25 ಏಪ್ರಿಲ್ 2021

ಪುಟ್ಟನ ಜಾತ್ರೆ ಶಿಶುಗೀತೆ


 



ಪುಟ್ಟನ ಜಾತ್ರೆ 


ಅಪ್ಪನ ಜೊತೆಯಲಿ ಜಾತ್ರೆಗೆ

ಹೋಗಿ ಗೊಂಬೆಗಳ ಕೊಳ್ಳುವೆನು

ಅವುಗಳ ಜೊತೆಯಲ್ಲಿ ಆಟವನಾಡಿ

ಸಂತಸ ಪಡೆಯುವೆನು.


ಕೀಲಿ ಕೊಟ್ಟರೆ ಡೋಲು ಬಡಿಯುವ

ಗೊಂಬೆಯ ಕೊಳ್ಳುವೆನು

ಕಿಟಿ ಕಿಟಿ ಸದ್ದನು ಮಾಡುವ

ಆಟಿಕೆ ಕೇಳುವೆನು.


ಗಾಳಿಯ ಊದುತ ಬೆರಳನು

ಒತ್ತುವ ಕೊಳಲು ಕೊಳ್ಳುವೆನು

ಮುಳ್ಳುಗಳಿದ್ದರೂ ಟಿಕ್ ಟಿಕ್

ಎನ್ನುವ ಗಡಿಯಾರ ಕೇಳುವೆನು


ಬಣ್ಣ ಬಣ್ಣದ ಬಸ್ಸು ಲಾರಿ

ಕಾರನು ಕೊಳ್ಳುವೆನು

ಗಾಳಿಯ ಊದಿದ ದೊಡ್ಡದಾದ

ಬಲೂನು ಕೊಳ್ಳುವೆನು



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


ಪ್ರಜಾಪ್ರಗತಿ ೨೫/೪/೨೧


 

22 ಏಪ್ರಿಲ್ 2021

ಪ್ರತಿನಿಧಿ ಪತ್ರಿಕೆ ಗಜಲ್ ೨೨/೪/೨೦೨೧


 

ಜನನಿ ಜನ್ಮ ಭೂಮಿ. ಹನಿ


 


*ಜನನಿ ಜನ್ಮ ಭೂಮಿ*


ಜನನಿ ಜನ್ಮಭೂಮಿಯೆ

ಪರಮ ನೀಚರು ನಾವು

ಮಹಾ ಕೃತಘ್ನರು ನಾವು

ನೀಡಿಹೆವು ನಿನಗೆ ನೋವು

ನೀ ಮುನಿದರೆ ನಮಗೆ ಸಾವು

ಹೆಚ್ಚಾದರೂ ಅಡ್ಡಿಯಿಲ್ಲ ಬೇವು

ಕಡಿಮೆಯಾದರೂ ಇರಲಿ ಮಾವು

ನೀ ಉರಿದರೆ ಬಾಳುವುದೇಗೆ ನಾವು?


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು