27 ಡಿಸೆಂಬರ್ 2020

ಮಂಗನಾಟ


 *ಶಿಶುಗೀತೆ*


*ಮಂಗನಾಟ*


🐒🐐🐒🐐🐒🐐🐒


ಕಾಡಲಿದ್ದ‌ ಕೋತಿಯೊಂದು

ನಾಡಿಗೆ ಬಂದಿತು

ಯಜಮಾನನ ಅನುಮತಿಯಂತೆ

ಮೇಕೆಗಳ ಜೊತೆ ಸೇರಿತು.


ಮೊದಲು ಸುಮ್ಮನಿದ್ದ

ಕೋತಿ ಆಟ ತೋರಿತು

ಮೇಕೆ ಪಾಲಿನ ಆಹಾರವನ್ನು

ತಿಂದು ತೇಗಿತು .


ಮನೆಯ ಒಳಗೆ ನುಗ್ಗಿ

ಮೊಸರು ಬೆಣ್ಣೆ ತಿಂದಿತು

ಮೇಕೆ ಬಾಯಿಗೆ ಬೆಣ್ಣೆ

ಸವರಿ ಸುಮ್ಮನಿದ್ದಿತು.


ದಿನಕಳೆದಂತೆ ಕೋತಿಯಾಟ

ಯಜಮಾನ ಕಂಡನು 

ಕೋತಿ ಹಿಡಿದು ಕಾಡಿಗೆ

ಬಿಟ್ಟು ಬಂದನು .



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


🐐🐒🐐🐒🐐🐒🐐🐒

26 ಡಿಸೆಂಬರ್ 2020

ಆತ್ಮವಿಶ್ವಾಸ( ಕವನ )

 *ಆತ್ಮವಿಶ್ವಾಸ*


ತಿಳಿ ನೀಲಿ ಬಾನಿನಲಿ

ಅಲ್ಲಲ್ಲಿ ಬಿಳಿ‌ಮೋಡ

ದಡದಲಿ ನಿಂತಿವೆ 

ಬಣ್ಣದ ದೋಣಿಗಳ ನೋಡ


ಬಣ್ಣಗಳೇನೋ ಇವೆ

ಬದುಕು ಬರೀ ಕಪ್ಪು ಬಿಳುಪು

ದಡ ಸೇರುವುದು ಖಚಿತವಿಲ್ಲ

ಬಿರುಗಾಳಿಯದೇ ಕೆಟ್ಟ ನೆನಪು


ಕಳೆದ ದಿನಗಳಲಿ

ಹೀಗಿರಲಿಲ್ಲ ಕಷ್ಟಗಳು

ಈಗೇಕೋ ದಿನವೂ 

ತೊಂದರೆ ತಾಪತ್ರಯಗಳು


ದೋಣಿ ನಡೆಸುವುದನ್ನು

ನಿಲ್ಲಿಸಲಾರೆ ಇಂದು

ಒಳಿತಾಗುವುದು ಮುಂದೆ

ಎಂಬ ಆತ್ಮವಿಶ್ವಾಸ ನಂದು 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

ಮಂತ್ರಾಲಯ ಹನಿ

 *ಸಿಹಿಜೀವಿಯ ಹನಿ*


*ಮಂತ್ರಾಲಯ*


ಸಣ್ಣ ತೂತು

ದೊಡ್ಡ ದೋಣಿ

ಮುಳುಗಿಸಬಹುದು

ಸಣ್ಣ ಅಪನಂಬಿಕೆ

ಸುಂದರ  ಸಂಸಾರವ

ನಾಶ ಮಾಡುವುದು|

ಪರಸ್ಪರ ನಂಬಿಕೆ

ಸಹಕಾರ ಇದ್ದರೆ

ಪ್ರತಿ ಮನೆಯು 

ಮಂತ್ರಾಲಯವಾಗುವುದು||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

ಕೊಡೆ. ಬಿಡೆ .ಹನಿ


 *ಸಿಹಿಜೀವಿಯ ಹನಿ*


*ಬಿಡೆ*


⛱️🏖️⛱️⛱️⛱️

ಮಳೆಯಲಿ

ಇರುವುದೊಂದೆ

ಕೊಡೆ

ನೀ ಕೊಡೆ

ನಾ ಬಿಡೆ

ಇನ್ನೂ ಸನಿಹ

ಬಾರೆ ನಾ

ನಿನ್ನ ಬಿಡೆ

ಕೊಡೆಯಾಕೆ

ಬಿಡೆ 



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

🚤🏖️⛱️🚤🏖️🚤🏖️⛱️

25 ಡಿಸೆಂಬರ್ 2020

ಶುನಕ ಮತ್ತು ವಾಜಿ ಹನಿಗಳು


 *ಸಿಹಿಜೀವಿಯ ಹನಿಗಳು*



*ಶುನಕ*

🐶🐶🐶🐶


ಸಾಮಾನ್ಯವಾದ

ಪ್ರಾಣಿ ನಾನು 

ಶುನಕ|

ಅತಿಯಾಗಿ

ಆಸೆಪಡುವುದಿಲ್ಲ

ಅನ್ನವೊಂದಿದ್ದರೆ 

ಕಣ್ಣೆತ್ತಿಯೂ

ನೋಡುವುದಿಲ್ಲ

ಕನಕ||




*ವಾಜಿ*


🐎🐎🐎🐎🐎

ಅಂದು 

ರಥಗಳಲಿ

ರಥಿಕರು,ರಾಜರು

ಬಳಸಿದರು

ಹೆಮ್ಮೆಯಿತ್ತು ನನಗೆ

ನಾನು ವಾಜಿ|

ಇಂದು 

ಬೇಸರವಾಗುತಿದೆ

ನನ್ನ ಬಳಸುವರು

ಕೇವಲ ಆಡಲು ಬಾಜಿ||




*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

🐎🐶🐎🐶🐎🐶🐎🐶