06 ಜನವರಿ 2021

ಹೆಜ್ಜೆ ಇಡು ಕವನ.

 

*ಹೆಜ್ಜೆ ಇಡು*


ಕವನ 



ಇನ್ನೆಷ್ಟು ದಿನ 

ಕತ್ತಲಲೇ ಕಳೆಯುವೆ?

ತಮವೇ ಜೀವನವೆಂದು

ಬದುಕುತಿರುವೆ. ಇನ್ನಾದರೂ 

ಹೆಜ್ಜೆ ಇಡು ಬೆಳಕಿನೆಡೆಗೆ.


ಇನ್ನೆಷ್ಟು ದಿನ 

ಅಜ್ಞಾನದಿ ತೊಳಲುವೆ?

ಅಂಧಕಾರದಲೇ ಬಾಳುವೆ

ಜ್ಞಾನದ ಜ್ಯೋತಿಯು

ನಿನಗಾಗಿ ಕಾದಿದೆ.

ಹೆಜ್ಜೆ ಇಡು ಜ್ಞಾನದೆಡೆಗೆ.


ಇನ್ನೆಷ್ಟು ದಿನ 

ಲೌಕಿಕವೇ ಜೀವನವೆಂದು

ಮಬ್ಬಿನಲಿ ಒದ್ದಾಡುವೆ?

ಪಾರಮಾರ್ಥದಲಿ ಒಲವಿರಲಿ 

ಹೆಜ್ಜೆ ಇಡು ಆತ್ಮಸಾಕ್ಷಾತ್ಕಾರದೆಡೆಗೆ.



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

05 ಜನವರಿ 2021

ನಮ್ಮ ಪಾಪು ಶಿಶುಗೀತೆ .


 *ನಮ್ಮ ಪಾಪು*


ಶಿಶುಗೀತೆ 


ನಮ್ಮ ಮನೆಯಲೊಂದು 

ಸಣ್ಣ ಪಾಪವಿರುವುದು|

ಪಿಳಿ ಪಿಳಿ ಕಣ್ಣು ಬಿಟ್ಟು

ನಗುತಲಿರುವುದು.||


ಗಿಲಿಕಿ ಗೆಜ್ಜೆ ಹಿಡಿದು

ಕೊಂಡು ನಕ್ಕು ನಲಿವುದು|

ಅಂಬೆಗಾಲನಿಟ್ಟು ಅಮ್ಮನ

ಬಳಿಗೆ ಓಡುವುದು.||


ಅಮ್ಮ ಕಾಣದಿದ್ದರೆ 

ಜೋರು ಅಳುವುದು|

ತಾಯ ಹೆಜ್ಜೆ ಸದ್ದು

ಕೇಳಿ ಕೇಕೆಪಾಪವಿರುವುದು|.


ಬಾಲ ಭಾಷೆಯಲ್ಲಿ 

ಒಂದು ಹಾಡು ಹೇಳುವುದು|

ತಾಳ ಹಾಕಿ ಕೈಯ

ತಟ್ಟಿ ಕುಣಿಯುತಿರುವುದು.||




*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

👶👶👶👶👶👶

ಸಿಹಿಜೀವಿಯ ಮೂರು ಹನಿಗಳು

 *ಸಿಹಿಜೀವಿಯ ಹನಿಗಳು*



*ಒಂದೇ*


ಮನುಷ್ಯರು ಒಂದೇ

ರೀತಿಯಿಲ್ಲ ಕೆಲವರು

ಉದ್ದಕೆ, ಕೆಲವರು ದಪ್ಪಕೆ

ಇನ್ನೂ ಕೆಲವರು ಕೆಂಪಗೆ|

ಹೇಗಿದ್ದರೂ ಎಲ್ಲರೂ

ಒಂದೇ ಎಲ್ಲರ ನೆರಳ

ಬಣ್ಣ ಕಪ್ಪಗೆ||


*ತಪ್ಪಿದ್ದಲ್ಲ*


ನಾನು ಶ್ರೇಷ್ಠ 

ಎಂಬ ಭಾವನೆಯಿಂದ

ಆತ್ಮವಿಶ್ವಾಸ ವೃದ್ಧಿಯಾದರೆ

ತಪ್ಪಿಲ್ಲ |

ನಾನೇ ಶ್ರೇಷ್ಠ

ಎಂಬ ಅಹಂಕಾರ 

ಬೆಳೆಸಿಕೊಂಡರೆ 

ಅಧಃಪತನ 

ತಪ್ಪಿದ್ದಲ್ಲ||


*ಮರೆಯಬಾರದು*


ಉನ್ನತವಾದ 

ಗುರಿಸಾಧನೆಯ

ಕಡೆ ಹೆಜ್ಜೆ ಹಾಕುವಾಗ

ಹಿಂತಿರುಗಿ ನೋಡಬಾರದು|

ಗುರಿಸಾಧಿಸಿ 

ಉನ್ನತಿಗೇರಿದಾಗ 

ಬಂದ ಹಾದಿಯನ್ನು

ಮರೆಯಬಾರದು||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

9900925529 

04 ಜನವರಿ 2021

ಸುರಿಯುವರು .ಹನಿ

 


*ಸಿಹಿಜೀವಿಯ ಹನಿ*


*ಸುರಿಯುವರು*


ನಾವು ತಿನ್ನುವ ಅನ್ನ

ಸಂಪಾದಿಸಲು 

ಅನ್ನದಾತ ಹೊಲಗಳಲ್ಲಿ

ಬೆವರು ಸುರಿಸುವರು|

ನಗರದ ಜನ ತಿಂದ

ಅನ್ನ ಕರಗಿಸಲು

ಜಿಮ್ ಗಳಿಗೆ ಹಣ 

ಸುರಿಯುವರು ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

03 ಜನವರಿ 2021

ನನಪಿದೆ ಕವನ


 *ನೆನಪಿದೆ*


ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ

ಕುಣಿದ ದಿನವು ನೆನಪಿದೆ

ನನ್ನ ನೃತ್ಯ ಕಂಡು ಅವನು

ಮೆಚ್ಚಿದ ಮಾತು ನೆನಪಿದೆ.


ವಾಲೆ ಜುಮುಕಿ ಕುಣಿತ ಕಂಡು

ಕರಗಳನ್ನು ತಟ್ಟಿ ನಲಿದು

ಬೆರಳಿನುಂಗುರದ ಸೌಂದರ್ಯ

ಕಂಡು ಅವನು ನಲಿದ ನೆನೆಪಿದೆ .


ನಾಗರ ಜಡೆ ಸರಿಸಿ ನಿಂದು

ರಾಗ ತಾಳ ಲಯಕೆ 

ಕುಣಿಯುವಾಗ ಅವನು 

ಮುಗುಳು ನಕ್ಕ  ನೆನಪಿದೆ.


ನನ್ನ ‌ನೃತ್ಯ ಮುಗಿದ ಮೇಲೆ

ಬಳಿಗೆ ಬಂದು ಬೈತಲೆ ಬಟ್ಟು

ಸರಿಸಿ ಮುತ್ತ ನೀಡಿದಾಗ 

ಕಂಠೀಹಾರ ಬಿಗಿಯಾದುದು ನೆನಪಿದೆ


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