23 ಸೆಪ್ಟೆಂಬರ್ 2020

TALP INDUCTION 1 ತರಬೇತಿಯ ಏಳನೇ ದಿನದ ತರಬೇತಿಯ ವರದಿ

 ಸಾರ್ವಜನಿಕ ಶಿಕ್ಷಣ ಇಲಾಖೆ.

ಡಯಟ್ ತುಮಕೂರು.


TALP INDUCTION 1 ತರಬೇತಿಯ

ಏಳನೇ ದಿನದ ತರಬೇತಿಯ ವರದಿ 


ವರದಿಗಾರರು 


ಸಿ ಜಿ ವೆಂಕಟೇಶ್ವರ

ಸಮಾಜ ವಿಜ್ಞಾನ ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ 

ಕ್ಯಾತಸಂದ್ರ

ತುಮಕೂರು






*ಕಂಪ್ಯೂಟರ್ ಶಿಶುಗೀತೆ*



ಒಂದು ಎರಡು 

ಕಂಪ್ಯೂಟರ್‌ ಆನ್ ಮಾಡು


ಮೂರು ನಾಲ್ಕು

ಪಾಸ್ ವರ್ಡ್ ಹಾಕು


ಐದು ಆರು

ಕಂಪ್ಯೂಟರ್ ಕಲಿಕೆ ಜೋರು


ಏಳು‌ ಎಂಟು

ಇಂಟರ್ನೆಟ್ ನಂಟು 


ಒಂಭತ್ತು ಹತ್ತು

ಷಟ್ ಡೌನ್ ಬಟನ್ ಒತ್ತು


ಒಂದರಿಂದ ಹತ್ತು ಹೀಗಿತ್ತು

ಕಂಪ್ಯೂಟರ್ ಕಲಿಕೆ ಮಂದುವರೆದಿತ್ತು.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ



ಮೊದಲಿಗೆ ಹಿರಿಯ ಸಹಶಿಕ್ಷಕರಾದ ‌ಶ್ರೀ  ಹೆಚ್ ಎಲ್ ಜಗದೀಶ್ ರವರು ಪ್ರೊಜೆಕ್ಟರ್ ಮತ್ತು ಮೊಬೈಲ್ ಬಳಸಿಕೊಂಡು ಉತ್ತಮವಾಗಿ ವರದಿ ವಾಚನ ಮಾಡುತ್ತಾ ತಮ್ಮ ಕಂಪ್ಯೂಟರ್   ಕಲಿಕೆಯಲ್ಲಿ  ಆದ ಪ್ರಗತಿಯ ಬಗ್ಗೆ ಸಂತಸ ವ್ಕಕ್ತ ಪಡಿಸಿದರು.






ಚಿತ್ರ ಕಲಾ ಶಿಕ್ಷಕರಾದ ಶ್ರೀ ರವಿ ರವರು ಪವರ್ ಡೈರೆಕ್ಟರ್ ಆಪ್ ನಲ್ಲಿ ಬಹಳ ಸೊಗಸಾಗಿ ಮಾಡಿದ ವೀಡಿಯೋ ವರದಿ ಮಂಡಿಸಿದರು. 










ದಿನದ ಆಪ್ ಅನ್ನು ಶಿಕ್ಷಕರಾದ ಶ್ರೀ

 ಮಹಮ್ಮದ್ ಮೋಯಿನ್  ರವರು ಪರಿಚಯಿಸಿದರು , ಎಮ್ ಎಸ್ doc ಆಪ್ ನ್ನು ಬಳಸುವಾ ರೀತಿ ತಿಳಿಸಿದರು.



ವರದಿ ಮಂಡಿಸಿದ ಇಬ್ಬರೂ ಶಿಕ್ಷಕರಿಗೆ ಮತ್ತು ಆಪ್ ಪರಿಚಯಿಸಿದ ಶಿಕ್ಷಕರಿಗೆ ಸಂಪನ್ಮೂಲ ವ್ಜಕಿಗಳು ಮತ್ತು ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.




ಸ್ಪ್ರೆಡ್ ಶೀಟ್ ಬಗ್ಗೆ ತಿಳಿಸುತ್ತಾ , ಸ್ಪ್ರೆಡ್ ಶೀಟ್ ಅನ್ನು ಉಪಯೋಗಿಸುವ ಬಗೆಯನ್ನು  ರಿನೇಮ್  ಮಾಡುವ ರೀತಿಯನ್ನು  ಹೇಳಿಕೊಟ್ಟರು.




