17 ಜನವರಿ 2019

ಸಿಹಿಜೀವಿಯ ಹನಿಗಳು

             *ಸಿಹಿಜೀವಿಯ ಹನಿಗಳು*

*೧*

*ಅಪಾರ*

ನಿನ್ನೆ ಶತ್ರು
ಇಂದು ಮಿತ್ರ
ನಿನ್ನೆ ಕಮಲ
ಹಿಡಿಯಲು ಕಾತರ
ಇಂದು ಕೈಯೇ ಸುಂದರ
ನಡೆಯುತಿದೆಯಂತೆ
ಕುದುರೆ ವ್ಯಾಪಾರ.
ಓ ಅಧಿಕಾರವೇ
ನಿನ್ನ ಮಹಿಮೆ ಅಪಾರ .

*ಆಧುನಿಕತೆ?*


ತೋರಣವಾಗಲಿ
ಒಬ್ಬಟ್ಟಗಾಲಿ
ಎಳ್ಳು ಬೆಲ್ಲವಾಗಲಿ
ಎಲ್ಲವೂ ರಡಿಮೇಡ್
ನಗರ ಪಟ್ಟಣದ
ಮನೆಯಲ್ಲಿ ಮಾಡುವುದು
ಬಹಳ ಕಡಿಮೆ.
ಇದೆಲ್ಲವೂ ಆಧುನಿಕತೆಯ
ಮಹಿಮೆ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

16 ಜನವರಿ 2019

ಸಿಹಿಜೀವಿಯ ಹನಿಗಳು( ಹನಿ ಹನಿ ಇಬ್ಬನಿ ಬಳಗದಿಂದ ಉತ್ತಮ ಹನಿ ಪುರಸ್ಕೃತ)


               *ಸಿಹಿಜೀವಿಯ ಹನಿಗಳು*

*೧*

*ಆಪರೇಷನ್*

ಪ್ರಿಯೆ ನೀ
ಸನಿಹದಲ್ಲಿ ಇದ್ದರೆ
ನಮ್ಮ ಪ್ರೀತಿಯೆಂಬ
ಸರ್ಕಾರ ಸುಭದ್ರ
ಅನಿಸುವುದು.
ನೀ ಚೂರು
ಮರೆಯಾದರೆ
ಆಪರೇಷನ್ ಕಮಲವೋ
ಕೈಯೋ ತೆನೆಯೋ
ಎಂಬ ಅನುಮಾನ
ಮೂಡುವುದು

*೨*

*ಪಾಪ*

ಪ್ರಿಯೆ ನಿನ್ನನ್ನು ದೂರದಿಂದ
ನೋಡಿದರೆ ನೀನೆ
ಅಪ್ಸರೆಯ ಪ್ರತಿರೂಪ
ಹತ್ತಿರದಿಂದ ನೋಡಿದ
ನೆರಮನೆಯ ಪಾಪ
ತಾಯತ ಕಟ್ಟಿಸಿಕೊಂಡಿದೆ
ಪಾಪ

*ಅಚ್ಚರಿಯಲ್ಲ*

ಚಂದ್ರನ ಮೇಲೆ
ಬೀಜ ಮೊಳಕೆಯೊಡಿದಿದೆ
ಅದೇನೂ ಅಚ್ಚರಿಯಲ್ಲ
ಗೆಳತಿ ನೀ ನನ್ನ ಸನಿಹವಿರೆ
ನೀರು ಗೊಬ್ಬರವಿಲ್ಲದಿದ್ದರೂ
ಆ ಮೊಳಕೆ ಗಿಡವಾಗಿ ಮರವಾಗಿ
ಹಣ್ಣು ಬಿಡುವುದಲ್ಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



15 ಜನವರಿ 2019

ನಲಿಯೋಣ (ಕವನ)

