29 ಡಿಸೆಂಬರ್ 2020

ಪಿರಮಿಡ್ ಕವನಗಳು

 *ಪಿರಮಿಡ್ ಕವನಗಳು*


    

               ಆ

              ಕವಿ

           ರಸ ಋಷಿ

         ವಿಶ್ವಮಾನವ

       ಕನ್ನಡದ ಕಟ್ಟಾಳು

       ಅನಿಕೇತನ ಚೇತನ 




      ದೊ.

     ಮಳೆ

    ಸುರಿದು

    ನಿಂತಾಗಿದೆ

 ಮತ್ತೆ ಯಾವಾಗ?


       ಈ

      ತಂತಿ

    ಮೀಟಿದೆ

   ನಾದಮಯ

 ವೀಣೆ ಸಾರ್ಥಕ.


           ಈ

         ಕೊಡೆ

        ನಮಗೆ

       ಉಪಕಾರಿ

     ಬೇಸಿಗೆಯಲು

    ಮಳೆಗಾಲದಲೂ

  ಪ್ರಣಯದಾಟದಲೂ .




*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ




28 ಡಿಸೆಂಬರ್ 2020

ಹೇಗೆ . ಹನಿ

 *ಹೇಗೆ*


ಜೀರುಂಡೆ ಹಿಡಿದು

ಆಡಿದ ಆ ಬಾಲ್ಯದ

ನೆನಪ ಮರೆಯಲಿ ಹೇಗೆ?

ಅಂತಹ ಮಧುರ

ಮತ್ತೆ ಬಾಲ್ಯವನ್ನು

ಪಡೆಯಬೇಕಿದೆ

ಗೊತ್ತಿದ್ದವರು ಹೇಳಿ ಹೇಗೆ?



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

27 ಡಿಸೆಂಬರ್ 2020

ಮಂಗನಾಟ


 *ಶಿಶುಗೀತೆ*


*ಮಂಗನಾಟ*


🐒🐐🐒🐐🐒🐐🐒


ಕಾಡಲಿದ್ದ‌ ಕೋತಿಯೊಂದು

ನಾಡಿಗೆ ಬಂದಿತು

ಯಜಮಾನನ ಅನುಮತಿಯಂತೆ

ಮೇಕೆಗಳ ಜೊತೆ ಸೇರಿತು.


ಮೊದಲು ಸುಮ್ಮನಿದ್ದ

ಕೋತಿ ಆಟ ತೋರಿತು

ಮೇಕೆ ಪಾಲಿನ ಆಹಾರವನ್ನು

ತಿಂದು ತೇಗಿತು .


ಮನೆಯ ಒಳಗೆ ನುಗ್ಗಿ

ಮೊಸರು ಬೆಣ್ಣೆ ತಿಂದಿತು

ಮೇಕೆ ಬಾಯಿಗೆ ಬೆಣ್ಣೆ

ಸವರಿ ಸುಮ್ಮನಿದ್ದಿತು.


ದಿನಕಳೆದಂತೆ ಕೋತಿಯಾಟ

ಯಜಮಾನ ಕಂಡನು 

ಕೋತಿ ಹಿಡಿದು ಕಾಡಿಗೆ

ಬಿಟ್ಟು ಬಂದನು .



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


🐐🐒🐐🐒🐐🐒🐐🐒

26 ಡಿಸೆಂಬರ್ 2020

ಆತ್ಮವಿಶ್ವಾಸ( ಕವನ )

 *ಆತ್ಮವಿಶ್ವಾಸ*


ತಿಳಿ ನೀಲಿ ಬಾನಿನಲಿ

ಅಲ್ಲಲ್ಲಿ ಬಿಳಿ‌ಮೋಡ

ದಡದಲಿ ನಿಂತಿವೆ 

ಬಣ್ಣದ ದೋಣಿಗಳ ನೋಡ


ಬಣ್ಣಗಳೇನೋ ಇವೆ

ಬದುಕು ಬರೀ ಕಪ್ಪು ಬಿಳುಪು

ದಡ ಸೇರುವುದು ಖಚಿತವಿಲ್ಲ

ಬಿರುಗಾಳಿಯದೇ ಕೆಟ್ಟ ನೆನಪು


ಕಳೆದ ದಿನಗಳಲಿ

ಹೀಗಿರಲಿಲ್ಲ ಕಷ್ಟಗಳು

ಈಗೇಕೋ ದಿನವೂ 

ತೊಂದರೆ ತಾಪತ್ರಯಗಳು


ದೋಣಿ ನಡೆಸುವುದನ್ನು

ನಿಲ್ಲಿಸಲಾರೆ ಇಂದು

ಒಳಿತಾಗುವುದು ಮುಂದೆ

ಎಂಬ ಆತ್ಮವಿಶ್ವಾಸ ನಂದು 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

ಮಂತ್ರಾಲಯ ಹನಿ

 *ಸಿಹಿಜೀವಿಯ ಹನಿ*


*ಮಂತ್ರಾಲಯ*


ಸಣ್ಣ ತೂತು

ದೊಡ್ಡ ದೋಣಿ

ಮುಳುಗಿಸಬಹುದು

ಸಣ್ಣ ಅಪನಂಬಿಕೆ

ಸುಂದರ  ಸಂಸಾರವ

ನಾಶ ಮಾಡುವುದು|

ಪರಸ್ಪರ ನಂಬಿಕೆ

ಸಹಕಾರ ಇದ್ದರೆ

ಪ್ರತಿ ಮನೆಯು 

ಮಂತ್ರಾಲಯವಾಗುವುದು||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು