25 ಮೇ 2021

ಶೀಲ್ಡ್.ಹನಿಗವನ


 


*ಶೀಲ್ಡ್*


ಪಡೆದಿರುವ ಬಹುಮಾನ,

ಪದಕಗಳ ತೋರಿಸಿ ನನ್ನವಳು

ಹಂಗಿಸುತ್ತಿದ್ದಳು ರೀ ನೋಡಿ

ನೀವು ಒಂದಾದರೂ 

ತೊಗೊಂಡಿಲ್ಲ ಶೀಲ್ಡ್|

ಮೊನ್ನೆ ಲಸಿಕೆ 

ಹಾಕಿಸಿಕೊಂಡ ಮೇಲೆ

ಹೆಮ್ಮೆಯಿಂದ ಹೇಳಿದೆ

ನೋಡೇ ನಾನು ಪಡೆದೆ

ಎರಡು ಕೋವೀ"ಶೀಲ್ಡ್"||


*ಸಿಹಿಜೀವಿ*

ಸಿ ಜಿ‌ ವೆಂಕಟೇಶ್ವರ


ಸಿಂಹ ಧ್ವನಿ ೨೫/೫/೨೧


 

23 ಮೇ 2021

ನೋಡಿಲ್ಲಿ ಕಾಲನೆ. ಹನಿಗವನ


 

ಜೀವಿಗಳ ಉಳಿಸಿ .ಹನಿಗವನ



*ಜೀವಿಗಳ ಉಳಿಸಿ*


ಮರ ಕಡಿಯುವುದನ್ನು ನಿಲ್ಲಿಸಿ

ಭೂದೇವಿಗೆ ಕ್ಷಮೆಯ ಸಲ್ಲಿಸಿ

ಒಂದೊಂದು ‌ಗಿಡ ಬೆಳೆಸಿ 

ಪರಿಸರವ ಗೆಲ್ಲಿಸಿ

ಸಕಲ ಜೀವಿಗಳ ಉಳಿಸಿ


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


ಜನಮಿಡಿತ . ಕಥೆ ೨೩/೫/೨೧