
ಇದೇ ವೇಳೆ ನಮ್ಮ ದೇಶದ
ದೇಶದ ವಿತ್ತೀಯ ಕೊರತೆಯು ಅಕ್ಟೋಬರ್ ತಿಂಗಳ ಅಂತ್ಯಕ್ಕೆ 2 5.47 ಲಕ್ಷ ಕೋಟಿಗಳಷ್ಟಾಗಿದೆ. ಬಜೆಟ್ ಅಂದಾಜಿನ ಪ್ರಕಾರ ಶೇ 36.3ರಷ್ಟಾಗಿರುವುದು ಪ್ರಮುಖವಾಗಿ ಗಮನಿಸಬೇಕಾದ ಅಂಶವಾಗಿದೆ.
ವರಮಾನ ಸಂಗ್ರಹದಲ್ಲಿ ಸುಧಾರಣೆ ಕಂಡುಬಂದಿರುವುದರಿಂದ ವಿತ್ತೀಯ ಕೊರತೆಯು ಈ ಪ್ರಮಾಣದ ಬೆಳವಣಿಗೆ ಕಂಡಿದೆ ಎಂದು ಸಿಜಿಎ ತಿಳಿಸಿದೆ.
ಇಷ್ಟೆಲ್ಲಾ ಆಶಾದಾಯಕ ಬೆಳವಣಿಗೆಯ ಮುಧ್ಯೆ ಒಮೈಕ್ರಾನ್ ವೈರಸ್ ನ ಕಾರ್ಮೋಡ ಪ್ರಪಂಚದ ವಿವಿಧ ದೇಶಗಳಲ್ಲಿ ಹರಡುತ್ತಾ ಆತಂಕ ಕವಿದಿರುವುದು ದುರದೃಷ್ಟಕರ. ಬೇರೆ ದೇಶಗಳಲ್ಲಿ ಕೋವಿಡ್ ಮೂರು ಮತ್ತು ನಾಲ್ಕನೇ ಅಲೆಗಳು ಅಪ್ಪಳಿಸಿದರೂ ಭಾರತದಲ್ಲಿ ಕೊರೊನಾ ನಿಯಂತ್ರಣದಲ್ಲಿ ಇರುವುದಕ್ಕೆ ಕಾರಣ ನಮ್ಮ ಲಸಿಕಾ ಅಭಿಯಾನ ಎಂಬುದನ್ನು ಎಲ್ಲರೂ ಒಪ್ಪಲೇಬೇಕು. ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ ನಮ್ಮಲ್ಲಿ ಕೆಲವರು ಎರಡನೇ ಡೋಸ್ ಲಸಿಕೆ ಪಡೆದಿಲ್ಲದಿರುವುದು .ಬೇಸರದ ಸಂಗತಿ.ಇಂತವರು ಸರ್ಕಾರಗಳು ಮತ್ತು ವ್ಯವಸ್ಥೆಯ ಟೀಕೆಮಾಡುತ್ತಾ ತಮ್ಮ ಕರ್ತವ್ಯ ಮರೆಯುವ ಜಾಣ ಪ್ರಜೆಗಳು. ಸರ್ಕಾರ ಮತ್ತು ತಜ್ಞರು ನೀಡುವ ಮುನ್ನೆಚ್ಚರಿಕೆ ಕ್ರಮಗಳನ್ನು ಜವಾಬ್ದಾರಿಯುತ ಪ್ರಜೆಗಳಾದ ನಾವು ಪಾಲಿಸೋಣ . ನಮ್ಮ ಆರೋಗ್ಯ ಕಾಪಾಡಿಕೊಂಡು ಜೀವವಿದ್ದರೆ ಜೀವನ ಎಂಬ ಸತ್ಯ ಅರಿತು ಒಗ್ಗಟ್ಟಾಗಿ ಸಾಧಿಸೋಣ. ತನ್ಮೂಲಕ ಭಾರತವನ್ನು ಪ್ರಪಂಚದಲ್ಲಿಯೇ ದೊಡ್ಡದಾದ ಆರ್ಥಿಕ ಶಕ್ತಿಯನ್ನಾಗಿ ಪರಿವರ್ತಿಸೋಣ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
30 ನವೆಂಬರ್ 2021
ನಂಬಿಕೆ ದ್ರೋಹಿಗಳು
*ನಂಬಿಕೆ ದ್ರೋಹಿಗಳು*
ನಂಬಿಕೆ ದ್ರೋಹಿಗಳು
ಸದಾ ನಮ್ಮೊಂದಿಗೆ
ಇದ್ದೇ ಇರುವರು
ನಂಬಿಸಿ ದ್ರೋಹ ಎಸಗುತ್ತಾ
ಅವರಿವರಿಗೆ|
ತಿಪ್ಪರಲಾಗ ಹಾಕಿದರೂ
ಮೋಸ ಮಾಡಲಾದೀತೆ
ಇಂತಹವರು ನಮ್ಮ
ದೇವರಿಗೆ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
29 ನವೆಂಬರ್ 2021
ಅವನು ಕರೆದಾಗ ಹೋಗಲು ಸಿದ್ದರಿರೋಣ .
ಅವನು ಕರೆದಾಗ ಹೋಗಲು ಸಿದ್ಸರಿರೋಣ .
"ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೆ
ನಮ್ಗೂ ನಿಮ್ಗೂ ಯಾಕೆ ಟೆನ್ಸನ್ನು" ಎಂಬ ಯೋಗರಾಜ್ ಭಟ್ಟರ ಹಾಡಿನಂತೆ . ಜೀವನದಲ್ಲಿ ಬಹುತೇಕ ಬಾರಿ ನಾವು ಅಂದುಕೊಂಡತೆ ಇರುವುದಿಲ್ಲ .ಬದುಕು ಬಂದಂತೆ ಸ್ವೀಕರಿಸುವ ಮೂಲಕ ಜೀವನದಲ್ಲಿ ಮುಂದಡಿ ಇಡಬೇಕಿದೆ. Man proposes God disposes ಎಂಬ ಉಕ್ತಿಯಂತೆ ನಾವೇನೇನೋ ಪ್ಲಾನ್ ಮಾಡಿದರೂ ಅವನು ನಮ್ಮೆಲ್ಲಾ ಯೋಜನೆಗಳನ್ನು ತಲೆಕೆಳಗುಮಾಡಿ ಹೇಗಿದೆ ಆಟ? ಎಂದು ಮರೆಯಲೇ ನಿಂತು ನಗುವನು.
ಅಂದರೆ ನಾವು ಯೋಜನೆ ಮಾಡಬಾರದಾ ? ಹಿಂಗೇ ಇರಬೇಕು ಎಂದು ಗುರಿ ಇಟ್ಟುಕೊಳ್ಳಲೇ ಬಾರದಾ? ಎಂದರೆ ಖಂಡಿತವಾಗಿ ಗುರಿಯೂ ಇರಲಿ . ಯೋಜನೆಯು ಇರಲಿ . ಅದಕ್ಕೆ ಪೂರಕವಾಗಿ ಪ್ರಯತ್ನ ಸಹ ಜಾರಿಯಲ್ಲಿ ಇರಲಿ ನಮ್ಮೆಲ್ಲ ಪ್ರಾಮಾಣಿಕವಾದ ಪ್ರಯತ್ನದ ನಡುವೆಯೂ ನಾವಂದುಕೊಂಡದ್ದು ಆಗಲಿಲ್ಲ ಎಂದರೆ ಬೇರೇನೋ ಯೋಚಿಸುತ್ತಾ, ಬೇಸರ ಮಾಡಿಕೊಂಡು ಮಾನಸಿಕವಾಗಿ ಕುಗ್ಗಿ ಖಿನ್ನತೆಯೆಡೆಗೆ ಜಾರಿ ಬದುಕಿನಲ್ಲಿ ಅನರ್ಥದ ನಿರ್ಧಾರ ಕೈಗೊಳ್ಳುವ ಮೂಲಕ ನಮ್ಮ ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳವ ನಿರ್ಧಾರವನ್ನು ಕೈಗೊಳ್ಳಬಾರದು. ಸೂರ್ಯ ಮುಳುಗಿದ ಎಂದು ಕೊರಗಿ ಕೂರುವ ಬದಲಿಗೆ ನಕ್ಷತ್ರಗಳ ನೋಡುವ ಕಾತರತೆ ಮತ್ತು ಸಂತಸ ಹೊಂದಬೇಕಿದೆ.ಎಲ್ಲಾ ಬಾಗಿಲುಗಳು ಮುಚ್ಚಿವೆ ಬೆಳಕು ಬರುತ್ತಿಲ್ಲ ಎಂದು ಪರಿತಪಿಸುವ ಬದಲಿಗೆ ಕಿಟಕಿಯ ಮೂಲಕ ಬರುವ ಬೆಳಕಿನ ಕಡೆಗೆ ಗಮನ ಹರಿಸಬಹುದು. ಜೀವನದಲ್ಲಿ ನಮಗೆ ನಾವಂದುಕೊಂಡ ಯಾವುದೋ ಸಿಗಲಿಲ್ಲ ಎಂದರೆ ದೇವರು ನಮಗಾಗಿ ಮತ್ತೇನೊ ಕೊಡಲು ಸಿದ್ದತೆ ಮಾಡಿಕೊಂಡಿರುವ ಎಂದು ಭಾವಿಸಿ ಮುನ್ನೆಡೆಯೋಣ. ವಿಪ್ರೊ ಕಂಪನಿಯಲ್ಲಿ ಕೆಲಸ ಸಿಗಲಿಲ್ಲ ಎಂದು ಬೇಸರ ಪಟ್ಟುಕೊಂಡು ಚಿಂತೆ ಮಾಡುತ್ತಾ ಕುಳಿತಿದ್ದರೆ ನಾರಾಯಣ ಮೂರ್ತಿ ರವರು ಇನ್ಫೋಸಿಸ್ ಎಂಬ ದೈತ್ಯ ಕಂಪನಿಯು ಕಟ್ಟಿ ಸಾವಿರಾರು ಕೋಟಿ ವಹಿವಾಟು ನಡೆಸಿ ಸಾವಿರಾರು ಜನರಿಗೆ ಉದ್ಯೋಗ ಕೊಡಲು ಆಗುತ್ತಿರಲಿಲ್ಲ.
ಇದೇ ರೀತಿಯಲ್ಲಿ ಜೀವನದಲ್ಲಿ ಕೆಲವೊಮ್ಮೆ ನಾವಂದುಕೊಂಡಂತೆ ಆಗದಿದ್ದರೆ ಬೇಸರ ಪಟ್ಟುಕೊಳ್ಳದೆ ಜೀವನವನ್ನು ಬಂದಂತೆ ಸ್ವೀಕರಿಸಿ ಮುನ್ನಡೆಯಬೇಕು ಜೀವನದ ಪ್ರತಿ ಕ್ಷಣವನ್ನು ಅನುಭವಿಸುತ್ತಾ ಅವನು ಕರೆದಾಗ ಹೋಗಲು ಕೂಡಾ ನಾವು ಸಿದ್ದರಾಗಿರಬೇಕು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು




