09 ಫೆಬ್ರವರಿ 2018

*ಕೌಟುಂಬಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತಿರುವ ಸಾಮಾಜಿಕ ಜಾಲತಾಣಗಳು* ಕವಿಬಳಗ ವಾಟ್ಸಪ್ ಬಳಗದ ಸ್ಪರ್ಧೆಯಲ್ಲಿ ತೃತೀಯ ಪುರಸ್ಕಾರ ಪಡೆದ ಲೇಖನ



 *ಕೌಟುಂಬಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತಿರುವ  ಸಾಮಾಜಿಕ ಜಾಲತಾಣಗಳು*


ಆಧುನಿಕತೆಯು ಮುಂದುವರಿದಂತೆ ನಮ್ಮ ಸಾಮಾಜಿಕ ಸಂಬಂಧ ಗಳು ಸಂಕೀರ್ಣವಾಗಿ ನಾಟಕೀಯತೆ,ಕೃತಕತೆ, ಸಮಯಸಾಧಕತನ, ಸ್ವಾರ್ಥ ಪರತೆ ಇತ್ಯಾದಿಗಳ ವಿಜೃಂಭಣೆಯನ್ನು ಈಗ ಎಲ್ಲೆಲ್ಲೂ ಹೆಚ್ಚು ಕಾಣಬಹುದಾಗಿದೆ.
ಇದರ ಜೊತೆಗೆ ಸಾಮಾಜಿಕ ಜಾಲತಾಣಗಳು ಸೇರಿಕೊಂಡು ಕೌಟುಂಬಿಕ ವ್ಯವಸ್ಥೆಯ ಬೇರುಗಳನ್ನು ಅಲುಗಾಡಿಸಲಾರಂಬಿಸಿವೆ ಎಂದರೆ ತಪ್ಪಾಗಲಾರದು.
ಭಾರತದ ಇತ್ತೀಚಿನ ಸರ್ವೆಯ ಪ್ರಕಾರ ದೇಶದ ನಾಲ್ಕರಲ್ಲಿ ಮೂರು ಜನರು ತಮ್ಮ ಸಂಗಾತಿಯು ತಮ್ಮ ಬಳಿಯಿದ್ದರೂ ಈ ಸಾಮಾಜಿಕ ಜಾಲತಾಣಗಳಾದ ಪೇಸ್ ಬುಕ್ ,ವಾಟ್ಸಪ್, ಟ್ವಿಟರ್, ಇನಸ್ಟಾಗ್ರಾಮ್, ಮುಂತಾದ ವುಗಳಲ್ಲಿ ಮುಳುಗಿರುತ್ತಾರಂತೆ. ಇದರಿಂದಾಗಿ ದಂಪತಿಗಳಲ್ಲಿ ಅನ್ಯೋನ್ಯತೆ ಕಡಿಮೆ ಆಗಿ ಇವು ಕೆಲವೊಮ್ಮೆ ವಿಚ್ಛೇದನದ ಹಾದಿ ಹಿಡಿದ ಉದಾಹರಣೆಗೆ ಕಡಿಮೆಇಲ್ಲ .
ಇನ್ನೂ ಕೆಲವು ಕುಟುಂಬಗಳಲ್ಲಿ ಯಾರೋ  ಕಿಡಿಗೇಡಿಗಳು ಮಾಡಿದ ವಾಟ್ಸಪ್ ಮೆಸೇಜ್ ,ಅಥವಾ ಪೇಸ್ ಬುಕ್ ಪ್ರೆಂಡ್ ರಿಕ್ವೆಸ್ಟ್ ಗಳಿಂದ ಕುಟುಂಬದಲ್ಲಿ ಅಲ್ಲೋಲ ಕಲ್ಲೋಲಗಳಾಗಿ ನೆಮ್ಮದಿ ಕೆಡಿಸಿರುವ ಪ್ರಸಂಗಗಳನ್ನು ಆಗಾಗ್ಗೆ ನಾವು ನೋಡುತ್ತಿರುತ್ತೇವೆ . ಇನ್ನೂ ಹದಿಹರೆಯದ ಮಕ್ಕಳು ಮನೆಯಲ್ಲಿದ್ರೆ ಅವರಿಗೆ ಒಂದು ಪೇಸ್ಬುಕ್ ಅಕೌಂಟ್, ಗೂಗಲ್ ಅಕೌಂಟ್ ಇಲ್ಲದಿದ್ದರೆ ಅವರ ವಯಸ್ಸಿಗೆ ಅಪಮಾನ ಎಂದು ಬಗೆದ ಯುವಜನತೆ ಅಪ್ಪ ಅಮ್ಮನ ಜೊತೆ ಕಾಲ ಕಳೆಯದೇ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಮಗ್ನರಾಗಿರುತ್ತಾರೆ ಕ್ರಮೇಣವಾಗಿ ಇಂತಹವರು ತಂದೆ ತಾಯಿಗಳು, ಬಂಧುಗಳು, ಬಳಗ ಮುಂತಾದ ಸಾಮಾಜಿಕ ಸಂಬಂಧಗಳನ್ನು ತೊರೆದು ಜೀವಿಸಲು ಮುಂದಾಗುವರು .
ಇವರಿಗೆ ಕಣ್ಣಮುಂದಿರುವ ರಕ್ತ ಸಂಬಂಧ ಗಳಿಗಿಂತ ನೆಟಿಜನ್ ಸಂಬಂಧಗಳ ಕಡೆಗೆ ಹೆಚ್ಚು ಗಮನ ಈ ರೀತಿಯ ಸಂಬಂಧಗಳ ಬಗ್ಗೆ ಹಾಸ್ಯ ಸಾಹಿತಿಗಳಾದ ಗುಂಡಿ ರಾಜರು *ವಾಟ್ಸಪ್ ನಲ್ಲಿ ಪರಿಚಿತರಾಗಿ ,ಪೇಸ್ ಬುಕ್ ನಲ್ಲಿ ಎಂಗೆಜ್ ಆದ ಜೋಡಿಗೆ ಮಕ್ಕಳನ್ನು ಈ ಮೇಲ್ ನಲ್ಲಿ ಡೌನ್‌ಲೋಡ್ ಮಾಡಿಕೊಂಡು ನೆಟ್ಟಪ್ಪ. ಗೂಗಲಮ್ಮ ಎಂದು ಹೆಸರಿಟ್ಟರಂತೆ* ಎಂದು ವ್ಯಂಗವಾಗಿ ಹೇಳಿದರೂ ಇದರಲ್ಲಿ ಬಹುತೇಕ ಅಂಶಗಳು ವಾಸ್ತವಕ್ಕೆ ಹತ್ತಿರ ಎಂಬ ಕಹಿಸತ್ಯ ಒಪ್ಪಿಕೊಳ್ಳದೇ ವಿಧಿಯಿಲ್ಲ .