ಸ್ಪ್ರೆಡ್ ಶೀಟ್ ಬಗ್ಗೆ ಹೇಳುತ್ತಾ

ಸಂಪನ್ಮೂಲ ವ್ಯಕ್ತಿಗಳು ಪದೇ ಪದೇ 

ಹೇಳುತ್ತಿದ್ದರು ಸೆಲೆಕ್ಟ್ ಮಾಡಿ ಸೆಲ್ಲು|

ನಟ ನಟಿಯರ ಸುದ್ದಿ ನೋಡುತ್ತಾ

ಬೇಸತ್ತ ನಮಗೆ ಕಾರಾಗೃಹದ 

ಶಬ್ದ ಕೇಳುತ್ತಲೇ ಇದೆ ಇಲ್ಲೂ||





ಟೀ ವಿರಾಮದಲ್ಲಿ‌ ತಾಯಿ ಮದ್ದಮ್ಮ ಎಲ್ಲಾ ಕಂಪ್ಯೂಟರ್ ಕಲಿಕಾರ್ಥಿಗಳಿಗೆ ಟೀ ವಿತರಿಸಿದರು.



ಟೀ ವಿರಾಮದ ಬಳಿಕ ಕಲಿಕೆಯನ್ನು ಮುಂದುವರೆಸುತ್ತಾ ಕೊಟ್ಟಿರು ದತ್ತಾಂಶದ ಆಧಾರದ ‌ಮೇಲೆ ಅತಿ ಹೆಚ್ಚು ಅತಿ ಕಡಿಮೆ ಅಂಶಗಳನ್ನು ಸುಲಭವಾಗಿ ಪಡೆಯಲು ಸ್ಪ್ರೆಡ್ ಶೀಟ್ ಹೇಗೆ ಸಹಾಯಕ ಎಂದು ಚರಿತಾ ಚಕೋರಿ ಮೇಡಂ  ತಿಳಿಸಿ ಕೊಟ್ಟರು.





ಊಟದ ವಿರಾಮ1.30 ರಿಂದ 


2. 15 ರವರೆಗೆ



ಊಟದ ವಿರಾಮದ ಬಳಿಕ ಸಂಪನ್ಮೂಲ ಶಿಕ್ಷಕರಾದ ಶ್ರೀಮತಿ ಚರಿತಾ ಚಕೋರಿ ಮೇಡಂ ರವರು ಕೊಟ್ಟಿರುವ ಸ್ಪ್ರೆಡ್ ಶೀಟ್ ನಲ್ಲಿ  ಶೇಕಡಾವಾರು ಮತ್ತು ಸರಾಸರಿ ಕಂಡು ಹಿಡಿಯುವ ರೀತಿಯನ್ನು ಹೇಳಿಕೊಟ್ಟರು.


ಮೇಲ್ ಮತ್ತು ಪೀಮೇಲ್ ಸಾರ್ಟಿಂಗ್ ಮಾಡುವ ಲಘು ಚರ್ಚೆ ಆಯಿತು.



ಕಲಿಕಾರ್ಥಿ ಶಿಕ್ಷಕರೊಬ್ಬರು 

ನನ್ನ ಕೇಳಿದರು ಈ ಕಂಪ್ಯೂಟರ್

ಮೇಲೋ ಅಥವಾ ಪೀಮೇಲೊ

ಕಾಡುತಿದೆ ಅನುಮಾನ|

ಮೇಲೇ ಇರಬಹುದು

ನಾನಂದೆ ಕಮಾಂಡ್ ಕೊಟ್ಟ

ತಕ್ಷಣ ವಿಧೇಯ ಗಂಡನಂತೆ

ಕೆಲಸ ಮಾಡುತ್ತದಲ್ಲ ಇಂಚೂರು

ತೋರದೆ ಬಿಗುಮಾನ||





ನಂತರ ನಾವು ಲ್ಯಾಬ್ ನಲ್ಲಿ ಅಸೈನ್ಮೆಂಟ್ ಮಾಡುವಲ್ಲಿ ಮಗ್ನರಾದೆವು.




