28 ಆಗಸ್ಟ್ 2019

ಸಿಹಿಜೀವೀಯ ಹನಿಗಳು


*ವ್ಯತ್ಯಾಸ*
ಬೆವರ ಬಸಿದು
ಹಸಿದು ಉಂಡರೆ
ಹಿಟ್ಟು,,ಗೊಜ್ಜೂ ನಳಪಾಕ
ಪರರ ಬೆವರ ಹೀರಿದವರಿಗೆ
ಅಜೀರ್ಣವಾಗುವಂತೆ
ತಿಂದವರಿಗೆ ರುಚಿಸದು
ಮೈಸೂರ್ ಪಾಕ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
*ಕಾಂತ*
ಅವಳಂದಳು
ಸಮೀಪ ಬಂದರೆ
ಆಕರ್ಷಿತವಾಗುವುದು
ವಿರುದ್ದ ದಿಕ್ಕಿನ
ಆಯಸ್ಕಾಂತ.
ನಿನೇಕೆ ಹೀಗೆ  ಕಾಂತ?

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

26 ಆಗಸ್ಟ್ 2019

ಸಿಹಿಜೀವಿಯ ಹನಿಗಳು

*ಸಿಹಿ ಜೀವಿಯ ಹನಿಗಳು*

*೧*

*ಬಂದಾಗಿದೆ*

ಬೇಗ ಬರಲಿಲ್ಲ ಎಂದು
ಮುನಿಸೇತಕೆ ನಲ್ಲೆ?
ಕೋಪಿಸಿಕೊಳ್ಳಲು ಏನಾಗಿದೆ?
ನಾನೀಗ ಬಂದಾಗಿದೆ
ಬಾಗಿಲು ಬಂದಾಗಿದೆ.

*೨*

*ಯಾಕೆ?*

ಉಂಡು ಮಲಗಿದರೂ
ಮುಗಿಯಲಿಲ್ಲ
ನಮ್ಮಿಬ್ಬಿರ ಜಗಳ
ಯಾಕೆ ? ಯಾಕೆ ?
ಎಂದು ಕೇಳಿದೆ
ನನ್ನವಳೆಂದೆಳು
ಏಳಿ ಮೇಲೆ
ಸೂರ್ಯ ನೆತ್ತಿಗೆ ಬಂದಿದೆ
ಕಾಫಿ ಆರಿ ಹೋಗಿದೆ.
ಹೋ ಕನಸಾ?
ಎಂದು ಕಾಫಿ ಹೀರಿದೆ.


*ಸಿ ಜಿ.ವೆಂಕಟೇಶ್ವರ*..
*ಗೌರಿಬಿದನೂರು*

23 ಆಗಸ್ಟ್ 2019

ಫಿಟ್ ಇಂಡಿಯಾ( fit India)

*ಫಿಟ್ ಇಂಡಿಯಾ*

ಅಂದು

ಗಾಂಧೀಜಿಯವರು ಬ್ರಿಟೀಷರನ್ನು ನಮ್ಮ
ದೇಶದಿಂದ  ಓಡಿಸಲು ಕರೆ ಕೊಟ್ಟರು
ಕ್ವಿಟ್ ಇಂಡಿಯಾ.

ಇಂದು

ಮೋದೀಜಿಯವರು
ನಮ್ಮ ದೇಹದಿಂದ ರೋಗ ರುಜಿನಗಳನ್ನು,ಸೋಮಾರಿತನವನ್ನು ತೊಲಗಿಸಲು ಕರೆ ನೀಡಿದ್ದಾರೆ
ಫಿಟ್ ಇಂಡಿಯಾ.

*ಸಿ .ಜಿ  .ವೆಂಕಟೇಶ್ವರ*
*ಗೌರಿಬಿದನೂರು*

(ಇದೇ ತಿಂಗಳ 29ಕ್ಕೆ ಪಿಟ್ ಇಂಡಿಯಾ ಅಭಿಯಾನ ದೇಶಾದ್ಯಂತ ಆರಂಭ ಬನ್ನಿ ಫಿಟ್ ಆಗೋಣ)

31 ಜುಲೈ 2019

ಯಾರು? (ಹನಿಗವನ)

*ಯಾರು*

ಹುಲಿ ಸಂಖ್ಯೆಯಲ್ಲಿ ಹೆಚ್ಚಳ ( ಪ್ರಜಾವಾಣಿ ಸುದ್ದಿ)

ಎಲ್ಲಾ  ಸಂಸಾರದಲ್ಲಿ
ಇದ್ದೇ ಇರುತ್ತವೆ
ಒಂದುಹುಲಿ
ಒಂದು ಇಲಿ
ಅನುಮಾನ ಒಂದೇ
ಯಾರು ಹುಲಿ?

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

30 ಜುಲೈ 2019

ಸಿಹಿ ಜೀವಿಯ ಹನಿಗಳು

*ಸಿಹಿಜೀವಿಯ ಹನಿಗಳು*

*೧*

*ಮಾರ್ಗ*

ಒಳಿತು ಮಾಡುತ್ತಿರಲಿ ಕರ
ಕರುಣೆ, ಪ್ರೀತಿ ತುಂಬಿರಲಿ ಉರ
ಸತ್ಚಿಂತನೆಗಳಿಂದ ತುಂಬಿರಲಿ ಶಿರ
ನಿನ್ನ ಹೆಸರಾಗುವುದು ಅಮರ .

*೨*

*ಇಂದ್ರಿಯ ನಿಗ್ರಹ*


ಅಮರತ್ವ ಸಿಗಬೇಕೆಂದು
ಮಾಡದ ಪೂಜೆಗಳಿಲ್ಲ
ಜಪತಪಗಳಿಲ್ಲ ಧ್ಯಾನ
ಸತ್ಸಂಗಗಳಿಗೆ ಕೊನೆಯಿಲ್ಲ
ಆದರೂ ಅಮರತ್ವದ ಸುಳಿವಿಲ್ಲ
ಕಾರಣ ಇಂದ್ರಿಯಗಳ
ನಿಗ್ರಹ ಆಗಲೇ ಇಲ್ಲ.

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*