17 ಡಿಸೆಂಬರ್ 2020

ಗುದ್ದು_ ರದ್ದು

 *ಗುದ್ದು_ರದ್ದು*


ಸದನದಲ್ಲಿ

ನೋಡಲಾಗದು

ಜನಪ್ರತಿನಿಧಿಗಳ 

ಸದ್ದು ಮತ್ತು ಗುದ್ದು|

ದಯವಿಟ್ಟು 

ಮಾಡಿಬಿಡಿ

ವಿಧಾನ ಪರಿಷತ್ ರದ್ದು||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ದಂಡ _ದೀರ್ಘದಂಡ ಹನಿ

 *ದಂಡ_ದೀರ್ಘದಂಡ*


ಲಾಕ್ಡೌನ್ ಸಮಯದಲ್ಲಿ

ನಗರದಿಂದ ಹಳ್ಳಿಗೆ

ಬರವವರನ್ನು ತಡೆದು

ಹಾಕಿದ್ದರು ಬಹಿಷ್ಕಾರ

ಮತ್ತು ದಂಡ|

ಗ್ರಾಮ ಪಂಚಾಯತಿ

ಚುನಾವಣೆಗೆ ಮತ

ಹಾಕಲು ಬರಲೇಬೇಕು

ಎಂದು ಹಾಕುತ್ತಿದ್ದರೆ

ಇಂದು ದೀರ್ಘದಂಡ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

15 ಡಿಸೆಂಬರ್ 2020

ಒಲವಿಗಾಗಿ (ಕವನ)


 *ಒಲವಿಗಾಗಿ*


ನಲ್ಲೆ ಬರೆಯುವೆ 

ಒಂದು ಪ್ರೇಮದ ಓಲೆ 

ಮರೆಯದೇ ಬಂದು

ಸೇರು ಪ್ರೇಮದ  ಶಾಲೆ 


ಕಲಿಸುವೆ ನಿನಗೆ 

ಪ್ರೇಮದ ಪಾಠಗಳ

ತಿನಿಸುವೆ ಸಿಹಿಗಳ

ಬಳಸಿ ಅಧರಗಳ 


ತೋರಿಸುವೆ ನಿನಗೆ

ಮಧು ಚಂದ್ರವ 

ಕತ್ತಲಾಟವ ಕಲಿಸುವೆ 

ಆರಿಸುತಾ ಲಾಂದ್ರವ 


ಕಾಯುತಿರುವೆ ದಾರಿಯ

ನೋಡುತಾ ನಿನಗಾಗಿ

ಬಂದು ಬಿಡು ಬೇಗನೆ 

ನಮ್ಮ ಒಲವಿಗಾಗಿ


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ




ಗ್ರಹಣ ಹನಿ


 *ಗ್ರಹಣ*


ನಮ್ಮ ರಾಜಕಾರಣಿಗಳಿಗೆ

ಯಾವುದೇ ಪ್ರಭಾವ 

ಬೀರುವುದಿಲ್ಲ ಗ್ರಹಗಳು

ಮತ್ತು ಗ್ರಹಣ|

ಯಾವ ಮಾರ್ಗದಿಂದರೂ

ಮಾಡೇ ಮಾಡುವರು

ಹಗರಣ,ಹಣ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

14 ಡಿಸೆಂಬರ್ 2020

ಸಾಲದರೆಡು ಕಣ್ಣು (ಕವನ)




*ಸಾಲದರೆಡು ಕಣ್ಣು*


ಭುವಿಯಲಿ ಬ್ರಹ್ಮನ  ಸೃಷ್ಟಿಯ

ಸೌಂದರ್ಯವೇ  ಈ ಹೆಣ್ಣು

ಮೂಗುತಿ ಧರಿಸಿದ ಅವಳ

ನೋಡಲು ಸಾಲದೆರಡು ಕಣ್ಣು.


ಧರಿಸಿ  ಬಂದರೆ ಯುವತಿಯರು

ಚಿನ್ನ, ಬೆಳ್ಳಿ ,ವಜ್ರದ  ನತ್ತು

ನೋಡುವ ಸೌಂದರ್ಯೋಪಾಸಕರಿಗೆ 

ಕಳೆದು ಹೋದದ್ದೆ ಗೊತ್ತಾಗೊಲ್ಲ ಹೊತ್ತು. 


ಕಾಲ್ಬೆರಳಿಗೆ ಹಾಕಿದ ಕಾಲುಂಗುರ

ಮುತ್ತೈದೆಯರ ಪಾಲಿಗೆ ಸೌಭಾಗ್ಯ

ನೀರೆಯರ ಕಾಲ್ಬೆರಳ ಅಲಂಕರಿಸಿದ

ಕಾಲುಂಗುರದ ಭಾಗ್ಯವೋ ಭಾಗ್ಯ.


ಕಾಲಂದುಗೆಯ ಧರಿಸಿ ಘಲ್ ಘಲ್

ಸದ್ದು ಮಾಡಿ ನಾರಿ ಬಂದರೆ ಬೀದಿಯಲಿ

ಸಂಗೀತದ ಸರಿಗಮಗಳು ಉಲಿದಂತೆ

ಭಾಸವಾಗುವುದು ನಮ್ಮ ಕಿವಿಗಳಲಿ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