ಈ ಮಧ್ಯೆ ನಮ್ಮ ತರಬೇತಿ ಕೇಂದ್ರದ ನೋಡಲ್ ಅಧಿಕಾರಿಗಳಾದ ಶ್ರೀಮತಿ ಎಸ್ ಆರ್ ಪ್ರಮೀಳಾ ಮೇಡಂ ರವರು ತರಬೇತಿ ಸ್ಥಳಕ್ಕೆ ಭೇಟಿ ನೀಡಿ, ಕೆಲ ಶಿಕ್ಷಕರಿಗೆ ಸರಾಸರಿ ಮತ್ತು ಶೇಕಡಾವಾರು ಮಾಡಲು ಅವರು ಮಾರ್ಗದರ್ಶನ ನೀಡಿದರು.



ನಾಲ್ಕು ಗಂಟೆಗೆ ಸಂಪನ್ಮೂಲ ಶಿಕ್ಷಕರಾದ ಶ್ರೀ ಚಂದ್ರಶೇಖರ್ ಸರ್ ರವರು

ಹನ್ನೆರಡನೇ ಅಸೈನ್ಮೆಂಟ್ ಮಾಡುವ ರೀತಿಯನ್ನು ತಿಳಿಸಿದರು.



ಕೊಟ್ಟಿರುವ ದತ್ತಾಂಶವನ್ನು ಸಂಗ್ರಹಿಸಿ ವಿವಿಧ ಬಗೆಯ ಚಾರ್ಟ್ ಮತ್ತು ಗ್ರಾಪ್ ಹಾಕುವ ಬಗ್ಗೆ ವಿವರವಾಗಿ ಪ್ರಾತ್ಯಕ್ಷಿಕೆಯನ್ನು ಮಾಡುತ್ತಾ ವಿವರಿಸಿದರು.









ನಂತರ ನಾವು ಲ್ಯಾಬ್ ನಲ್ಲಿ ನಮ್ಮ ಅಸೈನ್ಮೆಂಟ್ ಮಾಡಲು ಮಗ್ನರಾಗಿದ್ದೆವು ಸಮಯ ಸಂಜೆ 5 .30 ಕ್ಕೆ ನಮ್ಮ ಕಂಪ್ಯೂಟರ್ಗಳನ್ನು ಶಟ್ ಡೌನ್ ಮಾಡಿ ನಮ್ಮ ಮನೆಗಳತ್ತ ಪಯಣ ಬೆಳೆಸಿದೆವು .




ಸಿ ಜಿ ವೆಂಕಟೇಶ್ವರ

ಸಮಾಜ ವಿಜ್ಞಾನ ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ

ಕ್ಯಾತಸಂದ್ರ. ತುಮಕೂರು.







22 ಸೆಪ್ಟೆಂಬರ್ 2020

ಶಿಶುಗೀತೆ( computer)


 *ಕಂಪ್ಯೂಟರ್ ಶಿಶುಗೀತೆ*



ಒಂದು ಎರಡು 

ಕಂಪ್ಯೂಟರ್‌ ಆನ್ ಮಾಡು


ಮೂರು ನಾಲ್ಕು

ಪಾಸ್ ವರ್ಡ್ ಹಾಕು


ಐದು ಆರು

ಕಂಪ್ಯೂಟರ್ ಕಲಿಕೆ ಜೋರು


ಏಳು‌ ಎಂಟು

ಇಂಟರ್ನೆಟ್ ನಂಟು 


ಒಂಭತ್ತು ಹತ್ತು

ಷಟ್ ಡೌನ್ ಬಟನ್ ಒತ್ತು


ಒಂದರಿಂದ ಹತ್ತು ಹೀಗಿತ್ತು

ಕಂಪ್ಯೂಟರ್ ಕಲಿಕೆ ಮಂದುವರೆದಿತ್ತು.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಸಮಾಜ ವಿಜ್ಞಾನ

ಸರ್ಕಾರಿ ಪ್ರೌಢಶಾಲೆ

ಕ್ಯಾತಸಂದ್ರ ತುಮಕೂರು

20 ಸೆಪ್ಟೆಂಬರ್ 2020

ಸಿಹಿ ಜೀವಿಯ ಎರಡು ಹನಿಗಳು


 


