27 ಏಪ್ರಿಲ್ 2021

ಓಟು _O2


 *ಓಟು_O2*


ಓ ರಾಜಕಾರಣಿಗಳೆ

ನೀವು ನಮ್ಮ ಬಳಿ

ಬರಬೇಡಿ ಕೇಳಲು

ಓಟು |

ಈ ಕೊರೋನಾ

ಕಾಲದಲ್ಲಿ ಮೊದಲು

ನಮಗೆ ನೀಡಿ

O2||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


ಪ್ರತಿನಿಧಿ ೨೭/೪/೨೧


 

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ " ಕೊರೋನಾ ಕಾಲದಲ್ಲಿ ಪೋಷಕರು ಏನುಮಾಡಬೇಕು?"೨೭/೪/೨೧*


 

26 ಏಪ್ರಿಲ್ 2021

ಒಲವಿನ ಉಡುಗೊರೆ .ಎರಡು ಹನಿಗಳು



 

*ಒಲವಿನ ಉಡುಗೊರೆ*

ಅವನೆಂದನು
ಪ್ರಿಯೆ ಒಲವಿನ
ಉಡುಗೊರೆಯಾಗಿ ತರಲೆ
ನಿನಗೆ ದುಬಾರಿ ಕಾರು
ಫಾರ್ಚುನರ್|
ಬೇಡ ನಲ್ಲ  ತಂದು
ಕೊಡು ಈಗಲೆ
ಸ್ಯಾನಿಟೈಸರ್ ಮತ್ತು
ರೇಮ್ ಡೆಸಿವರ್||

ಅವಳೆಂದಳು
ಪ್ರಿಯಾ ಪತ್ರಿಕೆಯಲ್ಲಿ
ಓದಿದೆ ಬೆಲೆ
ಇಳಿಕೆಯಾಗಿದೆಯಂತೆ
ಯಾವಾಗ ಕೊಡಿಸುವೆ
ಗೋಲ್ಡ್?|
ಪ್ರಿಯೆ ಕೊರೋನ
ಏರಿಕೆಯಾಗುತ್ತಲೇ ಇದೆ
ಯಾವಾಗ ಕೊಡಿಸಲಿ
ಕೋವೀಶೀಲ್ಡ್||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು

ಜೀವನ ಕಲೆ .ಕವನ


 



*ಜೀವನ ಕಲೆ*


ನಾವುಗಳು ಕೆಂಪಿರುವೆಗಳು

ಹಸುರಿನ ಎಲೆಯ ಮೇಲೆ

ವೃತ್ತಾಕಾರದಿ ಸೇರಿಹೆವವು.


ನಮ್ಮ ಚಿತ್ತವೆಲ್ಲವೂ

ಜೇನ ಹನಿಯ ಮೇಲೆ

ನೋಡಿ ನಮ್ಮ ಲೀಲೆ.


ಸಮಾನತೆಗೆ ಹೆಸರೇ ನಾವು

ಸಮಾನವಾಗಿ ಸೇವಿಸುವೆವು

ಇದು ನಾವು ಕಲಿತ ಕಲೆ.


ಮೂಢ ಮಾನವನೆ

ಕಲಿತುಕೋ ನಮ್ಮಿಂದ

ನೀ ಜೀವನ ಕಲೆ .



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು