02 ಡಿಸೆಂಬರ್ 2017

ನ್ಯಾನೋ ಕಥೆ (ಮುಖ ಪುಸ್ತಕ)

*ನ್ಯಾನೋ ಕಥೆ*

*ಮುಖ ಪುಸ್ತಕ*

ಡಿಗ್ರಿ ಮುಗಿಸಿ ಕೆಲಸವಿಲ್ಲದೇ ಊರಲ್ಲೇ ಇದ್ದ ಮಗ ಸತೀಶ್ ಕುರಿತು ಅಪ್ಪ "ಯಾವಾಗಲೂ ಪೇಸ್ಬಕ್ ವಾಟ್ಸಪ್ ನಲ್ಲಿ ಮುಳುಗಿರ್ತಿಯಾ ಇಲ್ಲಾ ಹೊಲದ ಕಡೆ ಬತ್ತಿಯಾ?" ಎಂದು ಗೊಣಗುತ್ತ ಹೊಲದತ್ತ ಹೆಜ್ಜೆ ಹಾಕಿದರು.ಸತೀಶ್ ನಿಗೆ ಫೇಸ್ ಬುಕ್ ಒಂದು ಪೋಸ್ಟ್ ನೋಡಿ ಆಶ್ಚರ್ಯ ಮತ್ತು ಆನಂದವಾಗಿ ಅದರ ವಿಳಾಸ ಹಡುಕಿಹೋದಾಗ ಅಲ್ಲಿದ್ದ ಎರಡು ಎಮ್ಮೆಗಳು ಐದು ದಿನದ ಹಿಂದೆ ಕಳೆದುಹೋಗಿ  ಅವರ ತಂದೆ ಮತ್ತು ಅವನು ಎಲ್ಲಾ ಕಡೆ ಹುಡುಕಿದರೂ ಸಿಕ್ಕಿರಲಿಲ್ಲ .ಪೇಸ್ ಬುಕ್ ಪೋಸ್ಟ್ ಮಾಡಿದ ಗೆಳಯನಿಗೆ ಕೃತಜ್ಞತೆ ಹೇಳಿ ಎಮ್ಮೆಗಳೊಂದಿಗೆ ಮನೆಗೆ ಬಂದ. ಸಂಜೆ ಹೊಲದಿಂದ ಮನೆಗೆ ಹಿಂತಿರುಗಿದ ಮೇಲೆ ತಂದೆಗೆ  ವಿಷಯ ತಿಳಿದು ಎಮ್ಮೆಗಳ ಕಂಡು ಮಗನ "ಮುಖ"ವನ್ನು ಹೆಮ್ಮೆಯಿಂದ ನೋಡಿದರು.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

01 ಡಿಸೆಂಬರ್ 2017

ಪೋಷಕರೇ ಹದಿಹರೆಯದವರ ಜೊತೆ ಸ್ನೇಹಿತರಾಗಿರಿ (ಲೇಖನ)

