05 ಅಕ್ಟೋಬರ್ 2020

ಸಜ್ಜನರ ಸಂಗ (ಹನಿ)




*ಸಜ್ಜನರ ಸಂಗ*


ಕುಡಿಯಲು ಸಿಹಿನೀರೆ 

ಬೇಕು ಎಷ್ಟಿದ್ದರೇನು 

ಸುತ್ತ ಮುತ್ತ ಸಾಗರ|

ನಮ್ಮನ್ನು ಅರಿಯಲು

ವ್ಯಕ್ತಿತ್ವ ಬೆಳಗಲು

ಸಜ್ಜನರ ಸಂಗವೇ ಬೇಕು 

ಎಷ್ಟಿದ್ದರೇನು ಜನಸಾಗರ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

27 ಸೆಪ್ಟೆಂಬರ್ 2020

ತಂಪು ನೀಡು ಬಾ


 *ತಂಪು ನೀಡು ಬಾ*



ಅಳಿದ ದಿನಗಳ ನೆನೆದು

ಉಳಿದ ನೆನಪುಗಳ ಸವಿದು

ಕಲೆತು ಕಲಿತು ಜೊತೆಯಲಿ

ನಡೆದ ಸವಿಘಳಿಗೆಗಳ ನೆನೆದಾಗ

ಅಂತರಂಗವೇಕೋ ಮೌನವಾಗುತಿದೆ.


ನೀನೆಚ್ಚು ನಾನೆಚ್ಚು ಎಂಬ

ಹಮ್ಮಿನಲಿ ನೆಚ್ಚಿನ ಪ್ರ್ರೀತಿಯ

ತೊರೆದು ಹುಚ್ಚು ನಿರ್ದಾರವ ಮಾಡಿ

ದೂರಾದರೂ ಬೆಚ್ಚನೆಯ ಕ್ಷಣಗಳ

ನೆನಪಲಿ ಅಂತರಂಗವೇಕೋ ಮೌನವಾಗುತಿದೆ.


ಮಾತಿಗೆ ಮಾತು ಬೆಳೆಸಿ  

ಕುಳಿತು ಮಾತನಾಡಿ ಜೊತೆಯಾಗದೆ

ಮಾತನಾಡದೆ ಎದ್ದು ಹೋದ 

ನಿನ್ನನು ಮಾತನಾಡಿಸಿ ಕರೆಯದ

ನನ್ನ  ಅಂತರಂಗವೇಕೋ  ಮೌನವಾಗುತಿದೆ .


ನನ್ನಂತರಂಗ ನಾ ಮಾಡಿದ 

ತಪ್ಪನ್ನು ತಿಳಿಸಿದೆ ,ನಿನ್ನದು ಅದೇ ಎಂದು ಭಾವಿಸಿರುವೆ ,ಮೌನ ಮುರಿದು

ಮಾತನಾಡಲು ಎಂದು  ನೀ ಬರುವೆ?

ಕಾಯುತಿರುವೆ ,ತಂಪು ನೀಡು ಬಾ! 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು