24 ಜುಲೈ 2020

ಸಿಹಿಜೀವಿಯ ಹನಿಗಳು

*ಸಿಹಿಜೀವಿಯ ಹನಿಗಳು*



*ಬ್ರೇಕು*

ಇನ್ನೂ ನಿಂತಿಲ್ಲ
ಅತಿಯಾಸೆಯ ಮೋಹ
ಹೇಳುವೆ ಇನ್ನೂ ಬೇಕು ಬೇಕು
ನಿಜವಾದ ಆನಂದ ಬೇಕೇ?
ಬೇಕುಗಳಿಗೆ ನೀನು
ಹಾಕಲೇಬೇಕು ಬ್ರೇಕು.



*ಮಾನಕಗಳು*

ಬಡವ ಬಲ್ಲಿದ
ಯಾರಾದರೇನು?
ಬಾಳಬೇಕುಅರಿತು
ನಿನ್ನ ಸಾಧನೆಗಳು,
ನಿನ್ನ ಗುಣಗಳು
ಹೇಳಬೇಕು.
ನಿನ್ನಯ ಗುರುತು .

*24/7*

ನಿನಗೆ ನಾನು
ಮಾತು ಕೊಟ್ಟಿದ್ದೆ
ಪ್ರೀತಿಸುವೆ 24/7
ಉಳಿಸಿಕೊಳ್ಳುವೆ ಮಾತನು
ಇಂದು ಪ್ರೀತಿಸಿ
ಇಂದಿನ ತಾರೀಖು24/7

*ಸಿ ಜಿ ವೆಂಕಟೇಶ್ವರ*

12 ಜುಲೈ 2020

ಸಿಹಿಜೀವಿಯ ಹಾಯ್ಕುಗಳು ( ರಾಷ್ಟ್ರೀಯ ಸರಳ ದಿನದ ನೆನಪಿಗೆ )


 *ಸಿಹಿಜೀವಿಯ  ಹಾಯ್ಕುಗಳು*

(ಇಂದು ರಾಷ್ಟ್ರೀಯ ಸರಳತೆಯ ದಿನ National Simplicity Day )

೭೬

ಸಂಕೀರ್ಣವೇಕೆ
ಸರಳವಾಗಿರೋಣ
ಎಲ್ಲರೂ ಸುಖಿ .

೭೭

ಸರಳವಾಗಿರು
ಅತಿಯಾಸೆಯ ಬಿಡು
ನಾಕವು ಇದೆ.

೭೮

ಆಡಂಬರವು
ಸಿರಿತನವೇ ಅಲ್ಲ
ಸರಳ ಗುಣ.

೭೯

ವೈಭವವೇಕೆ?
ಮಹಾತ್ಮಾ ಅಗಬೇಕೆ?
ಸರಳನಾಗು.

೮೦

ಕಲಿಸುತಿದೆ
ಸರಳವಾಗಿರಲು
ಕರೋನಕಾಲ .

*ಸಿ ಜಿ ವೆಂಕಟೇಶ್ವರ*

ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ಪ್ರಕಟವಾದ ಹನಿಗಳು

ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ಪ್ರಕಟವಾದ ಹನಿಗಳು

ಎರಡು ಹಾಯ್ಕುಗಳು

ಹಾಯ್ಕುಗಳು

೭೪

ನಮ್ಮೊಳಿತಿಗೆ
ಪ್ರಕೃತಿ ಉಳಿಸೋಣ
ವಿಕೃತಿ ಬೇಡ

೭೫

ನಾವು ಬಾಳಲು
ಪ್ರಕೃತಿಯ ಮಡಿಲು
ನಮಗಾಧಾರ

ಸಿ ಜಿ ವೆಂಕಟೇಶ್ವರ