11 ಜನವರಿ 2026

ಜಗದ ಎತ್ತರದ ಹಾಗೂ ಭಾರವಾದ ಶಿಬಲಿಂಗ..


 ಜಗದ ಅತಿ ಎತ್ತರದ ಹಾಗೂ ಭಾರವಾದ ಏಕ‌ ಶಿಲಾ ಶಿವಲಿಂಗ ಬಿಹಾರದ ದೇವಾಲಯವೊಂದಲ್ಲಿ ಶೀಘ್ರದಲ್ಲೇ ಪ್ರತಿಷ್ಠಾಪನೆಯಾಗಲಿದೆ.


ಗ್ರಾನೈಟ್ ಶಿಲೆಯಲ್ಲಿ ಕೆತ್ತಿರುವ ಈ ಲಿಂಗವು‌ 33 ಅಡಿ ಉದ್ದವಿದ್ದು ಬರೊಬ್ವರಿ 210 ಟನ್ ಭಾರವಿದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಹತ್ತು ವರ್ಷಗಳಿಂದ ಕೆತ್ತನೆ ಮಾಡಿ ಈಗ ಬಿಹಾರದ ಚಂಪಾರಣ್ಯ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ವಿರಾಟ್ ರಾಮಾಯಣ ದೇವಾಲಯದ ಕಡೆಗೆ ಪಯಣ ಆರಂಭಿಸಿದೆ.ಲಿಂಗವೇ ಈ ಮಟ್ಟದ ದಾಖಲೆಯನ್ನು ಹೊಂದಿದೆ ಎಂದರೆ ಆ ದೇವಾಲಯದ ಬಗ್ಗೆ ನನಗೆ ಇನ್ನೂ ಕುತೂಹಲ ಇದೆ.


ಈ ಬೃಹತ್  ಲಿಂಗದ ಸಾಗಣೆಗೆ 96 ಚಕ್ರದ ಹೈಡ್ರಾಲಿಕ್ ಲಾರಿ ಬಳಸಲಾಗಿದೆ.2100 ಕಿಲೋಮೀಟರ್ ದಾರಿ ಸುಸೂತ್ರವಾಗಿ ಸಾಗಿ ಪ್ರಸಾವಿತ ದೇವಳ ತಲುಪಲಿ ಎಂದು ಆಶಿಸೋಣ.ಓಂ ನಮಃ ಶಿವಾಯ ಎಂದು ಕಾಮೆಂಟ್ ಮಾಡುವ ಮೂಲಕ ಶುಭಾಶಯಗಳನ್ನು ಕೋರೋಣ.


#sihijeevi #tumkur 

 #harharmahadev #omnamahshivaya 

#Bihar #mahabalipuram #tamilnadupolitics

09 ಜನವರಿ 2026

ನೆಲದ ನಕ್ಷತ್ರ ದೀಪೆಂದರ್ ಗೋಯಲ್..

 


ಅವರು ತಮ್ಮ ಬಾಲ್ಯದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದರು. ಅವರು ಕುಳ್ಳಗಿದ್ದರು, ಕಪ್ಪಗಿದ್ದರು.    ತೊದಲುತ್ತಿದ್ದರು ಎಂಬ ಕಾರಣಕ್ಕಾಗಿ ಅವರನ್ನು ಅವರ ಸ್ನೇಹಿತರು ಕೀಟಲೆ ಮಾಡಿ ಅವಮಾನ ಮಾಡಿದ್ದರು.  ಅವರು ಮಾತನಾಡುವಾಗ ಜನರು ಅವರ ಕಡೆ ಗಮನ ಕೊಡುತ್ತಿರಲಿಲ್ಲ ಅಥವಾ ಅವರ ಮಾತಿನ ಮಧ್ಯದಲ್ಲೇ ಬೇರೆಡೆ ನೋಡುತ್ತಿದ್ದರು. ಈ ಕೀಳರಿಮೆಯೇ ಅವರನ್ನು ಜೀವನದಲ್ಲಿ ದೊಡ್ಡದನ್ನು ಸಾಧಿಸಲು ಪ್ರೇರೇಪಿಸಿತು. ಇಂದು ಅವರು ಯಶಸ್ವಿ ಉದ್ಯಮಿ 700000 ಕ್ಕೂ ಜನರ ಉದ್ಯೋಗದಾತ.ಈಗ  ತಾವು ತೊದಲುತ್ತಾ ಮಾತನಾಡೊದರೂ  ಜನರು ಅವರ  ಮಾತನ್ನು ಗಮನವಿಟ್ಟು ಕೇಳುತ್ತಾರೆ.ಅವರೇ ಜೊಮಾಟೋ ಕಂಪನಿಯ ಸಂಸ್ಥಾಪಕ ದೀಪೇಂದರ್ ಗೋಯಲ್.


ಗೋಯಲ್ ಜನವರಿ 26, 1983 ರಂದು ಭಾರತದ ಪಂಜಾಬ್‌ನ ಮುಕ್ತಸರ್‌ನಲ್ಲಿ ಜನಿಸಿದರು. ಅವರು 2005 ರಲ್ಲಿ ದೆಹಲಿಯ ಐ ಐಟಿ  ಗಣಿತ ಮತ್ತು ಕಂಪ್ಯೂಟಿಂಗ್‌ನಲ್ಲಿ ಎಂ.ಟೆಕ್ ಪದವಿ ಪಡೆದ
ನಂತರ ಜನವರಿ 2006 ರಲ್ಲಿ ಬೈನ್ ಅಂಡ್ ಕಂಪನಿಯಲ್ಲಿ ಹಿರಿಯ ಸಹಾಯಕ ಸಲಹೆಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬೈನ್‌ನಲ್ಲಿದ್ದಾಗ ಗೋಯಲ್ ತಮ್ಮ ಸಹೋದ್ಯೋಗಿ ಪಂಕಜ್ ಅವರೊಂದಿಗೆ ಆಹಾರ ಆರ್ಡರ್‌ಗಳಿಗಾಗಿ ಸರತಿ ಸಾಲಿನಲ್ಲಿ ನಿಲ್ಲುವ ಅನಾನುಕೂಲತೆಯಿಂದ ಪ್ರೇರಿತರಾಗಿ ಜೊಮ್ಯಾಟೊದ ಕಲ್ಪನೆಯನ್ನು ರೂಪಿಸಿದರು.  ಬೈನ್ ಉದ್ಯೋಗಿಗಳಿಗೆ ಆಹಾರ ಆರ್ಡರ್ ಮಾಡುವ ವೆಬ್‌ಸೈಟ್ ಎಂಬ ಅವರ ಆರಂಭಿಕ ಯೋಜನೆಯು ಯಶಸ್ವಿಯಾಯಿತು. ಇದು 2008 ರಲ್ಲಿ ಜೊಮ್ಯಾಟೊ ಸ್ಥಾಪನೆಗೆ ಕಾರಣವಾಯಿತು. 
ಆರಂಭದಲ್ಲಿ ಫುಡೀಬೇ ಎಂದು ಹೆಸರಿಸಲಾದ ಜೊಮ್ಯಾಟೊ ಭಾರತೀಯ ಬಹುರಾಷ್ಟ್ರೀಯ ರೆಸ್ಟೋರೆಂಟ್ ಸಂಗ್ರಾಹಕ ಮತ್ತು ಆಹಾರ ವಿತರಣಾ ಕಂಪನಿಯಾಗಿದೆ. ಇದು ಗ್ರಾಹಕರು, ರೆಸ್ಟೋರೆಂಟ್ ಪಾಲುದಾರರು ಮತ್ತು ವಿತರಣಾ ಪಾಲುದಾರರನ್ನು ಸಂಪರ್ಕಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ  ಜೊಮ್ಯಾಟೊ ಜಾಗತಿಕವಾಗಿ ವಿಸ್ತರಿಸಿದೆ.ಸುಮಾರು 22 ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಸಮಗ್ರ ರೆಸ್ಟೋರೆಂಟ್ ಮಾಹಿತಿ, ಮೆನು ವಿವರಗಳು, ಬೆಲೆ ಮತ್ತು ವಿಮರ್ಶೆಗಳನ್ನು ನೀಡುತ್ತದೆ. 
ಗೋಯಲ್ ಅವರ ನಾಯಕತ್ವದಲ್ಲಿ, ಜೊಮಾಟೊ ಪೋಲೆಂಡ್‌ನಲ್ಲಿ ಗ್ಯಾಸ್ಟ್ರೋನೌಸಿ , ಇಟಲಿಯಲ್ಲಿ ಸಿಬಾಂಡೋ ಮತ್ತು ಭಾರತದಲ್ಲಿ ಬ್ಲಿಂಕಿಟ್  ಗಳ   ಸ್ವಾಧೀನಗಳ ಮೂಲಕ ತನ್ನ ಜಾಗತಿಕ ಉಪಸ್ಥಿತಿಯನ್ನು ಬೆಳೆಸಿಕೊಂಡಿದೆ.
ಝೊಮಾಟೊದ ಯಶಸ್ಸು ಕಂಡು ಸುಮ್ಮನೆ ಕೂರದ ಗೋಯಲ್   ಮೇನ್‌ಸ್ಟ್ರೀಟ್, ಗ್ಯಾಬಿಟ್, ಥೆರಾಡೊ, ಶಿಪ್‌ರಾಕೆಟ್, ಬ್ಲಿಂಕಿಟ್,  ಬಿರಾ 91, ಹೈಪರ್‌ಟ್ರಾಕ್, ಟೆರ್ರಾಡೊ, ಚೆಫ್‌ಕಾರ್ಟ್, ಸ್ಕ್ವಾಡ್‌ಸ್ಟ್ಯಾಕ್ ಮತ್ತು ಅನ್‌ಅಕಾಡೆಮಿ ಸೇರಿದಂತೆ ವಿವಿಧ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಇವರ ಸಾಧನೆಯನ್ನು ಗುರ್ತಿಸಿದ ಹಲವಾರು ಸಂಸ್ಥೆಗಳು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
೨೦೧೧ ರಲ್ಲಿ, ಗೋಯಲ್ ಅವರಿಗೆ ಎಕನಾಮಿಕ್ ಟೈಮ್ಸ್ ಸ್ಟಾರ್ಟ್ಅಪ್ ಆಫ್ ದಿ ಇಯರ್ ಪ್ರಶಸ್ತಿ ೨೦೧೨ ರಲ್ಲಿ  ಬಿಸಿನೆಸ್ ಟುಡೇ ಯಂಗ್ ಬಿಸಿನೆಸ್ ಲೀಡರ್ ಪ್ರಶಸ್ತಿ,೨೦೧೮ ರಲ್ಲಿ  ಐಐಟಿ ದೆಹಲಿಯಿಂದ ಡಿಸ್ಟಿಂಗ್ವಿಶ್ಡ್ ಅಲುಮ್ನಿ  ಪ್ರಶಸ್ತಿ,   ೨೦೧೯ ರಲ್ಲಿ  ವರ್ಷದ ಜಿಕ್ಯೂ ಪುರುಷರ ಪ್ರಶಸ್ತಿ  ಸ್ವೀಕರಿಸಿದ್ದಾರೆ. 2020 ರಲ್ಲಿ ಗೋಯಲ್  ಫಾರ್ಚೂನ್ ಇಂಡಿಯಾ 40 ವರ್ಷದೊಳಗಿನವರ ಪಟ್ಟಿಯಲ್ಲಿ ಸೇರಿಸಲಾಯಿತು.ಅವರು 2023 ರ EY ಉದ್ಯಮಿ ಪ್ರಶಸ್ತಿಗೆ ಅಂತಿಮ ಸ್ಪರ್ಧಿಯೂ ಆಗಿದ್ದರು.

