ತವರು ಮನೆಯವರು
ಬಂದರೆ ನನ್ನಾಕೆಗೆ
ವಿಧ ವಿಧದ
ಭಕ್ಷ್ಯ ಭೋಜನ ಮಾಡಿ
ಬಡಿಸುವ ಬಯಕೆ|
ನಮ್ಮ ಕಡೆಯವರು
ಬಂದರೆ ಗೊನಗುವಳು
ಸಾಮಾನ್ಯ ಅಡುಗೆ ಸಾಕು
ವಿಶೇಷ ಅಡಿಗೆಗೆ ಸುಮ್ಮನೆ
ಖರ್ಚು ಯಾಕೆ?||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಬಂದರೆ ನನ್ನಾಕೆಗೆ
ವಿಧ ವಿಧದ
ಭಕ್ಷ್ಯ ಭೋಜನ ಮಾಡಿ
ಬಡಿಸುವ ಬಯಕೆ|
ನಮ್ಮ ಕಡೆಯವರು
ಬಂದರೆ ಗೊನಗುವಳು
ಸಾಮಾನ್ಯ ಅಡುಗೆ ಸಾಕು
ವಿಶೇಷ ಅಡಿಗೆಗೆ ಸುಮ್ಮನೆ
ಖರ್ಚು ಯಾಕೆ?||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಶಾಲೆಯ ಆರಂಭವಾಗುತ್ತಿದೆ
ಬನ್ನಿ ಮಕ್ಕಳೆ ಶಾಲೆಯ ಕಡೆಗೆ
ಬಹುದಿನಗಳ ನಂತರ ಮಕ್ಕಳು ಶಾಲೆಯ ಕಡೆಗೆ ಹೆಜ್ಜೆ ಹಾಕಲು ನಮ್ಮ ಸರ್ಕಾರ ಮುಹೂರ್ತ ಫಿಕ್ಸ್ ಮಾಡಿದೆ. ಇದೇ ತಿಂಗಳ ಇಪ್ಪತ್ಮೂರರಿಂದ ಎಂಟು ಮತ್ತು ಒಂಭತ್ತನೆಯ ತರಗತಿಗಳನ್ನು ಅರ್ಧ ದಿನದ ಅವಧಿಗೆ ತೆರೆಯಲು ಅನುಮತಿಯನ್ನು ನೀಡಿದೆ. ಇದಕ್ಕೆ ಒಲ್ಲದ ಮನಸ್ಸಿನಿಂದ ಪೋಷಕರು ಒಪ್ಪಿದ್ದಾರೆ .ಸರ್ಕಾರದ ಸದಾಶಯಕ್ಕೆ ನಾಗರೀಕರು ಮತ್ತು ಶಿಕ್ಷಕರು ಸ್ವಾಗತಿಸಿದ್ದಾರೆ.
ಬಹುದಿನಗಳಿಂದ ಕರೋನ ಮಹಾಮಾರಿಯಿಂದ ಔಪಚಾರಿಕ ಕಲಿಕೆಯಿಂದ ವಂಚಿತರಾದ ಮಕ್ಕಳು ಕಲಿಕೆಯ ಹಳಿಗೆ ಬರುವಂತಾಗಲಿ ಇದಕ್ಕೆ ಸಮುದಾಯದ, ಶಿಕ್ಷಕರ, ಪೋಷಕರ ಬೆಂಬಲ ಅಗತ್ಯ.ತನ್ಮೂಲಕ ಮಕ್ಕಳ ಸುರಕ್ಷಿತ ಕಲಿಕೆಗೆ ಸರ್ವರೂ ಪಣತೊಡಬೇಕಿದೆ
ಸುರಕ್ಷಿತ ಕಲಿಕೆ ಹೇಗೆ?
ಶಾಲೆ, ಕಾಲೇಜು ಆವರಣದಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕಿದೆ.ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಿದೆ. ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಶಾಲೆಗೆ ಕಳಿಸಲು ಮತ್ತು ಕೋವಿಡ್ ನಿಯಮ ಪಾಲನೆ ಮಾಡುವ ಕುರಿತು ಒಪ್ಪಿಗೆ ಪತ್ರ ತರಬೇಕಿದೆ.
ವಸತಿ ಶಾಲೆಗಳಲ್ಲಿ ಹಾಗೂ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ 72 ಗಂಟೆಗಳ ಅಂತರದಲ್ಲಿ ಕೊವಿಡ್ ನೆಗೆಟಿವ್ ವರದಿ ಸಲ್ಲಿಸಬೇಕಿದೆ.ಶಾಲೆ-ಕಾಲೇಜಿಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲದಿದ್ದರೂ ಪೋಷಕರು ಸ್ವ ಇಚ್ಛೆಯಿಂದ ಮಕ್ಕಳನ್ನು ಶಾಲೆಗೆ ಕಳಿಸಬೇಕು ಬೌತಿಕ ತರಗತಿಗೆ ಅನಿವಾರ್ಯ ಕಾರಣದಿಂದಾಗಿ ಹಾಜರಾಗದ ವಿದ್ಯಾರ್ಥಿಗಳು ಅನ್ಲೈನ್ ತರಗತಿಯಲ್ಲಿ ಕಲಿಕೆ ಮುಂದುವರೆಸಬಹುದು .
ತರಗತಿಯ ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಕಲಿಕೆಗೆ ಅವಕಾಶ ನೀಡಲಾಗುತ್ತದೆ ಬ್ಯಾಚ್ ಮಾದರಿಯಲ್ಲಿ ತರಗತಿ ಭೋದನೆ ನಡೆಯುತ್ತದೆ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಗೆ ವ್ಯಾಕ್ಸಿನ್ ಕಡ್ಡಾಯವಾಗಿರುವುದರಿಂದ ಪೋಷಕರು ಧೈರ್ಯದಿಂದ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಬಹುದು.