*ಅತಿಯಾದ ಸಾಮಾಜಿಕ ಜಾಲತಾಣದ ಬಳಕೆಯ ದುಷ್ಪರಿಣಾಮಗಳು*

೧  ಕುಟುಂಬಕ್ಕೆ ಗುಣಮಟ್ಟದ ಸಮಯ ಕೊಡಲು ವಿಫಲವಾಗಿ ಕುಟುಂಬದ ವಿಘಟನೆ ಗೆ ನಾಂದಿಯಾಗುವುದು .

೨  ಮಕ್ಕಳಿಗೆ ಸುಲಭವಾಗಿ ಈ ಜಾಲತಾಣಗಳು ಹಿಂಸೆ ,ಲೈಂಗಿಕತೆಯ ಕೂಡಿದ ವಿಡಿಯೋ ಪೋಟೋ ನೋಡುವ ಪರಿಣಾಮವಾಗಿ ಮಕ್ಕಳಲ್ಲಿ ಹಿಂಸಾತ್ಮಕ ಮನೋಭಾವ ಬೆಳೆದು ತಂದೆ ತಾಯಿಗಳ ಮಾತು ಕೇಳದಿರಬಹುದು

೩ ಅತಿಯಾದ ಸಮಾಜಿಕ ಮಾಧ್ಯಮಗಳ ಬಳಕೆಯು ದಂಪತಿಗಳಲ್ಲಿ ಪರಸ್ಪರ ಅನುಮಾನ ಮನೋಭಾವ ಮೂಡಲು ಕಾರಣವಾಗಬಹುದು