ಲೇಖನ*
*ಹದಿಹರೆಯದವರೊಂದಿಗೆ ಸ್ನೇಹದಿಂದಿರಿ*
"ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು"ಎಂದು ಕವಿಗಳ ವಿವರಿಸಿರುವಂತೆ ಕಿಶೋರಾವಸ್ಥೆ ಅಥವಾ ಹದಿಹರೆಯದ ಮಕ್ಕಳು ಅವರ ವರ್ತನೆಗಳು ಮತ್ತು ಅವರ ಭಾವನೆಗಳು ತಾಕಲಾಟ ಆಡುವ ಸಮಯ ಅದಕ್ಕೆ ಮನಶಾಸ್ತ್ರಜ್ಞರು ಈ ಕಾಲವನ್ನು ಸಂಕ್ಷೋಬೆಯ ಕಾಲ ಎಂದಿದ್ದಾರೆ.
ಇಂತಹ ಕಾಲದಲ್ಲಿ ಮನೆಯಲ್ಲಿ ಪೋಷಕರು ಹದಿಹರೆಯದವರ ಜೊತೆ ಸಂಘರ್ಷಕ್ಕೆ ಇಳಿಯುವ ಬದಲು ಈ ಕೆಳಗಿನ ಅಂಶಗಳನ್ನು ಪಾಲಿಸಿ ಅವರೊಂದಿಗೆ ಸ್ನಹದಿಂದಿರಲು ಮನಶಾಸ್ತ್ರಜ್ಞರು ಹೇಳುತ್ತಾರೆ.
ಹಾಗಾದರೆ ಅವರೊಂದಿಗೆ ಸ್ನೇಹದಿಂದಿರುವುದು ಹೇಗೆ ?
1 ಗೌರವ ತೋರಿ :
     ಆಗ ತಾನೆ ಬಾಲ್ಯಾವಸ್ಥೆಯ ಹಂತ ದಾಟಿ ಕಿಶೋರಾವಸ್ಥೆ ತಲುಪಿದ ಈ ಮಕ್ಕಳು ಗೌರವ ಅಪೇಕ್ಷಿಸುವರು ,ಈ ಹಂತಗಳಲ್ಲಿ ಅವರು ಅವರ ಶಿಕ್ಷಣ, ಕೆಲಸ ಮುಂತಾದ ವಿಷಯಗಳಲ್ಲಿ ಕೆಲ ನಿರ್ಧಾರ ಕೈಗೊಂಡರೆ ಅವರ ತೀರ್ಮಾನಕ್ಕೆ ಗೌರವ ನೀಡಬೇಕು. ಕೆಲವೊಮ್ಮೆ ಅವರ ತಪ್ಪು ನಿರ್ಧಾರದಿಂದ ಬೇಸರಪಟ್ಟುಕೊಂಡಾಗ ಅವರ ಸಮಸ್ಯೆ ಬಗೆಹರಿಸಲು ಸ್ನೆಹಿತನಂತೆ ವರ್ತಿಸಿ.
2 .ಅವರ ಗೆಳತನ ಸ್ವೀಕರಿಸಿ :
ಹದಿಹರೆಯದವರು ತಮಗೆ ಇಷ್ಟವಾದ ಗೆಳೆಯ ಗೆಳತಿಯರೊಂದಿಗೆ ಕಾಲ ಕಳೆಯಲು‌ ಇಷ್ಟ ಪಡುವರು ನೀವು ಇದನ್ನು ವಿರೋದಿಸಿದರೆ ಮನೆಯಲ್ಲಿ ದೊಡ್ಡ ರಾದ್ದಾಂತವೇ ನಡೆಯಬಹುದು ಅದರ ಬದಲಾಗಿ ಕೆಲ ಸಲಹೆಗಳನ್ನು ನೀಡಿ ಅವರ ಗೆಳೆತನ ಸ್ವೀಕರಿಸಿ. ಈ ವೇಳೆ ನಿಮ್ಮ ಮಕ್ಕಳು ಮನೆಯಿಂದ ಹೊರಗಿದ್ದರೆ ನಿಮಗೆ ಪ್ರತಿದಿನ ಕರೆ ಮಾಡಿ ಮಾತಾಡುವುದನ್ನು ಕಡಿಮೆ ಮಾಡಿ ಗೆಳೆಯ ರೊಡನೆ ಮಾತಾಡುವುದನ್ನು ಗಮನಿಸಿ ಹೆಚ್ಚು ತಲೆಕೆಡಿಸಿಕೊಳ್ಖಬೇಡಿ ಅವರ ಭಾವನೆಗಳನ್ನು ಗೌರವಿಸಿ ಕ್ರಮೇಣ ನಿಮ್ಮ ಮಗ ಅಥವಾ ನಿಮ್ಮ ಮಗಳು ನಿಮ್ಮ ಮೇಲೆ ಗೌರವ ಬೆಳೆಸಿಕೊಳ್ಳುವರು.
3 ಅವರ ಆಸಕ್ತಿಗಳನ್ನು ಬೆಂಬಲಿಸಿ :
ಮೊದಲು ಕೇವಲ ನಿಮ್ಮ ಏರಿಯಾದ ಗಲ್ಲಿಗಳಲ್ಲಿ ಆಟವಾಡುತ್ತಿದ್ದ ನಿಮ್ಮ ಮಗ ಅಥವಾ ಮಗಳು