ಗೋಯಲ್ ಅವರು ಐಐಟಿ ದೆಹಲಿಯಲ್ಲಿ ಕಾಲೇಜು ವರ್ಷಗಳಲ್ಲಿ ಭೇಟಿಯಾದ ಕಾಂಚನ್ ಜೋಶಿ ಅವರನ್ನು ವಿವಾಹವಾಗಿದ್ದು. ಅವರಿಗೆ ಸಿಯಾರಾ ಎಂಬ ಮಗಳಿದ್ದಾಳೆ.ಇತ್ತೀಚಿಗೆ ಮಾಧ್ಯಮದವರ ಜೊತೆಯಲ್ಲಿ ಮುಕ್ತವಾಗಿ ಮಾತನಾಡಿದ ಗೋಯಲ್ ರವರು ತಮ್ಮ ಆದ್ಯತೆ, ಮುಂದಿನ ಗುರಿಗಳ ಬಗ್ಗೆ ವಿವರ ನೀಡಿದ್ದಾರೆ.

ಜೋಮಾಟೊದಲ್ಲಿ ಯಾವುದೇ ತ್ರೈಮಾಸಿಕ ಅಥವಾ ವಾರ್ಷಿಕ ಗುರಿಗಳಿಲ್ಲ  ಗುರಿಗಳನ್ನು ನಿಗದಿಪಡಿಸುವುದರಿಂದ ಜನರು ತಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡಿಕೊಳ್ಳುತ್ತಾರೆ  ಎಂದಿದ್ದಾರೆ.
  ಬ್ಲಿಂಕಿಟ್ ಸೇವೆಯು ದೀಪಿಂದರ್ ಅವರಿಗೆ ವೈಯಕ್ತಿಕವಾಗಿ ತುಂಬಾ ಇಷ್ಟವಾಗಿದ್ದರಿಂದ  ಗೆಳೆಯ ಅಲ್ಬಿಂದರ್ ಧಿಂದ್ಸಾ  ಅವರಿಂದ ಖರೀದಿಸಿದರು.   ಪ್ರಸ್ತುತ ಜೋಮಾಟೊ ಮತ್ತು ಬ್ಲಿಂಕಿಟ್‌ನಲ್ಲಿ 7,50000 ಕೆಲಸಗಾರರಿಗೆ ಉದ್ಯೋಗ ನೀಡಿದೆ.  ಒಬ್ಬ ಸವಾರ ದಿನಕ್ಕೆ 8 ರಿಂದ 10 ಗಂಟೆ ಕೆಲಸ ಮಾಡಿದರೆ ತಿಂಗಳಿಗೆ ₹25,000 ಕ್ಕಿಂತ ಹೆಚ್ಚು ಗಳಿಸಬಹುದು ಎಂದು ಅವರು ತಿಳಿಸಿದ್ದಾರೆ.