*ಈ ಸಮಸ್ಯೆ ಯಿಂದ ಹೊರಬರುವುದು ಹೇಗೆ?*

೧ ಸ್ವಯ ನಿಯಂತ್ರಣ ವಿಧಿಸಿಕೊಂಡು ಅಗತ್ಯವಿದ್ದಾಗ ಮಾತ್ರ ಸಾಮಾಜಿಕ ಜಾಲತಾಣಗಳ ಬಳಕೆ ಮಾಡಬೇಕು

೨ ಮಕ್ಕಳಿಗೆ ಪೋಷಕರ ಮಾರ್ಗದರ್ಶನ ಮಾಡಿ ಕಡಿಮಡಯ ಜಾಲತಾಣಗಳ ಬಳಕೆ ಮಾಡಲು ತಿಳಿವಳಿಕೆ ನೀಡುವುದು

೩  ಜೀವವಿಲ್ಲದ ಪೋನ್ ,ಟಿವಿ ಮುಂತಾದ ವಸ್ತುಗಳಿಗಿಂತ   ಜೀವವಿರುವ ವ್ಯಕ್ತಿಗಳ ಜೊತೆ ಸಂವಹನ ಮಾಡಿ  ಸಂಬಂಧಗಳ ಬೆಳೆಸಿ ಉಳಿಸಬೇಕು.

೪ ದೂರವಿರುವ ಫೇಸ್ಬುಕ್ ಗೆಳೆಯನಿಗಿಂತ ಮನೆಯ ಅಪ್ಪ ಅಮ್ಮ ಮೊದಲು ಎಂದು ತಿಳಿದು ಬಾಳಬೇಕು

ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ಯಾಂತ್ರಿಕ ಯುಗದಲ್ಲಿ ಸಂಬಂಧಗಳು ಸಹ ಯಾಂತ್ರಿಕ ವಾಗುತ್ತಿದ್ದು ನಾವು ಈಗ ಎಚ್ಚೆತ್ತುಕೊಳ್ಳದಿದ್ದರೆ
ಈ ಸಾಮಾಜಿಕ ಜಾಲತಾಣಗಳಿಂದ ನಮ್ಮ ಕೌಟುಂಬಿಕ ವ್ಯವಸ್ಥೆ ಶಿಥಿಲಗೊಂಡು ವಿದೇಶಗಳಲ್ಲಿ ಹೆಚ್ಚಾಗಿರುವ ಸಿಂಗಲ್ ಕಪಲ್. ಲಿವ್ ಇನ್ ರಿಲೇಶನ್ಸ್, ಡೇಟಿಂಗ್ ಕಾರುಬಾರು ನಮ್ಮಲ್ಲಿ ಹೆಚ್ಚಾಗಬಹುದು ಆದ್ದರಿಂದ ನಾವೆಲ್ಲರೂ ಪ್ರಜ್ಞಾವಂತರಾಗಿ ನಿಯಮಿತವಾಗಿ ಈ ಜಾಲತಾಣಗಳ ಬಳಸಿ ಕೊಂಡು ನಮ್ಮ ಕುಟುಂಬ.ಮದುವೆ ಜಾತ್ರೆ, ಸಂಬಂಧ ಮುಂತಾದ ಸಾಮಾಜಿಕ ಸಂಸ್ಥೆಗಳ ಉಳಿಸಿ ಬೆಳಿಸಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಣೆ ಮಾಡೋಣ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

08 ಫೆಬ್ರವರಿ 2018

ಹಿತವರಾರು? (ಕವನ) ಹನಿ ಹನಿ ಇಬ್ಬನಿ ವಾಟ್ಸಪ್ ಬಳಗದಲ್ಲಿ ಉತ್ತಮ ಎಂದು ಪುರಸ್ಕಾರ ಪಡೆದ ಕವನ

*ಹಿತವರಾರು?*

ನಿಮ್ಮನುಧ್ದರಿಸುವೆವು
ನಿಮ್ಮ ಬಾಳು‌ ಹಸನುಗೊಳಿಸುವೆವು
ಸ್ವರ್ಗ ತೊರುವೆವು
ಸಮಾನತೆ ಸಾರುವೆವು ಎಂದರು.