ಕ್ರಮೇಣ ಹೊಸ ಹೊಸ ಆಟಗಳು ಮತ್ತು ಸಾಹಸ ಚಟುವಟಿಕೆಗಳನ್ನು ಹೊಂದಲು ಬಯಸುವರು ಈ ಹಂತಗಳಲ್ಲಿ ಪೋಷಕರಾದವರು ಅವರ ಆಸಕ್ತಿಗಳಿಗೆ ತಣ್ಣೀರೆರಚದೆ ಸ್ನೇಹಿತನಂತೆ ಬೆಂಬಲಿಸಿದರೆ ನಿಮ್ಮ ಸಂಬಂಧ ವೃದ್ಧಿಸಲು ಮತ್ತು ಅವರ ಆಸಕ್ತಿ ಕ್ಷೇತ್ರ ಬೆಳೆಯಲು ಪೂರಕವಾಗುವುದು .
4  ಅವರೊಂದಿಗೆ ಸಂಪರ್ಕ ಸಾದಿಸಿ :
ಹದಿಹರೆಯದವರ ಜೊತೆ ಸಾಧ್ಯವಾದಷ್ಟು ಸಂಪರ್ಕ ಸಾಧಿಸಲು ಪ್ರಯತ್ನ ಪಡಬೇಕು ಇಂದಿ ಆಧುನಿಕ ಯಾಂತ್ರಿಕ ಯುಗದಲ್ಲಿ ನಿಮಗೆ ಸಮಯದ ಅಭಾವದಿಂದ ವಾರಗಟ್ಟಲೆ  ಮನೆಯಿಂದ ಹೊರಗೆ ಇರಬೇಕಾದ ಸಂದರ್ಭಗಳಲ್ಲಿ ಇಂತಹ ಮಕ್ಕಳೊಂದಿಗೆ ಯಾವುದೇ ವಿಧದಲ್ಲೂ ಸಂಪರ್ಕ ಸಾಧಿಸಬಹುದು ಅದು .ವಾಟ್ಸಪ್, ಆಗಬಹುದು, ಕಾಲ್ ಮಾಡಬಹುದು, ಕೊನೆಯಪಕ್ಷ ಎಸ್ ಎಂ ಎಸ್ ಆದರೂ ಆದೀತು ಇದು ಅವರೊಂದಿಗಿನ ಭಾವನಾತ್ಮಕ ಸಂಬಂಧವನ್ನು ವೃದ್ಧಿಸಲು ಮತ್ತು ಒಂಟಿತನ ನಿವಾರಿಸಲು ಸಹಾಯಕ.
5  ನಿಮ್ಮ ಅನುಭವ ಮತ್ತು ಅನಿಸಿಕೆಗಳನ್ನು ಹೇರಬೇಡಿ :
ಇದು ಬಹುತೇಕ ಎಲ್ಲಾ ಪೋಷಕ ಮಿತ್ರರು ಮಾಡುವ ತಪ್ಪು ,ತಮ್ಮಿಂದ ಯಾವ ಕಾರ್ಯ ಮಾಡಲಾಗಲಿಲ್ಲ ಅದನ್ನು ನನ್ನ ಮಗ ಅಥವಾ ಮಗಳು ಮಾಡಲಿ‌ಎಂಬ ಸಹಜ ಆಸೆ ಜೊತೆಗೆ ಅನಗತ್ಯವಾಗಿ ಪದೇ ಪದೇ ನೀನು ಇದೇ ಆಗಬೇಕೆಂದು ಒತ್ತಡ ಹೇರುವುದು. ಇದು ಹದಿಹರೆಯದವರ ಮೇಲೆ ಪ್ರತಿಕೂಲವಾದ ಪರಿಣಾಮವನ್ನು ಬೀರಿ ಅವರ ಸಹಜ ಪ್ರತಿಭೆ ಹೊರಬರಲು ಅಡ್ಡಿಯಾಗುವುದು .ಆದ್ದರಿಂದ ಅವರಿಗೆ ಸಲಹೆ ನೀಡಿ ಸ್ವೀಕರಿಸಿದಿದ್ದರೆ ಬೇಸರಿಕೊಳ್ಳದೇ ಹಿಂಜರಿಯಿರಿ ಪ್ರತಿಷ್ಠೆ ಬೇಡ
ಮುಂದೆ ಅವರೇ ಪಾಠಗಳನ್ನು ಕಲಿಯಲು ಅವಕಾಶ ನೀಡಿ.
ಈ ಮೇಲ್ಕಂಡ ಅಂಶಗಳನ್ನು ಗಮನಿಸಿ ನಮ್ಮ ಹದಿಹರೆಯದವರ ಪಾಲನೆ ಪೋಷಣೆಯಲ್ಲಿ ಅವರನ್ನು ಸ್ನೇಹಿತರ ರೀತಿಯಲ್ಲಿ ನಡೆಸಿಕೊಂಡರೆ ಕ್ಷೋಭೆ ಯ ಹಂತದ ಈ ಪ್ರಮುಖ ಘಟ್ಟ ದಾಟಿ ನಮ್ಮ ಮಕ್ಕಳು ಜವಾಬ್ದಾರಿ ಪ್ರಜೆಗಳಾಗುವುದರಲ್ಲಿ ಸಂದೇಹವಿಲ್ಲ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

*ವಸುಧೈವಕುಟುಂಬಕಂ* (ಕವನ)

*ವಸುಧೈವಕುಟುಂಬಕಂ*

ಹಚ್ಚಿಬಿಡೋಣ  ಸ್ನೇಹದ ದೀಪ
ಅಳಿಸಿಬಿಡೋಣ  ದ್ವೇಷದ ಶಾಪ||

ಜಾತಿ ಮತದ ಕೊಳೆ ತೊಳೆದು
ಮೇಲು ಕೀಳಿನ ತರತಮ ಜರಿದು
ಅಸಹಿಷ್ಣುತೆಯ ವಾದ  ತೊಡೆದು
ಎಲ್ಲರೂ ಸ್ನೇಹದ ದೀಪ ಹಚ್ಚೋಣ||

ನಗುವುದ ಎಲ್ಲರಿಗೂ ಕಲಿಸೋಣ
ನಗುತಾ ನಲಿಯುತ ಬಾಳೋಣ
ಮಗುವಿನ ನಗುವ ಕಲಿಯೋಣ
ನಾವು ನಗುವಿನ ದೀಪ ಹಚ್ಚೋಣ||

ಗಡಿಗಳ ಗೊಡವೆ ಬಿಡೋಣ
ಪ್ರತ್ಯೇಕತೆ ಕೂಗು ತಡೆಯೋಣ
ವಿಶ್ವಮಾನವತೆ ತತ್ವ ಸಾರೋಣ
ವಸುಧೈವಕುಟುಂಬಕಂ ಎನ್ನೋಣ||

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

30 ನವೆಂಬರ್ 2017

ಗಗನಯಾನ (ಲೇಖನ)


*ಗಗನಯಾನ*

ನಾನು ನಾಸಾ ಸಂಸ್ಥೆಯವರು ಏರ್ಪಡಿಸಿದ್ದ "ಮಂಗಳನ ಅಂಗಳಕ್ಕೆ ಮಾನವ" ಎಂಬ ಯೋಜನೆಯ ಜಾಹಿರಾತನ್ನು ಪತ್ರಿಕೆಯಲ್ಲಿ ನೋಡಿ ಅರ್ಜಿ ಹಾಕಿ ಮೂರು ತಿಂಗಳಾಗಿತ್ತು .ಸರ್ ನಿಮಗೊಂದು ಕೊರಿಯರ್ ಇದೆ ಎಂದು ಕೊರಿಯರ್ ಬಾಯ್ ಲೆಟರ್ ಕೈಗಿತ್ತು ಹೋದ .ನಾನು ನಾಸಾ ಸಂಸ್ಥೆಯ ಯೋಜನೆಗೆ ಪ್ರಾಥಮಿಕ ಆಯ್ಕೆ ಪ್ರಕ್ರಿಯೆಗೆ ಅಯ್ಕೆಯಾಗಿ ಬೆಂಗಳೂರಿನಲ್ಲಿ ಇಸ್ರೋ ಕಛೇರಿಗೆ ಬರಲು ತಿಳಿಸಿದ್ದರು .ಅಂದು ಬೆಳಿಗ್ಗೆ ೧೦.೩೦ ಕಚೇರಿ ತಲುಪಿದ ನನಗೆ ಇಂಗ್ಲೀಷ್ ನಲ್ಲಿ ಸಂದರ್ಶನ ಮಾಡಿ ನೀವು ಆರ್ಟ್ಸ್ ಓದಿ ವಿಜ್ಞಾನ ಸಂಬಂದಿಸಿದ ವಿಷಯಗಳ ಮೇಲೆ ಆಸಕ್ತಿಯನ್ನು ಬೆಳೆಸಿಕೊಂಡಿರುವಿರಿ ಹೇಗೆ ಎಂದರು. ನಾನು ಸಮಾಜ ವಿಜ್ಞಾನದ ಶಿಕ್ಷಕ ಎಂದೆ .
ಕಛೇರಿಯ ಹೊರಗೆ ಸಂಜೆ ೫.೩೦ ಕ್ಕೆ ೧೦೦ ಜನ ಸಂದರ್ಶಿತರಲ್ಲಿ ಇಬ್ಬರನ್ನು ಮಾತ್ರ ಯೋಜನೆಗೆ ಆಯ್ಕೆ ಮಾಡುವ ಆಯ್ಕೆ ಪಟ್ಟಿ ಪ್ರಕಟಿಸಲು ಸಿದ್ದತೆ ನಡೆದಿತ್ತು. ಇಸ್ರೋ .ಐ ಐ ಎಸ್ಸಿ ವಿಜ್ಞಾನಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು ಮಾನಸಿಕವಾಗಿ ನಾನು ಆಯ್ಕೆ ಆಗಿಲ್ಲ ಎಂದು ಹೊರಡಲು ಸಿದ್ದನಾದೆ .ಮೈಕಿನಲ್ಲಿ  ಸತೀಶ್ ಧವನ್ ಮತ್ತು ಸಿ.ಜಿ.ವೆಂಕಟೇಶ್ವರ ಎಂದು ಕರೆದಾಗ ನನ್ನ ಕಿವಿ ನಾನೇ ನಂಬದೇ ಇದು ಕನಸೋ ನನಸೋ ಎಂದು ಮೈಮುಟ್ಟಿ ನೋಡಿಕೊಂಡೆ ಎಲ್ಲ ವಿಜ್ಞಾನಿಗಳು ಬಂದು ಅಭಿನಂದಿಸಿದರು .ಆಯ್ಕೆ ಪತ್ರ ನೀಡಿ ಮುಂದಿನ ತಿಂಗಳು ಅಮೆರಿಕದ ನಾಸಾದಲ್ಲಿ ತರಬೇತಿಯನ್ನು ನೀಡಲಾಗುತ್ತದೆ ಅಲ್ಲಿಗೆ ಬರಲು‌ನಿಮಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿಹೊರಟರು.ದೇಶ ಬಿಟ್ಟು ಹೊರಗಡೆ ಕಾಲಿಟ್ಟಿರದ ನಾನು ಅಮೆರಿಕವನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದೆ .ಮೊದಲ ವಾರ ಆಕಾಶಯಾನದ ಬಗ್ಗೆ ಮೂಲಭೂತ ವಿವರಣೆ ,ಅಂತರಿಕ್ಷದ ವಾತಾವರಣ, ಅಹಾರ ಮುಂತಾದ ವಿಷಯಗಳ ಬಗ್ಗೆ ಪ್ರಾಯೋಗಿಕ ತರಗತಿಯಲ್ಲಿ ಹೇಳಿಕೊಟ್ಟರು .ನಾಳೆಯಿಂದ ನಿಮ್ಮನ್ನು ರಾಕಟ್ನಲ್ಲಿ ಅಂತರಿಕ್ಷದಲಿ ಹಾರಿಸಿ ತರಬೇತಿ ನೀಡಲಾಗುತ್ತದೆ ಎಂದರು,ಆಗ ಒಂಥರ ಅವ್ಯಕ್ತ ಭಯ ಶುರುವಾಯಿತು. ಆದರೂ ದೈರ್ಯ ತೆಗೆದುಕೊಂಡು ಮಾರನೇದಿನ ಬೆಳಿಗ್ಗೆ ಭಾರತೀಯ ಕಾಲಮಾನ ೬.೩೦ ಕ್ಕೆ ಗಗನಯಾನಿ ದಿರಿಸಿನಲ್ಲಿ ಸಿದ್ದ ನಾಗಿ ರಾಕೆಟ್ ನಲ್ಲಿ ೭ ಜನ ಸಹ ಗಗನಯಾತ್ರಿಗಳ ಜೊತೆ ರಾಕೆಟ್ ಮೇಲೇರಿತು  ನನ್ನ ಮೈ ಜುಂ ಎಂದಿತು ರೋಮಾಂಚನಗೊಂಡು ಕಿರುಚಿದೆನು ."ರೀ ಯಾಕೆ ಕಿರಿಚುತೀರಿ ಇಗೋ ತಗೊಳ್ಳಿ ಕಾಫಿ "ಎಂದು ನನ್ನವಳು ಕಾಫಿ‌ಲೋಟ ಟೇಬಲ್ ಮೇಲಿಟ್ಟು ಅಡಿಗೆ ಮನೆಗೆ ನಡೆದಳು.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು (ಹೂಗಳು) ಹನಿ ಹನಿ ಇಬ್ಬನಿ ವಾಟ್ಸಪ್ ತಂಡದಿಂದ ಬಹುಮಾನ ಪಡೆದ ಹನಿಗವನಗಳು

