14 ಅಕ್ಟೋಬರ್ 2020

ಜೀವನದಿ (ಚುಟುಕು)


  ಚುಟುಕು


*ಜೀವನದಿ*


ಚಿಂತಿಪೆಯೇಕೆ  ನಾಲ್ಕು ದಿನದ  ಈ ಜೀವನದಿ

ಗಾಳಿ ಗೋಪುರ ಕಟ್ಟದಿರು ನೀನು  ಗಗನದಿ

ನಿಲ್ಲದಿರು ಸಾಗುತಿರು ನೋಡಿ ಹರಿವ  ನದಿ

ಅನಿವಾರ್ಯವಲ್ಲ ಯಾರೂ ನೀನೇ "ಜೀವನದಿ"


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


13 ಅಕ್ಟೋಬರ್ 2020

ಮಗಳೆಂದರೆ (ಹನಿ)


 *ಭಾಗ್ಯಶಾಲಿ*


ಮನೆ ಮಗಳೆಂದರೆ

ಲಕ್ಷ್ಮಿ , ಸರಸ್ವತಿ, ಪಾರ್ವತಿ

ಈ ಮೂವರ ಪಡೆದ 

ನಾನೇ ಭಾಗ್ಯಶಾಲಿ|

ಅವಳು ಕಣ್ಮರೆಯಾದರೆ

ನನ್ನ ಜೀವನವೇ ಖಾಲಿ||


*ಸಿಹಿಜೀವಿ*


ಸಿ ಜಿ ವೆಂಕಟೇಶ್ವರ

ತುಮಕೂರು



11 ಅಕ್ಟೋಬರ್ 2020

ಮಕ್ಕಳ ಆಟ (ಶಿಶು ಗೀತೆ)


 *ಮಕ್ಕಳ ಆಟ*



ಕಿಟ್ಟು ಬಂದನು ಪುಟ್ಟನ ಮನೆಗೆ

ಆಟವನಾಡಲು

ಕಾಲಿಗೆ ಎರಗಿದನವನು ಪುಟ್ಟನ

ಅಜ್ಜಿಯ ನೋಡಲು



ಪೆನ್ಸಿಲ್ ಪೇಪರ್ ಹಿಡಿದು

ಪರಿಸರ ಚಿತ್ರವ ಬಿಡಿಸಿದರು

ಬಣ್ಣದ ಬ್ರಷ್ಷನು ಹಿಡಿದು

ಚಿತ್ರಕೆ ಬಣ್ಣವ ತುಂಬಿದರು.


ದಾರವ ಹಿಡಿದು ಸೂತ್ರವ ಕಟ್ಟಿ

ಪತಂಗ ಮಾಡಿದರು

ಬಯಲಿಗೆ ಬಂದು ಪತಂಗ

ಹಾರಿಸಿ ಕುಣಿದಾಡಿದರು.


ಚಾಟಿಯ ಹಿಡಿದು ಬುಗುರಿಗೆ 

ಸುತ್ತಿ ಆಟವನಾಡಿದರು

ಹಸಿವಾದಾಗ ಅಮ್ಮನು ಕರೆದು

ಊಟವ ನೀಡಿದರು.


ಸಂಜೆಯಾಗಿದ್ದು ತಿಳಿಯಲೆ ಇಲ್ಲ

ಆಡುತ ವಿವಿಧ ಆಟ

ಕಿಟ್ಟು ಹೊರಟನು ತನ್ನಯ ಮನೆಗೆ  ಮಾಡುತ ಗೆಳಯಗೆ ಟಾಟಾ


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


ಎರಡು ಚುಟುಕುಗಳು


 

ಚುಟುಕು ೧



*ಮಾಸದ ಪ್ರೀತಿ*



ನವೆಂಬರ್ ತಿಂಗಳಲ್ಲಿ

ಕನ್ನಡ ಧ್ವಜ ಹಿಡಿದು 

ಕೆಂಪು ಹಳದಿಯ ಬಟ್ಟೆಗಳನ್ನು

ತೊಟ್ಟು ಕೂಗಿದ್ದೇ ಕೂಗಿದ್ದು

ಕನ್ನಡ, ಕನ್ನಡ,ಕನ್ನಡ|

ಮುಂದಿನ ಹನ್ನೊಂದು ತಿಂಗಳು

ಅದೇ ಮಾಮೂಲು

ಎನ್ನಡ, ಎಕ್ಕಡ, ವಾಡ||


ಚುಟುಕು ೨


*ಅರ್ಹತೆ*


ರಾಜಕಾರಣಿಗಳಿಗೆ ನಮ್ಮ

ನಮ್ಮ ಸಂವಿಧಾನದಲ್ಲಿ 

ನಿಗಧಿಪಡಿಸಿಲ್ಲ ಕನಿಷ್ಟ

ವಿದ್ಯಾರ್ಹತೆ|

ಮಂತ್ರಿಯ ಮಗನಿಗೆ ಅಮ್ಮನೆಂದರು

ಪೀಯೂಸಿ ಪೇಲಾದ್ರೇನಂತೆ, ನೀಂತ್ಕೋ

ಗ್ರಾಮ ಪಂಚಾಯಿತಿ ಚುನಾವಣೆ

ಮುಂದೈತೆ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು



ಪ್ರಜಾ ಪ್ರಗತಿ ಹನಿಗಳು ೧೧/೧೦/೨೦೨೦