*ಸಾರ್ಥಕ*


ಸಾಲು ಸಾಲು ಸೋಲು

ಬಂದರೂ ಮೇಲೇಳು

ಪುಟಿದೇಳು|

ನೀ ಗೆದ್ದಾಗ 

ಸಾರ್ಥಕವಾಗುವುದು 

ನಿನ್ನ ಬಾಳು ||



*ಪುಸ್ತಕ_ಮಸ್ತಕ*


ಓದುತಲಿದ್ದರೆ 

ಒಂದೊಂದೇ ಪುಸ್ತಕ|

ನಮಗರಿಯದೆ 

ಜ್ಞಾನ ಸಂಪತ್ತಿನಿಂದ 

ತುಂಬುವುದು 

ನಮ್ಮ ಮಸ್ತಕ ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು



19 ಸೆಪ್ಟೆಂಬರ್ 2020

TALP ತರಭೇತಿ ನಾಲ್ಕನೆ ದಿನದ ವರದಿ

 ಸಾರ್ವಜನಿಕ ಶಿಕ್ಷಣ ಇಲಾಖೆ

ಡಯಟ್ ತುಮಕೂರು.


TALP INDUCTION 1 ತರಬೇತಿಯ

ನಾಲ್ಕನೇ ದಿನದ ತರಬೇತಿಯ ವರದಿ 


ವರದಿಗಾರರು 


ಸಿ ಜಿ ವೆಂಕಟೇಶ್ವರ

ಸಮಾಜ ವಿಜ್ಞಾನ ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ 

ಕ್ಯಾತಸಂದ್ರ

ತುಮಕೂರು




ನಾಲ್ಕನೇ ದಿನದ ತರಬೇತಿಯು ಮೂರನೇ ದಿನದ ತರಬೇತಿಯ ವರದಿ ಮಾಡುವ ಮೂಲಕ ಆರಂಭವಾಯಿತು ಕ್ಯಾತಸಂದ್ರ ಶಾಲೆಯ ಚಿತ್ರಕಲಾ ಶಿಕ್ಷಕರಾದ ಶ್ರೀ ಕುಮಾರಸ್ವಾಮಿ ಸರ್ ರವರು ಆಪ್ ನಲ್ಲಿ ವೀಡಿಯೋ ಮೂಲಕ ಮೂರನೇ ದಿನದ ವರದಿಯನ್ನು ಸುಂದರ ಚಿತ್ರಗಳು ಮತ್ತು ವೀಡಿಯೋಗಳ ಮೂಲಕ ಆಕರ್ಷಕವಾಗಿ ವರದಿ ಮಂಡಿಸಿದರು.


ಶಿಬಿರಾರ್ಥಿಗಳು ಮತ್ತು ಸಂಪನ್ಮೂಲ ಶಿಕ್ಷಕರು  ವರದಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಶ್ರೀಮತಿ  ಚಂದ್ರಕಲಾ ಎಂ ಎ   ಮೇಡಂ ರವರು ಯೋಗ ೩೬೦ ಎಂಬ ಆಪ್ ಪರಿಚಯ ಮಾಡಿದರು ಇದು ಎಲ್ಲರಿಗೂ ಬೇಕಾದ ಆಪ್ .ಎಂದು ಶಿಕ್ಷಕರು ಮೆಚ್ಚುಗೆ ವ್ಕಕ್ತ ಪಡಿಸಿದರು.



ಮೊದಲ ಅವದಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಚರಿತ ಚಕೋರಿ ಮೇಡಂ ರವರು NROER ವೆಬ್ಸೈಟ್ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಎಷ್ಟು ಉಪಯುಕ್ತ, ಮತ್ತು ಅದನ್ನು ಬಳಸುವುದು ಹೇಗೆ ಎಂಬುದನ್ನು ಸವಿವರವಾಗಿ ಹೇಳಿ  ಆರನೇ ಪ್ರಾಜೆಕ್ಟ್ ಮಾಡಲು ಹೇಳಿದರು.  




ಕಂಪ್ಯೂಟರ್ ಲ್ಯಾಬ್ ನಲ್ಲಿ ನಾವು ಚಟುವಟಿಕೆಗಳನ್ನು ಮಾಡುತ್ತಿರುವಾಗ ತುಮಕೂರು ಜಿಲ್ಲಾ ಶಿಕ್ಷಣ ಶಿಕ್ಷಣ   ಮತ್ತು ತರಬೇತಿ ಕೇಂದ್ರ ದ ಹಿರಿಯ ಉಪನ್ಯಾಸಕರಾದ ಶ್ರೀ ಮಹೇಶ್ ಸರ್ ರವರು ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಶಿಕ್ಷಕರು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕಲಿಕೆಯನ್ನು ‌ಸಂತಸದಾಯಕವಾಗುವಂತೆ ಮಾಡಿ ಎಂದು ಕರೆ ನೀಡಿದರು.