*ಸರ್ವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು*

*ನಲಿಯೋಣ*

ಬಂದಿದೆ ನೋಡಿ ಸಂಕ್ರಾಂತಿ
ತಂದಿದೆ ನಮಗೆ ಸುಖಶಾಂತಿ
ಸೂರ್ಯನು ಪಥವನು ಬದಲಿಸುವ
ಉತ್ತರಾಯಣಕೆ ಪಯಣಿಸುವ

ಎಳ್ಳು ಬೆಲ್ಲವ ತಿನ್ನೋಣ
ಒಳ್ಳೆಯ ಮಾತುಗಳಾಡೋಣ
ಸುಗ್ಗಿಯ ಹಬ್ಬ ಮಾಡೋಣ
ಹಿಗ್ಗುತ ನಕ್ಕು ನಲಿಯೋಣ

ರಂಗೋಲಿಯನು ಹಾಕೋಣ
ಪೊಂಗಲ್ ಮಾಡಿ ಹಂಚೋಣ
ಕಬ್ಬಿನ ಜಲ್ಲೆ ಸವಿಯೋಣ
ಎತ್ತುಗಳ ಕಿಚ್ಚುಹಾಯಿಸೋಣ


*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*





14 ಜನವರಿ 2019

ಸಿಹಿಜೀವಿಯ ಹನಿಗಳು (ಹನಿ ಹನಿ ಬಳಗದಿಂದ ಉತ್ತಮ ಹನಿ ಎಂದು ಪುರಸ್ಕೃತ)

            *ಸಿಹಿಜೀವಿಯ ಹನಿಗಳು*

*೧*

*ಪುನರಾವರ್ತನೆ*

ಈ ವರ್ಷ ಬಂಗಾರದೊಡವೆ
ಕೊಡಿಸುವೆ ಕೋಪಿಸಿಕೊಳ್ಳದಿರು
ನನ್ನ ಮನದನ್ನೆ
ಸುಮ್ಮನಿರಿ ಮದುವೆಯಾದಗಿನಿಂದ
ಹೇಳುತ್ತಿರುವಿರಿ ಇದನ್ನೇ

*೨*


*ಪರಿಸ್ಥಿತಿ*

ಪ್ರತಿ ಬಾರಿಯೂ
ನಾನು ಸೀರೆ ಕೊಡಿಸಿ
ಎಂದಾದಲೆಲ್ಲಾ ನಿರಾಕರಿಸುವಿರಿ
ನಿಮಗೆ ಅರ್ಥವಾಗುವುದಿಲ್ಲ
ನನ್ನ ಮನಸ್ಥಿತಿ
ಅವನು ಗೊಣಗಿದ
ನಿನಗೂ ಅರ್ಥವಾಗುವುದಿಲ್ಲ
ನನ್ನ ಆರ್ಥಿಕ ಪರಿಸ್ಥಿತಿ



*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

13 ಜನವರಿ 2019

ಮಾದರಿ? (ನ್ಯಾನೋ ಕಥೆ)

              ನ್ಯಾನೋ ಕಥೆ

*ಮಾದರಿ?*

 "ಎಷ್ಟು ಹೇಳಿದರೂ ಅಷ್ಟೇ ಉಗುರು ಕತ್ತರಿಸಿ ಶಾಲೆಗೆ ಬರುವುದಿಲ್ಲ " ಎಂದು ಶಿಕ್ಷಕರು ಕೋಲಿನಿಂದ ವಿದ್ಯಾರ್ಥಿಗಳಿಗೆ ಮೊಟ್ಟ ಏಟುಗಳನ್ನು ವಿಧೇಯತೆಯಿಂದ ಸ್ವೀಕರಿಸಿದ ಓರ್ವ ವಿದ್ಯಾರ್ಥಿಯ ಕಣ್ಣು ಶಿಕ್ಷಕರ ಕಿರುಬೆರಳಿನ ಎರಡು ಇಂಚು ಉಗುರಿನ ಮೇಲೆ ಬಿತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*