ತಮ್ಮನ್ನುಧ್ದರಿಸಿಕೊಂಡರು
ಅವರ ಮಕ್ಕಳ ಮೊಮ್ಮಕ್ಕಳ ಪೊರೆದರು
ನಮ್ಮ ಬಾಳ ನರಕ ಮಾಡಿದರು
ನಮ್ಮ ನಮ್ಮಲ್ಲೇ ತಂದಿಟ್ಟರು.


ನಾವು ಅಧಿಕಾರಕ್ಜೆ ಬಂದರೆ
ಕಡಿಮೆ ತಿನ್ನುವೆವು
ಕಡಿಮೆ ಸುಲಿಯುವೆವು
ಕಡಿಮೆ ಮೋಸಗೊಳಿಸುವೆವು ಎಂದರು.


ಅವರು ಸರಿ ಇಲ್ಲ
ನಾವೇ ಸಾಚಾಗಳೆಂದರು
ಇವರ ಜಾತಕ ಅವರು ಬಿಚ್ಚಿದರು
ಕೆಸರೆರಚಾಟ ಇನ್ನೂ ನಿಂತಿಲ್ಲ .


ನಾವೀಗ ಯಾರ ನಂಬಲಿ?
ಇವರನ್ನು ಹೇಗೆ ಸಹಿಸಲಿ ?
ಇದ್ದ ಮೂವರೊಳಗೆ ಹಿತವರಾರು?
ನಮ್ಮ ಕಾಪಾಡುವವರು ಯಾರು?


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

07 ಫೆಬ್ರವರಿ 2018

ಎದ್ದೇಳು ( ಕವನ)


*ಎದ್ದೇಳು*

ನೀನೇ ನನ್ನ ಮನದರಸಿ
ನೀ ನನ್ನ ಕಲ್ಪನಾಸುಂದರಿ
ಹದಿನೆಂಟರ ಪೋರಿ
ಅನುಪಮ ಸುಂದರಿ


ಈಗಲೇ ನಿನ್ನ ವರಿಸುವೆ
ದಿನವೂ ಆರಾದಿಸುವೆ
ಬಳೆಗಳ ತೊಡಿಸುವೆ
ಕರಿಮಣಿ ಈಗಲೇ ತರುವೆ


ಬಂದು ನನ್ನ ಸೇರು
ಕಟ್ಟುವೆ ನಿನಗೆ ತೇರು
ನಿನಗೆ ನೀನೆ ಸಾಟಿ
ನನಗೆ ನೀನೆ ಕೋಟಿ


ಎಂದು ಹೊಗಳುತ್ತಿದ್ದೆ
ಅಮ್ಮ ಕೂಗಿದಾಗ ಎದ್ದೆ
ಬೈಯ್ದಳು ಅಮ್ಮ ಎದ್ದೇಳು
ಗಂಟೆ ಆಗಿದೆ ಆಗಲೇ ಏಳು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

06 ಫೆಬ್ರವರಿ 2018

ಫರ್ದ್ ಗಳು ( ಬೆಳಕು ಮತ್ತು ಕತ್ತಲು) ಕವಿಬಳಗ ವಾಟ್ಸಪ್ ತಂಡದಿಂದ ಬಹಮಾನಿತ ಫರ್ದ್ಗಳು




*ಫರ್ದ್ ಗಳು*

ಹೃದಯ ಕತ್ತಲಾಗಿದೆ ನೀನಿರದೆ ಇಂದು
ಬರೀ  ದೀಪ ಹಚ್ಚಲು ಬರುವೆ ಎಂದು
**
ತಮವು ಕವಿದಿದೆ ನನ್ನ ಜೀವನದಿ
ನಿಂತಂತಾಗಿದೆ ಬಾಳಿನ ಜೀವನದಿ
**
ಕತ್ತಲಾದ ನನ್ನ ಬಾಳು ಮುದುಡಿತ್ತು
ಜಗ್ ಎಂದು ಬೆಳಗಿತು ನೀ ನಗಲು
**
ಎಲ್ಲವೂ ಸುಂದರ ಯುದ್ದ ಪ್ರೀತಿಯಲ್ಲಿ
ಬೆಳಕ ನೀಡಿ  ಬಾ ಕತ್ತಲಾದ  ಬಾಳಿನಲ್ಲಿ
**
ಎಲ್ಲಿದೆ ತೆಗೆದುಕೊಂಡು ಬಾ ದೀಪ
ಹುಡಕಬೇಕಿದೆ ಕತ್ತಲ ಕರಾಳ ಕೂಪ
**

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 ಫೆಬ್ರವರಿ 2018

ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ನಮ್ಮ ಪಾತ್ರ (ಲೇಖನ)

ಲೇಖನ

ನಮ್ಮ ಸಂಸ್ಕೃತಿಯನ್ನು  ಉಳಿಸುವಲ್ಲಿ ನಮ್ಮ ಪಾತ್ರ


ಇತ್ತೀಚಿಗೆ ಯಾರನ್ನು ಕೇಳಿದರೂ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಬೇಕೆಂದು ಉದ್ದುದ್ದಾ ಭಾಷಣ ಮಾಡುವರು ವಿಪರ್ಯಾಸ ವೆಂದರೆ ಅಂತಹ ಬಹುತೇಕ ವ್ಯಕ್ತಿಗಳು ಸಣ್ಣ ಪುಟ್ಟದ್ದಕ್ಹೆಲ್ಲಾ ಸಿಟ್ಟಾಗಿ ರಾದ್ದಾಂತ ಮಾಡಿ ಮನೆಯಲ್ಲಿ ಅಪ್ಪ ಅಮ್ಮನನ್ನು ಅನಾಥಾಶ್ರಮಕ್ಕೆ ಕಳಿಸಿರುತ್ತಾರೆ.

ಹಾಗಾದರೆ ಸಂಸ್ಕೃತಿ ಎಂದರೇನು ?

ನಾವು ಹೇಗೆ ಇರುವೆವೋ ಅದೇ ನಮ್ಮ ಸಂಸ್ಕೃತಿ .
ಸಂಸ್ಕೃತಿ ಎಂಬುದು ಒಂದು ಜೀವನ ಕ್ರಮವಾಗಿದ್ದು ಅದು ಸಮಾಜದಲ್ಲಿ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾವಣೆ ಅಗುತ್ತಿರುತ್ತದೆ.
ಇ.ಬಿ.ಟೇಲರ್ ರವರ ಪ್ರಕಾರ *ಸಮಾಜಲ್ಲಿ ಸಂಕೀರ್ಣವಾದ ಜ್ಞಾನ ,ಕಲೆ ನಿಯಮ,ಮತ್ತು ಸಂಪ್ರದಾಯವನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹಸ್ತಾಂತರ ಮಾಡುವುದೇ ಸಂಸ್ಕೃತಿ*

*ಸಂಸ್ಕೃತಿಯ ವಿಧಗಳು*

ಮುಖ್ಯವಾಗಿ ಸಂಸ್ಕೃತಿ ಯನ್ನು ಎರಡು ವಿಧಗಳಲ್ಲಿ ವಿಂಗಡಿಸಬಹುದು ಅವೆಂದರೆ

*೧ ಭೌತಿಕ ಸಂಸ್ಕೃತಿ* ಇದರಲ್ಲಿ ನಮ್ಮ ಕಣ್ಣಿಗೆ ಕಾಣುವ ಮನೆ ದೇವಾಲಯ, ನಮ್ಮ ವೇಷಭೂಷಣ, ರಸ್ತೆ ಗಳು ಸ್ಮಾರಕಗಳು ಮುಂತಾದವುಗಳ ಸಂಗಮವಾಗಿದೆ

*೨ಅಭೌತಿಕ ಸಂಸ್ಕೃತಿ* ಯಲ್ಲಿ ಕಣ್ಣಿಗೆ ಕಾಣದ ನಮ್ಮ ಸಂಪ್ರದಾಯ, ಧಾರ್ಮಿಕ ಆಚರಣೆಗಳು,ಕಲೆ ಭಾಷೆ ಮುಂತಾದವುಗಳ ಒಳಗೊಂಡಿದೆ .