ಸಾಮಾಜಿಕ ಅಂತರದ ದೃಷ್ಟಿಯಿಂದ ಕಲಿಕೆಗೆ ಶಾಲೆಯ ಎಲ್ಲಾ ಕೊಠಡಿಗಳನ್ನು ಬಳಕೆ ಮಾಡುವುದರಿಂದ ಎಲ್ಲಾ ಕೊಠಡಿಗಳ ಸ್ಯಾನಿಟೈಸ್ ಮಾಡಿ ನೈರ್ಮಲ್ಯ ಕಾಪಾಡಲಾಗುವುದು. ಮನೆಯಿಂದ ಬರುವಾಗ ಮಕ್ಕಳು ಮಾಸ್ಕ್ ,ಸ್ಯಾನಿಟೈಸ್, ಬಿಸಿನೀರು ತರಲಿ ,ಅಗತ್ಯ ಬಿದ್ದರೆ ಶಾಲೆಗಳಲ್ಲಿ ಬಿಸಿ ನೀರು ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತದೆ.
ಹೊರಗಡೆಯ ಜನರಿಗೆ ಶಾಲಾ ಪ್ರವೇಶ ನಿರ್ಬಂಧ ಹೇರಲಾಗಿದೆ ಎಸ್ ಡಿ ಎಂ ಸಿ ಸದಸ್ಯರು ಮತ್ತು ಪೋಷಕರು ಶಾಲಾ ಕಛೇರಿಗೆ ಮಾತ್ರ ಭೇಟಿ ನೀಡಲು ಅವಕಾಶವನ್ನು ನೀಡಿದೆ.
ಶಾಲೆಯ ಸುತ್ತಮುತ್ತ ತಿಂಡಿ ವ್ಯಾಪಾರಕ್ಕೆ ನಿರ್ಬಂಧವಿರುವುದು ಮಕ್ಕಳು ಅನವಶ್ಯಕವಾಗಿ ಅಂಗಡಿಗಳಲ್ಲಿ ಮುಂದೆ ಗುಂಪು ಸೇರದಂತೆ ಕ್ರಮ ಕೈಗೊಳ್ಳಬೇಕಿದೆ.
ಮಕ್ಕಳು ಗುಂಪಾಗಿ ಆಡುವ ಹೊರಂಗಣ ಆಟಕ್ಕೆ ಅವಕಾಶವಿಲ್ಲ
ಪ್ರತಿ ವಾರಕ್ಕೊಂದು ಭಾರಿ ಸ್ಥಳೀಯ ವೈದ್ಯಾಧಿಕಾರಿಗಳಿಂದ ಮಕ್ಕಳು ಹಾಗೂ ಶಿಕ್ಷಕರ ಆರೊಗ್ಯ ತಪಾಸಣೆ ಮಾಡಲಾಗುತ್ತದೆ .ಈ ವೇಳೆ ಕೋವಿಡ್ ಲಕ್ಷಣಗಳು ಕಂಡುಬಂದರೆ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಆದ್ದರಿಂದ ಬಹಳ ದಿನಗಳ ನಂತರ ಆರಂಭವಾಗುವ ಶಾಲೆಯಲ್ಲಿ ನಮ್ಮ ಮಕ್ಕಳ ಕಲಿಕೆ ಉತ್ತಮವಾಗಲು ನಾವೆಲ್ಲರೂ ನಮ್ಮ ನಮ್ಮ ಕರ್ತವ್ಯಗಳನ್ನು ಮಾಡೋಣ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಸ್ಪರ್ಧೆಗೆ
*ಸಿಂಹಕಟಿ*
ನನ್ನ ಬಯಕೆಯನ್ನು
ನನ್ನವಳಿಗೆ ಹೇಳಿದೆ
ನನಗೆ ಬಹಳ ಇಷ್ಟ
ಸಿಂಹ ಕಟಿ, ತೊಂಡೆ ತುಟಿ|
ಅವಳಂದಳು ಅದಕ್ಕೇನಂತೆ
ನಾನೂ ಪ್ಲಾಸ್ಟಿಕ್ ಸರ್ಜರಿ
ಮಾಡಿಸಿಕೊಳ್ಳುವೆ ಕೊಡಿ
ಒಂದು ಕೋಟಿ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಸ್ಪರ್ಧೆಗೆ
*ಆಟವಲ್ಲ*
ಎನು ಮಾಡಿದರೂ
ಇರಬಾರದು ದುಡುಕು
ಸಹನೆಯಿರಬೇಕು ತಿಳಿ
ಆಟವಲ್ಲ ಇದು ಬದುಕು
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತರಗೆಲೆ ಸದ್ದು
ಸಂತಸದಿ ನಲಿವೆವು
ನಮ್ಮವರೊಂದಿಗೆ
ಮನವು ಖುಷಿಯಾಗಿದ್ದಾಗ
ನಗುವೆವವು ಬಿದ್ದು ಬಿದ್ದು|
ಒಂಟಿಯಾಗಿದ್ದಾಗ
ಕತ್ತಲೆಯಾಗಿದ್ದಾಗ
ಮನಕೆ ದುಗುಡ
ಆವರಿಸಿದಾಗ
ಭಯಗೊಳ್ಳುವೆವು
ಕೇಳಿ ತರಗೆಲೆಯ ಸದ್ದು||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