ತಾಯಿ ಮುದ್ದಮ್ಮ ರವರು ಎಲ್ಲಾ ಶಿಭಿರಾರ್ಥಿಗಳಿಗೆ ಟೀ ನೀಡಿ ಬಾಯಿ ಸಿಹಿ ಮಾಡಿದರು.


ಟೀ ವಿರಾಮದ ಬಳಿಕ ಸಂಪನ್ಮೂಲ ಶಿಕ್ಷಕರಾದ ಶ್ರೀ ಚಂದ್ರ ಶೇಖರ್ ಸರ್ ರವರು ಬ್ರೌಸರ್‌ ನಲ್ಲಿ ಮಾಹಿತಿಯನ್ನು ಸರ್ಚ್ ಮಾಡುವುದು ಹೇಗೆ ? ಬುಕ್ ಮಾರ್ಕ್ ಮಾಡುವುದು ಹೇಗೆ ಎಂಬುದನ್ನು ವಿವರಿಸಿದರು.



 ಮಧ್ಯಾಹ್ನ ೧.೩೦ ರಿಂದ ೨.೧೫ ರ ವರೆಗೆ ಊಟದ ವಿರಾಮ 



ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಚಂದ್ರ ಶೇಖರ್ ಸರ್ ಮಾರ್ಗದರ್ಶನದಲ್ಲಿ ಸರ್ಚ್ ಬಾರ್ ನಲ್ಲಿ ವೆಬ್ ಸೈಟ್ ಹುಡುಕುವಾಗ ಬುಕ್ ಮಾರ್ಕ್ ಮಾಡುವುದು ಹೇಗೆ ? ಎಂದು ತೋರಿಸಿಕೊಟ್ಟರು.




ಊಟದ  ವಿರಾಮದ ನಂತರ  ಏಳನೆಯ ಪ್ರಾಜೆಕ್ಟ್  ಮಾಡಲು ಶುರು ಮಾಡಿದೆವು .






ಶಿಕ್ಷಕರು ತಮ್ಮ ಅಸೈನ್ಮೆಂಟ್ ಮಾಡುತ್ತಿರುವಾಗ ಕ್ಯಾತಸಂದ್ರ ಶಾಲೆಯ ಸಹ ಶಿಕ್ಷಕಿಯರಾದ ಶ್ರೀಮತಿ ಸುಧಾ ಕೆ ಇನಾಂದರ್ ರವರು ಮತ್ತು ಸಿ ಪಿ ನಾಗಾಲಾಂಬಿಕಾ ರವರು ಬಂದು   ಕೆಲ ಶಿಕ್ಷಕರಿಗೆ      ಕಂಪ್ಯೂಟರ್ ಕಲಿಯಲು ಮಾರ್ಗದರ್ಶನ ನೀಡಿದರು.


ವಿದ್ಯುತ್ ಕಣ್ಣಾಮುಚ್ಚಲೆಯ ನಡುವೆ ಸಂಪನ್ಮೂಲ ಶಿಕ್ಷಕಿಯಾದ ಚರಿತಾ ಚಕೋರಿ ಮೇಇ ರವರು ಕಹೂಟ್ ಆಪ್ ಬಳಸಿ ಶಿಕ್ಷಕರಿಗೆ ತಿಳಿಯದಂತೆ  ಈ ನಾಲ್ಕು ದಿನದ ತರಬೇತಿಯ ಮೌಲ್ಯಮಾಪನವನ್ನು ಮಾಡಿದರು ಈ ರಸಪ್ರಶ್ನೆ ಆಧಾರಿತ ಮೌಲ್ಯ ಮಾಪನ ದಲ್ಲಿ ಶಿಕ್ಷಕರಾದ ಸಿ ಜಿ ವೆಂಕಟೇಶ್ವರ ರವರು ಮೊದಲ ಸ್ಥಾನ ಗಳಿಸಿದರು.M M ಮತ್ತು ನಾಗಭೂಷಣಾಚಾರ್ ರವರು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು.


ಸಂಜೆ 5 30 ಕ್ಕೆ ಅಂದಿನ ತರಬೇತಿ ಮುಗಿಸಿ ಮನೆ ಕಡೆ ಹೊರಟೆವು