ಇತರೆ ಡೆಲಿವರಿ ಕಂಪನಿಗಳಿಗಿಂತ ಜೊಮಾಟೊ 10 ನಿಮಿಷಗಳ ಡೆಲಿವರಿ ನೀಡುವ ಬಗ್ಗೆ ಕೇಳಿದಾಗ ಇದು  ಸವಾರರ ಬರವೇಗದಿಂದ ಸಾಧ್ಯವಾಗುತ್ತಿಲ್ಲ ಬದಲಾಗಿ ಮಳಿಗೆಗಳ ಸಾಂದ್ರತೆಯಿಂದ  ಸಾಧ್ಯವಾಗುತ್ತಿದೆ. ಸವಾರರಿಗೆ ಯಾವುದೇ ಸಮಯದ ಮಿತಿಯನ್ನು ನೀಡಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಷ್ಟಕ್ಕೇ ನಿಲ್ಲದ ಗೋಯಲ್ ರವರ ವಿಷನ್ ವಿಸ್ತರಿಸುತ್ತಲೇ ಇದೆ.
ಸಣ್ಣ ವಿಮಾನಗಳನ್ನು ತಯಾರಿಸುವ  ಯೋಜನೆಗಾಗಿ ದೀಪಿಂದರ್ ಅವರು 50 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಬದ್ಧರಾಗಿದ್ದಾರೆ. ಇದು ನಗರಗಳ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದು ಅವರ ಆಶಯ.ಮೆದುಳಿಗೆ ರಕ್ತದ ಹರಿವನ್ನು ಮೇಲ್ವಿಚಾರಣೆ ಮಾಡುವ ಟೆಂಪಲ್ ಎಂಬ ಮತ್ತೊಂದು ಸಾಧನ ಆವಿಷ್ಕಾರಕ್ಕೆ ಕೈಹಾಕಿದ್ದಾರೆ.   ಭೂಮಿಯ ಗುರುತ್ವಾಕರ್ಷಣೆಯು ನಮ್ಮ ವಯಸ್ಸಾಗುವ ಪ್ರಕ್ರಿಯೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸಂಶೋಧಿಸುವುದು ಇದರ ಉದ್ದೇಶ.
ದೀಪಿಂದರ್ ಗೋಯಲ್ ಅವರ ವ್ಯವಹಾರ ಶೈಲಿಯು  ಬಲು ವಿಭಿನ್ನ ಅದಕ್ಕೆ ಅವರು ಈ ಎತ್ತರಕ್ಕೆ ಏರಿದ್ದಾರೆ. ಅವರ ವ್ಯವಹಾರ ಶೈಲಿಯನ್ನು ಹೀಗೆ ಹೇಳಬಹುದು ಒಂದು ರೇಸ್ ಕಾರ್  ಎಂಜಿನ್ ಎಷ್ಟು ದೂರ ಹೋಗಬೇಕು ಎಂದು ಅವರು ಮೊದಲೇ ಗುರಿಯೊಂದಿಗೆ ನಿರ್ಧರಿಸುವುದಿಲ್ಲ. ಆದರೆ ಪ್ರತಿ ಭಾಗವೂ ಅತ್ಯಂತ ನಿಖರವಾಗಿ ಮತ್ತು ತೀವ್ರತೆಯಿಂದ ಕೆಲಸ ಮಾಡಬೇಕೆಂದು ಅವರು ಬಯಸುತ್ತಾರೆ.ಆಗ ಮಾತ್ರ ಕಾರು ಯಾರಿಗೂ ತಲುಪಲಾಗದ ವೇಗವನ್ನು ತಲುಪಲು ಸಾಧ್ಯವಾಗುತ್ತದೆ.
ಗೋಯಲ್ ನಮ್ಮ ನೆಲದ ನಕ್ಷತ್ರ! ಇಂತಹ ಸಾವಿರಾರು ನಕ್ಷತ್ರಗಳಿಗೆ ಗೋಯಲ್ ಸ್ಪೂರ್ತಿಯಾಗಲಿ ಎಂಬುದೇ ನಮ್ಮೆಲ್ಲರ ಆಶಯ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು

08 ಜನವರಿ 2026

ಪೋರಿಯಲ್ಲ ಹೆಂಗಸು!


 

ನಿನ್ನೆ ಸಂಜೆ ಪಾರ್ಕ್‌ ನಲ್ಲಿ ವಾಕ್ ಮಾಡುವಾಗ ಈ ಪುಟ್ಟ ಪೋರಿಯ ಕಂಡೆ ಕಂಕುಳಲ್ಲೊಂದು ಬೊಂಬೆ ಎತ್ತಿಕೊಂಡು ಆ ಬೊಂಬೆಯೊಂದಿಗೆ ಮಾತನಾಡುತ್ತಾ ವಾಕ್ ಮಾಡುತ್ತಿತ್ತು ನಾನು‌ ದೂರದಿಂದಲೇ ಗಮನಿಸಿ ಖುಷಿ ಪಟ್ಟೆ.ಮಕ್ಕಳ ಆಟವೇ ನೋಡಲು ಚೆಂದ. ನನಗೆ ನನ್ನ ಬಾಲ್ಯ ನೆನಪಾಯಿತು ನಾವೂ ಹೀಗೆಯೇ ಗೊಂಬೆಗಳಿಗೆ ಮದುವೆ ಮಾಡಿ.ಆಟ ಆಡಿದ ಸವಿನೆನಪುಗಳು ಮಧುರ. ಆ ಬಾಲಕಿ ನಾನು ದೊಡ್ಡ ಹೆಂಗಸು ಅಂದುಕೊಂಡು ಹೆಂಗಸಿನ ಪಾತ್ರದಲ್ಲಿ ಆಟವಾಡುತ್ತಿತ್ತು.ಇದಕ್ಕೆ ಒಂದು ಸಾಕ್ಷಿ ‌ಕೈಯಲ್ಲಿರುವ ಬೊಂಬೆ. ಇನ್ನೂ ಎರಡು ವಸ್ತುಗಳನ್ನು ಆ ಬಾಲಕಿ ನಾನು ದೊಡ್ಡ ಹೆಂಗಸು ಎಂದು ಬಿಂಬಿಸಿಕೊಳ್ಳಲು ಬಳಸಿದೆ. ಆ ವಸ್ತುಗಳು ಯಾವು ಕಾಮೆಂಟ್ ಮಾಡಿ‌ ಹೇಳಿ.
#sihijeevi #childhood #children #play #playtime