ಜನನ
ಹನಿಗವನಗಳುಗಮನ

*೧*
*ಕೇಳಬೇಡಿ*

ಉದ್ಯಾನವನದಲ್ಲಿತ್ತು ಬೋರ್ಡ್
ಹೂಗಳನ್ನು ಕೀಳಬೇಡಿ
ನನ್ನವಳು ಕಿತ್ತೇಬಿಟ್ಟಳು
ಮುಡಿಗೇರಿಸಿ ಅಂದಳು
ಏಕೆಂದು ನೀವು
ಕೇಳಬೇಡಿ

*೨*
*ಉದ್ಯಾನವನ*

ನನ್ನವಳು ಮುಡಿದಳು
ನಾನು ಕೊಟ್ಟ ವಿವಿಧ
ಜಾತಿಯ ಹೂಗಳನ
ನೋಡಿದರೆ ಅವಳ
ತುರುಬೇ ಉದ್ಯಾನವನ

*೩*

*ಮಕರಂದ*

ಪ್ರಿಯೆ ನಾ ದುಂಬಿಯಾಗಿ
ಹೀರಲೇ ಮಕರಂದ
ಅವಳೆಂದಳು ಮೊನ್ನೆ
ನಿತ್ಯಾನಂದ ಈಗೇ ಅಂದ

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*