29 ಜುಲೈ 2020

ಸಿಹಿಜೀವಿಯ ಹನಿ (ಪಂಗನಾಮ)



*ಪಂಗನಾಮ*

ಅತಿಯಾದ ಬಡ್ಡಿಯ
ಆಸೆಗೆ ಲಕ್ಷಾಂತರ
ಸಾಲ ಕೊಟ್ಟನು
ನಮ್ಮೂರ ಶ್ಯಾಮ|
ಬಡ್ಡಿಯೂ ಇಲ್ಲ
ಅಸಲು ಮೊದಲಿಲ್ಲ
ಎಲ್ಲರೂ ಸೇರಿ
ಹಾಕಿದರು ಪಂಗನಾಮ||

*ಸಿ ಜಿ ವೆಂಕಟೇಶ್ವರ*

28 ಜುಲೈ 2020

ಸಿಹಿಜೀವಿಯ ಹಾಯ್ಕುಗಳು


*ಸಿಹಿಜೀವಿಯ ಹಾಯ್ಕುಗಳು*

( ಇಂದು ವಿಶ್ವ ಪ್ರಕೃತಿ ಸಂರಕ್ಷಣಾ ದಿನ World nature conservation day)

೮೬

ಪ್ರಕೃತಿ ಮಾತೆ
ನಮಗೆ ಅನಿವಾರ್ಯ
ಸಂರಕ್ಷಿಸೋಣ

೮೭

ಉಳಿಸಬೇಕು
ಪ್ರಕೃತಿ ಪರಂಪರೆ
ನಮ್ಮೆಲ್ಲರಿಗೆ.

೮೮


ಗಿಡ ನೆಡಿರಿ
ಕಳೆಯಲೇನು ಇಲ್ಲ
ಕಾವುದು ನಮ್ಮ.

*ಸಿ ಜಿ ವೆಂಕಟೇಶ್ವರ*



27 ಜುಲೈ 2020

ಹಾಸನ ವಾಣಿ ಪತ್ರಿಕೆಯಲ್ಲಿ ಪ್ರಕಟವಾದ ನಾಲ್ಕು ಹನಿಗಳು

ಹಾಸನ ವಾಣಿ ಪತ್ರಿಕೆಯಲ್ಲಿ ಪ್ರಕಟವಾದ ನಾಲ್ಕು ಹನಿಗಳು

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ಎರಡು ಹನಿಗಳು

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ಎರಡು ಹನಿಗಳು

ಸಿಹಿಜೀವಿಯ ಹನಿ( ಮುಗೀತಾ?)


*ಮುಗೀತಾ?*

ನಾನು ತನ್ಮಯದಿಂದ
ಹಾಡಲು ಶುರುಮಾಡಿದೆ
ಸಂಗೀತ |
ಹಾಡಿ ಮುಗಿಸಿದಾಗ
ನಮ್ಮ ಮನೆಯವರು
ನಿಧಾನವಾಗಿ ಕಿವಿಯಿಂದ
ಹತ್ತಿಯ ತೆಗೆದು ಕೇಳಿದಳು
ಮುಗೀತಾ? ||

*ಸಿ ಜಿ ವೆಂಕಟೇಶ್ವರ*