05 ಜನವರಿ 2026

ರಾಷ್ಟ್ರೀಯ ಪಕ್ಷಿಗಳ ದಿನ


 ರಾಷ್ಟ್ರೀಯ ಪಕ್ಷಿಗಳ ದಿನ



ದೇಶಾದ್ಯಂತ ಪ್ರಕೃತಿ ಪ್ರಿಯರು, ಪಕ್ಷಿ ಪ್ರಿಯರು ಮತ್ತು ಪಕ್ಷಿ ವೀಕ್ಷಕರು ವಾರ್ಷಿಕವಾಗಿ ಜನವರಿ 5 ರಂದು ರಾಷ್ಟ್ರೀಯ ಪಕ್ಷಿ ದಿನವನ್ನು ಆಚರಿಸುತ್ತಾರೆ. ಅಮೆರಿಕ ದ ಬಾರ್ನ್ ಫ್ರೀ ಎಂಬ ಸಂಸ್ಥೆಯ ಪ್ರಯತ್ನ ದ ಪರಿಣಾಮವಾಗಿ   ರಾಷ್ಟ್ರೀಯ ಪಕ್ಷಿ ದಿನವನ್ನು ಆಚರಿಸಲಾಗುತ್ತದೆ.
ಇದು  ಬಂಧಿತ ಮತ್ತು ಕಾಡು ಪಕ್ಷಿಗಳ ರಕ್ಷಣೆ ಮತ್ತು ಉಳಿವಿಗೆ ನಿರ್ಣಾಯಕ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ದಿನವಾಗಿದೆ.
ಬಾರ್ನ್ ಫ್ರೀ ಸಂಸ್ಥೆಯ ಪ್ರಕಾರ  ವಿಶ್ವದ ಸುಮಾರು 10,000 ಪಕ್ಷಿ ಪ್ರಭೇದಗಳಲ್ಲಿ ಸುಮಾರು 12 ಪ್ರತಿಶತ ಅಳಿವಿನ ಅಪಾಯದಲ್ಲಿದೆ.ಇವುಗಳ ಸಂರಕ್ಷಣೆ ನಮ್ಮ ಕರ್ತವ್ಯ. ಇದಕ್ಕೆ ಈ ಕೆಳಗಿನ ಚಟುವಟಿಕೆಗಳಲ್ಲಿ ನಾವು ಪಾಲ್ಗೊಳ್ಳಬಹುದು.

ಪಕ್ಷಿ ವೀಕ್ಷಣೆ,ಪಕ್ಷಿಗಳನ್ನು ಅಧ್ಯಯನ ಮಾಡುವುದು,ಇತರರಿಗೆ ಶಿಕ್ಷಣ ನೀಡುವುದು,ಇತರ ಪಕ್ಷಿ ಸಂಬಂಧಿತ ಚಟುವಟಿಕೆಗಳು,ರಾಷ್ಟ್ರೀಯ ಪಕ್ಷಿ ದಿನದ ಒಂದು ಪ್ರಮುಖ ಚಟುವಟಿಕೆಯೆಂದರೆ ಪಕ್ಷಿ ದತ್ತು ಸ್ವೀಕಾರ ಮಾಡುವುದು.
ಅಟ್ಲಾಂಟಾ ಜರ್ನಲ್ ಕಾನ್ಸ್ಟಿಟ್ಯೂಷನ್ ಪತ್ರಿಕೆಯ ಲೇಖನದ ಪ್ರಕಾರ, ಅನೇಕ ಪಕ್ಷಿ ಉತ್ಸಾಹಿಗಳು ಈ ದಿನದಂದು ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಆಚರಿಸುತ್ತಾರೆ. ಅವರು ಭವಿಷ್ಯದ ಪಕ್ಷಿ ಮಾಲೀಕರಿಗೆ ಪಕ್ಷಿಗಳ ಆರೈಕೆಯಲ್ಲಿ ಒಳಗೊಂಡಿರುವ ವಿಶೇಷ ಸಮಸ್ಯೆಗಳ ಬಗ್ಗೆ ಶಿಕ್ಷಣ ನೀಡುತ್ತಾರೆ, ಅವುಗಳಲ್ಲಿ "ಸರಿಯಾದ ಆರೈಕೆ, ಶುಚಿಗೊಳಿಸುವಿಕೆ, ಶಬ್ದ ಮತ್ತು ಕಚ್ಚುವಿಕೆ, ಆಹಾರ, ಆಹಾರ ಮತ್ತು ದೈನಂದಿನ ಸಂವಹನದ ಅಗತ್ಯತೆ" ಸೇರಿವೆ.

ನನಗೆ ವೈಯಕ್ತಿಕವಾಗಿ ಗುಬ್ಬಚ್ಚಿ ಇಷ್ಟ ನಿಮಗೆ ಯಾವ ಪಕ್ಷಿ ಇಷ್ಟ ಎಂದು ತಿಳಿಸಬಹುದು.



