15 ಜನವರಿ 2019

ನಲಿಯೋಣ (ಕವನ)

*ಸರ್ವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು*

*ನಲಿಯೋಣ*

ಬಂದಿದೆ ನೋಡಿ ಸಂಕ್ರಾಂತಿ
ತಂದಿದೆ ನಮಗೆ ಸುಖಶಾಂತಿ
ಸೂರ್ಯನು ಪಥವನು ಬದಲಿಸುವ
ಉತ್ತರಾಯಣಕೆ ಪಯಣಿಸುವ

ಎಳ್ಳು ಬೆಲ್ಲವ ತಿನ್ನೋಣ
ಒಳ್ಳೆಯ ಮಾತುಗಳಾಡೋಣ
ಸುಗ್ಗಿಯ ಹಬ್ಬ ಮಾಡೋಣ
ಹಿಗ್ಗುತ ನಕ್ಕು ನಲಿಯೋಣ

ರಂಗೋಲಿಯನು ಹಾಕೋಣ
ಪೊಂಗಲ್ ಮಾಡಿ ಹಂಚೋಣ
ಕಬ್ಬಿನ ಜಲ್ಲೆ ಸವಿಯೋಣ
ಎತ್ತುಗಳ ಕಿಚ್ಚುಹಾಯಿಸೋಣ


*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*





14 ಜನವರಿ 2019

ಸಿಹಿಜೀವಿಯ ಹನಿಗಳು (ಹನಿ ಹನಿ ಬಳಗದಿಂದ ಉತ್ತಮ ಹನಿ ಎಂದು ಪುರಸ್ಕೃತ)

            *ಸಿಹಿಜೀವಿಯ ಹನಿಗಳು*

*೧*

*ಪುನರಾವರ್ತನೆ*

ಈ ವರ್ಷ ಬಂಗಾರದೊಡವೆ
ಕೊಡಿಸುವೆ ಕೋಪಿಸಿಕೊಳ್ಳದಿರು
ನನ್ನ ಮನದನ್ನೆ
ಸುಮ್ಮನಿರಿ ಮದುವೆಯಾದಗಿನಿಂದ
ಹೇಳುತ್ತಿರುವಿರಿ ಇದನ್ನೇ

*೨*


*ಪರಿಸ್ಥಿತಿ*

ಪ್ರತಿ ಬಾರಿಯೂ
ನಾನು ಸೀರೆ ಕೊಡಿಸಿ
ಎಂದಾದಲೆಲ್ಲಾ ನಿರಾಕರಿಸುವಿರಿ
ನಿಮಗೆ ಅರ್ಥವಾಗುವುದಿಲ್ಲ
ನನ್ನ ಮನಸ್ಥಿತಿ
ಅವನು ಗೊಣಗಿದ
ನಿನಗೂ ಅರ್ಥವಾಗುವುದಿಲ್ಲ
ನನ್ನ ಆರ್ಥಿಕ ಪರಿಸ್ಥಿತಿ



*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

13 ಜನವರಿ 2019

ಮಾದರಿ? (ನ್ಯಾನೋ ಕಥೆ)

              ನ್ಯಾನೋ ಕಥೆ

*ಮಾದರಿ?*

 "ಎಷ್ಟು ಹೇಳಿದರೂ ಅಷ್ಟೇ ಉಗುರು ಕತ್ತರಿಸಿ ಶಾಲೆಗೆ ಬರುವುದಿಲ್ಲ " ಎಂದು ಶಿಕ್ಷಕರು ಕೋಲಿನಿಂದ ವಿದ್ಯಾರ್ಥಿಗಳಿಗೆ ಮೊಟ್ಟ ಏಟುಗಳನ್ನು ವಿಧೇಯತೆಯಿಂದ ಸ್ವೀಕರಿಸಿದ ಓರ್ವ ವಿದ್ಯಾರ್ಥಿಯ ಕಣ್ಣು ಶಿಕ್ಷಕರ ಕಿರುಬೆರಳಿನ ಎರಡು ಇಂಚು ಉಗುರಿನ ಮೇಲೆ ಬಿತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

12 ಜನವರಿ 2019

ನಿರೀಕ್ಷೆ (ಹನಿಗವನ)

               *ನಿರೀಕ್ಷೆ*

ನನಗೆ ಬುದ್ದಿ ಬಂದಾಗಿನಿಂದ
ನಿರೀಕ್ಷೆ ಮಾಡುತ್ತಲೇ ಇದ್ದೆ
ಮಹಾನ್ ಚೇತನ ಗುರು
ಬಂದರು ಹೋದರು ಹಲವರು
ಸೋಜಿಗವೆಂದರೆ
ಹಲವಾರು ವಿವೇಕರು ಬಂದರು
ಕೆಲವಾರು ಆನಂದರು ಬಂದರು
ಅವತರಿಸಲೇ ಇಲ್ಲ ಮತ್ತೊಬ್ಬ
ಸ್ವಾಮಿ ವಿವೇಕಾನಂದರು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ವಿಳಂಬವಾಯಿತೇ(ಹನಿಗವನ)

                   ಸಿಹಿಜೀವಿಯ ಹನಿ

*ವಿಳಂಬವಾಯಿತೇ?*

ಅವಳ ವ್ಯಾಮೋಹಕೆ
ಬಿದ್ದು ಗೋವಿಂದನ
ಮರೆತೆ.
ಅವಳು ನನ್ನ ಮರೆತಳು
ಭಗವಂತನ ಕರೆದೆ
ಕೇಳುತ ಬಂದ ಕಂದ
ವಿಳಂಬವಾಯಿತೆ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*