This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
30 ಏಪ್ರಿಲ್ 2018
29 ಏಪ್ರಿಲ್ 2018
ಗಜ಼ಲ್ ೩೮ (ಆಸೆ)
*ಗಜ಼ಲ್೩೮*
ಜಗದೆಲ್ಲ ಜೀವಿಗಳಿಗೆ ಅನ್ನದ ಕಣ ದೊರಕಲಿ ಎಂಬ ಆಸೆ
ಸಕಲ ಜೀವಾತ್ಮರಿಗೆ ಆನಂದದ ಕ್ಷಣ ಲಬಿಸಲಿ ಎಂಬ ಅಸೆ
ದ್ವೇಷದ ಜ್ವಾಲೆಗೆ ಎಲ್ಲೆಡೆ ನಲುಗುತಿವೆ ಮುಗ್ದ ಜೀವಗಳು
ಪ್ರೀತಿಯೆಲ್ಲೆಡೆ ಹಬ್ಬಿ ಧರೆ ಸುಂದರವಾಗಲಿ ಎಂಬ ಆಸೆ
ಉಳ್ಳವರ ಅಟ್ಟಹಾಸ ಎಲ್ಲೆ ಮೀರುತಿದೆ ಕೆಲವೆಡೆಗಳಲ್ಲಿ
ಮೇಲು ಕೀಳಿಲ್ಲದೇ ಸರ್ವರಿಗೂ ಸಮಪಾಲು ಸಿಗಲಿ ಎಂಬ ಆಸೆ
ಅಜ್ಞಾನದ ಅಂದಕಾರದಲಿ ಕೆಲವರು ಮುಳುಗಿ ತೊಳಲುತಲಿರುವರು
ಜ್ಞಾನದ ಬೆಳಕ ಪಡೆದು ಎಲ್ಲರ ಜೀವನ ಕಂಗೊಳಿಸಲಿ ಎಂಬ ಆಸೆ
ಐಹಿಕ ಸುಖವೇ ಮೇಲೆಂದು ಮೌಡ್ಯದಿ ಕಳಿತಿಹರು ಮೂಢರು
ಸೀಜೀವಿಗೆ ಆತ್ಮಾನಂದ ಪಡೆದ ಮಾನವರು ಕಾಣಿಸಲಿ ಎಂಬ ಆಸೆ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

28 ಏಪ್ರಿಲ್ 2018
ಯಾಕೋ ಹಸಿವಿಲ್ಲ (ನ್ಯಾನೋ ಕಥೆ)
*ನ್ಯಾನೋ ಕಥೆ*
*ಯಾಕೋ ಹಸಿವಿಲ್ಲ*
" ಓ ಪಾಂಡುರಂಗ ಎಷ್ಟು ದಿನ ಆಯ್ತು ನಿನ್ನ ನೋಡಿ ಹೇಗಿದ್ದೀಯಾ? ಇವನು ನನ್ನ ಕ್ಲಾಸ್ ಮೇಟ್ ಕಣಮ್ಮ" ಎಂದು ಮಗಳಿಗೆ ಪರಿಚಯ ಮಾಡಿದ ರಮೇಶ್ "ನೀನು ಜನರಲ್ ಆದರೂ ನಿನಗೆ ಹೇಗೋ ಮೇಷ್ಟ್ರು ಕೆಲ್ಸ ಸಿಕ್ತು ನಮ್ಮದು ರಿಜರ್ವೇಶನ್ ಇದ್ದರೂ ಸರ್ಕಾರಿ ಕೆಲಸನೂ ಸಿಗದೇ, ಹಳ್ಳೀಲಿ ಮಳೆ ಇಲ್ಲದೇ ಜೀವನ ಬಹಳ ಕಷ್ಟವಾಗಿದೆ" ಎಂದ ಪಾಂಡುರಂಗ ನ ಮಾತಿಗೆ ಅನುಕಂಪ ತೋರಿದ ರಮೇಶ್ "ಇವತ್ತು ನಮ್ಮ ಮನೆಯಲ್ಲಿ ಹಬ್ಬ ಮಾಡಿದ್ದೇವೆ, ಊಟ ಮಾಡು.?ಎಂದಾಗ ಸ್ನೇಹಿತ ಸಿಕ್ಕ ಸಂತಸದಲ್ಲಿ ಊಟಕ್ಕೆ ಒಪ್ಪಿ ಮನೆಯ ಹೊರಗೆ ಊಟಕ್ಕೆ ಕುಳಿತ, ಪ್ಲಾಸ್ಟಿಕ್ ಲೋಟ ದಲ್ಲಿ ಮನೆಯ ಯಜಮಾನಿ ನೀರು ತಂದು ಕೊಟ್ಟಾಗ ಪಾಂಡುರಂಗ ನಿಗೆ ಎಲ್ಲಾ ಅರ್ಥವಾಗಿ ನನಗೆ ಯಾಕೋ ಹಸಿವಿಲ್ಲ ಮತ್ತೊಮ್ಮೆ ಯಾವಾಗಲಾದರೂ ಊಟಮಾಡುವೆ ಎಂದು ಹೊರಟು ಹೋದ ...

26 ಏಪ್ರಿಲ್ 2018
ಮಾನವೀಯತೆ?(ನ್ಯಾನೋ ಕಥೆ)
ನ್ಯಾನೋ ಕಥೆ
*ಮಾನವೀಯತೆ?*
ಖಾಸಗಿ ಬಸ್ಸಿನಲ್ಲಿ ವಿಪರೀತವಾದ ಜನಸಂದಣಿ ೩೦ ವರ್ಷದ ರಮೇಶ್ ಸೀಟಲ್ಲಿ ಕುಳಿತಿದ್ದ ಒಂದು ನಿಲ್ದಾಣದಲ್ಲಿ ಎಪ್ಪತ್ತು ವರ್ಷದ ಮುದುಕಿ ಮತ್ತು ಮಗು ಎತ್ತಿಕೊಂಡು ಒಬ್ಬ ಮಹಿಳೆ ಬಸ್ಸನ್ನೇರಿದರು .ಯಾರಿಗೆ ಸೀಟು ಕೊಡಲಿ? ಎಂಬ ಗೊಂದಲದಲ್ಲಿ ಸೀಟಿನಿಂದ ಎದ್ದ ಅಷ್ಟರಲ್ಲಿ ೧೮ ವರ್ಷದ ಯುವತಿ "ಥಾಂಕ್ ಯು" ಎಂದು ಸೀಟಿನಲ್ಲಿ ಕುಳಿತೇಬಿಟ್ಟಳು .

25 ಏಪ್ರಿಲ್ 2018
ಭವಿಷ್ಯ (ನ್ಯಾನೋ ಕಥೆ)
ನ್ಯಾನೋ ಕಥೆ
*ಭವಿಷ್ಯ*
ಸುತ್ತ ಹತ್ತು ಹಳ್ಳಿಗಳಿಗೆ ಅವರದೇ ಪೌರೋಹಿತ್ಯ. ಸುಂದರಯ್ಯ ಅವರ ಮಾರ್ಗದರ್ಶನದಲ್ಲಿ ನೂರಾರು ಮದುವೆಗಳ ಮುಹೂರ್ತ ನಿಗದಿ ಮಾಡಿ "ನಿಮ್ಮ ಸಂಸಾರ ನೂರ್ಕಾಲ ಸುಖವಾಗಿ ಬಾಳಲಿದೆ ಎಂದಿದ್ದರು" ಕ್ಷುಲ್ಲಕ ಕಾರಣಕ್ಕೆ ಹೆಂಡತಿ ಮೇಲೆ ಮುನಿಸಿಕೊಂಡು ಮಗಳ ಮನೆಗೆ ಹೋಗಿ ವಾಸವಿದ್ದರು ."ಸ್ವಾಮಿ ಈ ವಯಸ್ಸಿನಲ್ಲಿ ನಾವು ನಿಮಗೆ ಬುದ್ದಿ ಹೇಳಬಾರದು ದಯವಿಟ್ಡು ಮನೆಗೆ ಬನ್ನಿ " ಎಂದು ೨೫ ವರ್ಷದ ಬಾಲಾಜಿ ೭೫ ವರ್ಷದ ಸುಂದರಯ್ಯಗೆ ಹೇಳಿದ . "ಎಲ್ಲರ ಸಂಸಾರದ ಬಗ್ಗೆ ಭವಿಷ್ಯ ನುಡಿವ ಹಲವು ಮದುವೆ ಮಾಡಿಸುವ ಇವರ ಸಂಸಾರ ನಾವು ಸರಿಮಾಡಬೇಕಿದೆ " ಎಂದು ಬಾಲಜಿ ಜೊತೆ ಬಂದಿದ್ದ ನರೇಶ್ ಅಂದ ಮಾತು ಎಲ್ಲರಿಗೂ ಕೇಳಿಸಿದರೂ ಯಾರೂ ಮಾತಾಡಲಿಲ್ಲ.
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
*ಗೌರಿಬಿದನೂರು*
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)