ಸಿಹಿಜೀವಿ ವೆಂಕಟೇಶ್ವರ

04 ಜನವರಿ 2026

ಅಭಿನಂದನೆಗಳು


 ದೈಹಿಕ ಶಿಕ್ಷಕರ ಇಲ್ಲದೇ ಯಾವುದೇ ಮೂಲಸೌಕರ್ಯಗಳಿಲ್ಲದೆ ಹಳ್ಳಿಯ ಇಬ್ಬರು ವಿದ್ಯಾರ್ಥಿನಿಯರು ತಮ್ಮ ಪ್ರಯತ್ನ ಪೋಷಕರ ಬೆಂಬಲ ಶಿಕ್ಷಕರ ಮಾರ್ಗದರ್ಶನದ ಫಲಿತವಾಗಿ ರಾಷ್ಟ್ರ ಮಟ್ಟದಲ್ಲಿ ಥ್ರೋ ಬಾಲ್ ನಲ್ಲಿ   ಪ್ರಶಸ್ತಿ ಪಡೆದ ತಿಪಟೂರಿನ ಹೊಸಹಳ್ಳಿ ಸರ್ಕಾರಿ ಶಾಲೆಯ   ಮಾನ್ಯ ಹಾಗೂ ಶಾಂಭವಿ ಇವರಿಗೆ ಒಂದು ಅಭಿನಂದನೆ ಸಲ್ಲಿಸೋಣ.

Congratulations ಮಕ್ಕಳೇ.. ನಿಮ್ಮ ಪ್ರತಿಭೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ.

#sports #game #throwball #school #studentsuccess

ಹನಿಗವನ


 

02 ಜನವರಿ 2026

ವಾರ್ಷಿಕ ಹಿ(ಮು)ನ್ನೋಟ


 


ವಾರ್ಷಿಕ ಹಿ(ಮು)ನ್ನೋಟ


ಕಳೆದ ವರ್ಷ ಹತ್ತಾರು ಸಂಕಲ್ಪ ಮಾಡಿಕೊಂಡು ಅವುಗಳನ್ನು ಈಡೇರಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದೆ.ಅದರಲ್ಲಿ ‌ಕೆಲವು ಈಡೇರಿ ಕೆಲವು ಹಾಗೆಯೇ ಉಳಿದವು.ಕಳೆದ ಕ್ಯಾಲೆಂಡರ್ ವರ್ಷದ ಬಗ್ಗೆ ಸಿಂಹಾವಲೋಕನ ಮಾಡುವ ಪ್ರಯತ್ನ ಮಾಡುವೆ.
ಇದು ಈ ವರ್ಷ ಹೇಗಿರಬೇಕು ಎಂದು ಯೋಜಿಸಿ ಜೀವಿಸಲು ಅನುಕೂಲವಾದೀತೆಂಬುದು‌ ನನ್ನ ಭಾವನೆ.

ವೃತ್ತಿ: ಕಳೆದ ವರ್ಷ ನನ್ನ ಶಾಲೆಯ ನಾಲ್ಕು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜ್ಞಾನ ಉಣಬಡಿಸುವ ಕಾರ್ಯದ ಜೊತೆಯಲ್ಲಿ ಅವರಲ್ಲಿರುವ ಇತರೆ ಕೌಶಲಗಳನ್ನು ಮತ್ತು ಪ್ರತಿಭೆಯನ್ನು ಹೊರತರುವ ಕಾಯಕವನ್ನು ಮಾಡಿರುವುದು ಆತ್ಮ ತೃಪ್ತಿ ನೀಡಿದೆ.

ಪುಸ್ತಕ ಓದು ಬರಹ: ಕಳೆದ ಐದಾರು ವರ್ಷಗಳಿಗೆ ಹೋಲಿಕೆ ಮಾಡಿಕೊಂಡರೆ ಈ ಬಾರಿ ಹದಿನೈದು ಪುಸ್ತಕ ಮಾತ್ರ ಓದಿರುವೆ.ಪುಸ್ತಕ ಪ್ರಕಟಣೆಯನ್ನು ಗಮನಿಸುವುದಾದರೆ ಈ ಬಾರಿ ನನ್ನ ಮೂರು ಪುಸ್ತಕಗಳು ಲೋಕಾರ್ಪಣೆಯಾದವು."ಸಿಹಿಜೀವಿ ಕಂಡ ಅಂಡಮಾನ್ " ಪ್ರವಾಸ ಕಥನವನ್ನು ಕಾರ್ಕಳದ ಪುಸ್ತಕ ಮನೆ ಪ್ರಕಟಿಸಿ ಅಮೋಘವಾಗಿ ಬಿಡುಗಡೆ ಕಾರ್ಯಕ್ರಮ ಮಾಡಿ ನನ್ನ ಸನ್ಮಾನಿಸಿದ್ದು ಮರೆಯಲಾಗದ ಘಟನೆ.ಮತ್ತೊಂದು ಪುಸ್ತಕ " "ಮಕ್ಕಳಿಗಾಗಿ ಮಹಾತ್ಮರ ಮಾತುಗಳು " ಪುಸ್ತಕವನ್ನು ನುಡಿತೋರಣ ಬಂಧುಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಿದ್ದು ಸಂತಸ ನೀಡಿತು. ಮತ್ತೊಂದು ಪುಸ್ತಕ "ಐತಿಹಾಸಿಕ ತಾಣಗಳು" ಪ್ರಿಂಟ್ ಆಗಿ ಮನೆ ಸೇರಿದೆ. ಈ ವರ್ಷ ಹೆಚ್ಚು ಪುಸ್ತಕಗಳನ್ನು ಓದಲು ಹಾಗೂ ಇನ್ನೂ ಉತ್ತಮ ‌ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಲು ಸಂಕಲ್ಪ ಮಾಡಿರುವೆ.