*ಸಂಸ್ಕೃತಿ ಯ ಲಕ್ಷಣಗಳು*

೧ ಸಂಸ್ಕೃತಿ ಯು ಒಂದು ಅಗೋಚರ ಮತ್ತು ಗೋಚರ ಜೀವನ ಕ್ರಮವಾಗಿದೆ
೨ ಸಂಸ್ಕೃತಿಯು ಸಾಮಾಜಿಕ ಜೀವನದಲ್ಲಿ ಕ್ರಮೇಣವಾಗಿ ಬೆಳವಣಿಗೆಯ ಹೊಂದುವುದು.
೩ ಸಂಸ್ಕೃತಿ ಕೊಡು ಕೊಳ್ಳುವಿಕೆಯ ಮೂಲಕ ಬೆಳೆಯುವುದು
೪ ಸಹಬಾಳ್ವೆ ಗೆ ಸಂಸ್ಕೃತಿ ಪೂರಕವಾಗಿದೆ
೫ ಸಂಸ್ಕೃತಿ ನಿರಂತರವಾಗಿ ಬೆಳೆಯುತ್ತದೆ.
೬ ಸಂಸ್ಕೃತಿ ವೈವಿಧ್ಯಮಯ ವಾಗಿರುತ್ತವೆ

*ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ನಮ್ಮ ಪಾತ್ರ*

೧ ಜ್ಞಾನ ದ ಆಗರವಾದ ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವ ಮೊದಲು ನಾವು ಆ ಸಂಸ್ಕೃತಿ ಯನ್ನು ಅನುಸರಿಸಿ ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗಿ ನಡೆಯಬೇಕು.

೨ಬರೀ ಮೌಲ್ಯ ಗಳ ಬಗ್ಗೆ ಮಾತಾನಾಡದೇ ಕೆಲ ಮೌಲ್ಯ ಗಳನ್ನು ಅಳವಡಿಸಿಕೊಂಡು ನಮ್ಮ ಮಕ್ಕಳಿಗೆ ಅವುಗಳ ಕಲಿಸಬೇಕು ಉದಾಹರಣೆಗೆ ಸತ್ಯ, ದಯೆ, ಸಹಕಾರ ಇತ್ಯಾದಿ...

೩ನಮ್ಮ ವರ್ತನೆಯ ಬದಲಾವಣೆಗೆ ಸಂಸ್ಕೃತಿ ಒಂದು ಉತ್ತಮ ಸಾಧನ ಉತ್ತಮ ಸಂಸ್ಕೃತಿ ಉಳ್ಳ ವ್ಯಕ್ತಿಗಳ ವರ್ತನೆಯು ಉತ್ತಮವಾಗಿರುತ್ತದೆ ಅವರನ್ನು ಅನುಸರಿಸುವ ಮೂಲಕ ಸಂಸ್ಕೃತಿ ಬೆಳೆಸಬಹುದು.

೪ ನಮ್ಮ ಜಾತ್ಯ, ಹಬ್ಬ ಹರಿದಿನ ಮದುವೆ ಸಂಪ್ರದಾಯವನ್ನು ನಾವು ಆಚರಿಸಿ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡಬೇಕು.

೫ ನಮ್ಮ ಭಾಷೆ, ಕಲೆ ,ಹಾಡು,ಜನಪದ ಅರ್ಥ ಪೂರ್ಣ ಸಂಪ್ರದಾಯವನ್ನು ನಾವು ಬೆಳೆಸಿ ಉಳಿಸಬೇಕಿದೆ

ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ಸಂಸ್ಕೃತಿ ಇಂದು ಪಾಶ್ಚಾತ್ಯ ಸಂಸ್ಕೃತಿ ಯಿಂದ ನಲುಗಿದೆ ದೇಶದ ಬಹುತೇಕ ಭಾಗಗಳಲ್ಲಿ ಆಧುನೀಕರಣ , ಪಾಶ್ಚಾತ್ಯೀಕರಣ ,ಜಾಗತೀಕರಣದ ಪರಿಣಾಮವಾಗಿ ನಮ್ಮ ಸಂಸ್ಕೃತಿ ಹಿಂಬೀಳುವಿಕೆ (cultural lag) ಕಂಡು ಬರುತ್ತದೆ ಇದನ್ನು ಹೋಗಲಾಡಿಸಲು ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಲು ನಾವೆಲ್ಲರೂ ಪಣ ತೊಡೋಣ .


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*