22 ಸೆಪ್ಟೆಂಬರ್ 2017

ಜನನಾಯಕರು (ಕವನ)


                    *ಜನನಾಯಕರು*

ಏರಿದರೆ ಅಧಿಕಾರದ ಅಮಲು
ಕಾಣುವುದಿಲ್ಲ ನಿಮಗೆ ಕಂಗಳು

ಒಡೆದು ಆಳದಿರಿ‌ ನಮ್ಮನ್ನು
ಮರೆಯದಿರಿ ನಮ್ಮ ಗೋಳನ್ನು
ಓಡದಿರಿ ನಮ್ಮಿಂದ ದೂರ
ನೀಡಿ ನಮ್ಮ ಸಮಸ್ಯೆಗಳಿಗೆ ಪರಿಹಾರ.

ದಲಿತರ ಏಳಿಗೆಗಾಗಿ ಪಣತೊಡಿ
ನೀವಾಗಿ ನಮ್ಮ ಒಡನಾಡಿ
ಗಮನವಿರಲಿ ನಿಮ್ಮ ಕಾರ್ಯ ಕ್ಷೇತ್ರ
ಮಾಡದಿರಿ ನಮ್ಮ ನಾಡ ಕುರುಕ್ಷೇತ್ರ

ನೀವಾಗಿ ನಮ್ಮ ಜನನಾಯಕರು
ನಮ್ಮ ಏಳ್ಗೆಯ ಸಹಾಯಕರು
ಇನ್ನಾದರೂ ಮಾಡಿ ನಮ್ಮ ಸೇವೆ
ಇಲ್ಲವಾದರೆ ನಮ್ಮ ಬಾಳೆಲ್ಲ ನೋವೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

21 ಸೆಪ್ಟೆಂಬರ್ 2017

ಹಗಲಿರುಳು ಸಾಲದು( ಕವನ)



                  *ಹಗಲಿರುಳು ಸಾಲದು*

ನನ್ನವಳು  ಸೌಂದರ್ಯ ಲಾವಣ್ಯವತಿ
ನನ್ನದೆಯ ಅನುರೂಪ  ಸೌಭಾಗ್ಯವತಿ
ಉದಯಿಸುವ ಪೂರ್ಣ ಚಂದಿರನ ಬಣ್ಣ
ನನ್ನ ಲತಾಂಗಿಯ ಮೈಬಣ್ಣ

ಇವಳ ಹುಬ್ಬು ಮನ್ಮಥನ ಬಿಲ್ಲು
ಕಾಡುತ್ತಾಳೆ ಬಂದು ಕನಸಲ್ಲೂ
ಇವಳ ಕಣ್ಣು ಸುಂದರ ಮೀನು
ಕಾಯುತಿರುವೆನು ನಿನಗಾಗಿ ನಾನು

ಮೃಗರಾಜ ಸಿಂಹದಂತಹ ನಡುವು
ಸಮುದ್ರದ ತೆರೆ ನಿನ್ನ ಕೇಶವು
ದಾಳಿಂಬೆಫಲ ಇವಳ ದಂತಪಂಕ್ತಿಗಳು
ಇವಳ ವರ್ಣಿಸಲು ಸಾಲದು ಹಗಲಿರುಳು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

20 ಸೆಪ್ಟೆಂಬರ್ 2017

ಮರ್ಕಟ (ಕವನ)

             
               *ಮರ್ಕಟ*

ಮನಸ್ಸೆಂಬ ಮರ್ಕಟ
ನಿಲ್ಲುತಿಲ್ಲ ಒಂದೆಡೆ ಅಕಟಕಟ
ಒಮ್ಮೆ ಓಡುವದು ಅತಿವೇಗ
ಮತ್ತೊಮ್ಮೆ ಕೇಳುವುದು  ಏನೀ ಆವೇಗ

ಒಂದು ಬಾರಿ ಹೇಳುವುದು ಸರಿ ನೀನು
ಮೂದಲಿಸುವುದು ಒಮ್ಮೆ ಸಾಚಾ ನೀನು?
ಚಂಚಲತೆಗೆ ನೀನೇ ಸರದಾರ
ಗೊಂದಲಗಳಿಗೆಲ್ಲಾ ನೀನೇ ಸೂತ್ರದಾರ

ಮಹಾನುಭಾವರಾದರೆ ಅಂಕುಶದಲ್ಲಿರುವೆ
ನನ್ನಂತಹವರಾದರೆ ಸವಾರಿ ಮಾಡುವೆ
ನಿನ್ನ ಮಹಾತ್ಮೆ ಒಂದಲ್ಲ ಎರಡಲ್ಲ
ನೀನೆಂದು ನಿಯಂತ್ರಣದಲ್ಲಿರುವೆ ತಿಳಿದಿಲ್ಲ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

19 ಸೆಪ್ಟೆಂಬರ್ 2017

ಹಬ್ಬ ಮಾಡೋಣ (ಕವನ)

                  *ಹಬ್ಬ ಮಾಡೋಣ*

ಸರಿದು ಹೋಗುವ ಮುನ್ನ
ಯೌವನದ ಸವಿಯನ್ನ
ಸವಿವ ಬಾರೆ ಒಲವನ್ನ
ಕೂಡುವಾಸೆ ಇಂದು ನಾ ನಿನ್ನ .

ವಿರಸದ ಮಾತುಇಂದೇಕೆ?
ಸರಸಕೆ ಹಿಂದೇಟು ಏಕೆ?
ಸರಸರನೆ ಬಳಿ ಸಾರಿ
ಬಾರೆ ನನ್ನ ಸುಂದರಿ .

ಸರಿಸು ನಿನ್ನ ಲಜ್ಜೆಯನು
ಸುರಿಸು ಮುತ್ತಿನ ಮಳೆಯನು
ಬರಿ ಮಾತು ಬೇಕಿಲ್ಲ
ಸಾರಿ ಬಳಿ ಬಾರೆ ಹಬ್ಬ ಮಾಡೋಣ .

ಅತಿಕೋಪ ಬೇಕಿಲ್ಲ
ರತಿ ಮನ್ಮಥರಾಗೋಣ
ಮಿತಿಮೀರಿದ ನನ್ನ ಬಯಕೆಯ
ತಣಿಸಲು ಈಗಲೇ ಬಾರೆ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*