ಸಮಾಜದೊಂದಿಗೆ ನಾನು: ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಸನಾತನ ವಾಣಿಯನ್ನು ಬಲವಾಗಿ ನಂಬಿರುವ ನಾನು ಕಳೆದ ವರ್ಷದಿಂದ ಸಮಾಜಮುಖಿ ಕಾರ್ಯ ಮಾಡಲು ಆರಂಭಿಸಿರುವೆ.ಕೊಡುವುದರಲ್ಲಿ ಇರುವ ಸುಖ ನೆಮ್ಮದಿ ಅನುಭವಿಸಲಾರಂಬಿಸಿರುವೆ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈ ಗೆ ಗೊತ್ತಾಗಬಾರದು ಎಂಬ ಮಾತಿನಂತೆ ನಾನು ಕೊಟ್ಟ ಬಗ್ಗೆ ವಿವರ ನೀಡದಿರಲು ತೀರ್ಮಾನ ಮಾಡಿರುವೆ.ಈ ವರ್ಷವೂ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಲು ಸಂಕಲ್ಪ ಮಾಡಿರುವೆ.

ಪುರಸ್ಕಾರ: ಕಳೆದ ವರ್ಷ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನನ್ನ ಶಿಕ್ಷಣ ಮತ್ತು ಸಾಹಿತ್ಯದ ಸೇವೆ ಗುರುತಿಸಿ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಿದ್ದು ನನ್ನ ಜೀವನದ ಮತ್ತೊಂದು ಅವಿಸ್ಮರಣೀಯ ದಿನ.

ಪತ್ರಿಕೆಯಲ್ಲಿ ಬರಹ : ಹವ್ಯಾಸವಾಗಿ ಆರಂಭವಾದ ನನ್ನ ಬರಹ ಇಂದು ಪತ್ರಿಕೆಗಳಲ್ಲಿ ಅಂಕಣ ಬರಹವಾಗಿ ಪ್ರಕಟವಾಗುತ್ತಿರುವುದಯ ಖುಷಿಯ ವಿಷಯ. ಗೌರವ ಸಂಭಾವನೆ ನೀಡಿ ನನ್ನ ಬರಹಗಳನ್ನು ಪ್ರಕಟಿಸುವ ಎಲ್ಲಾ ಪತ್ರಿಕೆಗಳಿಗೆ ನಾನು ನಮನ ಸಲ್ಲುಸಲೇಬೇಕು.ಈ ವರ್ಷವೂ ಪತ್ರಿಕೆಯಲ್ಲಿ ಬರೆಯುವ ಕಾಯಕ ಮುಂದುವೆರೆಸುವೆ.

ಗಾಯನ: ಹವ್ಯಾಸ ಕ್ಕೆ ಹಾಡುವ ನಾನು ನಮ್ಮ ಶಾಲೆಯಲ್ಲಿ ನಮ್ಮ ಮಕ್ಕಳ ಮುಂದೆ ಹಾಡಿ ಖುಷಿ ಪಡುತ್ತಿದ್ದೆ.ಈಗ ಕೆಲ ಸಮಾರಂಭಗಳಲ್ಲಿ ಹಾಡಿದಾಗ ಕೇಳುಗರು ಮೆಚ್ಚುಗೆಯಿಂದ ತಟ್ಟುವ ಚಪ್ಪಾಳೆ ಇನ್ನೂ ಹಾಡಲು ಪ್ರೇರಣೆ ನೀಡಿವೆ.

ನಾಟಕ: ಹವ್ಯಾಸಿ ನಾಟಕ ಕಲಾವಿದನಾಗಿ ಕಳೆಸ ವರ್ಷ ತುಮಕೂರಿನ ಸಿದ್ದಗಂಗಾ ಮಠದ ಜಾತ್ರೆಯ ಸಮಯದಲ್ಲಿ ಗುಬ್ಬಿ ವೀರಣ್ಣ ಶಿಕ್ಷಣ ಕಲಾ ತಂಡದೊಂದಿಗೆ ಗೌತಮ ಬುದ್ಧ ನಾಟಕದಲ್ಲಿ ಅಭಿನಯಿಸಿದ್ದು ಖುಷಿ ನೀಡಿತು.ಉಡುಪಿಯಲ್ಲಿ ನಡೆಸ ರಾಜ್ಯ ಮಟ್ಟದ ‌ನಾಟಕ ಸ್ಪರ್ಧೆಯಲ್ಲಿ ಭಾಗವಿಸಿದ ನಮ್ಮ ತಂಡ ಅತ್ಯುತ್ತಮ ಶಿಸ್ತಿನ ತಂಡ ಎಂಬ ಬಹುಮಾನ ಪಡೆದದ್ದು ಮತ್ತೊಂದು ಸಾರ್ಥಕ ಕ್ಷಣ.ಈ ಬಾರಿಯೂ ಅಭಿನಯ ಮುಂದುವರೆಯಲಿದೆ.

ಪ್ತವಾಸ: ಕಳೆದ ಎರಡು ವರ್ಷಗಳಲ್ಲಿ ಕನಿಷ್ಟ ಹತ್ತು ದಿನದ ಪ್ರವಾಸ ಮಾಡಿದ ನಾನು ಈ ವರ್ಷ ಪ್ರವಾಸಕ್ಕೆ ಪ್ಲಾನ್ ಮಾಡಿದ್ದರೂ ಸರ್ಕಾರದ ಗಣತಿ ಕಾರ್ಯಕ್ಲೆ ನಿಯೋಜನೆ ಗೊಂಡು ಕರ್ತವ್ಯ ಮಾಡಿದ ಪರಿಣಾಮವಾಗಿ ಪ್ರವಾಸ ಹೋಗಲಾಗಲಿಲ್ಲ.ಆದರೆ ಈ ಸಮಯದಲ್ಲಿ ವಿವಿಧ ಸಮಾಜೋ ಆರ್ಥಿಕ ಹಿನ್ನೆಲೆಯ ಕುಟುಂಬಗಳ ಭೇಟಿಯು ವಿಶೇಷವಾದ ಅನುಭವಗಳನ್ನು ನೀಡಿತು.ಈ ಬಾರಿ ವಿಶೇಷವಾದ ಪ್ರವಾಸ ಮಾಡಲು ಯೋಜಿಸಿರುವೆ.

  ಯೂಟ್ಯೂಬರ್: ಪ್ರತಿ ವರ್ಷ ಏನಾದರೂ ಹೊಸ ಕೌಶಲಗಳನ್ನು ಕಲಿಯಲು ಹಾತೊರೆಯುವ ನಾನು ಕಳೆದ ಏಪ್ರಿಲ್ ನಲ್ಲಿ ಸಿಹಿಜೀವಿಯ ಪಯಣ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿದೆ ಕೇವಲ ಎಂಟು ತಿಂಗಳಲ್ಲಿ950 ಸಬ್ ಸ್ಕ್ರೈಬರ್ ಗಳು ನನ್ನ ಚಾನೆಲ್ ನ ಚಂದಾದಾರರಾಗಿರುವರು ಎಂದು ಹೆಮ್ಮೆಯಿಂದ ಹೇಳುವೆ.ನಾನು ಪ್ರವಾಸ ಮಾಡಿದ ಸ್ಥಳಗಳನ್ನು ತೋರಿಸುವ ಪ್ರಯತ್ನ ಮುಂದುವರೆದಿದೆ.ಇದುವರೆಗೆ250 ಕ್ಕೂ ಹೆಚ್ಚು ವೀಡಿಯೋ ಅಪ್ಲೋಡ್ ಮಾಡಿರುವೆ. ಕಡಿಮೆ  4 ಲಕ್ಷ ವೀಕ್ಷಣೆ ಕಂಡಿರುವುದು ಸಂತಸ ನೀಡಿದೆ.ಈ ವರ್ಷವೂ ಸಿಹಿಜೀವಿಯ ಪಯಣ ಮುಂದುವರೆಯಲಿದೆ.


ತುಸು ಬೇಸರದ ಸಂಗತಿಗಳು: ಅಮ್ಮನ ಅನಾರೋಗ್ಯ, ಆತ್ಮೀಯರ ಅಕಾಲಿಕ ನಿರ್ಗಮನ, ಸಮಾಜದಲ್ಲಿರುವ ಕೆಲ ಸ್ವಾರ್ಥಿಗಳ ನಡೆಗಳು,ಕಾಲೆಳೆಯುವ ನೀಚ ಮನಗಳನ್ನು‌ ಕಂಡಾಗ ಬೇಸರವಾಗುತ್ತದೆ.

ಏಳು ಬೀಳು ,ನೋವು ನಲಿವು ಜೀವನದ ಅವಿಭಾಜ್ಯ ಅಂಗ ಈ ಬಾರಿ ಅವುಗಳನ್ನು ಸ್ವೀಕರಿಸಲು ಮಾನಸಿಕವಾಗಿ ಸಿದ್ದರಾಗೋಣ.ಮತ್ತೊಮ್ಮೆ ‌ನಿಮಗೆ ಹೊಸ ಕ್ಯಾಲೆಂಡರ್ ನ ವರ್ಷದ ಶುಭಾಶಯಗಳು🌷


ನಿಮ್ಮ

ಸಿಹಿಜೀವಿ ವೆಂಕಟೇಶ್ವರ..


















01 ಜನವರಿ 2026

ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು🌷🌹2026


 *ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು🌷🌹*


ಕಳೆದ ಕ್ಯಾಲೆಂಡರ್ ವರ್ಷದಲ್ಲಿ

ಕಂಡಿದ್ದೇವೆ ನೋವು ನಲಿವು

ನೂರಾರು|

ಸರ್ವರಿಗೂ ಶುಭವನ್ನುಂಟು ಮಾಡಲಿ ಬರಲಿರುವ ಎರಡು ಸಾವಿರದ ಇಪ್ಪತ್ತಾರು(2026)||


*ಸಿಹಿಜೀವಿ ವೆಂಕಟೇಶ್ವರ.*